ಕ್ರಿಕೆಟ್ ನ ವಂಡರ್ ಬಾಯ್ ವೈಭವ್ – 15 ವರ್ಷಕ್ಕೇ ಟೀಂ ಇಂಡಿಯಾ ಕ್ಯಾಪ್!
ಸಚಿನ್ ರಂತೆ ಸಿಡಿಯುತ್ತಾರಾ ಸೂರ್ಯವಂಶಿ?

ಕ್ರಿಕೆಟ್ ನ ವಂಡರ್ ಬಾಯ್ ವೈಭವ್ – 15 ವರ್ಷಕ್ಕೇ ಟೀಂ ಇಂಡಿಯಾ ಕ್ಯಾಪ್!ಸಚಿನ್ ರಂತೆ ಸಿಡಿಯುತ್ತಾರಾ ಸೂರ್ಯವಂಶಿ?

ಸ್ಟಾರ್ ಕಿಡ್.. ಬಾಸ್ ಬೇಬಿ.. ವಂಡರ್ ಬಾಯ್.. ಹೀಗೆ ಏಜ್​ಗೂ ಪರ್ಫಾಮೆನ್ಸ್​ನೂ ಸಂಬಂಧನೇ ಇಲ್ಲ ಅನ್ನೋ ಥರ ಪರ್ಫಾಮ್ ಮಾಡ್ತಿರೋ ವೈಭವ್ ಸೂರ್ಯವಂಶಿ ಈ ಬಾರಿಯ ಐಪಿಎಲ್​ನಲ್ಲೂ ಮ್ಯಾಜಿಕ್ ಮಾಡ್ತಿದ್ದಾರೆ. ಫಸ್ಟ್ ಮ್ಯಾಚಲ್ಲೇ ದಾಖಲೆ ಬರೆದಿದ್ದ ಸೂರ್ಯವಂಶಿ ಕ್ರಿಕೆಟ್ ಲೋಕವನ್ನೇ ಬೆರಗುಗೊಳಿಸಿದ್ದಾರೆ.

ಇದನ್ನೂ ಓದಿ  : ನಾಳೆ RCB Vs CSk ಮ್ಯಾಚ್!‌ – ಪಂದ್ಯದ ಟಿಕೆಟ್‌ ಖರೀದಿಗೆ ಸ್ಪೀಕರ್ ಕಚೇರಿ ಮುಂದೆ ಶಾಸಕರ ಪಿಎಗಳ ಕ್ಯೂ

ವಿಶ್ವಕ್ರಿಕೆಟ್​ನಲ್ಲಿ ಆಲ್ರೆಡಿ ಟೀಂ ಇಂಡಿಯಾ ಡಾಮಿನೇಷನ್ ಮಾಡ್ತಿದೆ. ಸಾಲು ಸಾಲು ಐಸಿಸಿ ಕಪ್​ಗಳನ್ನ ಬೇಟೆಯಾಡುತ್ತಾ ಸಾಮ್ರಾಟನಾಗಿ ಮೆರೀತಿದೆ. ಭಾರತ ತಂಡದಲ್ಲಿ ಸಾಕಷ್ಟು ಟ್ಯಾಲೆಂಟೆಡ್ ಪ್ಲೇಯರ್​ಗಳೇ ಇದ್ದಾರೆ. ಅದ್ರಲ್ಲೂ ಮಾಡ್ರೆನ್ ಕ್ರಿಕೆಟ್​ನ ಫೇವರೆಟ್ ಫಾರ್ಮೆಟ್ ಟಿ-20ಐನಲ್ಲಿ ಡೇಂಜರಸ್ ಬ್ಯಾಟರ್​ಗಳ ದಂಡೇ ಇದೆ. ಆದ್ರೀಗ ಪವರ್​ಹಿಟ್ಟರ್​ಗಳಲ್ಲೇ ಪ್ರೋ ಮ್ಯಾಕ್ಸ್ ಎನ್ನುವಂತೆ ವೈಭವ್ ಸೂರ್ಯವಂಶಿ ಕ್ರಿಕೆಟ್ ಲೋಕವನ್ನೇ ಆಳೋಕೆ ರೆಡಿಯಾಗ್ತಿದ್ದಾರೆ. ಕಳೆದ ವರ್ಷದ ಐಪಿಎಲ್​ನಲ್ಲೇ ಇತಿಹಾಸ ಬರೆದಿದ್ದ ವೈಭವ್ ಈ ಸಲ ದಾಖಲೆ ಮೂಲಕವೇ ಟೂರ್ನಿ ಸ್ಟಾರ್ಟ್ ಮಾಡಿದ್ದಾರೆ.

ಚೆನ್ನೈ ಬೌಲರ್ ಗಳನ್ನ ಚೆಂಡಾಡಿ ವೈಭವ್ ಆರ್ಭಟ!

ಲಾಸ್ಟ್ ಸೀಸನ್​ನಲ್ಲಿ ಐಪಿಎಲ್ ಡೆಬ್ಯೂ ಮ್ಯಾಚಲ್ಲಿ ರಾಜಸ್ಥಾನ ರಾಯಲ್ಸ್ ಪರ ಸಿಕ್ಸ್ ಮೂಲಕ ಕೆರಿಯರ್ ಸ್ಟಾರ್ಟ್ ಮಾಡಿದ್ದ ವೈಭವ್ 35 ಬಾಲ್​ಗಳಲ್ಲೇ ಸೆಂಚುರಿ ಹೊಡೆದಿದ್ರು. ಈಗ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 15 ಎಸೆತಗಳಲ್ಲೇ ಅರ್ಧಶತಕ ಬಾರಿಸಿದ್ರು. 15 ನೇ ವಯಸ್ಸಿನಲ್ಲೇ ಅಂತರರಾಷ್ಟ್ರೀಯ ಮಟ್ಟದ ಬೌಲರ್‌ಗಳನ್ನೂ ಕೇರ್ ಮಾಡದೆ ಫಿಯರ್​ಲೆಸ್ ಆಗಿ ಬ್ಯಾಟ್ ಮಾಡ್ತಿರೋದೇ ಎಲ್ಲರ ಹುಬ್ಬೇರಿಸಿದೆ. ಕ್ರಿಕೆಟ್ ಜಗತ್ತಿನ ದಿಗ್ಗಜ ಆಟಗಾರರು ಕೂಡ ವಂಡರ್ ಬಾಯ್, ಬಾಸ್ ಬೇಬಿ, ಸ್ಟಾರ್ ಕಿಡ್ ಅಂತೆಲ್ಲಾ ಗುಣಗಾನ ಮಾಡ್ತಿದ್ದಾರೆ. ಅಲ್ದೇ ಟೀಂ ಇಂಡಿಯಾದ ಎಂಟ್ರಿಗೆ ಸಿದ್ಧ ಅಂತಾ ಸರ್ಟಿಫಿಕೇಟ್ ಕೊಡ್ತಿದ್ದಾರೆ.

ಐಪಿಎಲ್ ಆದ್ಮೇಲೆ ಟೀಂ ಇಂಡಿಯಾಗೆ ಸಿಡಿಲಮರಿ!

14ನೇ ವಯಸ್ಸಿನಲ್ಲಿ ಐಪಿಎಲ್ ನಲ್ಲಿ ಅಬ್ಬರಿಸಿದ ವೈಭವ್ 14 ವರ್ಷಕ್ಕೇ ಅಂಡರ್-19 ವಿಶ್ವಕಪ್​ನೂ ಗೆದ್ದಾಗಿದೆ. ಸೋ ಇನ್ಮುಂದೆ ವೈಭವ್ ಅಂಡರ್​ 19 ವಿಶ್ವಕಪ್ ಆಡುವಂತಿಲ್ಲ. ಅಂದ್ರೆ ರಾಹುಲ್ ದ್ರಾವಿಡ್ ಅವ್ರು ಕೋಚ್ ಆಗಿದ್ದಾಗ ಒಬ್ಬ ಆಟಗಾರ ಒಂದು ಆವೃತ್ತಿಯ ಅಂಡರ್ 19 ವಿಶ್ವಕಪ್​ನಲ್ಲಿ ಮಾತ್ರವೇ ಭಾಗಿಯಾಗ್ಬೇಕಿತ್ತು. ಸೋ ಆಲ್ರೆಡಿ ವೈಭವ್ ಕೋಟಾ ಮುಗಿದಿದೆ. ಭಾರತ ಕಪ್​ನೂ ಗೆದ್ದಿದೆ. ಸೋ ವಾಟ್ ನೆಕ್ಸ್​ಟ್ ಅಂದ್ರೆ ಭಾರತ ಸೀನಿಯರ್ಸ್ ಟೀಂ. 16 ವರ್ಷಕ್ಕೇ ಸಚಿನ್ ತೆಂಡೂಲ್ಕರ್ ಭಾರತ ತಂಡದಲ್ಲಿ ಆಡಿದಂತೆ ಈಗ ವೈಭವ್ 15ನೇ ವಯಸ್ಸಿನಲ್ಲೇ ಮೆನ್ ಇನ್ ಬ್ಲ್ಯೂ ಜರ್ಸಿಯ ಹಿರಿಯರ ತಂಡದಲ್ಲಿ ಆಡಬಹುದು. ರಾಹುಲ್ ದ್ರಾವಿಡ್ ಗುರುತಿಸಿದ್ದ ಈ ಪ್ರತಿಭಾವಂತನ ಟ್ಯಾಲೆಂಟ್​ಕೆ ಮಾಜಿ ಕ್ರಿಕೆಟರ್ಸ್ ಕೂಡ ಜೈ ಅಂತಿದ್ದಾರೆ. ವೈಭವ್ ಸೂರ್ಯವಂಶಿ ಐಪಿಎಲ್ ಆದ್ಮೇಲೆ ಭಾರತ ತಂಡದ ಪರ ಪಂದ್ಯಗಳನ್ನ ಆಡ್ಬೋದು ಅಂತಾ ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್ ಹೇಳಿದ್ದಾರೆ. ಇನ್ನು ಇನ್ನು ವೈಭವ್ ಆಟಕ್ಕೆ ಮೊಹಮ್ಮದ್ ಕೈಫ್ ತಮ್ಮದೇ ಪ್ರೆಡಿಕ್ಷನ್ ಬಗ್ಗೆ ಯು ಟರ್ನ್ ಹೊಡೆದಿದ್ದಾರೆ.  ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿರೋ ಕೈಫ್, ಲಾಸ್ಟ್ ಸೀಸನ್​ನಲ್ಲಿ ವೈಭವ್ ತುಂಬಾ ಬೇಗನೆ ಪ್ರಚಾರ ಪಡೆಯುತ್ತಿದ್ದಾರೆ ಅನ್ಸಿತ್ತು. ಆದ್ರೆ ಈಗ ಮುಂದಿನ ಹಂತಕ್ಕೆ ಹೋಗಲು ಸಿದ್ಧರಾಗಿದ್ದಾರೆ ಅನ್ನೋದು ಗೊತ್ತಾಗಿದೆ ಅಂತಾ ಬರ್ಕೊಂಡಿದ್ದಾರೆ. ಇನ್ನು ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವ್ಯಾನ್ ನಾನೇನಾದ್ರೂ ಭಾರತ ತಂಡದ ಆಯ್ಕೆ ಸಮಿತಿಯಲ್ಲಿದ್ರೆ ಹಿರಿಯರ ತಂಡಕ್ಕೆ ಸೆಲೆಕ್ಟ್ ಮಾಡ್ತಿದ್ದೆ ಅನ್ನೋ ಮೂಲಕ ಎನ್​ಒಸಿ ಕೊಟ್ಟೇ ಬಿಟ್ಟಿದ್ದಾರೆ. ಅಷ್ಟಕ್ಕೂ 15 ವರ್ಷದ ವೈಭಬ್ ಬಗ್ಗೆ ದಿಗ್ಗಜರೇ ಸಪೋರ್ಟ್ ಮಾಡೋಕೆ ಕಾರಣ ಆತನಲ್ಲಿರೋ ಕಿಚ್ಚು.

ಸಿಡಿಲಮರಿ ಸೂರ್ಯವಂಶಿ!

ಐಪಿಎಲ್ ನಲ್ಲಿ ಡೆಬ್ಯೂ ಸೀಸನ್ ನಲ್ಲೇ ಜಿಟಿ ವಿರುದ್ಧ 35 ಬಾಲಲ್ಲಿ ಶತಕ

ಅಂಡರ್-19 ವಿಶ್ವಕಪ್ ಫೈನಲ್, ಇಂಗ್ಲೆಂಡ್ ವಿರುದ್ಧ 80 ಎಸೆತಗಳಲ್ಲಿ 175 ರನ್

ಅಂಡರ್-19 ಯೂತ್ ಟೆಸ್ಟ್, ಆಸ್ಟ್ರೇಲಿಯಾ ವಿರುದ್ಧ 62 ಎಸೆತಗಳಲ್ಲಿ 104 ರನ್

ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟಿ20, 42 ಎಸೆತಗಳಲ್ಲಿ 144 ರನ್

ಅಂಡರ್-19 ಏಷ್ಯಾ ಕಪ್, ಯುಎಇ ವಿರುದ್ಧ 95 ಎಸೆತಗಳಲ್ಲಿ 171 ರನ್

ಸೈಯದ್ ಮುಷ್ತಾಕ್ ಅಲಿ ಟಿ20, ಮಹಾರಾಷ್ಟ್ರ ವಿರುದ್ಧ 61 ಎಸೆತಗಳಲ್ಲಿ 108* ರನ್

ವಿಜಯ್ ಹಜಾರೆ ಟ್ರೋಫಿ, ಅರುಣಾಚಲ ಪ್ರದೇಶ ವಿರುದ್ಧ 84 ಎಸೆತಗಳಲ್ಲಿ 190 ರನ್

ಎಲ್ಲಾ ಫಾರ್ಮೆಟ್​ಗಳಲ್ಲೂ ಶತಕದ ಮೂಲಕವೇ ಕ್ರಿಕೆಟ್ ಜಗತ್ತಿಗೆ ಅತಿದೊಡ್ಡ ಮೆಸೇಜ್ ಪಾಸ್ ಮಾಡ್ತಿದ್ದಾರೆ. ಕೆಲವ್ರು ವೈಭವ್ ಸೂರ್ಯವಂಶಿಯನ್ನ ವಂಡರ್ ಬಾಯ್ ಅಂದ್ರೆ ಇನ್ನೂ ಕೆಲವ್ರು ಆರಂಭದಲ್ಲೇ ಅಬ್ಬರಿಸಿ ಆ ನಂತ್ರದಲ್ಲಿ ಡಲ್ ಆಗ್ಬೋದು ಅಂತಿದ್ದಾರೆ. ಆದ್ರೆ ವೈಭವ್ ಸ್ಟಾರ್ಟ್ ನೋಡ್ತಿದ್ರೆ ಭಾರತದ ಪರ ಮತ್ತೊಬ್ಬ ಲೆಜೆಂಡರಿ ಪ್ಲೇಯರ್ ಆಗೋ ಎಲ್ಲಾ ಲಕ್ಷಣಗಳೂ ಕಾಣ್ತಿವೆ. ಈ ಬಾರಿಯ ಐಪಿಎಲ್​ನಲ್ಲೂ ಸದ್ದು ಜೋರಾಗಿದೆ. ಇನ್ನು ರಾಜಸ್ಥಾನ ನಾಯಕ ರಿಯಾನ್ ಪರಾಗ್ ಈ ಸೀಸನ್​ನಲ್ಲಿ ಎಲ್ಲಾ ಪಂದ್ಯಗಳಲ್ಲೂ ಪ್ಲೇಯಿಂಗ್ 11ನಲ್ಲಿ ಆಡಿಸೋದಾಗಿ ಹೇಳಿದ್ದಾರೆ. ಹೀಗಾಗಿ ವೈಭವ್ ಮತ್ತಷ್ಟು ಅಗ್ರೆಸ್ಸಿವ್ ಆಗಿ ಆಡಬಹುದು. ಯಾಕಂದ್ರೆ ವೈಭವ್​ಗೆ ಭಯ ಇಲ್ಲ. ಸ್ಟಾರ್ ಬೌಲರ್, ಎಕ್ಸ್​ಪೀರಿಯನ್ಸ್​​ಡ್ ಬೌಲರ್, ಕ್ಯಾಚ್ ಡ್ರಾಪ್, ಅಥವಾ ಲೋ ಟಾರ್ಗೆಟ್ ಹೀಗೆ ಯಾವುದ್ರ ಬಗ್ಗೆಯೂ ಕೇರ್ ಮಾಡಲ್ಲ. ಬಾಲ್ ಬಂತಾ ಫೋರ್ ತಪ್ಪಿದ್ರೆ ಸಿಕ್ಸ್​ ಇಷ್ಟೇ ಗೊತ್ತಿರೋದು. ಸಿಂಗಲ್ಸ್ ಅಂತೂ ತೀರಾ ಕಮ್ಮಿ. ಸೋ ವೈಭವ್ ಬ್ಯಾಟಿಂಗ್​ಗೆ ಬಂದ್ರೆ 200ಪ್ಲಸ್ ಸ್ಟ್ರೈಕ್​ರೇಟ್ ಕೂಡ ಸ್ಲೋ ಅನ್ನಿಸೋ ಲೆವೆಲ್​ಗೆ ಪರ್ಫಾಮ್ ಮಾಡ್ತಿದ್ದಾರೆ. ನೆಕ್ಸ್​​ಟ್ ಭಾರತ ಜಿಂಬಾಬ್ವೆ ಪ್ರವಾಸಕ್ಕೆ ಸೆಲೆಕ್ಟ್ ಮಾಡುವ ಸಾಧ್ಯತೆಯೂ ಇದೆ.

Shantha Kumari