ಬುಮ್ರಾಗೂ ಬೆವರಿಳಿಸಿದ ಸೂರ್ಯವಂಶಿ – ಯಂಗ್ ಸ್ಟರ್ಸ್ ಅಬ್ಬರಕ್ಕೆ MI ಪಲ್ಟಿ
ರಾಜಸ್ಥಾನಕ್ಕೆ Hat-Trick ವಿಕ್ಟರಿ!

ರಾಜಸ್ಥಾನ್ ಮತ್ತು ಮುಂಬೈ ನಡುವಿನ ಮ್ಯಾಚ್ ನಲ್ಲಿ ರಾಜಸ್ಥಾನ ಭರ್ಜರಿ ಗೆಲುವು ದಾಖಲಿಸಿದೆ. ಸೂರ್ಯವಂಶಿ ಸಿಡಿಲು, ಜೈಸ್ವಾಲ್ ಆರ್ಭಟಕ್ಕೆ ಮುಂಬೈ ಮಕಾಡೆ ಮಲಗಿತ್ತು. ಮಂಗಳವಾರ ಗುವಾಹಟಿಯಲ್ಲಿ ನಡೆದ ಆರ್ಆರ್ ಮತ್ತು ಎಂಐ ನಡುವಿನ ಮ್ಯಾಚಲ್ಲಿ ರಾಜಸ್ಥಾನ ತಂಡ 27 ರನ್ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಈ ಸೀಸನ್ನಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. ಜೊತೆಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಟಾಪ್ ಆಫ್ ದಿ ಟೇಬಲ್ನಲ್ಲಿದೆ. ಮಂಗಳವಾರದ ಪಂದ್ಯಕ್ಕೂ ಮಳೆ ಕಾಟ ಕೊಟ್ಟಿದ್ದು ಕೊನೆಗೆ ಡೆಕ್ವರ್ತ್ ಲೂಯಿಸ್ ನಿಯಮದಡಿ ಪಂದ್ಯವನ್ನ 11 ಓವರ್ಗೆ ಸೀಮಿತಗೊಳಿಸಿದ್ರು. ಆದ್ರೆ 11 ಓವರ್ಗಳಲ್ಲೇ ರಾಜಸ್ಥಾನ ಅಬ್ಬರಿಸಿ ಬೊಬ್ಬಿರಿದಿದೆ.
ಇದನ್ನೂ ಓದಿ : ಮಳೆಯಿಂದ PBKS VS KKR ಪಂದ್ಯ ರದ್ದು – ಅಂಕ ಪಟ್ಟಿಯಲ್ಲಿ RCBನ ಹಿಂದಿಕ್ಕಿದ ಪಂಜಾಬ್
ಜೈಸ್ವಾಲ್ ಮತ್ತು ಸೂರ್ಯವಂಶಿ ಬೆಂಕಿ ಬ್ಯಾಟಿಂಗ್!
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಬಂದ ರಾಜಸ್ಥಾನ ತಂಡದ ಪರ ಯಶಸ್ವಿ ಜೈಸ್ವಾಲ್ ಮತ್ತು ಸೂರ್ವವಂಶಿ ಸುನಾಮಿ ಎಬ್ಬಿಸಿದ್ರು. 3.2 ಓವರ್ಗಳು ಅಂದ್ರೆ 20 ಎಸೆತಗಳು ಪವರ್ಪ್ಲೇ ಆಗಿತ್ತು. ಆದ್ರೆ ಕೇವಲ 20 ಎಸೆತಗಳಲ್ಲಿ 59 ರನ್ ಚಚ್ಚಿದ ಈ ಜೋಡಿ, ಮುಂಬೈ ತಂಡಕ್ಕೆ ಆಘಾತ ನೀಡಿದ್ರು. ಮೊದಲ 5 ಓವರ್ಗಳಲ್ಲಿ ರಾಜಸ್ಥಾನ್ 80 ರನ್ ಗಳಿಸಿದ್ರು. 39 ರನ್ ಗಳಿಸಿದ್ದ ಸೂರ್ಯವಂಶಿ ಔಟಾದ್ರೆ ಜೈಸ್ವಾಲ್ 77 ರನ್ ಬಾರಿಸಿದ್ರು. 3 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿದ್ರು. ಈ ಟಾರ್ಗೆಟ್ ಬೆನ್ನತ್ತಿದ ಮುಂಬೈ ಪರ ಓಪನಿಂಗ್ ಕಾಂಟ್ರಿಬ್ಯೂಷನ್ ಇರ್ಲಿಲ್ಲ. ಹೀಗಾಗಿ ಮುಂಬೈ ಇಂಡಿಯನ್ಸ್ 9 ವಿಕೆಟ್ ನಷ್ಟಕ್ಕೆ 123 ರನ್ಗಳನ್ನು ಕಲೆಹಾಕಲಷ್ಟೇ ಶಕ್ತವಾಯ್ತು. ಇನ್ನು ಈ ಮ್ಯಾಚಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಸೂರ್ಯವಂಶಿ ಆರ್ಭಟ.
ಬುಮ್ರಾಗೆ ಫಸ್ಟ್ ಬಾಲಲ್ಲೇ ಸಿಕ್ಸ್ ಬಾರಿಸಿದ ಸೂರ್ಯವಂಶಿ!
ಬುಮ್ರಾ ಅಂದ್ರೆ ದಿಗ್ಗಜ ಬ್ಯಾಟರ್ಗಳೂ ಡಿಫೆನ್ಸ್ ಗೇಮ್ ಆಡ್ತಾರೆ. ಆದ್ರೆ ಫಿಯರ್ಲೆಸ್ ಸೂರ್ಯವಂಶಿ ಫಸ್ಟ್ ಬಾಲ್ನೇ ಸಿಕ್ಸ್ಗಟ್ಟಿದ್ರು. ಹಾಗೇ ಒಂದೇ ಓವರ್ನಲ್ಲಿ 2 ಸಿಕ್ಸ್ ಸಿಡಿಸಿದ್ರು. ಈ ಮೂಲಕ ಜಸ್ಪ್ರೀತ್ ಬುಮ್ರಾ ಅವರ ಒಂದೇ ಓವರ್ನಲ್ಲಿ 14 ರನ್ ಕಬಳಿಸುವ ಮೂಲಕ ವೈಭವ್ ಸೂರ್ಯವಂಶಿ ಎಲ್ಲರ ಹುಬ್ಬೇರಿಸಿದ್ರು. 15 ವರ್ಷದ ಸೂರ್ಯವಂಶಿ ಆಟಕ್ಕೆ ಪಾಂಡ್ಯ, ರೋಹಿತ್ ಶರ್ಮಾ ಕೂಡ ಬೆರಗಾದ್ರು.
ಮುಂಬೈ ಸೋಲಿಗೆ ಕಾರಣಗಳು!
ಬೌಲಿಂಗ್ ನಲ್ಲಿ 150 ರನ್ಸ್ ಕೊಟ್ಟಿದ್ದೇ ದುಬಾರಿ
ಜೈಸ್ವಾಲ್ ಮತ್ತು ಸೂರ್ಯವಂಶಿ ಜೊತೆಯಾಟ (80)
ಚೇಸಿಂಗ್ ಗೆ ಬಂದ ಮುಂಬೈ ಪರ ಬ್ಯಾಟರ್ಸ್ ಫೇಲ್
ಟಾಪ್ 3 ಬ್ಯಾಟರ್ಸ್ ಸಿಂಗಲ್ ಡಿಜಿಟ್ ಗೆ ಔಟ್
ಮುಂಬೈ ಬ್ಯಾಟರ್ಸ್ ನ ಕಟ್ಟಿಹಾಕಿದ ರಾಜಸ್ಥಾನ
ಹೀಗೆ ರಾಜಸ್ಥಾನ ತಂಡ ಆಲ್ರೌಂಡ್ ಪ್ರದರ್ಶನ ನೀಡಿ ಗೆದ್ದು ಬೀಗಿದೆ. ಅಲ್ಲದೆ ಇದು ಸತತ ಮೂರನೇ ಗೆಲುವಾಗಿದ್ದು ಈಗ 6 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್ 1 ಪ್ಲೇಸ್ನಲ್ಲಿದ್ದಾರೆ. ನೆಕ್ಸ್ಟ್ ಆರ್ಸಿಬಿ ವಿರುದ್ಧ ಮ್ಯಾಚ್ ಇದ್ದು ಸೋಲಿಲ್ಲದ ಸರದಾರದಲ್ಲಿ ಯಾರಿಗೆ ಮೊದಲ ಸೋಲು ಗೊತ್ತಾಗುತ್ತೆ.

ನೋಡಿರಿ

