SIXER MACHINE ಸೂರ್ಯವಂಶಿ – ಭಾರತದ ಪರವೂ ಬ್ಯಾಟಿಂಗ್ ವೈಭವ
ಬಾಸ್ ಬೇಬಿಗೆ ಸಚಿನ್ ಸಂದೇಶವೇನು?

ಸಿಕ್ಸರ್ಗಳ ಬಗ್ಗೆ ಮಾತಾಡೋದಾ.. ಸ್ಟ್ರೈಕ್ರೇಟ್ ಬಗ್ಗೆ ಹೇಳೋದಾ.. ದಿಗ್ಗಜ ಬೌಲರ್ಗಳನ್ನೇ ಚೆಂಡಾಡಿದ್ದನ್ನ ಹೊಗಳೋದಾ.. ಇಲ್ಲ ಹೈಯೆಸ್ಟ್ ರನ್ ಸ್ಕೋರರ್ ಅಂತಾ ಕೊಂಡಾಡೋದಾ.. ವೈಭವ್ ಸೂರ್ಯವಂಶಿ ಅನ್ನೋ 15 ವರ್ಷದ ಹುಡುಗನ ಆರ್ಭಟಕ್ಕೆ ಜಗತ್ತೇ ಸ್ಟನ್ ಆಗಿದೆ. ಬಾಸ್ ಬೇಬಿಯ ಪ್ರಚಂಡ ಅವತಾರಕ್ಕೆ ಕ್ರಿಕೆಟ್ ದೇವರೂ ಫಿದಾ ಆಗಿದ್ದಾರೆ. ಜೊತೆಗೆ ನೆಕ್ಸ್ಟ್ ಜರ್ನಿಗೆ ಒಂದಷ್ಟು ಸಜೇಷನ್ಸ್ ಕೊಟ್ಟಿದ್ದಾರೆ.
ಈ ಬಾರಿಯ ಐಪಿಎಲ್ ಮುಗಿದ್ಮೇಲೆ ಅತೀ ಹೆಚ್ಚು ಸದ್ದು ಮಾಡ್ತಿರೋ ಹೆಸ್ರೇ ವೈಭವ್ ಸೂರ್ಯವಂಶಿ. 16 ಪಂದ್ಯಗಳಲ್ಲಿ 776 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದ ಆಟಗಾರು. ಅದ್ರಲ್ಲೂ ಅಂತರರಾಷ್ಟ್ರೀಯ ಬ್ಯಾಟ್ಸ್ಮನ್ಗಳ ದಂಡೇ ಇರುವ ಐಪಿಎಲ್ನಲ್ಲಿ 750 ರನ್ಗಳ ಗಡಿ ದಾಟಿದ ಏಕೈಕ ಆಟಗಾರ. ಸೀಸನ್ ಮುಗಿಯೋ ಹೊತ್ತಿಗೆ ಆರೆಂಜ್ ಕ್ಯಾಪ್, ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್ (MVP), ಎಮರ್ಜಿಂಗ್ ಪ್ಲೇಯರ್, ಸೂಪರ್ ಸ್ಟ್ರೈಕರ್ ಹಾಗೂ ಸೂಪರ್ ಸಿಕ್ಸಸ್ ಸೇರಿದಂತೆ ಒಂದೇ ಸೀಸನ್ನಲ್ಲಿ 5 ಪ್ರಮುಖ ಪ್ರಶಸ್ತಿಗಳನ್ನು ಹಾಗೂ ಟಾಟಾ ಸಿಯಾರ ಕಾರನ್ನು ಮುಡಿಗೇರಿಸಿಕೊಂಡರು. ಸದ್ಯ ಸೂರ್ಯವಂಶಿ ಟೀಂ ಇಂಡಿಯಾಗೂ ಡೆಬ್ಯೂ ಮಾಡ್ಲಿ ಅನ್ನೋ ಆಗ್ರಹ ಜಾಸ್ತಿಯಾಗಿದೆ. ಅಜಿತ್ ಅಗರ್ಕರ್ ಕೂಡ ಸೂರ್ಯವಂಶಿಯವ್ರ ಆಟವನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಅಂದಿರೋದ್ರಿಂದ ಶೀಘ್ರದಲ್ಲೇ ಭಾರತದ ಪರ ಕಣಕ್ಕಿಳಿಯಬಹುದು. ಮೆನ್ ಇನ್ ಬ್ಲ್ಯೂ ಜೆರ್ಸಿಯಲ್ಲಿ ಸೀನಿಯರ್ಸ್ ಜೊತೆ ಆಡೋಕೆ ರೆಡಿಯಾಗ್ತಿರೋ ಸೂರ್ಯವಂಶಿಗೆ ಸಚಿನ್ ತೆಂಡೂಲ್ಕರ್ ಕೆಲ ಸಲಹೆಗಳನ್ನ ನೀಡಿದ್ದಾರೆ.
ಸೂರ್ಯವಂಶಿ ಬೆನ್ನಿಗೆ ನಿಂತ ಕ್ರಿಕೆಟ್ ದೇವರು ಸಚಿನ್!
ಸೂರ್ಯವಂಶಿಯವ್ರ ಬ್ಯಾಟಿಂಗ್ ಸ್ಕಿಲ್ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗ್ತಿದೆ. ಐಪಿಎಲ್ನಲ್ಲಿ ಆಡಿದ ವಿದೇಶಿ ಪ್ಲೇಯರ್ಸ್ ಕೂಡ ಸೂರ್ಯನ ಸ್ಟ್ರೆಂಥ್ನ ಕೊಂಡಾಡಿದ್ದಾರೆ. ಸಚಿನ್ ತೆಂಡೂಲ್ಕರ್ ಕೂಡ ವೈಭವ್ ಆಟಕ್ಕೆ ಫಿದಾ ಆಗಿದ್ರು. ಸೂರ್ಯವಂಶಿ ಬ್ಯಾಟಿಂಗ್ ಬಗ್ಗೆ ಸುತ್ತಮುತ್ತ ಹೆಚ್ಚು ಮಾತಾಡ್ತಾ ಇರೋದ್ರಿಂದ ಆತನ ಬ್ಯಾಟಿಂಗ್ ನೋಡಲು ಶುರು ಮಾಡಿದೆ. ಸಿಕ್ಸರ್ ಹೊಡೆಯೋದನ್ನ ನೋಡಿ ಅಕ್ಷರಶಃ ಬೆರಗಾಗಿದ್ದೆ. ಅವನ ಮಣಿಕಟ್ಟಿನ ಕೆಲಸ, ಸಮತೋಲನ ಮತ್ತು ಆಟವನ್ನು ರೀಡ್ ಮಾಡುವ ಸಾಮರ್ಥ್ಯ ಅದ್ಭುತವಾಗಿದೆ. ನಿಜವಾಗಿಯೂ ವಿಶೇಷ ವ್ಯಕ್ತಿ. ಚೆಂಡನ್ನು ಹೊಡೆಯುವ ಸಾಮರ್ಥ್ಯ ಮಾತ್ರವಲ್ಲ, ನನ್ನನ್ನು ಆಕರ್ಷಿಸಿದ್ದು ಅವರ ಮಣಿಕಟ್ಟಿನ ಕೆಲಸ. “ಮೈದಾನದ ಎಲ್ಲಾ ದಿಕ್ಕುಗಳಲ್ಲಿಯೂ ಆಡಲು ಸಾಧ್ಯವಾಗಬೇಕಾದರೆ, ನಿಮಗೆ ಉತ್ತಮ ಮಣಿಕಟ್ಟಿನ ಕೆಲಸ ಬೇಕು. ಮತ್ತು ಅವನು ಚೆಂಡನ್ನು ಸ್ಲಾಗ್ ಮಾಡುತ್ತಿಲ್ಲ. ಅವನು ಉಳಿದ ಆಟಗಾರರಿಗಿಂತ ಮೊದಲೇ ಲೈನ್ ಮತ್ತು ಲೆಂತ್ ಅನ್ನು ಆರಿಸುತ್ತಿದ್ದಾನೆ ಎನ್ನುವ ಮೂಲಕ ಸೂರ್ಯವಂಶಿ ಆಟದ ಬಗೆಗಿನ ಸ್ಕಿಲ್ ಬಗ್ಗೆಯೂ ಹೇಳಿದ್ದಾರೆ. ಇನ್ನು ವೈಭವ್ ಸೂರ್ಯವಂಶಿ ಆಟವನ್ನ ಕೆಲವ್ರು ಸಚಿನ್ ಅವ್ರಿಗೆ ಕಂಪೇರ್ ಕೂಡ ಮಾಡಿದ್ದಾರೆ.
ಶತಕಗಳ ಶತಕ ಬಾರಿಸಿದ ಸಚಿನ್ ಹಾದಿಯಲ್ಲಿ ಸೂರ್ಯವಂಶಿ!
ಸಚಿನ್ ತೆಂಡೂಲ್ಕರ್ ತಮ್ಮ 16ನೇ ವಯಸ್ಸಿನಲ್ಲಿಯೇ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿ ಜಗತ್ತನ್ನೇ ಬೆರಗುಗೊಳಿಸಿದ್ದರು. ಇತ್ತ ವೈಭವ್ ಸೂರ್ಯವಂಶಿ ಕೂಡ ಕೇವಲ 13ನೇ ವಯಸ್ಸಿಗೆ ಐಪಿಎಲ್ ಹರಾಜಿನಲ್ಲಿ ಕೋಟಿ ಮೊತ್ತ (₹1.1 ಕೋಟಿ) ಪಡೆದು, ಅತ್ಯಂತ ಕಿರಿಯ ವಯಸ್ಸಿನಲ್ಲಿ ಶತಕ ಸಿಡಿಸಿದ ಆಟಗಾರ ಎಂಬ ಜಾಗತಿಕ ದಾಖಲೆ ಬರೆದಿದ್ದಾರೆ. ಇನ್ನು ಸಚಿನ್ 16 ನೇ ವಯಸ್ಸಿನಲ್ಲಿ ಸಚಿನ್ ಅವರನ್ನು ಪಾಕಿಸ್ತಾನ ಪ್ರವಾಸಕ್ಕಾಗಿ ಭಾರತೀಯ ತಂಡಕ್ಕೆ ತ್ವರಿತವಾಗಿ ಸೇರಿಸಲಾಯಿತು, ಅಲ್ಲಿ ಅವರು 1989 ರಲ್ಲಿ ಕರಾಚಿ ಟೆಸ್ಟ್ನಲ್ಲಿ ಪಾದಾರ್ಪಣೆ ಮಾಡಿದರು, ಆ ಸಮಯದಲ್ಲಿ ಭಾರತದ ಅತ್ಯಂತ ಕಿರಿಯ ಟೆಸ್ಟ್ ಚೊಚ್ಚಲ ಆಟಗಾರರಾದರು. ಒಂದು ತಿಂಗಳ ನಂತರ, ಅದೇ ಪ್ರವಾಸದ ಸಮಯದಲ್ಲಿ, ಅವರು ತಮ್ಮ ODI ಚೊಚ್ಚಲ ಪ್ರವೇಶವನ್ನೂ ಮಾಡಿದರು. ಭಾರತ ಪರ 664 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಸಚಿನ್, 200 ಟೆಸ್ಟ್ ಮತ್ತು 463 ಏಕದಿನ ಪಂದ್ಯಗಳನ್ನು ಆಡಿದ್ದು, 34,000 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ರನ್ ಗಳಿಸಿದ್ದಾರೆ ಮತ್ತು ಶತಕಗಳ ಶತಕವನ್ನು ದಾಖಲಿಸಿದ್ದಾರೆ. ಒಟ್ನಲ್ಲಿ ಸಚಿನ್ ಆಲ್ರೆಡಿ ಜಗತ್ತನ್ನೇ ಗೆದ್ದಾಗಿದೆ. ಸೂರ್ಯವಂಶಿ ಈಗಷ್ಟೇ ಅಂಬೆಗಾಲಿಡ್ತಿದ್ದಾರೆ. ಹೀಗಾಗಿ ಸೂರ್ಯವಂಶಿ ಆಟದ ಮೇಲೆ ಫೋಕಸ್ ಮಾಡಿದ್ದೇ ಆದಲ್ಲಿ ಮತ್ತೊಬ್ಬ ದಂತಕತೆ ಆಗೋದ್ರಲ್ಲಿ ಡೌಟೇ ಇಲ್ಲ.

ನೋಡಿರಿ

