ವೈಭವ್‌ ಮೇಲೆ PAK ಕಣ್ಣು – ದಾರಿ ತಪ್ಪಿದ ರಿಷಭ್ ಪಂತ್‌!  
ಲಂಕಾದಲ್ಲಿ ಸಿಡಿದ ಸಾಯಿ ಸುದರ್ಶನ್

ವೈಭವ್‌ ಮೇಲೆ PAK ಕಣ್ಣು – ದಾರಿ ತಪ್ಪಿದ ರಿಷಭ್ ಪಂತ್‌!  ಲಂಕಾದಲ್ಲಿ ಸಿಡಿದ ಸಾಯಿ ಸುದರ್ಶನ್

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು

ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಇಂದು ಬೆಲ್‌ಫಾಸ್ಟ್‌ನಲ್ಲಿ ನಡೆಯಲಿದ್ದು, ಮಳೆಯಿಂದ ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ. ಹವಾಮಾನ ವರದಿಯ ಪ್ರಕಾರ, ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಪಿಚ್ ವೇಗಿಗಳಿಗೆ ಅನುಕೂಲಕರವಾಗಿದ್ದು, ಟೀಂ ಇಂಡಿಯಾ ಪರ  ವೈಭವ್ ಸೂರ್ಯವಂಶಿ ಸೇರಿ ಮೂವರು ಆಟಗಾರರು ಪದಾರ್ಪಣೆ ಮಾಡುವ ನಿರೀಕ್ಷೆಯಿದೆ.

ಇದನ್ನೂ ಓದಿ: ಟೀಂ ಇಂಡಿಯಾಗೆ DO Or DIE –  AUS ವಿರುದ್ಧ ಗೆದ್ರಷ್ಟೇ ಸೆಮೀಸ್ ಟಿಕೆಟ್

ಟೀಂ ಇಂಡಿಯಾ ಪರ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನಾಡಲು ವೈಭವ್ ಸೂರ್ಯವಂಶಿ ಕೂಡ ಸಜ್ಜಾಗಿದ್ದು, ಐರ್ಲೆಂಡ್‌ನಲ್ಲೂ ವೈಭವ್ ಕ್ರೇಜ್ ಹೆಚ್ಚಾಗಿದೆ. ಹೀಗಾಗಿ ನಿಟ್ಟಿನಲ್ಲಿ ಕ್ರೀಡಾಂಗಣದಲ್ಲಿ ಆಸನಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುತ್ತಿದೆ, ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಆಸನ ಸಾಮರ್ಥ್ಯವನ್ನು 4,500 ರಿಂದ 7,000 ಕ್ಕೆ ಹೆಚ್ಚಿಸಲಾಗಿದೆ.

ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕಿಂತ ಮೊದಲು, ಸೂರ್ಯವಂಶಿ ಹಂಚಿಕೊಂಡಿರುವ ಪೋಸ್ಟ್  ಈಗ ಸಖತ್ ವೈರಲ್ಆಗ್ತಿದೆ. ಸೂರ್ಯವಂಶಿ ಹಂಚಿಕೊಂಡ ಪೋಸ್ಟ್​​ನಲ್ಲಿ ಕೇವಲ ಎರಡು ಪದಗಳನ್ನು ಬರೆದಿದ್ದಾರೆ. ಬ್ಲೂ ಜೆರ್ಸಿಯಲ್ಲಿರುವ ಫೋಟೋ ಜೊತೆಗೆ “ನ್ಯೂ ಚಾಪ್ಟರ್” ಎಂದು ಬರೆದಿರುವ ಪೋಸ್ಟ್ ಹಂಚಿಕೊಂಡಿದ್ದಾರೆ. ಇದು ಸಾಕಷ್ಟು ವೈರಲ್ ಆಗ್ತಿದೆ.

ಗೂಗಲ್ ಟ್ರೆಂಡ್ಸ್ ಡೇಟಾದ ಪ್ರಕಾರ, ಕಳೆದ ಮೂರು ತಿಂಗಳುಗಳಲ್ಲಿ ಪಾಕಿಸ್ತಾನದಲ್ಲಿ ವೈಭವ್‌ಗೆ ಸಂಬಂಧಿಸಿದ ಹುಡುಕಾಟಗಳು ತೀವ್ರವಾಗಿ ಹೆಚ್ಚಿದೆ. ಪಾಕ್‌ನಲ್ಲಿ ಅಭಿಮಾನಿಗಳು  ವೈಭವ್ ಸೂರ್ಯವಂಶಿ, ವೈಭವ್ ಸೂರ್ಯವಂಶಿ ವಯಸ್ಸು, ವೈಭವ್ ಸೂರ್ಯವಂಶಿ ಅಂಕಿಅಂಶಗಳು, ವೈಭವ್ ಸೂರ್ಯವಂಶಿ ಇಂದಿನ ಪಂದ್ಯ, ಮತ್ತು ವೈಭವ್ ಸೂರ್ಯವಂಶಿ ಐಪಿಎಲ್ ಬೆಲೆ 2026″ನುಡಿಗಳನ್ನ ಹುಡುಕುತ್ತಿದ್ದಾರೆ.

ಇಂದಿನ ಪಂದ್ಯದಲ್ಲಿ ಭಾರತೀಯ ಮೂಲದ ರಾಜಸ್ಥಾನದಲ್ಲಿ ಜನಿಸಿದ ಆಲ್‌ರೌಂಡರ್ ಜೈ ಮೂಂದ್ರಾ ಅವರು ಐರ್ಲೆಂಡ್ ಪರ ಪದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಇಂದು ಐರ್ಲೆಂಡ್ ಪರ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಸಿಕ್ಕಿದ್ರೆ,  ಮೂಂದ್ರ ಐರ್ಲೆಂಡ್ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ ಎರಡನೇ ಭಾರತೀಯ ಮೂಲದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ . ಪಂಜಾಬ್‌ನಲ್ಲಿ ಜನಿಸಿದ ಸಿಮಿ ಸಿಂಗ್, 2017 ರಲ್ಲಿ ಐರ್ಲೆಂಡ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದರು.  ಈಗ ಜೈ ಮೂಂದ್ರಾ ಐರ್ಲೆಂಡ್ ಪರ ಆಡಲಿದ್ದಾರೆ.

ಭಾರತದ ಟಿ20ಐ ನಾಯಕತ್ವಕ್ಕೆ ಪದಾರ್ಪಣೆ ಮಾಡುವ ಮುನ್ನ, ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಇದೀಗ ತಮ್ಮ ಇನ್‌ಸ್ಟಾಗ್ರಾಂ ಬಯೋ ಬದಲಾಯಿಸಿದ್ದು, ಇದು ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದೆ. ಶ್ರೇಯಸ್ ತಮ್ಮ ಇನ್‌ಸ್ಟಾಗ್ರಾಂ ಪ್ರೊಫೈಲ್‌ ಬಯೋಗೆ, ‘ಸೆಕೆಂಡ್ DBO 25.12.2025’ ಎಂದು ಸೇರಿಸಿದ್ದಾರೆ. ‘25.12.2025 ರಂದು ಶ್ರೇಯಸ್ ಅಯ್ಯರ್ ಮಾರಣಾಂತಿಕ ಗಾಯದಿಂದ ಚೇತರಿಸಿಕೊಂಡ ನಂತರ ಮತ್ತೆ ಬ್ಯಾಟ್ ಹಿಡಿದ ದಿನವಾಗಿತ್ತು. ಹೀಗಾಗಿ ಈ ದಿನಾಂಕವನ್ನ ಎರಡನೇ ಹುಟ್ಟು ಎಂದು ಹಾಕಿಕೊಂಡಿದ್ದಾರೆ.

ಮ್ಯಾಂಚೆಸ್ಟರ್‌ನಲ್ಲಿ ನಡೆದ 2026ರ ಮಹಿಳಾ ಟಿ20 ವಿಶ್ವಕಪ್‌ನ ನಿರ್ಣಾಯಕ ಪಂದ್ಯದಲ್ಲಿ ಭಾರತ ಬಾಂಗ್ಲಾದೇಶವನ್ನು ಸೋಲಿಸಿ ಸೆಮಿಫೈನಲ್ ರೇಸ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಬಾಂಗ್ಲಾ 136 ರನ್‌ಗಳ ಗುರಿ ನೀಡಿತು. ಟೀಂ ಇಂಡಿಯಾ 17ನೇ ಓವರ್‌ನಲ್ಲಿ 5 ವಿಕೆಟ್‌ಗಳಿಂದ ಗೆಲುವು ಸಾಧಿಸಿತು. ಲೀಗ್ ಹಂತದಲ್ಲಿ ಭಾರತಕ್ಕೆ ಇನ್ನೊಂದು ಪಂದ್ಯವಿದ್ದು ಅದರಲ್ಲಿ ಗೆಲುವು ದಾಖಲಿಸಿದ್ರೆ ಸೆಮಿಗೆ ಟೀಂ ಇಂಡಿಯಾ  ಎಂಟ್ರಿಕೊಡಲಿದೆ.

T20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತದ ಪರ ಶ್ರೀ ಚರಣಿಗೆ ಎರಡು ವಿಕೆಟ್​ ಪಡೆದು ರೆಕಾರ್ಡ್ ಬ್ರೇಕ್ ಮಾಡಿದ್ದಾರೆ. ಈ ಎರಡು ವಿಕೆಟ್ ಮೂಲಕ ಟಿ20 ವಿಶ್ವಕಪ್​ನ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. 2020 ರ ಟಿ20 ವಿಶ್ವಕಪ್‌ನಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದ ಲೆಗ್ ಸ್ಪಿನ್ನರ್ ಪೂನಂ ಯಾದವ್ ಅವರ ದಾಖಲೆಯನ್ನು ಶ್ರೀ ಚರಣಿ ಮುರಿದಿದ್ದಾರೆ.

ಶ್ರೀಲಂಕಾ ಎ ವಿರುದ್ಧದ ಅನಧಿಕೃತ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಎ ತಂಡದ ಆರಂಭಿಕ ಸಾಯಿ ಸುದರ್ಶನ್ ಭರ್ಜರಿ ಶತಕ ಸಿಡಿಸಿದ್ದಾರೆ. ಗಾಲೆ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ ಎ ತಂಡಕ್ಕೆ ಸುದರ್ಶನ್ 121 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿದರು. ಅವರ ಶತಕದ ನೆರವಿನಿಂದ ಭಾರತ ಎ ತಂಡ 400ರನ್ ಗಡಿ ದಾಟಿದೆ.

ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್, ಪಂತ್‌ಗೆ ಹಾಸ್ಯಮಯವಾಗಿ ಸ್ವಾಗತ ಕೋರಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಂತ್‌ಗೆ ಹೇಳಬೇಕೆಂದುಕೊಂಡಿದ್ದ ಒಂದು ಮಾತನ್ನು ವಿಡಿಯೋದಲ್ಲಿ ಅಕ್ಷರ್ ಹಂಚಿಕೊಂಡಿದ್ದಾರೆ. ಬೆಳಗ್ಗೆ ದಾರಿ ತಪ್ಪಿದ ವ್ಯಕ್ತಿ ಸಂಜೆ ಮನೆಗೆ ಮರಳಿ ಬಂದರೆ, ಅವನನ್ನು ಕಳೆದುಹೋದವನು ಎಂದು ಕರೆಯುವುದಿಲ್ಲ ಎಂಬ ಅರ್ಥದ ಹಿಂದಿ ಗಾದೆಯನ್ನು ಹೇಳುವ ಮೂಲಕ ಪಂತ್‌ಗೆ ಆತ್ಮೀಯ ಸ್ವಾಗತ ಕೋರಿದರು.

Kishor KV

Leave a Reply

Your email address will not be published. Required fields are marked *