ವೈಭವ್ ಬೆನ್ನಿಗೆ ನಿಂತ ಶ್ರೇಯಸ್ – ರೋಬೋಟ್ ಅಲ್ಲ ಎಂದಿದ್ದೇಕೆ ಸಂಜು?
3ನೇ ಪಂದ್ಯ.. 3 ಬದಲಾವಣೆ ಬೇಕಿತ್ತಾ?

ವೈಭವ್ ಬೆನ್ನಿಗೆ ನಿಂತ ಶ್ರೇಯಸ್ – ರೋಬೋಟ್ ಅಲ್ಲ ಎಂದಿದ್ದೇಕೆ ಸಂಜು?3ನೇ ಪಂದ್ಯ.. 3 ಬದಲಾವಣೆ ಬೇಕಿತ್ತಾ?

ಅಫ್ಘಾನಿಸ್ತಾನ ವಿರುದ್ಧದ ಟಿ-20ಐ ಸರಣಿಯನ್ನ ಗೆದ್ದಿರೋ ಭಾರತ ಗುರುವಾರ ಸರಣಿಯ ಕೊನೇ ಪಂದ್ಯ ಆಡಲಿದೆ. ಌಂಡ್ ಈ ಪಂದ್ಯವನ್ನೂ ಗೆದ್ದು ಆಫ್ಘನ್ ತಂಡವನ್ನ ಕ್ಲೀನ್ ಸ್ವೀಪ್ ಮಾಡೋ ಟಾರ್ಗೆಟ್​ನಲ್ಲಿದೆ. ಈ ಪಂದ್ಯಕ್ಕೂ ಮುನ್ನ ಶ್ರೇಯಸ್ ಅಯ್ಯರ್ ನೀಡಿರೋ ಸ್ಟೇಟ್​ಮೆಂಟ್ ಪ್ಲೇಯಿಂಗ್ 11 ಬದಲಾವಣೆಯ ಬಗ್ಗೆ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ : ಸಂಜು ಸಾಕಾ.. ಸೂರ್ಯವಂಶಿ ಬೇಕಾ – ವರುಣ್ ಇಂಜುರಿ ಭಾರತಕ್ಕೆ ಹೊಡೆತ

ಅಫ್ಘಾನಿಸ್ತಾನ ವಿರುದ್ಧದ ಎರಡನೇ ಪಂದ್ಯದಲ್ಲಿ ಅಬ್ಬರದ ಪ್ರದರ್ಶನ ನೀಡಿರೋ ಸಂಜು ಸ್ಯಾಮ್ಸನ್ ತಮ್ಮ ವಿರುದ್ಧದ ಟೀಕೆಗಳಿಗೆ ಖಡಕ್ಕಾಗೇ ರಿಪ್ಪೈ ಕೊಟ್ಟಿದ್ದಾರೆ. ನೆಗೆಟಿವ್ ಕಮೆಂಟ್ಸ್ ನಿಂದ ದೂರ ಇರೋಕೆ ವೈಫೈ ಆಫ್ ಮಾಡುತ್ತೇನೆ ಎಂದಿರೋ ಸಂಜು ಕೆಲವೊಮ್ಮೆ ಹರ್ಟ್ ಆಗುತ್ತೆ ಅನ್ನೋದನ್ನೂ ಒಪ್ಪಿಕೊಂಡಿದ್ದಾರೆ. ಇದೆಲ್ಲದ್ರ ಜೊತೆಗೆ ಪ್ರತೀ ಮ್ಯಾಚಲ್ಲೂ ಅಬ್ಬರಿಸಬೇಕು ಅನ್ನೋದಕ್ಕೆ ನಾನು ಮಷಿನ್ ಅಥವಾ ರೋಬೋಟ್ ಅಲ್ಲ ಎಂದಿದ್ದಾರೆ. ಈ ಪ್ರದರ್ಶನ ಸಂಜುಗೆ ರಿಲೀಫ್ ಕೊಟ್ಟಿದ್ರೂ ಮೂರನೇ ಪಂದ್ಯದಲ್ಲಿ ಆಡ್ತಾರಾ ಅಥವಾ ಸೂರ್ಯವಂಶಿಗಾಗಿ ಸ್ಥಾನ ಬಿಟ್ಟುಕೊಡ್ತಾರಾ ಅನ್ನೋ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ಶ್ರೇಯಸ್ ಅಯ್ಯರ್ ನೀಡಿರುವ ಹೇಳಿಕೆ.

ಬೆಂಚ್ ಕಾಯುತ್ತಿರುವ ಆಟಗಾರರಿಗೆ ಅವಕಾಶ ನೀಡಬೇಕೆಂದ ನಾಯಕ!

ಅಫ್ಘಾನಿಸ್ತಾನ ವಿರುದ್ಧದ ಎರಡನೇ ಪಂದ್ಯದ ಬಳಿಕ ಮಾತನಾಡಿದ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್, ಕೊನೇ ಮ್ಯಾಚ್​ನಲ್ಲಿ ಪ್ಲೇಯಿಂಗ್ 11 ರೊಟೇಷನ್ ಮಾಡೋದ್ರ ಹಿಂಟ್ ಕೊಟ್ಟಿದ್ದಾರೆ. ಬೆಂಚ್ ಕಾಯುತ್ತಿರುವ ಆಟಗಾರರಿಗೆ ಅವಕಾಶ ನೀಡಲು ಇದೊಂದು ಅತ್ಯುತ್ತಮ ಸಮಯ ಎಂದಿದ್ದಾರೆ. ಅಂದ್ರೆ ಆಲ್ರೆಡಿ ಸರಣಿಯನ್ನ ಗೆದ್ದಿರೋದ್ರಿಂದ ಕಳೆದ ಎರಡು ಪಂದ್ಯಗಳಲ್ಲಿ ಬೆಂಚ್ ಕಾದಿರುವ ಆಟಗಾರರಿಗೆ ಕೊನೇ ಪಂದ್ಯದಲ್ಲಿ  ಅವಕಾಶ ನೀಡೋಕೆ ಮ್ಯಾನೇಜ್​ಮೆಂಟ್ ನಿರ್ಧಾರ ಮಾಡಿದಂತಿದೆ. ಕಳೆದ ಎರಡು ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ ವೈಭವ್ ಸೂರ್ಯವಂಶಿ, ವಾಷಿಂಗ್ಟನ್ ಸುಂದರ್ ಮತ್ತು ಯಶ್ ಠಾಕೂರ್ ಮೇಲೆ ಈಗ ಎಲ್ಲರ ಕಣ್ಣಿದೆ. ಇನ್ನು ವರುಣ್ ಚಕ್ರವರ್ತಿ ಇಂಜುರಿ ಆಗಿದ್ರಿಂದ ರವಿ ಬಿಷ್ಣೋಯ್ ಎರಡನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಆದರೆ ಸೂರ್ಯವಂಶಿಗೆ ಈ ಸರಣಿಯಲ್ಲಿ ಇನ್ನೂ ಚಾನ್ಸ್ ಸಿಕ್ಕಿಲ್ಲ. ಬಿಸಿಸಿಐ ಹೊಸ ಅಪ್‌ಡೇಟ್‌ ಪ್ರಕಾರ ಈ ಮೂವರೂ ಆಟಗಾರರು ಸೆಲೆಕ್ಟ್ ಆಗುವ ಚಾನ್ಸಸ್ ಜಾಸ್ತಿ ಇದೆ. ಅದೂ ಅಲ್ದೇ ಹರ್ಷಿತ್ ರಾಣಾ ಬದಲಿಗೆ ತಂಡ ಸೇರಿರೋ ಯಶ್ ಠಾಕೂರ್ ಕೂಡ ಇದ್ದಾರೆ. ಆದ್ರೆ ಇಲ್ಲಿ ಪ್ರಮುಖವಾಗಿ ಕಾಡ್ತಾ ಇರೋ ಪ್ರಶ್ನೆ ಓಪನಿಂಗ್ ಜೋಡಿಯ ಬಗ್ಗೆಯೇ.

ಸಂಜು ಗ್ರೇಟ್ ಕಂ ಬ್ಯಾಕ್.. ಸೂರ್ಯವಂಶಿಗೂ ಸಿಗುತ್ತಾ ಚಾನ್ಸ್?

ಮೊದಲ ಟಿ-20ಐ ಮ್ಯಾಚಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಸಂಜು ಸ್ಯಾಮ್ಸನ್ ಎರಡನೇ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರೊಂದಿಗೆ ಸ್ಫೋಟಕ ಪ್ರದರ್ಶನ ನೀಡಿದ್ರು. 22 ಎಸೆತಗಳಲ್ಲಿ 57 ರನ್ ಸಿಡಿಸಿಡಿದ್ದರಿಂದ ಮತ್ತೆ ಓಪನಿಂಗ್ ಕಾಂಬಿನೇಷನ್ ಬಗ್ಗೆ ಚರ್ಚೆ ಶುರುವಾಗಿದೆ. ಟೀಮ್ ಮ್ಯಾನೇಜ್‌ಮೆಂಟ್ ಅಭಿ & ಸಂಜು ಜೋಡಿಯನ್ನು ಮುಂದುವರಿಸಬಹುದು ಅಥವಾ ಯುವ ಓಪನರ್ ವೈಭವ್ ಸೂರ್ಯವಂಶಿಗೆ ಒಂದು ಪಂದ್ಯದಲ್ಲಿ ಅವಕಾಶ ನೀಡಬಹುದು. ಇದ್ರಲ್ಲಿ ಯಾವುದೇ ಡಿಸಿಷನ್ ತಗೊಂಡ್ರೂ ತಂಡಕ್ಕೆ ಪ್ಲಸ್ ಆಗುವಂಥದ್ದೇ. ಹೀಗಿದ್ರೂ ಕೊನೇ ಪಂದ್ಯದ ಪ್ಲೇಯಿಂಗ್ 11 ಫೈನಲ್ ಮಾಡೋ ಮುನ್ನ ಮೂರು ಕ್ವಶ್ಚನ್ಸ್ ಕಾಡ್ತಿದೆ. ಹಿರಿಯ ವೇಗದ ಬೌಲರ್‌ಗಳಿಗೆ ರೆಸ್ಟ್ ನೀಡ್ತಾರಾ? ವೈಭವ್ ಸೂರ್ಯವಂಶಿ ಕೊನೆ ಪಂದ್ಯದಲ್ಲಿ ಅವಕಾಶ ಕೊಡ್ತಾರಾ? ಮಿಡಲ್ ಆರ್ಡರ್‌ನಲ್ಲಿ ಫಿನಿಷರ್ ಜವಾಬ್ದಾರಿಯನ್ನು ಯಾರು ವಹಿಸಿಕೊಳ್ಳಲಿದ್ದಾರೆ? ಅನ್ನೋದ್ರ ಬಗ್ಗೆ. ಅದೂ ಅಲ್ದೇ ಮ್ಯಾನೇಜ್​ಮೆಂಟ್​ಗೆ ಇಲ್ಲಿ ಮತ್ತೊಂದು ಟಾಸ್ಕ್ ಕೂಡ ಇದೆ. ಆಫ್ಘನ್ ಸರಣಿ ಆದ್ಮೇಲೆ ಇದೇ ಟೀಂ ಏಷ್ಯನ್ ಗೇಮ್ಸ್​ಗೂ ಹಾರಲಿದೆ. ಇಲ್ಲಿ ಯಾರನ್ನ ಆಡಿಸ್ತೀವಿ ಯಾರನ್ನ ಕೂರಿಸ್ತೀವಿ ಅನ್ನೋದ್ರ ಮೇಲೆ ಡಿಸಿಷನ್ಸ್ ತಗೊಳ್ಬಹುದು. ಹೀಗಾಗಿ ಮೂರನೇ ಪಂದ್ಯದ ಪ್ಲೇಯಿಂಗ್ 11 ಬಾರೀ ಕುತೂಹಲ ಮೂಡಿಸಿದೆ.

Shantha Kumari

Leave a Reply

Your email address will not be published. Required fields are marked *