7 ತಿಂಗಳು 6 ವೈಭವದ ಶತಕ – RUN ಮಷಿನ್ ಆಗ್ತಾರಾ ಸೂರ್ಯವಂಶಿ?

ವೈಭವ್ ಸೂರ್ಯವಂಶಿ.. ವಯಸ್ಸು ಜಸ್ಟ್ 14 ವರ್ಷ.. ಆಟಕ್ಕೂ ವಯಸ್ಸಿಗೂ ಸಂಬಂಧವೇ ಇಲ್ಲ.. ತಾನು ಐಪಿಎಲ್‌ಗೆ ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ತನ್ನ ತಾಕತ್ತನ್ನ ಜಗತ್ತಿಗೆ ತೋರಿಸಿದ ಆಟಗಾರ. ಈ ಯಂಗ್ ಬಾಯ್ ಟೆರರ್ ಬ್ಯಾಟಿಂಗ್ ಮುಂದೆ ಘಟಾನುಘಟಿ ಬೌಲರ್ಗಳೂ ಡಮ್ಮಿಯಾಗುತ್ತಿದ್ದಾರೆ. ಕ್ರಿಕೆಟ್ ಲೋಕದಲ್ಲಿ ವೈಭವ್ ದರ್ಬಾರ್ ನಡೆಯುತ್ತಿದೆ. ಮನಸ್ಸು ಮಾಡಿದ್ರೆ ವಯಸ್ಸಿನ ಚೌಕಟ್ಟು ಇಲ್ಲದೇ ಸಾಧನೆ ಮಾಡಬಹುದು ಅನ್ನೋದನ್ನ ವೈಭವ್ ತೋರಿಸಿದ್ದಾರೆ. 18ನೇ ಸೀಸನ್ ಐಪಿಎಲ್‌ನಲ್ಲಿ ಸಿಕ್ಕಾಪಟ್ಟೆ ಶೈನ್ ಆದ ಯಂಗ್ ಪ್ಲೇಯರ್ ವೈಭಲ್ ಆಮೇಲೆ ತನ್ನ ಆಟವನ್ನ ನಿಲ್ಲಿಸಲೇ ಇಲ್ಲ. 2025 ರ ಐಪಿಎಲ್‌ನಲ್ಲಿ ಶತಕ ಸಿಡಿದ ವೈಭವ್ ನಂತ್ರ ಯೂತ್ ಏಕದಿನ ಪಂದ್ಯಗಳಲ್ಲಿ ಯೂತ್ ಟೆಸ್ಟ್‌ನಲ್ಲಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಶತಕದ ಮೇಲೆ ಶತಕ ಸಿಡಿಸುತ್ತಾ ಮಿಂಚುತ್ತಿದ್ದಾರೆ. ದ್ರಾವಿಡ್ ಶಿಷ್ಯನ ಶತಕದ ಅವತಾರಕ್ಕೆ ಇಡೀ ವಿಶ್ವವೇ ಮೆಚ್ಚಿಕೊಂಡಿದೆ.
14 ವರ್ಷದ ಈ ಯಂಗ್ ಬಾಯ್ ವೈಭವ್ ಸೂರ್ಯವಂಶಿ ರಾಜಸ್ಥಾನ್ ರಾಯಲ್ಸ್ ಪರ 2025ರ ಐಪಿಎಲ್ ಕಣಕ್ಕಿಳಿದಿ ಮೇಲೆ ಹಿಂದೆ ತಿರುಗಿ ನೋಡಿಯೇ ಇಲ್ಲ. ಯುತ್ತಿದ್ದಾರೆ. ಐಪಿಎಲ್ ಡೆಬ್ಯೂ ಪಂದ್ಯದಲ್ಲಿ ಫಸ್ಟ್ ಬಾಲ್ನಲ್ಲೇ ಸಿಕ್ಸ್ ಸಿಡಿಸಿ ಕರಿಯರ್ ಆರಂಭಿಸಿದ್ದ ಸೂರ್ಯವಂಶಿ ಬ್ಯಾಟಿಂಗ್ ಅರ್ಭಟ ನಿಲ್ಲುವಂತೆ ಕಾಣುತ್ತಿಲ್ಲ. ಅಂಡರ್-19 ಏಷ್ಯಾಕಪ್ 2025 ರಲ್ಲಿ 14 ವರ್ಷದ ಬ್ಯಾಟರ್ ವೈಭವ್ ಸೂರ್ಯವಂಶಿ ಅಬ್ಬರಿಸುತ್ತಿದ್ದಾರೆ. ಏಷ್ಯಾಕಪ್‌ನಲ್ಲಿ UAE ವಿರುದ್ಧ ವೈಭವ್ ಸೂರ್ಯವಂಶಿ 95 ಎಸೆತಗಳಲ್ಲಿ 14 ಸಿಕ್ಸರ್ಸ್ ಮತ್ತು 9 ಬೌಂಡರಿ ನೆರವಿನಿಂದ 171 ರನ್ ಕಲೆ ಹಾಕಿದ್ದಾರೆ. ಇದು 2025 ರಲ್ಲಿ ವೈಭವ್ ಅವರ ಆರನೇ ಶತಕವಾಗಿತ್ತು. ಈ ಎಲ್ಲಾ ಶತಕಗಳು ಏಪ್ರಿಲ್ ಅಂತ್ಯದಿಂದ ಡಿಸೆಂಬರ್‌ವರೆಗಿನ ಏಳೂವರೆ ತಿಂಗಳಲ್ಲಿ ಬಂದಿವೆ.
ಇದನ್ನೂ ಓದಿ: ಪಾಂಡ್ಯ ಫ್ಲೈಯಿಂಗ್ ಕಿಸ್ ಕಮಾಲ್! – ಹಾರ್ದಿಕ್‌ಗೆ ಪವರ್ ತುಂಬಿದ ಮಹಿಕಾ ಯಾರು?
ಐಪಿಎಲ್ 2025 ರಲ್ಲಿ ರಾಜಸ್ಥಾನ ರಾಯಲ್ಸ್ ಪರ ವೈಭವ್ ಸೂರ್ಯವಂಶಿ ಆಡಿದ್ದರು. ಏಪ್ರಿಲ್ 28 ರಂದು ಗುಜರಾತ್ ಟೈಟಾನ್ಸ್ ವಿರುದ್ಧ ವೈಭವ್ 35 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಸಂಚಲನ ಮೂಡಿಸಿದರು. ಐಪಿಎಲ್‌ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಐಪಿಎಲ್ ನಂತರ, ವೈಭವ್ ಇಂಗ್ಲೆಂಡ್‌ನಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು . ಭಾರತ ಅಂಡರ್-19 ಮತ್ತು ಇಂಗ್ಲೆಂಡ್ ಅಂಡರ್-19 ನಡುವಿನ ಐದು ಪಂದ್ಯಗಳ ಯೂತ್ ಏಕದಿನ ಸರಣಿಯ ಐದನೇ ಪಂದ್ಯದಲ್ಲಿ ಅವರು ಕೇವಲ 52 ಎಸೆತಗಳಲ್ಲಿ ಶತಕ ಗಳಿಸಿದರು. ವೈಭವ್ 78 ಎಸೆತಗಳಲ್ಲಿ ಅವರ 143 ರನ್ ಚಚ್ಚಿದ್ದರು. ಇದರಲ್ಲಿ 10 ಸಿಕ್ಸರ್‌ಗಳು ಮತ್ತು 13 ಬೌಂಡರಿಗಳು ಸೇರಿವೆ. ಇಂಗ್ಲೆಂಡ್ ನಂತರ, ಆಸ್ಟ್ರೇಲಿಯಾದಲ್ಲಿ ವೈಭವ್ ಅವರ ಅದ್ಭುತ ಫಾರ್ಮ್ ಮುಂದುವರೆಯಿತು. ಐಪಿಎಲ್ ಮತ್ತು ಯೂತ್ ಏಕದಿನ ಪಂದ್ಯಗಳ ನಂತರ, ವೈಭವ್ ಯೂತ್ ಟೆಸ್ಟ್‌ನಲ್ಲಿ ಶತಕ ಗಳಿಸಿದರು. ಭಾರತ ಅಂಡರ್-19 ಮತ್ತು ಆಸ್ಟ್ರೇಲಿಯಾ ಅಂಡರ್-19 ನಡುವಿನ ಎರಡು ಪಂದ್ಯಗಳ ಯೂತ್ ಟೆಸ್ಟ್ ಸರಣಿಯಲ್ಲಿ ಅವರು ಕೇವಲ 78 ಎಸೆತಗಳಲ್ಲಿ ಶತಕ ಗಳಿಸಿದರು. ವೈಭವ್ 86 ಎಸೆತಗಳಲ್ಲಿ 113 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಅವರು 9 ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಬಾರಿಸಿದರು. ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2025 ರಲ್ಲಿ ಯುಎಇ ವಿರುದ್ಧ ಭಾರತ ಎ ಪರ ವೈಭವ್ ಸೂರ್ಯವಂಶಿ 32 ಎಸೆತಗಳಲ್ಲಿ ಶತಕ ಸಿಡಿಸಿದ್ದರು . ಅವರು 42 ಎಸೆತಗಳಲ್ಲಿ 11 ಬೌಂಡರಿ ಮತ್ತು 15 ಸಿಕ್ಸರ್ಸ್ ನೆರವಿನಿಂದ 144 ರನ್ ಗಳಿಸಿದ್ದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ವೈಭವ್ ಸೂರ್ಯವಂಶಿ ಅವರ ಪ್ರತಿಭೆ ಕೂಡ ಸ್ಪಷ್ಟವಾಗಿತ್ತು . ಬಿಹಾರ ಪರ ಆಡುತ್ತಿರುವ 14 ವರ್ಷದ ಆಟಗಾರ ಮಹಾರಾಷ್ಟ್ರ ವಿರುದ್ಧ 61 ಎಸೆತಗಳಲ್ಲಿ ಅಜೇಯ 108 ರನ್ ಗಳಿಸಿದರು. ಇದು ಅವರ ಟಿ20 ವೃತ್ತಿಜೀವನದ ಮೂರನೇ ಶತಕವಾಗಿದೆ. UAE ವಿರುದ್ಧದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 95 ಎಸೆತಗಳಲ್ಲಿ 171 ರನ್ ಗಳಿಸಿದರು . ಈ ಇನ್ನಿಂಗ್ಸ್‌ನಲ್ಲಿ ಅವರು 14 ಸಿಕ್ಸರ್‌ಗಳು ಮತ್ತು 9 ಬೌಂಡರಿಗಳನ್ನು ಬಾರಿಸಿದರು.

ನೋಡಿರಿ

