ಲಂಕಾ ಟ್ರಿಗರ್‌ಗೆ ಸಿಡಿದ ವೈಭವ್! – ಭಾರತದ ತಪ್ಪಿನಿಂದ ಗೆದ್ದ ಶ್ರೀಲಂಕಾ!
ಕೈ ಮಾಡಿದ್ದಕ್ಕೆ ಸೂರ್ಯವಂಶಿ ಬ್ಯಾನ್!?

ಲಂಕಾ ಟ್ರಿಗರ್‌ಗೆ  ಸಿಡಿದ ವೈಭವ್! – ಭಾರತದ ತಪ್ಪಿನಿಂದ ಗೆದ್ದ ಶ್ರೀಲಂಕಾ!ಕೈ ಮಾಡಿದ್ದಕ್ಕೆ ಸೂರ್ಯವಂಶಿ ಬ್ಯಾನ್!?

ಭಾರತ A ಪಂದ್ಯಗಳು ಹೆಚ್ಚು ಸದ್ದು ಮಾಡಲ್ಲ.. ಈ ಪಂದ್ಯಗಳ ಬಗ್ಗೆ ಯಾರು ಕೂಡ ಹೆಚ್ಚು ಇಂಟ್ರೆಸ್ಟ್ ತೋರಿಸಲ್ಲ. ಆದ್ರೆ ಈ ಸಲ ನಡೆಯುತ್ತಿರೋ ಶ್ರೀಲಂಕಾ A, ಅಫ್ಘಾನ್ A ಮತ್ತು ಭಾರತ A ನಡುವಿನ ಏಕದಿನ ಸರಣಿ ಈ ಸಲ ಇಂಟ್ರೆಸ್ಟಿಂಗ್ ಆಗಿದೆ. ಈ ಸಲ ವೈಭವ್ ಇರುವುದ್ದಕ್ಕೆ ಈ  ತ್ರಿಕೋನ ಸರಣಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಟ20ಯಲ್ಲಿ ಅಬ್ಬರಿಸಿರೋ ವೈಭವ್ ಏಕದಿನ ಸರಣಿಯಲ್ಲಿ ಹೇಗೆ ಆಡ್ತಾ ಇದ್ದಾರೆ ಅನ್ನೋದ್ದನ್ನ ಎಲ್ಲಾ  ನೋಡ್ತಾ ಇದ್ದಾರೆ. ಆದ್ರೆ ನಿನ್ನೆ  ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆದ ಬೆಳವಣಿ ಬಗ್ಗೆ ಈಗ ಕ್ರಿಕೆಟ್ ಲೋಕದಲ್ಲಿ ಚರ್ಚೆ ಆಗ್ತಿದೆ.

ಭಾರತದ ತಪ್ಪಿನಿಂದ ಗೆದ್ದ ಲಂಕಾ 

ಲಂಕಾದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡ 48.2 ಓವರ್ ಗಳಲ್ಲಿ 265 ರನ್ ಗಳಿಗೆ ಆಲೌಟ್ ಆಯಿತು. ಈ ರನ್‌ ಚೇಸ್‌ ಮಾಡಿದ ಲಂಕಾ 265ರನ್‌ಗಳಿಸಿ ಪಂದ್ಯವನ್ನ ಟೈ ಮಾಡಿಕೊಳ್ತು. ಆದ್ರೆ ನಿಮ್ಗೆ ಒಂದು ವಿಷ್ಯ ಗೊತ್ತಿರಲಿ, ಇಲ್ಲಿ ಲಂಕಾಗೆ 10 ರನ್ ಎಕ್ಟ್ರಾ ಸಿಕ್ಕಿದೆ.  ಅಂದ್ರೆ ಶ್ರೀಲಂಕಾ A ನಮಗಿಂತ ಹತ್ತು ರನ್ ಕಡಿಮೆ ಹೊಡೆದು ಮ್ಯಾಚ್ ಟೈ  ಮಾಡಿಕೊಂಡಿದೆ. ನಿಮ್ಗೆ ಅನಿಸಬಹುದು,  ನಮ್ಮದೂ 265 ಅವರದ್ದೂ 265.. ಹಾಗಾದ್ರೆ ಹತ್ತು ರನ್ ಕಡಿಮೆ ಹೊಡೆದಂತೆ ಹೇಗಾಯ್ತು? ಅಂತ ನಿಮ್ಗೆ ಅನಿಸಬಹುದು.. ಟೀಂ ಇಂಡಿಯಾ ಬ್ಯಾಟಿಂಗ್ ಆಡೋ ಸಮಯದಲ್ಲಿ ವಿಪ್ರಾಜ್ ನಿಗಮ್ ಮತ್ತು ಅನುಕೂಲ್ ರಾಯ್ ಅವರು ಮಾಡಿದ ತಪ್ಪಿಗೆ ದಂಡದ ರೂಪದಲ್ಲಿ ಹತ್ತು ರನ್ ಗಳನ್ನು ಶ್ರೀಲಂಕಾಗೆ ನೀಡಲಾಯಿತು. ಮೂವತ್ತೈದನೇ ಓವರ್ ನಲ್ಲಿ ಬ್ಯಾಟಿಂಗ್ ಆಡುವಾಗ ಪದೇಪದೇ ಇಬ್ಬರೂ ಬ್ಯಾಟರ್ ಗಳು ಪಿಚ್ ನ ರಕ್ಷಿತ ಪ್ರದೇಶದ ಮೇಲೆ ಓಡಿದ್ದಾರೆ. ವಾರ್ನಿಂಗ್ ಕೊಟ್ಟ ಮೇಲೂ ಅಲ್ಲಿಯೇ ಓಡಾಡಿದ್ದಾರೆ. ಇದರಿಂದಾಗಿ ಹತ್ತು ರನ್ ದಂಡ ಹಾಕಿದ್ದಾರೆ. ನಿಯಮ ಹೇಗಿದೆ ಅಂದ್ರೆ ನಮ್ಮ ರನ್ ನಲ್ಲಿ ಕಡಿತಗೊಳಿಸುವ ಬದಲು… ಸೆಕೆಂಡ್ ಬ್ಯಾಟಿಂಗ್ ಮಾಡುವ ತಂಡ ಇನ್ನಿಂಗ್ಸ್ ಆರಂಭಿಸುವ ಮುನ್ನವೇ ಹತ್ತು ರನ್ ಎಕ್ಸ್ ಟ್ರಾ ಕೊಟ್ಟುಬಿಡುತ್ತಾರೆ. ಶ್ರೀಲಂಕಾ ಮೊದಲನೆ ಎಸೆತ ಎದುರಿಸುವ ಮುನ್ನವೇ ಸ್ಕೋರ್ ಬೋರ್ಡ್ 10/0 ಅಂತ ತೋರಿಸುತ್ತಿತ್ತು. ಇದು ಕ್ರಿಕೆಟ್‌ನಲ್ಲಿ ನಡೆದ ಅಪರೂಪದ ಸಂಗತಿಯಾಗಿದೆ. ಮೊದಲೆಲ್ಲ ರಣಜಿ ಪಂದ್ಯಗಳಲ್ಲಿ, ಟೆಸ್ಟ್ ಪಂದ್ಯಗಳಲ್ಲಿ ನಿಧಾನಗತಿ ಬೌಲಿಂಗ್ ಗೆ  ದಂಡ ವಿಧಿಸಿ ಎದುರಾಳಿ ತಂಡಕ್ಕೆ ರನ್ ನೀಡುವ ಪದ್ದತಿ ಇತ್ತು. ಆ ನಂತರ ಅದನ್ನು ಹಣದ ದಂಡ/ಬ್ಯಾನ್ ಶಿಕ್ಷೆಗೆ ಬದಲಿಸಲಾಯ್ತು. ಬೇರೆ ಯಾವ ಸಂದರ್ಭದಲ್ಲೂ ಇಂಥ ರನ್ ಪೆನಾಲ್ಟಿ ಇರಲಿಲ್ಲ. ಇದು ಮೊದಲ ಸಲ ನಡೆದಿದೆ.. ಇನ್ನೂ ಮ್ಯಾಚ್ ಟೈ ಆದ್ರೂ ಮೇಲೆ ಸೂಪರ್ ಓವರ್ ನಡೆಸಲಾಯ್ತು..  ಈವೇಳೆ ಲಂಕಾ ತಂಡ 1 ಓವರ್ ನಲ್ಲಿ ವಿಕೆಟ್ ನಷ್ಟವಿಲ್ಲದೆ 16 ರನ್‌ಗಳಿಸಿತು. ಭಾರತ ಕೇವಲ 9 ರನ್ ಅಷ್ಟೇ ಗಳಿಸಲು ಸಾಧ್ಯವಾಯಿತು. ಈ ಮೂಲಕ ಲಂಕಾ ವಿರುದ್ಧ ಭಾರತ A ತಂಡ ಸೋಲ್ತು.

ಲಂಕಾ ಆಟಗಾರರ ಟ್ರಿಗರ್‌ಗೆ ಸಿಡಿದ ವೈಭವ್‌

ಇನ್ನೂ ಲಂಕಾ ಆಟಗಾರರ ಮೇಲೆ ವೈಭವ್ ಸೂರ್ಯವಂಶಿ ಕೈ ಮಾಡ್ದಾ.. ಈ  ಚಿಕ್ಕ ವಯಸ್ಸಿಗೇ ಇದೆಲ್ಲಾ ಬೇಕಿತ್ತಾ ಅಂತ ಸಾಕಷ್ಟು ಜನ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. ಆದ್ರೆ ಇಲ್ಲಿ ಆಗಿದ್ದೇ ಬೇರೆ.. ಏನಪ್ಪ ಅಂದ್ರೆ ಸೂಪರ್ ಓವರ್​ನಲ್ಲಿ 7 ರನ್​ಗಳಿಂದ ಗೆಲ್ಲುತ್ತಿದ್ದಂತೆ​ ಶ್ರೀಲಂಕಾ ಆಟಗಾರರು ಅತಿಯಾದ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ಶ್ರೀಲಂಕಾದ ಆಟಗಾರ ವಿಶೇನ್ ಹಾಲಂಬಾಗೆ, ನಿರಾಸೆಯಿಂದ ಪೆವಿಲಿಯನ್‌ಗೆ ಮರಳುತ್ತಿದ್ದ ವೈಭವ್ ಸೂರ್ಯವಂಶಿಯವರನ್ನು ನೋಡಿ ಅದೇನೋ ಹೇಳಿದ್ದಾರೆ. ಈ ಮಾತಿನಿಂದ ಕೆರಳಿದ 15 ವರ್ಷದ ವೈಭವ್ ಸೂರ್ಯವಂಶಿ, ನೇರವಾಗಿ ಹಾಲಂಬಾಗೆ ಅವರತ್ತ ಧಾವಿಸಿ ಮಾತಿನ ಚಕಮಕಿ ನಡೆಸಿದರು. ಈ ವಾಗ್ವಾದದ ನಡುವೆ ವೈಭವ್, ಲಂಕಾ ಆಟಗಾರನ ಎದೆಗೆ ಜೋರಾಗಿ ಕೈಯಿಂದ ತಳ್ಳಿದ್ದಾರೆ. ಆಟಗಾರರ ನಡುವಣ ಈ ಜಗಳದಿಂದಾಗಿ ಮೈದಾನದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು.  ಆಗ ಭಾರತದ ಸೂರ್ಯಂಶ್ ಶಡ್ಗೆ ಮಧ್ಯಪ್ರವೇಶಿಸಿ ವೈಭವ್ ಅವರನ್ನು ಬಲವಂತವಾಗಿ ಪಕ್ಕಕ್ಕೆ ಎಳೆದೊಯ್ದರು. ಅತ್ತ ಶ್ರೀಲಂಕಾದ ವಿಕೆಟ್ ಕೀಪರ್ ನಿರೋಷನ್ ಡಿಕ್ವೆಲ್ಲಾ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆಯಲು ತಮ್ಮ ಆಟಗಾರರನ್ನು ನಿಯಂತ್ರಿಸಿದರು. ಹೀಗಾಗಿ ಪರಿಸ್ಥಿತಿ  ನಿಯಂತ್ರಣಕ್ಕೆ ಬಂತು. ಇನ್ನು ಪಂದ್ಯ ಮುಗಿದ ಕ್ಷಣದಿಂದಲೇ ಅಂಪೈರ್‌ಗಳೊಂದಿಗೆ ಸತತ ಜಗಳಕ್ಕಿಳಿದ ತಂಡದ ನಾಯಕ ತಿಲಕ್ ವರ್ಮಾ ಅವರೇ ಈ ಜಗಳಕ್ಕೆ ಕೆಟ್ಟ ಮುನ್ನುಡಿ ಬರೆದಿದ್ದರು. ಯಾಕಂದ್ರೆ ಮಂದ ಬೆಳಕಿನಲ್ಲಿ ಪಂದ್ಯ ಆಡಿಸಿದ್ರು ಅನ್ನೋ ಆಪದನೆ ಕೂಡ ಇದೆ..

 ವೈಭವ್‌ ತಪ್ಪು ಮಾಡಿಲ್ಲ ಎಂದ ನಾಯಕ ತಿಲಕ್

ಘಟನೆಗೆ ಬಗ್ಗೆ ಮಾತನಾಡಿದ ಭಾರತ ಎ ತಂಡದ ನಾಯಕ ತಿಲಕ್ ವರ್ಮಾ, ವೈಭವ್ ಸೂರ್ಯವಂಶಿ ಪರ ಬ್ಯಾಟ್ ಬೀಸಿದ್ದಾರೆ. ಪಂದ್ಯದುದ್ದಕ್ಕೂ ಶ್ರೀಲಂಕಾ ಆಟಗಾರರು ನಮ್ಮನ್ನು ನಿರಂತರವಾಗಿ ನಿಂದಿಸುತ್ತಿದ್ದರು. ಅಂಪೈರ್‌ಗಳು ಸಹ ಅವರ ಪರವಾಗಿ ಕೆಲವು ನಿರ್ಧಾರಗಳನ್ನು ನೀಡಿದರು. ನಾವು ಎಲ್ಲವನ್ನೂ ನಿರ್ಲಕ್ಷಿಸಿ ಆಟದ ಮೇಲೆ ಗಮನಹರಿಸಲು ಪ್ರಯತ್ನ ಮಾಡಿದ್ದೇವೆ. ಆದರೆ ವೈಭವ್ ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗುತ್ತಿದ್ದಾಗ, ಶ್ರೀಲಂಕಾದ ಆಟಗಾರರೊಬ್ಬರು ಅನಗತ್ಯವಾಗಿ ಅವರನ್ನು ಮತ್ತೆ ನಿಂದಿಸಿದರು. ಅದು ಮಿತಿ ಮೀರಿತು. ವೈಭವ್ ಅದಕ್ಕೆ ಪ್ರತಿಕ್ರಿಯಿಸುವ ಮೂಲಕ ಸಂಪೂರ್ಣವಾಗಿ ಸರಿಯಾದ ಕೆಲಸವನ್ನು ಮಾಡಿದರು ಎಂದಿದ್ದಾರೆ.

ಬ್ಯಾನ್ ಆಗ್ತಾರಾ ವೈಭವ್ ಸೂರ್ಯವಂಶಿ?

ಇನ್ನೂ ಈ ಘಟನೆ ನಂತ್ರ ವೈಭವ್ ಸೂರ್ಯವಂಶಿ ಬ್ಯಾನ್ ಆಗ್ತಾರೆ ಅನ್ನೋ ಟಾಕ್ ಕೂಡ ಶುರುವಾಗಿದೆ.  ಐಸಿಸಿ ಕ್ರಿಕೆಟ್ ನಿಯಮಾವಳಿಗಳ ಪ್ರಕಾರ ಮೈದಾನದಲ್ಲಿ ಎದುರಾಳಿ ಆಟಗಾರರ ಮೇಲೆ ದೈಹಿಕವಾಗಿ ಕೈಮಾಡುವುದು ಅಥವಾ ತಳ್ಳುವುದು ಲೆವೆಲ್-2  ಅಥವಾ ಲೆವೆಲ್-3ಮಾದರಿಯ ಗಂಭೀರ ಶಿಸ್ತು ಉಲ್ಲಂಘನೆಯಾಗಿದೆ. ಅದರ ಪ್ರಕಾರ ಏನ್ ಶಿಕ್ಷೆ ಅಂತ ನೋಡೋವುದಾದ್ರೆ.

ಐಸಿಸಿ ನೀತಿ ಸಂಹಿತೆಯ ಅಡಿಯಲ್ಲಿ ತಪ್ಪಿತಸ್ಥರೆಂದು ಸಾಬೀತಾದರೆ, ವೈಭವ್ ಸೂರ್ಯವಂಶಿ ಅವರಿಗೆ ಪಂದ್ಯ ಶುಲ್ಕದ 100% ವರೆಗೆ ದಂಡ ವಿಧಿಸಬಹುದು. ಮ್ಯಾಚ್ ರೆಫರಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದರೆ ವೈಭವ್ ಸೂರ್ಯವಂಶಿ ಅವರನ್ನು ಕೆಲವು ಪಂದ್ಯಗಳಿಂದ ನಿಷೇಧಿಸಬಹುದು. ಇದೀಗ ಮೈದಾನದಲ್ಲಿ ಅಶಿಸ್ತು ತೋರಿದ ಶ್ರೀಲಂಕಾದ ವಿಶೇನ್ ಹಾಲಂಬಾ ಹಾಗೂ ವೈಭವ್ ಸೂರ್ಯವಂಶಿ ವಿರುದ್ಧ ಮ್ಯಾಚ್ ರೆಫರಿ ಪ್ರದೀಪ್ ಜಯಪ್ರಗಾಶ್ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದೇ ಸದ್ಯದ ಕುತೂಹಲ

 ಬ್ಯಾಟ್ ಮೂಲಕವೇ ಉತ್ತರ ನೀಡ್ತಾರಾ ವೈಭವ್?

ಇನ್ನೂ ವೈಭವ್ ಸೂರ್ಯವಂಶಿ ಇನ್ನೂ ಬಿಸಿ ರಕ್ತದ ಹುಡುಗ.. ನಿನ್ನೆ ಆದ ಘಟನೆ ಅವನ ಮನಸ್ಸಿನಿಂದ ಅಷ್ಟು ಸುಲಭಕ್ಕೆ ಮಾಸಲ್ಲ.. ಹೀಗಾಗಿ ತನ್ನ ಬ್ಯಾಟ್ ಮೂಲಕವೇ ಲಂಕಾಗೆ ಉತ್ತರ ಕೂಡುವುದ್ದಕ್ಕೆ ರೆಡಿಯಾಗಿದ್ದಾರೆ. ಲಂಕಾ A ವಿರುದ್ಧ ಭಾರತ A ತಂಡಕ್ಕೆ ಯಾವುದೇ ಪಂದ್ಯ ಇಲ್ಲ. ಮುಂದಿನ ಎರಡು ಪಂದ್ಯ ಲಂಕಾ vs ಅಫ್ಘಾನ್ .. ಅಫ್ಘಾನ್ Vs ಭಾರತ.. ಒಂದು ವೇಳೆ ಭಾರತ Vs ಶ್ರೀಲಂಕಾ ಫೈನಲ್‌ಗೆ ಬಂದ್ರೆ, ಇಲ್ಲಿ ವೈಭವ್ ಹೊಡಿಬಡಿ ಆಟದ ಮೂಲಕವೇ ಕೆಣಕಿದ ಲಂಕಾವನ್ನ ದಹನ ಮಾಡೋದು ಖಂಡಿತ..

Kishor KV