ಸೂರ್ಯವಂಶಿ ವೈಭವದ ಆಟದಿಂದ 2 ಕೋಟಿ ಗಳಿಕೆ! – ಶತಕ ವೀರನಿಗೆ ಎಲ್ಲೆಲ್ಲಿಂದ ಹಣ ಬರ್ತಿದೆ?

ಸೂರ್ಯವಂಶಿ ವೈಭವದ ಆಟದಿಂದ 2 ಕೋಟಿ ಗಳಿಕೆ! – ಶತಕ ವೀರನಿಗೆ ಎಲ್ಲೆಲ್ಲಿಂದ ಹಣ ಬರ್ತಿದೆ?

ಕ್ರಿಕೆಟ್‌ ಲೋಕದಲ್ಲಿ ಹೆಚ್ಚು ಸೌಂಡ್‌ ಮಾಡ್ತಿರೋ ಪ್ಲೇಯರ್‌ಗಳಲ್ಲಿ ವೈಭವ್‌ ಸೂರ್ಯವಂಶಿ ಕೂಡ ಒಬ್ರು.. ಐಪಿಎಲ್‌ನಲ್ಲಿ ಅತಿ ವೇಗದ ಶತಕ ಸಿಡಿಸಿರೋ ಯುವ ಆಟಗಾರ ಈಗ ಅಂಡರ್‌ 19 ನಲ್ಲೂ ಧೂಳೆಬ್ಬಿಸಿದ್ದಾರೆ.. ಸೆಂಚುರಿ ಮೇಲೆ ಸೆಂಚುರಿ ಬಾರಿಸ್ತಾ, ಟೀಮ್‌ ಇಂಡಿಯಾದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ವೈಭವ್‌ ವೈಭವದ ಆಟ ಆಡ್ತಿದ್ದಂತೆ ಅವ್ರ ಆದಾಯ ಕೂಡ ಹೆಚ್ಚಾಗ್ತಾನೆ ಇದೆ.. ಸಣ್ಣ ವಯಸ್ಸಿನಲ್ಲೇ ಕೋಟಿ ಕೋಟಿ ಸಂಪಾದನೆ ಮಾಡಿದ್ದಾರೆ.

ಇದನ್ನೂ ಓದಿ: ಅಭಿನವ ಸರಸ್ವತಿಯ ಬದುಕಿನಲ್ಲಿ ನೋವುಗಳ ಸರಮಾಲೆ – ಅಮ್ಮನಿಗೆ ಕೊಟ್ಟ ಮಾತನ್ನು ಕೊನೆತನಕ ಉಳಿಸಿಕೊಂಡಿದ್ದರು ಸರೋಜಾದೇವಿ

ವೈಭವ್‌ ಸೂರ್ಯವಂಶಿ ವಯಸ್ಸು ಜಸ್ಟ್‌ 14.. ವೈಭವದ ಆಟದ ಮುಂದೆ ಎದುರಾಳಿಗಳಿಗೆ ನಡುಕ ಹುಟ್ಟೋದಂತೂ ಫಿಕ್ಸ್..‌ ಈಗಾಗಲೇ ಸೂರ್ಯವಂಶಿ ಸ್ಪೋಟಕ ಶತಕಗಳೊಂದಿಗೆ ಕ್ರಿಕೆಟ್ ಜಗತ್ತಿನ​ ನೆಕ್ಸ್ಟ್​ ಸೂಪರ್​ ಸ್ಟಾರ್​​ ನಾನೇ ಅನ್ನೋ ಸಂದೇಶವನ್ನ ತನ್ನ ಬ್ಯಾಟಿಂಗ್​ ಮೂಲಕ ತಿಳಿಸಿದ್ದಾರೆ.. ಈಗಾಗಲೇ ಐಪಿಎಲ್‌ನಲ್ಲಿ ವೇಗದ ಶತಕ ಬಾರಿಸಿರೋ ವೈಭವ್‌.. ಅಂಡರ್‌ 19ನಲ್ಲೂ ಅಬ್ಬರಿಸಿದ್ದಾರೆ.. ಇಂಗ್ಲೆಂಡ್‌ನಲ್ಲಿ 19 ವರ್ಷದೊಳಗಿನವರ ಯುವ ಏಕದಿನ ಸರಣಿಯಲ್ಲೂ ವೈಭವ್‌ ಉತ್ತಮ ಪ್ರದರ್ಶನ ನೀಡಿದ್ದು,  ಕ್ರಿಕೆಟ್‌ ದಿಗ್ಗಜರ ಕೆಲ ದಾಖಲೆ ಮುರಿದಿದ್ದಾರೆ..  ವೈಭವ್‌ ಕ್ರೀಸ್‌ನಲ್ಲಿ ಬ್ಯಾಟ್‌ ಬೀಸ್ತಿದ್ದಂತೆ ಈಗ ಅವ್ರ ವೈಯಕ್ತಿಕ ಜೀವನ.. ಹಾಗೇ ಗಳಿಸಿರೋ ಆದಾಯದ ಬಗ್ಗೆ ಸಾಕಷ್ಟು ಚರ್ಚೆ ನಡಿತಾ ಇದೆ.. ವೈಭವ್‌ 14 ವರ್ಷಕ್ಕೆ ಕೋಟ್ಯಾಧಿಪತಿ ಆಗಿದ್ದಾರೆ.

ಹೌದು..  ವೈಭವ್ ಸೂರ್ಯವಂಶಿ ಮಾರ್ಚ್ 27, 2011 ರಂದು ಬಿಹಾರದ ಸಮಷ್ಟಿಪುರ ಜಿಲ್ಲೆಯ ತಾಜ್‌ಪುರ ಗ್ರಾಮದಲ್ಲಿ ಜನಿಸಿದ್ರು. ವೈಭವ್ ಕೇವಲ ನಾಲ್ಕು ವರ್ಷವಿದ್ದಾಗಲೇ ಅವರ ತಂದೆ ಸಂಜೀವ್ ಕ್ರಿಕೆಟ್ ಕಲಿಸಲು ಶುರು ಮಾಡಿದ್ರು.. ಅದಾದ ನಂತ್ರ ವೈಭವ್‌ ನ ಸಮಷ್ಟಿಪುರದಲ್ಲಿರೋ ಕ್ರಿಕೆಟ್ ಅಕಾಡೆಮಿಗೆ ಸೇರಿಸಿದ್ರು. ಬಳಿಕ ಅವರು ಪಾಟ್ನಾಗೆ ಹೋಗಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಅಲ್ಲಿಂದ ಶುರುವಾದ ಕ್ರಿಕೆಟ್‌ ಜರ್ನಿ ಈಗ ವೈಭವ್ ಈ ಮಟ್ಟಕ್ಕೆ ಮಿಂಚುವಂತೆ ಮಾಡಿದೆ..  ಇದೀಗ ವೈಭವ್‌ ಆದಾಯ ಹೆಚ್ಚಾಗ್ತಾನೆ ಇದೆ..

ವೈಭವ್‌ ಸೂರ್ಯವಂಶಿ ಐಪಿಎಲ್ 2025ರ ಮೆಗಾ ಹರಾಜು ವೇಳೆ ಭಾರಿ ಸದ್ದು ಮಾಡಿದ್ರು.. ರಾಜಸ್ಥಾನ್ ರಾಯಲ್ಸ್ ವೈಭವ್ನ ಬರೋಬ್ಬರಿ 1.1 ಕೋಟಿಗೆ ಖರೀದಿಸಿತ್ತು.. ಇನ್ನು ವೈಭವ್‌ ಸೂರ್ಯವಂಶಿ  ಭಾರತ ಅಂಡರ್‌ 19 ತಂಡಲ್ಲೂ ಸ್ಥಾನ ಪಡೆದಿದ್ದಾರೆ. ಅಂಡರ್‌ 19ನಲ್ಲಿ ಆಡೋ ಆಟಗಾರರಿಗೆ ದಿನಕ್ಕೆ 10500 ರೂಪಾಯಿ ಪಂದ್ಯ ಶುಲ್ಕವನ್ನ ಬಿಸಿಸಿಐ ನೀಡುತ್ತಾ ಬಂದಿದೆ.. ವೈಭವ್‌ ಕೂಡ ಬಿಸಿಸಿಐ ನಿಂದ ಸಂಭಾವನೆ ಪಡಿತಾ ಇದ್ದಾರೆ. ಅಷ್ಟೇ ಅಲ್ಲ.. ವೈಭವ್‌ ಬಿಹಾರ ಪರ ಅಂಡರ್ 19, ರಣಜಿ ಟ್ರೋಫಿ ಹಾಗೂ ವಿವಿಧ ವಯೋಮಿತಿಯ ಕ್ರಿಕೆಟ್‌ ಟೂರ್ನಿಗಳನ್ನು ಆಡಿ ಸೈ ಎನಿಸಿಕೊಂಡಿದ್ದಾರೆ. ಇಲ್ಲೂ ಕೂಡ ಹೆಚ್ಚಿನ ಸಂಭಾವನೆ ಪಡಿತಾ ಇದ್ದಾರೆ ಎನ್ನಲಾಗ್ತಿದೆ, ಇದ್ರ ಜೊತೆಗೆ ವೈಭವ್‌ ಬ್ರ್ಯಾಂಡ್‌ ವ್ಯಾಲ್ಯೂ ಕೂಡ ಹೆಚ್ಚಾಗ್ತಾನೆ ಇದೆ. ಈಗಾಗಲೇ ಸೂರ್ಯವಂಶಿ ಕೆಲ ಜಾಹೀರಾತುಗಳಿಂದಲೂ ಹಣವನ್ನು ಪಡೆಯುತ್ತಾರೆ. ಇದೀಗ ವೈಭವ್‌ ವಾರ್ಷಿಕ ಆದಾಯ 2 ಕೋಟಿಗೂ ಅಧಿಕ ಅಂತಾ ಹೇಳಲಾಗ್ತಿದೆ.

ಇನ್ನು ವೈಭವ್‌ ಸೂರ್ಯವಂಶಿ ಸಣ್ಣ ವಯಸ್ಸಿಗೆ ಕಾರು ಮಾಲೀಕ ಆಗಿದ್ದಾರೆ. ಐಪಿಎಲ್‌ 2025ರ ಟೂರ್ನಿಯಲ್ಲಿ ಸೂರ್ಯವಂಶಿ ಕಾರು ಗೆದ್ದಿದ್ದಾರೆ.  ಅದ್ಭುತ ಸ್ಟ್ರೈಕ್ ರೇಟ್​ನೊಂದಿಗೆ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಆಟಗಾರನಿಗೆ ಟಾಟಾ ಸಫಾರಿ ಕಾರು ನೀಡಲಾಗುತ್ತೆ.. ಈ ವರ್ಷದ ಟೂರ್ನಿಯಲ್ಲಿ ಟಾಟಾ ಸಫಾರಿ ಕಾರು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಮಿಂಚಿದ್ದ ವೈಭವ್ ಸೂರ್ಯವಂಶಿ ಪಾಲಾಗಿದೆ.  ಒಟ್ಟಾರೆ ವೈಭವ್‌ ಸೂರ್ಯವಂಶಿ ತನ್ನ ಬ್ಯಾಟಿಂಗ್​ನಿಂದಲೇ   ಕ್ರಿಕೆಟ್​ ಲೋಕದಲ್ಲಿ ಹೊಸ ಅಲೆ ಸೃಷ್ಟಿಸಿದ್ದಾರೆ. ಅದ್ರ ಜೊತೆ ಜೊತೆಗೆ ತಮ್ಮ ಆದಾಯ ಡಬಲ್‌ ಮಾಡ್ಕೊಂಡಿದ್ದಾರೆ. ವೈಭವ್‌ ಗೆ ನೇಮ್, ಫೇಮ್‌ ಜೊತೆಗೆ ದುಡ್ಡು ಸುಮ್ನೆ ಬಂದಿಲ್ಲ.. ಅದ್ರ ಹಿಂದೆ ಸಾಕಷ್ಟು ಪರಿಶ್ರಮ ಇದೆ ಅನ್ನೋದನ್ನ ಮರೆಯುವಂತಿಲ್ಲ..

Shwetha M