ಸೂಪರ್ ಸ್ಟ್ರೈಕರ್ ವೈಭವ್ ಸೂರ್ಯವಂಶಿ – 40 ಲಕ್ಷ ಪಡೆದ ಸಾಯಿ ಸುದರ್ಶನ್ ಸಂಭ್ರಮ

ಸೂಪರ್ ಸ್ಟ್ರೈಕರ್  ವೈಭವ್ ಸೂರ್ಯವಂಶಿ – 40 ಲಕ್ಷ ಪಡೆದ ಸಾಯಿ ಸುದರ್ಶನ್ ಸಂಭ್ರಮ

2025ರ ಐಪಿಎಲ್​​ನ ಸೂಪರ್ ಸ್ಟ್ರೈಕರ್  ಆಗಿ ವೈಭವ್ ಸೂರ್ಯವಂಶಿ ಹೊರಹೊಮ್ಮಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪರ ಈ ಬಾರಿ 7 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ವೈಭವ್ ಸೂರ್ಯವಂಶಿ ಒಂದು ಶತಕದೊಂದಿಗೆ ಒಟ್ಟು 252 ರನ್ ಕಲೆಹಾಕಿದ್ದಾರೆ. ಅದು ಕೂಡ 206.55 ರ ಸ್ಟ್ರೈಕ್​ ರೇಟ್​ನಲ್ಲಿ. ಈ ಮೂಲಕ ಈ ವರ್ಷದ ಸೂಪರ್ ಸ್ಟ್ರೈಕರ್ ಎನಿಸಿಕೊಂಡಿದ್ದಾರೆ. ಅದರಂತೆ ಸೂಪರ್ ಸ್ಟ್ರೈಕರ್​ಗೆ ನೀಡಲಾಗುವ ಟಾಟಾ ಕರ್ವ್ ಕಾರು 14 ವರ್ಷದ ವೈಭವ್ ಸೂರ್ಯವಂಶಿ ಪಾಲಾಗಿದೆ.

ಇದನ್ನೂ ಓದಿ:ನಾನೀಗ ಮಗುವಿನಂತೆ ನಿದ್ರಿಸಬಹುದು! -ಯೌವ್ವನವನ್ನೇ RCBಗಾಗಿ ಕೊಟ್ಟಿದ್ದೇನೆ! -ಕಣ್ಣೀರ ಹಿಂದಿನ ಸತ್ಯ ಬಿಚ್ಚಿಟ್ಟ ಕೊಹ್ಲಿ!

ಈ ಬಾರಿಯ ಐಪಿಎಲ್​ನಲ್ಲಿ ಅನುಭವಿ ಆಟಗಾರರನ್ನೇ ಹಿಂದಿಕ್ಕಿ ಯುವ ಎಡಗೈ ದಾಂಡಿಗ ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್ ಪ್ರಶಸ್ತಿ ಪಡೆದಿದ್ದಾರೆ. ಈ ಮೂಲಕ ಈ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ವೈಭವ್‌ಗೆ ಇನ್ನೂ ಕಾರ್ ಡ್ರೈವಿಂಗ್ ಲೈಸೆನ್ಸ್ ಸಿಕ್ಕಿಲ್ಲ. ಇದನ್ನ ಪ್ರಶಸ್ತಿ ಸಮಾರಂಭದ ವೇಳೆಯೂ ಹೇಳಿಯೇ ಗಿಫ್ಟ್ ನೀಡಿದ್ದು ವಿಶೇಷವಾಗಿತ್ತು.

ಇನ್ನು ಟೂರ್ನಿಯುದ್ದಕ್ಕೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್ ಈ ಬಾರಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಜೊತೆಗೆ ಸಾಯಿ ಸುದರ್ಶನ್ ಈ ಬಾರಿ ನಾಲ್ಕು ಅತ್ಯುತ್ತಮ ಸ್ಥಾನಗಳಲ್ಲಿ ಅಲಂಕರಿಸಿ ಬರೋಬ್ಬರಿ 40 ಲಕ್ಷ ರೂಪಾಯಿಗಳನ್ನ ಪಡೆದಿದ್ದಾರೆ. ಮತ್ತೊಂದೆಡೆ ಬೌಲಿಂಗ್​​ನಲ್ಲಿ 25 ವಿಕೆಟ್ ಪಡೆದ ಗುಜರಾತ್ ಟೈಟಾನ್ಸ್ ತಂಡದ ವೇಗಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಪರ್ಪಲ್​ ಕ್ಯಾಪ್ ಪಡೆದಿದ್ದಾರೆ.

ಗುಜರಾತ್ ಟೈಟಾನ್ಸ್ ತಂಡದ ವೇಗಿ ಮೊಹಮ್ಮದ್ ಸಿರಾಜ್ ಡಾಟ್ ಬಾಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಸಿಎಸ್‌ಕೆ ಫೇರ್ ಪ್ಲೇ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಮುಂಬೈ ತಂಡದ ಸೂರ್ಯಕುಮಾರ್ ಯಾದವ್ ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿಯನ್ನು ಗೆದ್ದರೆ, ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಘ ಅತ್ಯುತ್ತಮ ಪಿಚ್ ಮತ್ತು ಮೈದಾನವನ್ನು ಸಿದ್ಧಪಡಿಸಿದ್ದಕ್ಕಾಗಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

Sulekha

Leave a Reply

Your email address will not be published. Required fields are marked *