ಕೆಣಕಿ ಕೆಟ್ಟ ಶ್ರೀಲಂಕಾ ಆಟಗಾರರಿಗೆ ಶಿಕ್ಷೆ – ವೈಭವ್ ಸೂರ್ಯವಂಶಿ ನಿರ್ದೋಷಿ

ಕೆಣಕಿ ಕೆಟ್ಟ ಶ್ರೀಲಂಕಾ ಆಟಗಾರರಿಗೆ ಶಿಕ್ಷೆ – ವೈಭವ್ ಸೂರ್ಯವಂಶಿ ನಿರ್ದೋಷಿ

ಭಾರತದ ವಂಡರ್ ಕಿಡ್ ವೈಭವ್ ಸೂರ್ಯವಂಶಿ ಮೇಲೆ ಶ್ರೀಲಂಕಾ ಯುವ ಆಟಗಾರರ ಕಣ್ಣು ಅದೆಷ್ಟಿತ್ತು ಅಂದರೆ, ಕೆಣಕುತ್ತಲೇ ಇದ್ದರು. ಸಹಿಸಿಕೊಳ್ಳುವಷ್ಟು ಹೊತ್ತು ವೈಭವ್ ಸೂರ್ಯವಂಶಿ ಸಹಿಸಿಕೊಂಡಿದ್ದರು. ಕೊನೆಗೂ ತನ್ನ ತಂಡ ಸೋತ ಹತಾಶೆಯಲ್ಲೇ ಲಂಕಾ ಆಟಗಾರನನ್ನು ತಳ್ಳಿದ್ದರು. ಇದೀಗ ವಿಚಾರಣೆ ವೇಳೆ ಸೂರ್ಯವಂಶಿ ನಿರ್ದೋಷಿ ಎಂದು ಸಾಬೀತಾಗಿದೆ.

ಇದನ್ನೂ ಓದಿ:ಬ್ಯಾಗ್ ಪ್ಯಾಕ್ ಮಾಡಿಕೊಂಡು ಮನೆಗೆ ಹೋಗು – ಬೇಕಂತಲೇ ವೈಭವ್‌ನ ಟ್ರಿಗರ್ ಮಾಡಿದ್ರಾ ಲಂಕಾ ಪ್ಲೇಯರ್ಸ್

ಶ್ರೀಲಂಕಾದ ದಂಬುಲ್ಲಾದಲ್ಲಿ ನಡೆದ ಭಾರತ A vs ಶ್ರೀಲಂಕಾ A ಪಂದ್ಯದಲ್ಲಿ ನಡೆದ ವಾಕ್ಸಮರ, ಮತ್ತು ತಳ್ಳಾಟದ ವಿಚಾರಣೆ ನಡೆದಿದೆ. ಕೊನೆಗೂ ಇಬ್ಬರು ಲಂಕಾ ಆಟಗಾರರಿಗೆ ಮ್ಯಾಚ್ ರೆಫರಿ ದಂಡ ವಿಧಿಸಿದ್ದಾರೆ. ಶ್ರೀಲಂಕಾದ ವಿಷೇನ್ ಹಲಂಬಗೆ ಹಾಗೂ ನಿರೋಷನ್ ಡಿಕ್ವೆಲ್ಲಾ ಮ್ಯಾಚ್ ರೆಫರಿ ದಂಡ ವಿಧಿಸಿದ್ದಾರೆ. ಉಭಯ ತಂಡಗಳ ನಡುವಿನ ಈ ಪಂದ್ಯದ ಕೊನೆಯಲ್ಲಿ ಶ್ರೀಲಂಕಾ ತಂಡದ ಆಟಗಾರರು ಹಾಗೂ ಭಾರತದ ವೈಭವ್ ಸೂರ್ಯವಂಶಿ ನಡುವೆ ವಾಗ್ವಾದ ನಡೆದಿತ್ತು. ಇದೀಗ ಈ ವಾಗ್ವಾದಕ್ಕೆ ಪ್ರಮುಖ ಕಾರಣೀಕೃತರಾಗಿದ್ದ ಶ್ರೀಲಂಕಾದ ವಿಷೇನ್ ಹಲಂಬಗೆ ಹಾಗೂ ನಿರೋಷನ್ ಡಿಕ್ವೆಲ್ಲಾ ಅವರಿಗೆ ದಂಡ ವಿಧಿಸಲಾಗಿದೆ ಎಂದು ವರದಿಯಾಗಿದೆ. ಪಂದ್ಯ ಮುಗಿದ ಒಂದು ದಿನದ ಬಳಿಕ ಇಡೀ ಘಟನೆಯ ಬಗ್ಗೆ ಕುಲಂಕುಶವಾಗಿ ತನಿಖೆ ನಡೆಸಿರುವ ಪಂದ್ಯದ ರೆಫರಿ ಪ್ರದೀಪ್ ಜಯಪ್ರಕಾಶ್‌ದರನ್, ಶ್ರೀಲಂಕಾ ಎ ತಂಡದ ಭಾಗವಾಗಿರುವ ವಿಷೇನ್ ಹಲಂಬಗೆಗೆ ದಂಡ ವಿಧಿಸಿದ್ದಾರೆ. ಇದರರ್ಥ ಇಡೀ ಘಟನೆಯಲ್ಲಿ ವಿಷೇನ್ ಹಲಂಬಗೆ ತಪ್ಪಿತಸ್ಥನೆಂದು ಸಾಭೀತಾಗಿದೆ. ಇವರ ಜೊತೆಗೆ ಲಂಕಾ ತಂಡದ ಹಿರಿಯ ವಿಕೆಟ್ ಕೀಪರ್ ನಿರೋಷನ್ ಡಿಕ್ವೆಲ್ಲಾ ಅವರಿಗೂ ಮ್ಯಾಚ್ ರೆಫರಿ ದಂಡ ವಿಧಿಸಿದ್ದಾರೆ. ಆದರೆ ಡಿಕ್ವೆಲ್ಲಾಗೆ ವಿಧಿಸಿರುವ ಶಿಕ್ಷೆಗೂ, ವೈಭವ್ ಸೂರ್ಯವಂಶಿ ಜೊತೆಗಿನ ಜಗಳಕ್ಕೂ ಯಾವುದೇ ಸಂಬಂಧವಿಲ್ಲ. ಅಂದರೆ ಬೇರೆ ಪ್ರಕರಣದಲ್ಲಿ ಡಿಕ್ವೆಲ್ಲಾಗೆ ದಂಡ ವಿಧಿಸಲಾಗಿದೆ ಎಂದು ವರದಿಯಾಗಿದೆ.

ಎರಡು ತಂಡಗಳ ನಡುವಿನ ವಾಗ್ವಾದದ ಸಂದರ್ಭದಲ್ಲಿ ಎದುರಾಳಿ ತಂಡದ ಆಟಗಾರನನ್ನು ತಳ್ಳಿದ್ದ ವೈಭವ್ ಸೂರ್ಯವಂಶಿಗೆ ಶಿಕ್ಷೆಯಾಗಿಲ್ಲ. ಆ ರೀತಿಯ ಯಾವುದೇ ಕ್ರಮವನ್ನು ಬಿಸಿಸಿಐ ತೆಗೆದುಕೊಂಡಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದ್ದಂತೆ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಪ್ರತಿಕ್ರಿಯಿಸಿದ್ದು, ವೈಭವ್​ಗೆ ಇತರ ವಿಷಯಗಳ ಮೇಲೆ ಕೇಂದ್ರೀಕರಿಸುವ ಬದಲು ಸರಣಿಯತ್ತ ಗಮನಹರಿಸುವಂತೆ ಸಲಹೆ ನೀಡಿದ್ದಾಗಿ ತಿಳಿಸಿದ್ದಾರೆ.

Sulekha

Leave a Reply

Your email address will not be published. Required fields are marked *