24 ಎಸೆತಗಳಲ್ಲಿ 10 ಸಿಕ್ಸ್ ಸಿಡಿಸಿದ ವೈಭವ್ ಸೂರ್ಯವಂಶಿ – ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

24 ಎಸೆತಗಳಲ್ಲಿ 10 ಸಿಕ್ಸ್ ಸಿಡಿಸಿದ ವೈಭವ್ ಸೂರ್ಯವಂಶಿ – ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಭಾರತದ ಯಂಗ್ ಕ್ರಿಕೆಟರ್ ವೈಭವ್ ಸೂರ್ಯವಂಶಿಯ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆದಿದೆ. ಸೌತ್ ಆಫ್ರಿಕಾ ವಿರುದ್ಧ ವೈಭವ್ ಸೂರ್ಯವಂಶಿ ಭರ್ಜರಿಯಾಗಿಯೇ ಬ್ಯಾಟ್ ಬೀಸಿದ್ದಾರೆ. ಕೇವಲ 24 ಎಸೆತಗಳಲ್ಲಿ 10 ಸಿಕ್ಸ್ ಸಿಡಿಸಿ ಬೌಲರ್‌ಗಳಲ್ಲಿ ನಡುಕ ಹುಟ್ಟಿಸಿದ್ದಾರೆ.

ಇದನ್ನೂ ಓದಿ:ಗಂಭೀರ್ ಬದಲಾಗದಿದ್ರೆ ಕೋಚ್ ಚೇಂಜ್ – 5 ತಪ್ಪು.. 2026ರಲ್ಲಿ ಡು ಆರ್ ಡೈ!

ಸೌತ್ ಆಫ್ರಿಕಾ ಅಂಡರ್-19 ತಂಡದ ವಿರುದ್ಧ ಭಾರತದ ಯಂಗ್ ಗನ್ ವೈಭವ್ ಸೂರ್ಯವಂಶಿ ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು 49.3 ಓವರ್​ಗಳಲ್ಲಿ 245 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಬೌಲರ್‌ಗಳನ್ನು ಮನಸಾರೆ ಬೆಂಡೆತ್ತಿದ್ದಾರೆ. ಮೊದಲ ಓವರ್​ನಿಂದಲೇ ಹೊಡಿ ಬಡಿ ಆಟವಾಡಿದ ವೈಭವ್, 5 ಓವರ್​ಗಳ ಒಳಗೆಯೇ 6 ಸಿಕ್ಸರ್​ ಸಿಡಿಸಿದ್ದರು. ಈ ಸಿಕ್ಸರ್​ಗಳೊಂದಿಗೆ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದಾದ ಬಳಿಕ ಕೂಡ ಸಿಕ್ಸರ್​ಗಳ ಸುರಿಮಳೆಗೈದ ವೈಭವ್ ಸೂರ್ಯವಂಶಿ ಕೇವಲ 24 ಎಸೆತಗಳಲ್ಲಿ 10 ಭರ್ಜರಿ ಸಿಕ್ಸ್​ ಹಾಗೂ 1 ಆಕರ್ಷಕ ಫೋರ್​​ನೊಂದಿಗೆ 68 ರನ್ ಬಾರಿಸಿ ಔಟಾದರು. ವೈಭವ್ ಸೂರ್ಯವಂಶಿಯ ಈ ಸಿಡಿಲಬ್ಬರದ ನೆರವಿನೊಂದಿಗೆ ಭಾರತ ತಂಡವು 8 ಓವರ್​ಗಳಲ್ಲಿ 95 ರನ್ ಕಲೆಹಾಕಿತು. ಇದಾದ ಬಳಿಕ ಅಭಿಮನ್ಯು ಕುಂದು 42 ಎಸೆತಗಳಲ್ಲಿ 48 ರನ್ ಬಾರಿಸಿದರು. ಈ ಮೂಲಕ ಭಾರತ ತಂಡವು 23.2 ಓವರ್​ಗಳಲ್ಲಿ 176 ರನ್​ ಗಳಿಸಿತ್ತು. ಈ ವೇಳೆ ವೇಳೆ ಮಂದ ಬೆಳಕಿನ ಕಾರಣ ಪಂದ್ಯವನ್ನು ಕೆಲ ಕಾಲ ಸ್ಥಗಿತಗೊಳಿಸಲಾಯಿತು. ಅಷ್ಟೇ ಅಲ್ಲದೆ ಪಂದ್ಯದ ಫಲಿತಾಂಶ ನಿರ್ಣಯಕ್ಕಾಗಿ ಡಕ್​ವರ್ತ್ ಲೂಯಿಸ್ ನಿಯಮದ ಮೊರೆ ಹೋಗಲಾಗಿದ್ದು, ಈ ವೇಳೆಗೆ ಭಾರತ ತಂಡವು 23.2 ಓವರ್​ಗಳಲ್ಲಿ 176 ರನ್​ಗಳಿಸಿ ನಿಗದಿತ ಗುರಿಗಿಂತ ಮುಂದಿದ್ದರಿಂದ ಟೀಮ್ ಇಂಡಿಯಾ ಗೆದ್ದಿದೆ ಎಂದು ಘೋಷಿಸಲಾಗಿದೆ.

Sulekha