ಬ್ಯಾಗ್ ಪ್ಯಾಕ್ ಮಾಡಿಕೊಂಡು ಮನೆಗೆ ಹೋಗು – ಬೇಕಂತಲೇ ವೈಭವ್‌ನ ಟ್ರಿಗರ್ ಮಾಡಿದ್ರಾ ಲಂಕಾ ಪ್ಲೇಯರ್ಸ್

ಬ್ಯಾಗ್ ಪ್ಯಾಕ್ ಮಾಡಿಕೊಂಡು ಮನೆಗೆ ಹೋಗು – ಬೇಕಂತಲೇ ವೈಭವ್‌ನ ಟ್ರಿಗರ್ ಮಾಡಿದ್ರಾ ಲಂಕಾ ಪ್ಲೇಯರ್ಸ್

ಭಾರತ ಎ ಮತ್ತು ಶ್ರೀಲಂಕಾ ಎ ತಂಡಗಳ ನಡುವೆ ಮೈದಾನದಲ್ಲಿ ಜಗಳವಾಗಿರುವ ಘಟನೆ ಈಗ ಕ್ರಿಕೆಟ್ ಲೋಕದಲ್ಲಿ ಬಹಳ ಸದ್ದು ಮಾಡ್ತಿದೆ. ಆದ್ರೆ ಇಲ್ಲಿ ವೈಭವ್ ಸುಖಾ ಸುಮ್ಮನೆ ಜಗಳಕ್ಕೆ ಹೋಗಿಲ್ಲ ಅನ್ನೋದು ಕೂಡ ಎಲ್ಲರಿಗೂ ಗೊತ್ತಿದೆ. ವೈಭವ್‌ನ ಲಂಕಾ ಆಟಗಾರರು ಟ್ರಿಗರ್ ಮಾಡಿದ್ದಕ್ಕೆ ವೈಭವ್ ಲಂಕಾ ಆಟಗಾರರ ಮೇಲೆ ಕೈ ಹಾಕಿದ್ರು. ಈಗ ಲಂಕ ಆಟಗಾರರು ಹೇಳಿದ ಮಾತಿನ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಗ್ತಿದೆ.

ಸೂಪರ್ ಮುಗಿದ ಭಾರತ ಸೋಲ್ತು. ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ವೈಭವ್ ಡ್ರೆಸ್ಸಿಂಗ್ ರೂಂ ಕಡೆ ಹೊರಡುತ್ತಾರೆ. ಆ  ಶ್ರೀಲಂಕಾದ ಆಲ್‌ರೌಂಡರ್ ವಿಶೇನ್ ಹಲಂಬಗೆ ಅವರು ಸೀದಾ ವೈಭವ್ ಹತ್ತಿರ ಬಂದು ಕೆಣಕಲು ಶುರು ಮಾಡಿದರು. ಆಟ ಮುಗಿದಿದೆ, ಇವಾಗ ಸುಮ್ಮನೆ ನಿನ್ನ ಬ್ಯಾಗ್‌ ಪ್ಯಾಕ್‌ ಮಾಡಿಕೊಂಡು ಮನೆಗೆ ಹೋಗು ಅಂತ ಲೇವಡಿ ಮಾಡಿದರು. ಈ ವ್ಯಂಗ್ಯದ ಮಾತು ಕೇಳುತ್ತಿದ್ದಂತೆ ವೈಭವ್ ಸೂರ್ಯವಂಶಿ  ಟ್ರಿಗರ್ ಆಗಿದ್ದಾರೆ.

ಇದನ್ನೂಓದಿ: ಲಂಕಾ ಟ್ರಿಗರ್‌ಗೆ ಸಿಡಿದ ವೈಭವ್! – ಭಾರತದ ತಪ್ಪಿನಿಂದ ಗೆದ್ದ ಶ್ರೀಲಂಕಾ!

ವಾದ ವಿವಾದಗಳು ನಡೆಯುತ್ತಿರುವಾಗಲೇ ವೈಭವ್ ಸೂರ್ಯವಂಶಿ ಮುಂದೆ ನುಗ್ಗಿ ಲಂಕಾ ಆಟಗಾರನನ್ನು ಹಿಂದಕ್ಕೆ ತಳ್ಳಿದರು. ಇದನ್ನು ಕಂಡು ಗಾಬರಿಯಾದ ಲಂಕಾದ ಉಳಿದ ಆಟಗಾರರು ವೈಭವ್ ಅವರನ್ನು ಸುತ್ತುವರಿದರು. ಸೂರ್ಯಾಂಶ್ ಶೆಡ್ಗೆ ಕೂಡ ಈ ಜಗಳದ ಮಧ್ಯೆ ಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು. ನಂತ್ರ ವೈಭವ್ ಸಿಟ್ಟು ಕಮ್ಮಿಯಾಗದೇ ಲಂಕಾ ಆಟಗಾರರಿಗೆ ಬೈಯುತ್ತಾ, ಪೆವಿಲಿಯನ್ ಕಡೆಗೆ ಹೋದ್ರು.. ವೈಭವ್‌ನನ್ನ ಬೇಕಂತದಲೇ ಲಂಕಾ ಆಟಗಾರರು ಟ್ರಿಗರ್ ಮಾಡಿದ್ದಾರೆ ಅನ್ನೋದು ಗೊತ್ತಾಗಿದೆ. ಆಟ ಆರಂಭದಿಂದಲೇ ಭಾರತ ಆಟಗಾರರನ್ನ ಶ್ರೀಲಂಕಾ ಆಟಗಾರರು ಟ್ರಿಗರ್ ಮಾಡುತ್ತಿದ್ದರು ಅನ್ನೋದ್ದನ್ನ ತಿಲಕ್ ವರ್ಮಾ ಹೇಳಿದ್ದಾರೆ. ಈಗ ಲಂಕಾ ಪ್ಲೇಯರ್ ಏನ್ ಹೇಳಿದ್ದಾರೆ ಅನ್ನೋ ಸತ್ಯ ಕೂಡ ಹೊರ ಬಿದ್ದಿದೆ.

Kishor KV

Leave a Reply

Your email address will not be published. Required fields are marked *