ಸಂಜು, ವೈಭವ್ ಜೊತೆ ಚೆಲ್ಲಾಟವೇಕೆ? – ಫುಲ್ ಕನ್ಫ್ಯೂಸ್‌ನಲ್ಲಿ ಟೀಂ ಇಂಡಿಯಾ
ಕಣ್ಮುಚ್ಚಿ ಕುಳಿತಿದ್ದೇಕೆ BCCI?

ಸಂಜು, ವೈಭವ್ ಜೊತೆ ಚೆಲ್ಲಾಟವೇಕೆ? – ಫುಲ್ ಕನ್ಫ್ಯೂಸ್‌ನಲ್ಲಿ ಟೀಂ ಇಂಡಿಯಾಕಣ್ಮುಚ್ಚಿ ಕುಳಿತಿದ್ದೇಕೆ BCCI?

ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ ಫುಲ್‌ ಕನ್ಫ್ಯೂಸ್‌ನಲ್ಲಿದೆ. ಈ ಮಾತನ್ನ  ಟೀಂ ಇಂಡಿಯಾದ ಮಾಜಿ ಆಟಗಾರರೇ ಹೇಳ್ತಾ ಇದ್ದಾರೆ.. ಯಾರನ್ನ ತಂಡದಲ್ಲಿ ಇಟ್ಕೋ ಬೇಕು..ಯಾರನ್ನ ಇಟ್ಕೋ ಬಾರದು ಅನ್ನೋದು ಗೊತ್ತಾಗದೇ ಟೀಂ ಇಂಡಿಯಾ ಫುಲ್ ಗೊಂದಲದಲ್ಲಿದೆ. ಅದರಲ್ಲೂ ಸಂಜು ಸ್ಯಾಮ್ಸನ್ ಮತ್ತು ವೈಭವ್ ಸೂರ್ಯವಂಶಿಯ ಜೊತೆ ಬಿಸಿಸಿಐ ಚೆಲ್ಲಾಟ ಆಡ್ತಾ ಇದೆ ಅಂತಲೇ ಹೇಳಬಹುದು.

ಸಂಜು ಮತ್ತು ವೈಭವ್.. ಇವರಿಬ್ಬರು ಟೀಂ ಇಂಡಿಯಾದಲ್ಲಿ ಫುಟ್‌ಬಾಲ್ ತರ ಆಗಿದ್ದಾರೆ. ಫ್ಯಾನ್ಸ್‌ ವೈಭವ್‌ಗೆ ಚಾನ್ಸ್‌ ಕೊಡಬೇಕು ಅಂದ್ರೆ ಒತ್ತಾಯ ಮಾಡಿದ್ರೆ ಸಂಜು ಸ್ಯಾಮ್ಸನ್‌ಗೆ ಗೇಟ್‌ಪಾಸ್ ಕೊಡ್ತಾರೆ. ಮತ್ತೊಂದ್ಕಡೆ ಸಂಜುಗೆ ಚಾನ್ಸ್‌ ಕೊಡಬೇಕು ಅಂತ ಒತ್ತಾಯ ಮಾಡಿದ್ರೆ ವೈಭವ್ ಸೂರ್ಯವಂಶಿಗೆ ಗೇಟ್‌ಪಾಸ್‌.. ಇವರಿಬ್ಬರಲ್ಲೇ ಎಕ್ಸ್‌ಚೇಂಜ್ ಆಫರ್ ನಡೆಯುತ್ತಿದೆ. ಇದ್ದನ್ನ ನಾವು ಇಂಗ್ಲೆಂಡ್ ಸರಣಿಯಲ್ಲಿ ನೋಡಿದ್ದೇವೆ..

ಇದನ್ನೂ ಓದಿ: ಭಾರತಕ್ಕೆ ಶರಣಾದ ಬ್ರಿಟಿಷರು – RO-KO & KL ಬ್ಯಾಟ್ ಸೈಲೆಂಟ್

ಇದ್ದನ್ನ ನೋಡಿದಾಗ ಯಾರಿಗಾದ್ರೂ ಅನ್ಸುತ್ತೆ, ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಫುಲ್ ಕನ್‌ಫ್ಯೂಸ್‌ನಲ್ಲಿದೆ ಅನ್ನೋದು. ಯಾರಿಗೆ ಚಾನ್ಸ್ ನೀಡಬೇಕು ಯಾರನ್ನ ಕೈ ಬಿಡಬೇಕು ಅನ್ನೋದು ಗೊತ್ತಾಗದೇ ಸಂಜು ಮತ್ತು ವೈಭವ್‌ ಜೊತೆ ಆಟ ಆಡ್ತಿದೆ. ಇದರ ಬಗ್ಗೆ ಟೀಂ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಕೂಡ ಆಕ್ರೋಶ ಹೊರ ಹಾಕಿದ್ದಾರೆ.

‘ಇಷ್ಟು ಗೊಂದಲದಲ್ಲಿರುವ ಭಾರತ ಕ್ರಿಕೆಟ್ ತಂಡದ ಮ್ಯಾನೇಜ್‌ಮೆಂಟ್ ಅನ್ನು ನಾನು ಹಿಂದೆಂದೂ ನೋಡಿಲ್ಲ. ವೈಭವ್ ಸೂರ್ಯವಂಶಿ ಮತ್ತು ಸಂಜು ಸ್ಯಾಮ್ಸನ್ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಾಗಿಲ್ಲ. ಒಬ್ಬರು ಅಪಾರ ಪ್ರತಿಭೆ ಹೊಂದಿರುವ ಯುವ ಆಟಗಾರ, ಮತ್ತೊಬ್ಬರು ವಿಶ್ವಕಪ್ ವಿಜೇತ ಆಟಗಾರ. ಅವರ ಮನಸ್ಸಿನಲ್ಲಿ ಅನುಮಾನ ಹುಟ್ಟಿಸುವ ಬದಲು, ಅವರಿಗೆ ಆತ್ಮವಿಶ್ವಾಸ ತುಂಬಿ ಬೆಂಬಲ ನೀಡಬೇಕೆಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಮೊಹಮ್ಮದ್ ಕೈಫ್ ಹೇಳಿದ್ದಾರೆ.

ಆರಂಭದಲ್ಲಿ ಸ್ಯಾಮ್ಸನ್ ಮೂರು ಪಂದ್ಯಗಳನ್ನು ಆಡಿದರು. ಆದರೆ, ಕಡಿಮೆ ರನ್‌ಗಳಿಗೆ ಔಟಾದರು ಮತ್ತು ನಂತರ ಭಾರತವು ಅವರನ್ನು ಕೈಬಿಟ್ಟಿತು. ವೈಭವ್ ಸೂರ್ಯವಂಶಿಗೆ ಅವಕಾಶ ನೀಡಿತು. ಅವರು ತಮ್ಮ ಮೊದಲ ಮೂರು T20I ಪಂದ್ಯಗಳಲ್ಲಿ 20 ರನ್‌ಗಳನ್ನು ದಾಟಲು ಸಹ ಸಾಧ್ಯವಾಗಲಿಲ್ಲ. ಮತ್ತೆ ಕೊನೆ ಪಂದ್ಯದಲ್ಲಿ ಮತ್ತೆ ವೈಭವ್ ಸೂರ್ಯವಂಶಿ ಅವರನ್ನು ಕೂರಿಸಿ, ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ನೀಡಲಾಯಿತು. ಇಲ್ಲಿ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಫುಲ್ ಗೊಂದಲದಲ್ಲಿ ಇರುವುದು ಗೊತ್ತಾಗುತ್ತೆ.. ಒಂದು ಪಂದ್ಯ ಕೂರಿಸಿ ಒಂದು ಪಂದ್ಯ ಆಡಿಸುವುದರಿಂದ ಸಂಜು ಮತ್ತು ವೈಭವ್‌ ಮೇಲೆ ನೇರ ಎಫೆಕ್ಟ್ ಬೀಳುತ್ತೆ. ತಮ್ಮ ಭವಿಷ್ಯದ ಬಗ್ಗೆ ಅವರಿಗೆ ಭಯ ಶುರುವಾಗುತ್ತೆ ಅನ್ನೋದು ಕ್ರಿಕೆಟ್ ಪಂಡಿತರ ಮಾತು.  ಬಿಸಿಸಿಐ ಇಂಗ್ಲೆಂಡ್ ವಿರುದ್ಧ ಟಿ20ಐ ಪಂದ್ಯದ ಮಾಡಿದ ಎಡವಟ್ಟನ್ನ  ಮುಂದಿನ ಸರಣಿಯಲ್ಲೂ ಮುಂದುವರಿಸಿದ್ರೆ ವೈಭವ್ ಮತ್ತು ಸಂಜು ಭವಿಷ್ಯದ ಮೇಲೆ ದೊಡ್ಡ ಎಫೆಕ್ಟ್ ಬೀಳುತ್ತೆ.

Kishor KV