ವೈಭವ್ ಸಾಧನೆ ಬಗ್ಗೆ ತಂದೆಗಿಲ್ಲ ತೃಪ್ತಿ – ಮಾರ್ಚ್ನಲ್ಲೇ ಟೀಂ INDಗೆ ಎಂಟ್ರಿ?
ಸೂರ್ಯವಂಶಿ ಮುಂದೆ ಟೆಸ್ಟ್ ಟಾರ್ಗೆಟ್

ವೈಭವ್ ಸೂರ್ಯವಂಶಿ.. 18ನೇ ಸೀಸನ್ ಐಪಿಎಲ್ನಲ್ಲಿ ಸಿಕ್ಕಾಪಟ್ಟೆ ಶೈನ್ ಆದ ಯಂಗ್ ಪ್ಲೇಯರ್.ಆಮೇಲೆ ಇವರದ್ದು ಮಿಂಚಿನ ಓಟ. ಅಂಡರ್ 19ನಲ್ಲಿ ಸೆಂಚುರಿ ಮೇಲೆ ಸೆಂಚುರಿ ಸಿಡಿಸುತ್ತಾ ಇಡೀ ಕ್ರಿಕೆಟ್ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಸಿಡಿಲ ಮರಿ. ಅಂಡರ್ 19 ವಿಶ್ವಕಪ್ ಗೆದ್ದು ಬೀಗಿದ ವೈಭವ್ ಬಗ್ಗೆ ಸ್ಫೋಟಕ ವಿಚಾರವೊಂದನ್ನ ಬಹಿರಂಗ ಪಡಿಸಿದ್ದಾರೆ. ಸೂರ್ಯವಂಶಿ ತಂದೆಯ ಮಾತು ಕೇಳಿ ಶಾಕ್ ಆಗಿದೆ. ಹಾಗೇ ವೈಭವ್ ಟೀಂ ಇಂಡಿಯಾ ಎಂಟ್ರಿಗೆ ಕೌಂಟ್ಡೌನ್ ಕೂಡ ಶುರುವಾದಂತೆ ಕಾಣ್ತಿದೆ. ಈ ಬಗ್ಗೆ ಕಂಪ್ಲೀಟ್ ಮಾಹಿತಿ ನೀಡುತ್ತೇನೆ ನಾನು ನಿಮ್ಮ ಶಿವರಾಜ್ ಬಾಣಂಕಿ.. ನೀವು ಸುದ್ದಿಯಾನದ ಸಬ್ ಸ್ಕ್ರೈಬರ್ ಆಗೋದಿಕ್ಕೆ ಮರಿಬೇಡಿ.
ಅಂಡರ್ 19 ವಿಶ್ವಕಪ್ನಲ್ಲಿ ಸೂರ್ಯವಂಶಿ ದಾಖಲೆ ಬರೆದಿದ್ದಾರೆ. ಒಂದೇ ಪಂದ್ಯದಲ್ಲಿ ಅದ್ರಲ್ಲೂ ಫೈನಲ್ ಪಂದ್ಯದಲ್ಲಿ ವೈಭವ್ 15 ಫೋರ್, 15 ಸಿಕ್ಸ್ ಬಾರಿಸಿ ಇಡೀ ವಿಶ್ವವನ್ನ ಬೆರಗಾಗುವಂತೆ ಮಾಡಿದ್ದಾರೆ. ವೈಭವ್ ಕಳೆದ ಒಂದು ವರ್ಷದಿಂದ ಸಾಕಷ್ಟು ಸಾಧನೆ ಮಾಡುತ್ತಿದ್ದರು ಅವರ ತಂದೆಗೆ ಮಾತ್ರ ಇದ್ಯಾವೋದೂ ತೃಪ್ತಿ ತಂದಿಲ್ಲ. ಹೌದು, ಇಡೀ ದೇಶವೇ ವೈಭವ್ ಸಾಧನೆಯನ್ನು ಸಂಭ್ರಮಿಸುತ್ತಿರುವಾಗ ಅವರ ತಂದೆ ಸಂಜೀವ್ ಸೂರ್ಯವಂಶಿ ಮಾತ್ರ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪದೇ ಪದೆ ತಲೆನೋವು ಬರುತ್ತಾ? – ಎಚ್ಚರ.. ಇದು ಈ ಕಾಯಿಲೆಯ ಲಕ್ಷಣ!
“ನನ್ನ ಮಗ ಇನ್ನೂ ಏನೂ ಸಾಧನೆ ಮಾಡಿಲ್ಲ. ಅವನ ನಿಜವಾದ ಪ್ರಯಾಣ ಈಗಷ್ಟೇ ಆರಂಭವಾಗಿದೆ ಎಂದು ವೈಭವ್ ತಂದೆ ಹೇಳಿದ್ದಾರೆ. ತಮ್ಮ ಮಗನ ಬಗ್ಗೆ ದೊಡ್ಡ ಗುರಿಗಳನ್ನು ಇಟ್ಟುಕೊಂಡಿರುವ ಸಂಜೀವ್ ಅವರು, ವೈಭವ್ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿ ವೈಟ್ ಜರ್ಸಿ ಧರಿಸುವವರೆಗೂ ನಾನು ಅವನನ್ನು ದೊಡ್ಡ ಸ್ಟಾರ್ ಅಂತ ಕರೆಯಲ್ಲ. ಸೀಮಿತ ಓವರ್ಗಳ ಕ್ರಿಕೆಟ್ ಮಾತ್ರವಲ್ಲ, ಟೆಸ್ಟ್ ಕ್ರಿಕೆಟ್ನಲ್ಲಿ ಸಾಬೀತುಪಡಿಸಿದಾಗಲೇ ನಿಜವಾದ ಮಹತ್ವ ಬರುತ್ತದೆ ಅಂತ ವೈಭವ್ ಅಪ್ಪ ಹೇಳಿದ್ದಾರೆ. ಜೊತೆಗೆ, ಶಿಸ್ತು, ವಿನಯ ಹಾಗೂ ನಿರಂತರ ಅಭ್ಯಾಸವೇ ಯಶಸ್ಸಿನ ಮೂಲ ಎಂದು ಅವರು ತಮ್ಮ ಮಗನಿಗೆ ಬೋಧಿಸುತ್ತಿರುವುದಾಗಿ ಹೇಳಿದ್ದಾರೆ. ಸಚಿನ್ ತೆಂಡೂಲ್ಕರ್ ಅವರಂತೆಯೇ ಸಾಧನೆಯ ಜೊತೆಗೆ ಸರಳತೆ ಮತ್ತು ಗೌರವವನ್ನು ಉಳಿಸಿಕೊಳ್ಳಬೇಕು ಎಂಬುದೇ ನಮ್ಮ ಆಶಯವೆಂದು ಅವರು ಹೇಳಿದ್ದಾರೆ.
ಮಾರ್ಚ್ನಲ್ಲಿ ಟೀಂ ಇಂಡಿಯಾಕ್ಕೆ ವೈಭವ್ ಎಂಟ್ರಿ?
ಇನ್ನು ವೈಭವ್ ಸೂರ್ಯವಂಶಿ, ಅಂಡರ್ 19 ವಿಶ್ವಕಪ್, ಐಪಿಎಲ್ ಹಾಗೂ ದೇಶಿಯ ಟೂರ್ನಿಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಇಷ್ಟಾದರೂ ಸಹ ವೈಭವ್ ಹಿರಿಯ ಭಾರತೀಯ ತಂಡದಲ್ಲಿ ಏಕೆ ಇಲ್ಲ? ಎಂಬ ಪ್ರಶ್ನೆ ಅನೇಕರಲ್ಲಿ ಈಗಲೂ ಕಾಡುತ್ತಿದೆ. ಏಕೆಂದರೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸಹ ತಮ್ಮ ಚಿಕ್ಕ ವಯಸ್ಸಿಗೆ ಭಾರತ ತಂಡಕ್ಕೆ ಎಂಟ್ರಿ ನೀಡಿದ್ದರು. ಅಂದ್ರೆ 16 ವರ್ಷಕ್ಕೆ ಅವರು ಟೀಂ ಇಂಡಿಯಾದಲ್ಲಿ ಆಡಿದ್ರು. ಆದರೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ನಿಗದಿಪಡಿಸಿದ ನಿಯಮದಿಂದಾಗಿ ವೈಭವ್ ಎಷ್ಟೇ ಸಾಮರ್ಥ್ಯವಿದ್ದರೂ ಭಾರತ ತಂಡಕ್ಕೆ ಆಡಲು ಆಗುವುದಿಲ್ಲ. ಐಸಿಸಿ ಕನಿಷ್ಠ ವಯಸ್ಸಿನ ನೀತಿ ವೈಭವ್ಗೆ ಸಮಸ್ಯೆಯಾಗಿದೆ. ಯುವ ಕ್ರೀಡಾಪಟುಗಳ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವುದ್ದಕ್ಕೆ 2020ರಲ್ಲಿ ಈ ನಿಯಮ ಪರಿಚಯ ಮಾಡಲಾಗಿದೆ. ಇದರ ಪ್ರಕಾರ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಆಟಗಾರನಿಗೆ ಕನಿಷ್ಠ 15 ವರ್ಷ ವಯಸ್ಸಾಗಿರಬೇಕು ಅಂತ ಹೇಳುತ್ತದೆ. ಸದ್ಯ ಸೂರ್ಯವಂಶಿಗೆ 14 ವರ್ಷ ವಯಸ್ಸಾಗಿದೆ. ಬಟ್ ಇನ್ನೊಂದು ತಿಂಗಳಲ್ಲಿ ಸೂರ್ಯವಂಶಿ ಟೀಂ ಇಂಡಿಯಾಗೆ ಎಂಟ್ರಿ ಕೊಡಬಹುದು.
ಹೌದು.. ವೈಭವ್ ಹುಟ್ಟಿದ್ದು ಮಾರ್ಚ್ 27, 2011 ರಂದು. ಸದ್ಯ 14 ವರ್ಷ ತುಂಬಿ 15 ರನ್ನಿಂಗ್ನಲ್ಲಿ ಇದೆ. ಮುಂದಿನ ಮಾರ್ಚ್ 27ಕ್ಕೆ 15 ವರ್ಷ ಕಂಪ್ಲೀಟ್ ಆಗುತ್ತೆ. ಅಬ್ಬಾಬ್ಬ ಅಂದ್ರೆ ಇನ್ನು ಒಂದೂವರೆ ತಿಂಗಳು. ಮುಂದಿನ ತಿಂಗಳು 27 ರ ಮೇಲೆ ಭಾರತ ತಂಡಕ್ಕೆ ವೈಭವ್ ಅವರನ್ನು ಆಯ್ಕೆ ಮಾಡಬಹುದು.. ವೈಭವ್ ಆಡ್ತಾ ಇರೋ ಸ್ಪೀಡ್ ನೋಡಿದ್ರೆ, ಆದಷ್ಟು ಬೇಗ ಟೀಂ ಇಂಡಿಯಾಕ್ಕೆ ಆಯ್ಕೆ ಆಗೋ ಎಲ್ಲಾ ಲಕ್ಷಣ ಎದ್ದಿ ಕಾಣ್ತಿದೆ.
ಐಪಿಎಲ್ ಅಂಡರ್-19 ವಿಶ್ವಕಪ್ನಲ್ಲಿ ಅಬ್ಬರಿಸುತ್ತಿರೋ ವೈಭವ್, ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ನಲ್ಲಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಮುಂದಿನ ಐಪಿಎಲ್ ಹರಾಜಿನಲ್ಲೂ ಈ ಯುವ ಆಟಗಾರನ ಮೇಲೆ ಎಲ್ಲಾ ಫ್ರಾಂಚೈಸಿಗಳು ಕಣ್ಣು ಇಟ್ಟಿವೆ. ಒಟ್ಟಿನಲ್ಲಿ, ವೈಭವ್ ಸೂರ್ಯವಂಶಿ ಅವರ ಸಾಧನೆಗೆ ದೇಶವೇ ಶ್ಲಾಘನೆ ವ್ಯಕ್ತಪಡಿಸುತ್ತಿದೆ. ಆದಷ್ಟು ಬೇಗ ಟೀಂ ಇಂಡಿಯಾದಲ್ಲಿ ವೈಭವ್ ಚಾನ್ಸ್ ಪಡೆದು, ದೇಶಕ್ಕೆ ಕೀರ್ತಿ ತರಲಿ ಅನ್ನೋದು ಕ್ರಿಕೆಟ್ ಪ್ರೇಮಿಗಳ ಆಸೆ.

ನೋಡಿರಿ

