ಸಚಿನ್‌ ಹಿಂದಿಕ್ಕಿದ ವೈಭವ್‌ ಗಳಿಕೆಯಲ್ಲೂ BOSS.. ರನ್‌ ಮಳೆ.. ಸೂರ್ಯವಂಶಿಗೆ ಹಣದ ಹೊಳೆ! -ಬಾಸ್‌ ಬೇಬಿ ಹವಾ.. ಸ್ಟಾರ್ಸ್‌ ಸೈಡ್‌ಲೈನ್?

ಸಚಿನ್‌ ಹಿಂದಿಕ್ಕಿದ ವೈಭವ್‌ ಗಳಿಕೆಯಲ್ಲೂ BOSS.. ರನ್‌ ಮಳೆ.. ಸೂರ್ಯವಂಶಿಗೆ ಹಣದ ಹೊಳೆ! -ಬಾಸ್‌ ಬೇಬಿ ಹವಾ.. ಸ್ಟಾರ್ಸ್‌ ಸೈಡ್‌ಲೈನ್?

ವಿಶ್ವ ಕ್ರಿಕೆಟ್‌ನಲ್ಲಿ ಹೆಚ್ಚು ಸೌಂಡ್‌ ಮಾಡ್ತಿರೋ ಹೆಸರು ಅಂದ್ರೆ ಅದು ವೈಭವ್‌ ಸೂರ್ಯವಂಶಿದ್ದು. ಪ್ರಚಂಡ ಪುಟಾಣಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೂ ಪದಾರ್ಪಣೆ ಮಾಡಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಈ 15 ವರ್ಷದ ಬಾಲಕ, ಆಂಗ್ಲರ ಮಣ್ಣಿನಲ್ಲಿ ಶತಕ ಬಾರಿಸಲು ವಿಫಲವಾದ್ರೂ ಸ್ಫೋಟಕ ಓಪನಿಂಗ್ ನೀಡುವಲ್ಲಿ ವೈಫಲ್ಯ ಕಂಡಿಲ್ಲ. ಇನ್ನು, ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಎಂದಿನಂತೆ ತಮ್ಮ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ, ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಈ ಮೂಲಕ ಇಡೀ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿರುವ ವೈಭವ್‌ ಕ್ರೇಜ್‌ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೆ ಇದೆ. ಬ್ಯಾಟ್‌ನಲ್ಲಿ ರನ್‌ ಮಳೆ ಬಾರಿಸ್ತಿದ್ದಂತೆ ಅವರ ಬ್ರಾಂಡ್‌ ವಾಲ್ಯೂ ಕೂಡ ಹೆಚ್ಚಾಗ್ತಿದೆ. ಇದೀಗ ಪ್ರಸಿದ್ದ ಐದು ಬ್ರಾಂಡ್‌ಗಳೊಂದಿಗೆ ಬಾಸ್‌ ಬೇಬಿ ಒಪ್ಪಂದ ಮಾಡಿಕೊಂಡಿದ್ದಾರೆ. ಇದ್ರಿಂದಾಗಿ ವೈಭವ್‌ ಆದಾಯ ಕೂಡ ಹೆಚ್ಚಾಗಿದೆ.

ಇದನ್ನೂ ಓದಿ: ಗಂಭೀರ್ & ಅಗರ್ಕರ್ ಬಾಲ ಕಟ್ – VVS ಲಕ್ಷ್ಮಣ್ ಬಿಸಿಸಿಐ ಡೈರೆಕ್ಟರ್

ವೈಭವ್‌ ಸೂರ್ಯವಂಶಿ.. ಆತನಿಗೆ ಜಸ್ಟ್‌ 15 ವರ್ಷ.. ಇನ್ನೂ ಸರಿಯಾಗಿ ಪ್ರಪಂಚ ನೋಡದ ಆ ಸಣ್ಣ ಹುಡುಗನಿಗೆ ಕ್ರಿಕೆಟ್‌ ಬಗ್ಗೆ ಏನು ಗೊತ್ತು ಅಂತ ಪ್ರಶ್ನೆ ಮಾಡಿದವರೇ ಹೆಚ್ಚು.. ಆದ್ರೆ ವೈಭವ್‌ ಪ್ರಶ್ನೆ ಮಾಡಿದವರಿಗೆ ತಮ್ಮ‌ ಅಬ್ಬರದ ಬ್ಯಾಟಿಂಗ್ ಮೂಲಕ ಉತ್ತರಿಸ್ತಾ ಬಂದಿದ್ದಾರೆ. ಇದೀಗ ಕ್ರಿಕೆಟ್‌ ಲೋಕದಲ್ಲಿ ವೈಭವದ ಯುಗ ಆರಂಭವಾಗಿದೆ. ಅತಿ ಕಿರಿಯ ಆಟಗಾರನಾಗಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿರುವ ಸೂರ್ಯವಂಶಿ ಕ್ರಿಕೆಟ್‌ ಲೋಕದಲ್ಲಿ ದಾಖಲೆಗಳ ಸರದಾರ ಅನ್ನಿಸಿಕೊಂಡಿದ್ದಾರೆ. ಆನ್​ ದಿ ಫೀಲ್ಡ್​ನಲ್ಲಿ ರನ್ ಮಳೆ ಸುರಿಸೋ ಈ ಯಂಗ್‌ ಪ್ಲೇಯರ್, ಆಫ್ ದಿ ಫೀಲ್ಡ್​ನಲ್ಲೂ ನ್ಯೂ ಬ್ರ್ಯಾಂಡ್ ಮಷಿನ್ ಆಗಿದ್ದಾರೆ. ಆಟದ ಮೂಲಕ ಫ್ಯಾನ್ಸ್​ ಮನ ಗೆಲ್ತಿರೋ ವೈಭವ್ ಬ್ರ್ಯಾಂಡೆಡ್‌ ಕಂಪನಿಗಳ ಹೃದಯ ಗೆಲ್ತಿದ್ದಾರೆ. ಕಾರ್ಪೊರೇಟ್ ಕಂಪನಿಗಳ ಹಾಟ್‌ ಫೇವರೇಟ್‌ ಆಗ್ತಿದ್ದಾರೆ.‌ ಇದ್ರಿಂದಾಗಿ ವೈಭವ್‌ ಬ್ರಾಂಡ್‌ ವಾಲ್ಯೂ ದುಪ್ಪಟ್ಟಾಗಿದೆ.

ಹೌದು, ವೈಭವ್‌ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡ್ತಿದ್ದಂತೆ ಪ್ರಸಿದ್ಧ ಬ್ರಾಂಡೆಡ್‌ ಕಂಪನಿಗಳು ಸೂರ್ಯವಂಶಿ ಜೊತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿವೆ. ಇನ್ನು ಕೆಲವು ಬ್ರ್ಯಾಂಡ್‌ಗಳು ಪರ್ಫೆಕ್ಸ್‌ ಟೈಂಗೋಸ್ಕರ ಕಾಯ್ತಿವೆ. ಈ ಮಧ್ಯೆಯೇ ವೈಭವ್‌ ತಮ್ಮ ಬ್ರ್ಯಾಂಡ್ ಎಂಡೋರ್ಸ್‌ಮೆಂಟ್ ಶುಲ್ಕವನ್ನು ಹೆಚ್ಚಿಸಿಕೊಂಡಿದ್ದಾರೆ. ಜಾಹಿರಾತೊಂದಕ್ಕೆ 1ಕೋಟಿಗೂ ಅಧಿಕ ಚಾರ್ಜ್‌ ಮಾಡ್ತಾರೆ ಎನ್ನಲಾಗ್ತಿದೆ. ಇನ್ನು IPL ಸಂಬಳ, ಮ್ಯಾಚ್ ಫೀಸ್, ದೇಶೀಯ ಕ್ರಿಕೆಟ್ ಮತ್ತು ಹೆಚ್ಚುತ್ತಿರುವ ಬ್ರ್ಯಾಂಡ್ ಎಂಡೋರ್ಸ್‌ಮೆಂಟ್ ಒಪ್ಪಂದಗಳಿಂದಾಗಿ ಸೂರ್ಯವಂಶಿ ನೆಟ್‌ವರ್ತ್ 7 ರಿಂದ 10 ಕೋಟಿ ರೂಪಾಯಿಗಳಷ್ಟಿದೆ ಎಂದು ಅಂದಾಜಿಸಲಾಗ್ತಿದೆ.

ವೈಭವ್‌ 2026ರ ಆರಂಭದಲ್ಲಿ ಕಾಂಪ್ಲಾನ್‌ನ ಥೋಡಾ ಪ್ಲಾನ್, ಥೋಡಾ ಕಾಂಪ್ಲಾನ್ ಜಾಹೀರಾತು ಅಭಿಯಾನದ ಭಾಗವಾಗಿದ್ದಾರೆ. ಈ ಅಭಿಯಾನವು ಪೌಷ್ಟಿಕಾಂಶ & ಕಠಿಣ ಪರಿಶ್ರಮಕ್ಕೆ ನೀಡುವ ಪ್ರಾಮುಖ್ಯತೆಯು, ಒಬ್ಬ ಕ್ರೀಡಾಪಟುವಾಗಿ ಈ ಯುವ ಆಟಗಾರನ ನಿಜ ಜೀವನದ ದಿನಚರಿಯನ್ನು ಪ್ರತಿಬಿಂಬಿಸುತ್ತದೆ.

ಇನ್ನು ಸೂರ್ಯವಂಶಿ ಜಾರ್ಖಂಡ್ ಆರೋಗ್ಯ ಇಲಾಖೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ರಾಜ್ಯದ ಯುವಕರು ಸಕ್ರಿಯವಾಗಿ, ಸದೃಢವಾಗಿ ಮತ್ತು ಆರೋಗ್ಯವಾಗಿರಲು ಪ್ರೇರೇಪಿಸಲು ವೈಭವ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸುವುದಾಗಿ ಜಾರ್ಖಂಡ್ ಆರೋಗ್ಯ ಸಚಿವರು 2026ರ ಮೇ ತಿಂಗಳಲ್ಲಿ ಘೋಷಿಸಿದರು. ಈ ಒಪ್ಪಂದದಿಂದಲೂ ವೈಭವ್‌ ಹಣ ಗಳಿಸ್ತಾ ಇದ್ದಾರೆ.

ಇನ್ನು ವೈಭವ್​ ಗೂಗಲ್ ಪೇನ ಯುವಕ-ಯುವತಿಯರನ್ನು ಕೇಂದ್ರೀಕರಿಸಿದ ಅಭಿಯಾನದಲ್ಲಿ ನಟಿಸಿದ್ದಾರೆ. ಈ ಜಾಹೀರಾತಿನಲ್ಲಿ ಅವರು ತಮ್ಮ ಪೋಷಕರ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರುವ UPI ಬಳಸಿ ಹಣ ನಿರ್ವಹಿಸುವುದನ್ನು ತೋರಿಸಲಾಗಿದ್ದು, ಹದಿಹರೆಯದವರಿಗೆ ಸುರಕ್ಷಿತ ಹಣಕಾಸು ನಿರ್ವಹಣೆಯ ಬಗ್ಗೆ ತಿಳಿಸಲಾಗಿದೆ.

ಸಚಿನ್ ತೆಂಡೂಲ್ಕರ್  MRF ಬ್ಯಾಟ್ ಸ್ಪಾನ್ಸರ್‌ಶಿಪ್‌ನೊಂದಿಗೆ ಗುರುತಿಸಿಕೊಂಡಂತೆ, ಸೂರ್ಯವಂಶಿ ಸದ್ಯ ಸರೀನ್ ಸ್ಪೋರ್ಟ್ಸ್ ಜೊತೆ  50 ಲಕ್ಷ ರೂಪಾಯಿ ಮೌಲ್ಯದ ಎಕ್ವಿಪ್‌ಮೆಂಟ್ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಎಸ್‌ಎಸ್ ಸಂಸ್ಥೆ ಮಾರುಕಟ್ಟೆಯಲ್ಲಿ ವಿಶೇಷವಾದ ವೈಭವ್ ಸೂರ್ಯವಂಶಿ ಎಡಿಷನ್ ಬ್ಯಾಟ್‌ಗಳನ್ನು ಈಗಾಗ್ಲೇ ರಿಲೀಸ್‌ ಮಾಡಿದೆ.

ಇನ್ನು 2026ರ ಐಪಿಎಲ್ ಸಮಯದಲ್ಲಿ, ಸೂರ್ಯವಂಶಿ RR ತಂಡದ ಸಹ ಆಟಗಾರ ಧ್ರುವ ಜುರೆಲ್ ಜೊತೆ ರೆಡ್ ಬುಲ್ ಸವಾಲಿನಲ್ಲಿ ಪಾಲ್ಗೊಂಡಿದ್ದರು. ಈ ಸವಾಲಿನಲ್ಲಿ ವೈಭವ್‌ 30 ಎಸೆತಗಳಲ್ಲಿ 60 ರನ್ ಗಳಿಸಬೇಕಿತ್ತು. ಇದ್ರಲ್ಲೂ ಕೂಡ ವೈಭವ್‌ ಹಣ ಸಂಪಾದಿಸಿದ್ದಾರೆ.

ಒಟ್ಟಾರೆ ಬಾಸ್‌ ಬೇಬಿ ಬ್ಯಾಟಿಂಗ್‌ ಜೊತೆಗೆ ಹಣಗಳಿಕೆಯಲ್ಲೂ ದೊಡ್ಡ ದೊಡ್ಡ ಆಟಗಾರರನ್ನೇ ಮೀರಿಸುತ್ತಾ ಹೋಗುತ್ತಿದ್ದಾರೆ. ಇದ್ರಿಂದಾನೇ ಗೊತ್ತಾಗುತ್ತೆ.. ಕ್ರಿಕೆಟರ್ಸ್‌ಗೆ ಕಿಕೆಟ್‌ನಿಂದ ಕೇವಲ ನೇಮ್‌ ಫೇಮ್‌ ಮಾತ್ರವಲ್ಲ.. ದುಡ್ಡಿನ ಹೊಳೆ ಕೂಡ ಹರಿದು ಬರುತ್ತೆ.. ಮೈದಾನದಲ್ಲಿ ಎಷ್ಟು ಚೆನ್ನಾಗಿ ಬ್ಯಾಟ್‌ ಬೀಸ್ತಾರೋ.. ಅಷ್ಟೇ ಅವ್ರ ಬ್ರ್ಯಾಂಡ್‌ ವಾಲ್ಯೂ ಏರ್ತಾನೇ ಹೋಗುತ್ತೆ.. ಇದಕ್ಕೆ ಬೆಸ್ಟ್‌ ಎಕ್ಸಾಂಪಲ್‌ ವೈಭವ್‌ ಸೂರ್ಯವಂಶಿ. ಮುಂದಿನ ದಿನಗಳಲ್ಲಿ ವೈಭವ್‌, ಸಚಿನ್ ತೆಂಡೂಲ್ಕರ್‌ , ವಿರಾಟ್​ ಕೊಹ್ಲಿ ಅವರಂತೆ ವಿಶ್ವಕ್ರಿಕೆಟ್​​ಗೆ ಬ್ರಾಂಡ್​ ಆಗಿ ಬೆಳೆಯಲಿ ಅನ್ನೋದೇ ಎಲ್ಲರ ಆಶಯ.

Shwetha M

Leave a Reply

Your email address will not be published. Required fields are marked *