ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲೂ ವೈಭವ್ ಸೂರ್ಯವಂಶಿ ಅಬ್ಬರ – 61 ಎಸೆತಗಳಲ್ಲಿ ಔಟಾಗದೇ 108 ರನ್

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅದ್ಭುತ ಶತಕ ಬಾರಿಸುವ ಮೂಲಕ ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ ದಾಖಲೆ ಬರೆದಿದ್ದಾರೆ. ಈಡನ್ ಗಾರ್ಡನ್ಸ್ನಲ್ಲಿ ಮಹಾರಾಷ್ಟ್ರ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಬಿಹಾರ ತಂಡ ಪ್ರತಿನಿಧಿಸುತ್ತಿರುವ 14 ವರ್ಷದ ಸೂರ್ಯವಂಶಿ ಟೂರ್ನಿಯ ಇತಿಹಾಸದಲ್ಲಿ ಶತಕ ಸಿಡಿಸಿದ್ದಾರೆ. ಈ ಮೂಲಕ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇದನ್ನೂ ಓದಿ: ತಾನೇ ತೋಡಿದ ಹಳ್ಳಕ್ಕೆ ಬಿದ್ರಾ ರಕ್ಷಿತಾ ಶೆಟ್ಟಿ? – ಮಾಳುಗಾಗಿ ತಪ್ಪು ಮಾಡಿದ್ರಾ ರಕ್ಷಿತಾ?
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಿಹಾರ ತಂಡವು 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು, ವೈಭವ್ 61 ಎಸೆತಗಳಲ್ಲಿ ಔಟಾಗದೇ 108 ರನ್ ಗಳಿಸಿದರು. ಇದರಲ್ಲಿ 7 ಬೌಂಡರಿ ಮತ್ತು 7 ಸಿಕ್ಸರ್ ಸೇರಿದ್ದವು. ಅವರು 20 ನೇ ಓವರ್ನಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಅರ್ಶಿನ್ ಕುಲಕರ್ಣಿ ಅವರ ಮೊದಲ ಎಸೆತವನ್ನು ಬೌಂಡರಿಗೆ ಕಳುಹಿಸುವ ಮೂಲಕ 58 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದರು. ಇದರೊಂದಿಗೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಮೂರು ಟಿ20 ಶತಕಗಳನ್ನು ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
18 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಹೆಚ್ಚು ಟಿ20 ಶತಕ ಸಿಡಿಸಿದ ಆಟಗಾರರು
3* – ವೈಭವ್ ಸೂರ್ಯವಂಶಿ, ಭಾರತ (17 ಇನ್ನಿಂಗ್ಸ್)
2 – ಗುಸ್ತಾವ್ ಮಕಿಯನ್, ಫ್ರಾನ್ಸ್ (11 ಇನ್ನಿಂಗ್ಸ್)
2 – ಯುಷ್ ಮ್ಹಾತ್ರೆ, ಭಾರತ (10 ಇನ್ನಿಂಗ್ಸ್)
ವೈಭವ್ ಒಂದೇ ವರ್ಷದಲ್ಲಿ ಮೂರು ಶತಕ ಸಿಡಿಸುವ ಮೂಲಕ ಅಭಿಷೇಕ್ ಶರ್ಮಾ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಭಿಷೇಕ್ ಈ ವರ್ಷ ಟಿ20 ಸ್ವರೂಪದಲ್ಲಿ ಮೂರು ಶತಕಗಳನ್ನು ಸಿಡಿಸಿದ್ದಾರೆ. ವೈಭವ್ ಕೇವಲ 15 ಇನ್ನಿಂಗ್ಸ್ಗಳಲ್ಲಿ ತಮ್ಮ ಮೂರನೇ ಟಿ20 ಶತಕ ಪೂರ್ಣಗೊಳಿಸಿದ್ದು, ಇನ್ನಿಂಗ್ಸ್ ವಿಷಯದಲ್ಲಿ ವೈಭವ್ ಅಭಿಷೇಕ್ ಅವರನ್ನು ಹಿಂದಿಕ್ಕಿದ್ದಾರೆ.

ನೋಡಿರಿ

