MI ಓಪನರ್ಸ್ ಜೈಸ್ವಾಲ್- ರೋಹಿತ್ ವಿಸ್ಡನ್ ಮ್ಯಾಗಜೀನ್‌ನಲ್ಲಿ ಸೂರ್ಯವಂಶಿ
ಹಾರ್ದಿಕ್ ಖರೀದಿಗೆ RR- KKR ಫೈಟ್

MI ಓಪನರ್ಸ್ ಜೈಸ್ವಾಲ್- ರೋಹಿತ್  ವಿಸ್ಡನ್ ಮ್ಯಾಗಜೀನ್‌ನಲ್ಲಿ ಸೂರ್ಯವಂಶಿಹಾರ್ದಿಕ್ ಖರೀದಿಗೆ RR- KKR ಫೈಟ್

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು.

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆಯಾಗಿದೆ. ಈ ಬದಲಾವಣೆಯೊಂದಿಗೆ 23 ವರ್ಷದ ಯುವ ಆಲ್​ರೌಂಡರ್ ಸೂರ್ಯಂಶ್ ಶೆಡ್ಗೆ ಭಾರತ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಟೀಮ್ ಇಂಡಿಯಾ ಆಲ್​ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಗಾಯಗೊಂಡಿದ್ದು, ಹೀಗಾಗಿ ಇವರ ಸ್ಥಾನಕ್ಕೆ ಸೂರ್ಯಂಶ್ ಶೆಡ್ಗೆ ಬಂದಿದ್ದಾರೆ.

ಇದನ್ನೂ ಓದಿ:  ವರ್ಷದಲ್ಲಿ 1 ತಿಂಗಳು ಕ್ರಿಕೆಟ್ ಬಂದ್ – ಆಟಗಾರರಿಗೆ ರೆಸ್ಟ್ ಕೊಡುತ್ತಾ BCCI?

ಭಾರತ ಪುರುಷರ ಕ್ರಿಕೆಟ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಪದ್ಮ ಶ್ರೀ ಪ್ರಶಸ್ತಿ ಪಡೆದ ನಂತ್ರ ಬಾವುಕ ಪೋಸ್ಟ್ ಹಾಕಿದ್ದಾರೆ. ಜೂನ್ 23 ಎಲ್ಲಾ ರೀತಿಯ ಮ್ಯಾಜಿಕ್ ಅನ್ನು ತರುತ್ತದೆ. ಹತ್ತೊಂಬತ್ತು ವರ್ಷಗಳ ಹಿಂದೆ, ಇದು ಭಾರತದ ಕ್ಯಾಪ್‌ನೊಂದಿಗೆ ಪ್ರಾರಂಭವಾಯಿತು. ಇಂದು, ಮತ್ತೊಂದು ಹೆಮ್ಮೆಯ ಅಧ್ಯಾಯವನ್ನು ಸೇರಿಸಲಾಗಿದೆ ಎಂದು ಬರೆದಿದ್ದಾರೆ.

ಬಂಗಾಳ ಮತ್ತು ದೆಹಲಿ ಕ್ಯಾಪಿಟಲ್ಸ್ ತಂಡದ ವಿಕೆಟ್ ಕೀಪರ್-ಬ್ಯಾಟರ್ ಅಭಿಷೇಕ್ ಪೊರೆಲ್ ಮದುವೆಯಾಗುವುದಾಗಿ ಭರವಸೆ ನೀಡಿ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾರೆಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.  ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿನಿ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಮೋಗ್ರಾ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ದೂರು ದಾಖಲಿಸಿದ್ದಾರೆ. ಮದುವೆಯ ಭರವಸೆ ನೀಡಿ ಲೈಂಗಿಕ ಸಂಪರ್ಕ, ಹಲ್ಲೆ ಮತ್ತು ಬೆದರಿಕೆ ಸೇರಿದಂತೆ ಆರೋಪಗಳನ್ನು ದೂರಿನಲ್ಲಿ ಸೇರಿಸಲಾಗಿದೆ.

ಕೋಲ್ಕತಾ ನೈಟ್‌ ರೈಡರ್ಸ್ ಮತ್ತು ರಾಜಸ್ಥಾನ್‌ ರಾಯಲ್ಸ್‌ ತಂಡಗಳು ಮುಂಬೈ ಇಂಡಿಯನ್ಸ್‌ ತಂಡದೊಂದಿಗೆ ಹಾರ್ದಿಕ್‌ ಪಾಂಡ್ಯ ಅವರನ್ನು ಟ್ರೇಡ್‌ ಮಾಡಿಕೊಳ್ಳಲು ಚರ್ಚೆ ನಡೆಸುತ್ತಿವೆ. ಕೆಕೆಆರ್‌ನ ಉನ್ನತ ಆಡಳಿತ ಮಂಡಳಿ ಮತ್ತು ಮುಂಬೈ ಇಂಡಿಯನ್ಸ್ ಮಾಲೀಕರ ನಡುವೆ ಆಟಗಾರರ ವಿನಿಮಯದ ಕುರಿತು ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ಆರ್‌ಆರ್‌ ಯಶಸ್ವಿ ಜೈಸ್ವಾಲ್‌ರನ್ನ ಮುಂಬೈಗೆ ನೀಡಿ ಹಾರ್ದಿಕ್‌ ಪಾಂಡ್ಯರನ್ನ ಖರೀದಿ ಮಾಡೋಕೆ ಮುಂದಾಗಿದೆ.

ಯಶಸ್ವಿ ಜೈಸ್ವಾಲ್ ಮುಂಬೈ ತಂಡಕ್ಕೆ ಬಂದರೆ, ಅವರು ರೋಹಿತ್ ಶರ್ಮಾ ಅವರೊಂದಿಗೆ ಆರಂಭಿಕರಾಗಿ ಆಡಲಿದ್ದಾರೆ ಎನ್ನಲಾಗ್ತಿದೆ.  ಭವಿಷ್ಯದಲ್ಲಿ ಮುಂಬೈ ತಂಡದ ನಾಯಕತ್ವವನ್ನೂ ಪಡೆಯಬಹುದು. ಜೈಸ್ವಾಲ್‌ಗೆ   24 ವರ್ಷ,  ರೋಹಿತ್‌ಗೆ 40 ವರ್ಷ. ಇವರಿಬ್ಬರು ಮುಂಬೈ ತಂಡದಲ್ಲಿ ಓಪನರ್ಸ್‌ ಆಗಿ ಆಡುವುದ್ದಕ್ಕೆ ಫ್ಯಾನ್ಸ್ ಕಾಯುತ್ತಿದ್ದಾರೆ. ಪಾಂಡ್ಯ ರಾಜಸ್ಥಾನ್‌ಗೆ ಹೋದ್ರೆ, ಜೈಸ್ವಾಲ್ ಮುಂಬೈಗೆ ಬರುವ ಸಾಧ್ಯತೆಯಿದೆ.

IPL ಮತ್ತು ಟಿ20 ವಿಶ್ವಕಪ್‌ನಲ್ಲಿ ಅಬ್ಬರಿಸಿದ್ದ ಜೇಕಬ್ ಬೆಥೆಲ್, ಭಾರತೀಯ ಚಿತ್ರರಂಗದ ಉದಯೋನ್ಮುಖ ನಟಿ ಹಾಗೂ ಕನ್ನಡತಿ ಆಧ್ಯಾ ಆನಂದ್ ಜೊತೆ ಲವ್‌ನಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ. ನಟಿ ಆಧ್ಯಾ ಆನಂದ್ ಅವರ ಪ್ರತಿಯೊಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಿಗೂ ಲೈಕ್ ಒತ್ತುತ್ತಿರುವುದನ್ನು ಆರ್‌ಸಿಬಿ ಫ್ಯಾನ್ಸ್ ಪತ್ತೆಹಚ್ಚಿದ್ದಾರೆ. ಇದರ ಬೆನ್ನಲ್ಲೇ, ಜೇಕಬ್ ಮತ್ತು ಆಧ್ಯಾ ಒಟ್ಟಿಗೆ ಕಾಫಿ ಹಂಚಿಕೊಳ್ಳುತ್ತಿರುವ ಫೋಟೋವೊಂದು ರೆಡ್ಡಿಟ್  ಮತ್ತು ಎಕ್ಸ್  ನಲ್ಲಿ ಹರಿದಾಡಲು ಶುರುವಾಗಿದೆ.

ಭಾರತ ತಂಡ ಎರಡು ಪಂದ್ಯಗಳ ಟಿ20ಐ ಸರಣಿಗಾಗಿ ಐರ್ಲೆಂಡ್ ಪ್ರವಾಸ ಮಾಡುತ್ತಿದೆ. ಈ ಸರಣಿಗಾಗಿ ಐರ್ಲೆಂಡ್ ತಂಡದಲ್ಲಿ ಭಾರತದಲ್ಲಿ ಹುಟ್ಟಿದ ಜೈ ಮೂಂದ್ರ ಸ್ಥಾನ ಪಡೆದಿದ್ದಾರೆ. 2021 ರಲ್ಲಿ ಅವರು ಸ್ನಾತಕೋತ್ತರ ಪದವಿ ಪಡೆಯಲು ಐರ್ಲೆಂಡ್‌ಗೆ ತೆರಳಿದರು. ಅಲ್ಲಿ ಅವರು ಡಬ್ಲಿನ್‌ನ ಲೀನ್‌ಸ್ಟರ್ ಕ್ರಿಕೆಟ್ ಕ್ಲಬ್‌ಗೆ ಸೇರಿದರು. ಇಲ್ಲಿಂದ ಅವರ ಕ್ರಿಕೆಟ್ ವೃತ್ತಿಜೀವನ ಬದಲಾಗಿ ಈಗ ಈಗ ಐರ್ಲೆಂಡ್‌ನ ಟಿ20ಐ ತಂಡದಲ್ಲಿ ಸ್ಥಾನ ಪಡೆದು ಭಾರತದ ವಿರುದ್ಧವೇ ಕಣಕ್ಕಿಳಿದಿದ್ದಾರೆ.

ವೈಭವ್ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಆತನ ಕೆರಿಯರ್​ ಅಪಾಯಕ್ಕೆ ಸಿಲುಕಲಿದೆ ಎಂದು ಅಫ್ರಿಕಾದ ಮಾಜಿ ದಿಗ್ಗಜ ಬ್ಯಾಟರ್ ಡ್ಯಾರಿಲ್ ಕಲ್ಲಿನನ್ ಹೇಳಿದ್ದಾರೆ. ವೈಭವ್ ಸೂರ್ಯವಂಶಿ ಅತ್ಯಂತ ಭಾರವಾದ ಬ್ಯಾಟ್ ಬಳಸಿ ವೇಗವಾಗಿ ಬೀಸುತ್ತಿದ್ದಾರೆ. ಇದರಿಂದ ಅವರ ಮಣಿಕಟ್ಟು, ಮೊಣಕೈ ಹಾಗೂ ಕೀಲುಗಳ ಮೇಲೆ ವಿಪರೀತ ಒತ್ತಡ ಬೀಳುತ್ತಿದೆ. ಪವರ್-ಹಿಟ್ಟಿಂಗ್​ ಮಾಡುವುದರಿಂದ ಮೂಳೆಗಳು ಮತ್ತು ಮಾಂಸಖಂಡಗಳಿಗೆ ಭವಿಷ್ಯದಲ್ಲಿ ಗಂಭೀರ ಹಾನಿಯಾಗಬಹುದು ಎಂದು ಡ್ಯಾರಿಲ್ ಕಲ್ಲಿನನ್ ಎಚ್ಚರಿಸಿದ್ದಾರೆ.

ವೈಭವ್‌ ಬಗ್ಗೆ ಇಡೀ ವಿಶ್ವವೇ ಮಾತನಾಡುತ್ತಿದ್ದು, 1864 ರಲ್ಲಿ ಇಂಗ್ಲೆಂಡ್‌ನ ಕ್ರಿಕೆಟಿಗ ಜಾನ್ ವಿಸ್ಡನ್ ಅವರು ಸ್ಥಾಪಿಸಿದ ವಿಸ್ಡನ್ ಕ್ರಿಕೆಟ್‌ ಮ್ಯಾಗಜೀನ್‌ನಲ್ಲಿ ಸೂರ್ಯವಂಶಿಯನ್ನ ಹಾಡಿಹೊಗಳಿದ್ದಾರೆ. ವಿಸ್ಡನ್ ಮ್ಯಾಗಜೀನ್‌ ಹೊಸ ಸಂಚಿಕೆಯ ಮುಖಪುಟದಲ್ಲಿ ವೈಭವ್ ಸೂರ್ಯವಂಶಿಯ ಫೋಟೋ ಬಳಸಲಾಗಿದ್ದು, ಇದಕ್ಕೆ ಕ್ರಿಕೆಟ್ ದಾಖಲೆಗಳನ್ನು ಧೂಳೀಪಟ ಮಾಡಿದ ಹುಡುಗ  ಎಂಬಾರ್ಥದ ಕ್ಯಾಪ್ಷನ್ ನೀಡಿದ್ದಾರೆ.

ಶ್ರೀಲಂಕಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಚಾಮರಿ ಅಟಪಟ್ಟು ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪಂದ್ಯದ ರನ್ ಚೇಸ್‌ನಲ್ಲಿ ಶತಕ ಗಳಿಸಿದ ವಿಶ್ವದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಇತಿಹಾಸ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.  ಬಿರುಸಿನ ಬ್ಯಾಟಿಂಗ್‌ ಮೂಲಕ 61 ಎಸೆತಗಳಲ್ಲಿ 106 ರನ್ ಗಳಿಸಿ ಅಜೇಯರಾಗಿ ಉಳಿದರು.

Kishor KV

Leave a Reply

Your email address will not be published. Required fields are marked *