38 ರನ್ ಗಳಿಸಿ ವೈಭವ್ ಸೂರ್ಯವಂಶಿ ಔಟ್ – 4 ಪಂದ್ಯ, ಅರ್ಧಶತಕವಿಲ್ಲದೇ ಬಾಸ್ ಬೇಬಿ ಪರದಾಟ

ಭಾರತ ಎ ತಂಡದ ಆಟಗಾರರಿಗೆ ಇವತ್ತಿನ ಪಂದ್ಯ ನಿರ್ಣಾಯಕವಾಗಿದೆ. ಇವತ್ತು ಬೆಳಗ್ಗೆ (ಬುಧವಾರ)ಭಾರತ ಎ ತಂಡ ಅಫ್ಘಾನಿಸ್ತಾನ್ ಎ ತಂಡದ ವಿರುದ್ಧ ಕಣಕ್ಕಿಳಿದಿದ್ದು, ಭಾರತ ಬ್ಯಾಟಿಂಗ್ ಆರಂಭಿಸಿದೆ. ಟೀಮ್ ಇಂಡಿಯಾಕ್ಕೆ ಆರಂಭದಲ್ಲೇ ಆಘಾತ ಎದುರಾಗಿದ್ದು, ವೈಭವ್ ಸೂರ್ಯವಂಶಿ ಔಟಾಗಿದ್ದಾರೆ.
ಇದನ್ನೂ ಓದಿ:ಕುಗ್ಗಿಸಿದಷ್ಟೂ ಹಿಗ್ಗುವ KL – SLOT ಬದಲಾದ್ರೂ ಸೂಪರ್ ಶೋ! – ಬೆಸ್ಟ್ ಇದ್ರೂ T-20Iಗೆ ಯಾಕಿಲ್ಲ?
ಶ್ರೀಲಂಕಾದ ರಂಗಿರಿ ದಂಬುಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ 5ನೇ ಪಂದ್ಯದಲ್ಲೂ ಭಾರತ ಎ ತಂಡ ಆರಂಭಿಕ ಆಘಾತ ಎದುರಿಸಿದೆ. ಈ ಪಂದ್ಯದಲ್ಲೂ ಓಪನರ್ ಆಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಮೊದಲ ಎಸೆತದಲ್ಲೇ ಜೀವದಾನ ಪಡೆದುಕೊಂಡರು. ಇನ್ನಿಂಗ್ಸ್ನ ಆರಂಭದಲ್ಲೇ ಕಟ್ ಶಾಟ್ ಹೊಡೆಯಲು ಹೋಗಿ ಬ್ಯಾಕ್ವರ್ಡ್ ಪಾಯಿಂಟ್ನಲ್ಲಿ ವೈಭವ್ ಸೂರ್ಯವಂಶಿ ಕ್ಯಾಚ್ ನೀಡಿದ್ದರು. ಆನ್-ಫೀಲ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರೂ, ಥರ್ಡ್ ಅಂಪೈರ್ ಮರುಪರಿಶೀಲಿಸಿದಾಗ ಫೀಲ್ಡರ್ ಚೆಂಡನ್ನು ನೆಲಕ್ಕೆ ಮುಟ್ಟಿಸಿರುವುದು ಕಂಡು ಬಂತು. ಇದರಿಂದಾಗಿ ವೈಭವ್ಗೆ ಆರಂಭದಲ್ಲೇ ಜೀವದಾನ ಸಿಕ್ಕಿತ್ತು ನಂತರ ಬಿರುಸಿನ ಬ್ಯಾಟಿಂಗ್ ಗೆ ಒತ್ತು ನೀಡಿದ ವೈಭವ್, 27 ಎಸೆತಗಳಲ್ಲಿ 38 ರನ್ ಬಾರಿಸಿದ್ದರು. ಆದರೆ 28ನೇ ಎಸೆತದಲ್ಲಿ ಕ್ಯಾಚ್ ಔಟಾದರು.
ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. ಏಕೆಂದರೆ ಇಂದಿನ ಪಂದ್ಯದಲ್ಲಿ ಗೆದ್ದರೆ ಮಾತ್ರ ಭಾರತ ತಂಡ ಫೈನಲ್ ರೇಸ್ನಲ್ಲಿ ಉಳಿಯಬಹುದು. ಟೂರ್ನಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಎ ವಿರುದ್ಧ ಭರ್ಜರಿ ಜಯ ಸಾಧಿಸಿ ಶುಭಾರಂಭ ಮಾಡಿದ್ದ ಭಾರತ ಎ ತಂಡವು, ಆ ನಂತರದ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದೆ. ಜೂನ್ 11 ರಂದು ನಡೆದ ಅಫ್ಘಾನಿಸ್ತಾನ್ ವಿರುದ್ಧದ ಮೊದಲ ಮುಖಾಮುಖಿಯಲ್ಲಿ ಭಾರತ 349 ರನ್ಗಳ ಬೃಹತ್ ಮೊತ್ತ ಪೇರಿಸಿದ್ದರೂ, ಮಳೆಯ ಕಾರಣದಿಂದಾಗಿ DLS ನಿಯಮದನ್ವಯ ಕೇವಲ 4 ರನ್ಗಳಿಂದ ಸೋಲೊಪ್ಪಿಕೊಂಡಿತ್ತು. ಪ್ರಸ್ತುತ ಲೀಗ್ ಹಂತದಲ್ಲಿ ಭಾರತ 3 ಪಂದ್ಯಗಳಿಂದ ಕೇವಲ 2 ಅಂಕಗಳನ್ನು ಹೊಂದಿದ್ದು, ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಒಂದು ವೇಳೆ ಇಂದು ಭಾರತ ಸೋತರೆ, ಕೇವಲ 2 ಅಂಕಗಳೊಂದಿಗೆ ಟೂರ್ನಿಯಿಂದ ಹೊರಬೀಳಲಿದೆ.

ನೋಡಿರಿ

