ಮೂರನೇ ಪಂದ್ಯದಲ್ಲೂ ವೈಭವ್ ಸೂರ್ಯವಂಶಿ ಫೇಲ್ – ಬಾಸ್ ಬೇಬಿ ಮತ್ತೆ ಸೈಲೆಂಟ್..!

ಮೂರನೇ ಪಂದ್ಯದಲ್ಲೂ ವೈಭವ್ ಸೂರ್ಯವಂಶಿ ಫೇಲ್ – ಬಾಸ್ ಬೇಬಿ ಮತ್ತೆ ಸೈಲೆಂಟ್..!

ಶ್ರೀಲಂಕಾ ಎ ತಂಡದ ವಿರುದ್ಧ ಭಾರತ ಎ ತಂಡ ಕಣಕ್ಕಿಳಿದಿದೆ. ಭಾರತೀಯರ ಕಣ್ಣು ವೈಭವ್ ಸೂರ್ಯವಂಶಿಯ ಮೇಲಿತ್ತು ಅನ್ನೋದು ಕೂಡಾ ಸತ್ಯ. ಆದರೆ, ಯಾಕೋ ವಂಡರ್ ಕಿಡ್ ಮ್ಯಾಜಿಕ್ ಡಲ್ ಆಗಿದೆ. ಸತತ ಮೂರನೇ ಪಂದ್ಯದಲ್ಲೂ ಬಾಸ್ ಬೇಬಿ ಬ್ಯಾಟ್ ಸೈಲೆಂಟ್ ಆಗಿದೆ.

ಇದನ್ನೂ ಓದಿ:ದೀಪ್ತಿ, ಸ್ಮೃತಿ ದಾಳಿಗೆ ಕಂಗೆಟ್ಟ ಪಾಕಿಸ್ತಾನ – ಪಾಕ್ ವಿರುದ್ಧ ಗೆದ್ದು ಬೀಗಿದ ಟೀಮ್ ಇಂಡಿಯಾ

ಭಾರತ ಎ ಮತ್ತು  ಶ್ರೀಲಂಕಾ ಎ ತಂಡಗಳ ನಡುವೆ ಪಂದ್ಯ ಆರಂಭವಾಗಿದೆ. ಟಾಸ್ ಗೆದ್ದಿರುವ ಲಂಕಾ ಪಡೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಟೀಮ್ ಇಂಡಿಯಾದ ವಂಡರ್ ಕಿಡ್ ವೈಭವ್ ಸೂರ್ಯವಂಶಿ ಈ ಪಂದ್ಯದಲ್ಲೂ ಬೇಗನೇ ಪೆವಿಲಿಯನ್ ಸೇರಿದ್ದಾರೆ. ಟೀಮ್ ಇಂಡಿಯಾ ಮತ್ತದೇ ಆರಂಭಿಕ ಆಘಾತಕ್ಕೆ ಒಳಗಾಗಿದೆ. ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಮತ್ತದೇ ಹೊಡಿಬಡಿ ಆಟಕ್ಕೆ ಮುಂದಾದರು. ಮೊದಲ ಓವರ್​ನಲ್ಲಿ ಎಚ್ಚರಿಕೆಯ ಬ್ಯಾಟಿಂಗ್​ಗೆ ಒತ್ತು ನೀಡಿದ ವೈಭವ್, ಏಕದಿನ ಸರಣಿಗೆ ಹೊಂದಿಕೊಂಡು ಆಡುತ್ತಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ, ಎರಡನೇ ಓವರ್​ನಲ್ಲಿ ಫೋರ್ ಹಾಗೂ ಸಿಕ್ಸ್​ಗಳನ್ನು ಬಾರಿಸಿದರು. ಅಲ್ಲದೆ ಮೂರನೇ ಹಾಗೂ ನಾಲ್ಕನೇ ಓವರ್​ಗಳಲ್ಲೂ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ಶ್ರೀಲಂಕಾ ನಾಯಕ ಸಹನ್ ಅರಾಚ್ಚಿ ಬಾಲ್ ಗೆ ಕ್ಯಾಚ್ ಔಟಾದರು. 14 ಎಸೆತಗಳಲ್ಲಿ 1 ಸಿಕ್ಸ್,​ 3 ಫೋರ್​ನೊಂದಿಗೆ 21 ರನ್ ಮಾತ್ರ ವೈಭವ್ ಸೂರ್ಯವಂಶಿ  ಬ್ಯಾಟಿಂಗ್ ನಿಂದ ಬಂದಿದೆ.

ವೈಭವ್ ಸೂರ್ಯವಂಶಿ ಏಕದಿನ ಸರಣಿಗೆ ಇನ್ನೂ ಹೊಂದಿಕೊಳ್ಳಬೇಕಿದೆ. ಈಗಾಗಲೇ ಎರಡು ಪಂದ್ಯ ಆಡಿರುವ ವೈಭವ್ ಸೂರ್ಯವಂಶಿ ಅರ್ಧಶತಕ ಗಳಿಸುವಲ್ಲಿ ವಿಫಲರಾಗಿದ್ದಾರೆ. ಶ್ರೀಲಂಕಾ ಎ ಎದುರು ಮೊದಲ ಪಂದ್ಯ ಆಡಿರುವ ವೈಬವ್, 12 ಎಸೆತಗಳಲ್ಲಿ 3 ಬೌಂಡರಿ ಒಳಗೊಂಡ 14 ರನ್ ಗಳಿಸಿದ್ದರು. ಎರಡನೇ ಪಂದ್ಯ ಅಫ್ಘಾನಿಸ್ತಾನ್ ಎ ತಂಡದ ಎದುರು ಕಣಕ್ಕಿಳಿದ ವೈಭವ್, 22 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ 44 ರನ್ ಬಾರಿಸಿದ್ದರು. ಇದೀಗ ಮೂರನೇ ಪಂದ್ಯದಲ್ಲೂ ಕೇವಲ 21 ರನ್ ಗಳಿಸಿ ಔಟ್ ಆಗಿದ್ದಾರೆ.

Kishor KV