ವೈಭವ್ ಸೂರ್ಯವಂಶಿಗೆ ದೇಹ ತೂಕದ್ದೇ ಟೆನ್ಷನ್ – ಮಗ ಸಣ್ಣ ಆಗ್ಬೇಕು ಎಂದಿದ್ದೇಕೆ ತಂದೆ?

2025ರ ಐಪಿಎಲ್ ಬಳಿಕ ವೈಭವ್ ಸೂರ್ಯವಂಶಿ ಮನೆಮಾತಾಗಿದ್ದಾರೆ. ದಿಗ್ಗಜ ಕ್ರಿಕೆಟಿಗರು ಕೂಡ ಸೂರ್ಯವಂಶಿ ಆಟಕ್ಕೆ ಫಿದಾ ಆಗಿದ್ದಾರೆ.14 ವರ್ಷದ ಈ ಯಂಗ್ ಬಾಯ್ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿಯುತ್ತಿದ್ದಾರೆ. ಐಪಿಎಲ್ ಡೆಬ್ಯೂ ಪಂದ್ಯದಲ್ಲಿ ಫಸ್ಟ್ ಬಾಲ್ನಲ್ಲೇ ಸಿಕ್ಸ್ ಸಿಡಿಸಿ ಕರಿಯರ್ ಆರಂಭಿಸಿದ್ದ ಸೂರ್ಯವಂಶಿ ಐಪಿಎಲ್ ಮುಕ್ತಾಯದ ಹೊತ್ತಿಗೆ ಸೂಪರ್ ಸ್ಟ್ರೈಕರ್ ಅವಾರ್ಡ್ನೂ ಕೂಡ ಪಡೆದಿದ್ರು. ಬಟ್ ಸೂರ್ಯವಂಶಿ ಆಟ ನೋಡಿದ ಬಹುತೇಕರಿಗೆ ಕಾಡಿದ್ದು ಈತನಿಗೆ ಇನ್ನೂ ಜಸ್ಟ್ 14 ವರ್ಷ ಅಷ್ಟೇನಾ ಅನ್ನೋದು. ಯಾಕಂದ್ರೆ ಸೂರ್ಯವಂಶಿ ತನ್ನ ಜೊತೆಗಿನ ಆಟಗಾರರಷ್ಟೇ ಮೈಕಟ್ಟು, ಎತ್ತರ ಎಲ್ಲವನ್ನೂ ಹೊಂದಿದ್ದಾರೆ. ಇದೇ ಮೈಕಟ್ಟು ಅವ್ರ ತಂದೆಯ ಆತಂಕಕ್ಕೂ ಕಾರಣವಾಗಿದೆ.
ಇದನ್ನೂ ಓದಿ : 5 ಬಾಲ್ ಗೆ 5 ವಿಕೆಟ್ ಕಿತ್ತ ರಾಥಿ – ಕಾಂಟ್ರವರ್ಸಿ ದಿಗ್ವೇಶ್ ಈಗ HERO
ಹೌದು. ಸೂರ್ಯವಂಶಿ ಪವರ್ ಹಿಟ್ಟಿಂಗ್ ಸ್ಟ್ರೆಂಥ್ ಹೊಂದಿದ್ರೂ ಕೂಡ ಫಿಟ್ನೆಸ್ ಮೇಂಟೇನ್ ಮಾಡ್ಬೇಕಾಗುತ್ತೆ. ಚಬ್ಬಿ ಚಬ್ಬಿಯಾಗಿ ಕಾಣೋ ಸೂರ್ಯವಂಶಿ ಕ್ರಿಕೆಟ್ ಮೈದಾನದಲ್ಲಿ ಇನ್ನಷ್ಟು ಬೆವರು ಹರಿಸಬೇಕಿದೆ. ಬಿಹಾರ ಮೂಲದ ಸೂರ್ಯವಂಶಿ ತಂದೆ ಸಂಜೀವ್ ಈ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮಗ ಸಾಕಷ್ಟು ತೂಕ ಹೆಚ್ಚಿಸಿಕೊಂಡಿದ್ದಾನೆ. ಅದನ್ನು ಕಡಿಮೆ ಮಾಡಬೇಕಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ಇದಕ್ಕಾಗಿ ಬಿಹಾರದಲ್ಲಿ ಬಹಳ ಜನಪ್ರಿಯ ಖಾದ್ಯವಾದ ಲಿಟ್ಟಿ-ಚೋಖಾವನ್ನ ತಿನ್ನೋದೇ ಬಿಟ್ಟಿರೋದಾಗಿ ತಿಳಿಸಿದ್ದಾರೆ. ಹಾಗೇ ತುಂಬಾ ಸಮತೋಲಿತ ಆಹಾರವನ್ನು ಸೇವಿಸುತ್ತಾನೆ. ಅವನು ಜಿಮ್‌ಗೆ ಹೋಗುತ್ತಾನೆ. ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದಿದ್ದಾರೆ. ಅಲ್ದೇ ಇಷ್ಟು ಚಿಕ್ಕ ವಯಸ್ಸಿನಲ್ಲಿ ಖ್ಯಾತಿ ಪಡೆದಾಗ, ಅದನ್ನು ನಿಭಾಯಿಸುವುದು ಮುಖ್ಯ. ನನಗೆ ಸ್ವಲ್ಪ ಆತಂಕ ಇದೆ. ಆದರೆ ವೈಭವ್ ಇದನ್ನು ಅರ್ಥಮಾಡಿಕೊಂಡಿದ್ದಾನೆ. ಇದು ಕೇವಲ ಆರಂಭ ಎಂದು ಅವನಿಗೆ ತಿಳಿದಿದೆ, ಅವನು ಇನ್ನೂ ದೇಶಕ್ಕಾಗಿ ಆಡಬೇಕಾಗಿದೆ ಎಂದಿದ್ದಾರೆ.
ಸೂರ್ಯವಂಶಿ ಈ ಸೀಸನ್ ನಲ್ಲಿ ತಮ್ಮ ಬ್ಯಾಟಿಂಗ್ ಮೂಲಕವೇ ಎಲ್ಲರ ಗಮನ ಸೆಳೆದಿದ್ರು. ಅದ್ರಲ್ಲೂ ಏಪ್ರಿಲ್‌ನಲ್ಲಿ ಜೈಪುರದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ 38 ಎಸೆತಗಳಲ್ಲಿ ಏಳು ಬೌಂಡರಿ ಮತ್ತು 11 ಸಿಕ್ಸರ್‌ಗಳೊಂದಿಗೆ 101 ರನ್ ಗಳಿಸಿದ್ರು. 35 ಎಸೆತಗಳಲ್ಲೇ ಸೆಂಚುರಿ ಸಿಡಿಸಿ ಭಾರತೀಯ ಬ್ಯಾಟರ್ನ ಅತ್ಯಂತ ವೇಗದ ಶತಕದ ದಾಖಲೆಯನ್ನು ಸ್ಥಾಪಿಸಿದರು. ಐಪಿಎಲ್‌ನಲ್ಲಿ ಎರಡನೇ ವೇಗದ ಶತಕಕ್ಕಾಗಿ ದಾಖಲೆ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ನಮೂದಿಸಿದ್ರು. 14 ವರ್ಷ 32 ದಿನಗಳಲ್ಲಿ ಪುರುಷರ ಟಿ 20 ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ರು. ಇದೇ ಪರ್ಫಾಮೆನ್ಸ್ ಬಳಿಕ ವೈಭವ್ ಸೂರ್ಯವಂಶಿ ಭಾರತ ಅಂಡರ್ -19 ತಂಡದ ಇಂಗ್ಲೆಂಡ್ ಟೂರ್ಗೂ ಸೆಲೆಕ್ಟ್ ಆಗಿದ್ದಾರೆ. ಎಡಗೈ ಬ್ಯಾಟರ್ ಆಗಿರುವ ಸೂರ್ಯವಂಶಿ ಐಪಿಎಲ್ ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್ ಪ್ರಶಸ್ತಿಯನ್ನು ಗೆದ್ದರು.