ಸೆನ್ಸೇಷನ್ ಅಲ್ಲ LEGEND ಗುರಿ – BCCIಗೆ ಸೂರ್ಯವಂಶಿಯದ್ದೇ ಭಯ
ಸಚಿನ್ ಶಿಸ್ತು ವೈಭವ್ ಗೆ ಕಷ್ಟನಾ?

ಸೆನ್ಸೇಷನ್ ಅಲ್ಲ LEGEND ಗುರಿ – BCCIಗೆ ಸೂರ್ಯವಂಶಿಯದ್ದೇ ಭಯಸಚಿನ್ ಶಿಸ್ತು ವೈಭವ್ ಗೆ ಕಷ್ಟನಾ?

ವಿಶ್ವಕ್ರಿಕೆಟ್​ನಲ್ಲಿ ವಂಡರ್ ಬಾಯ್ ಆಗಿಯೇ ಕೆರಿಯರ್ ಸ್ಟಾರ್ಟ್ ಮಾಡಿರೋ 15 ವರ್ಷದ ವೈಭವ್ ಸೂರ್ಯವಂಶಿ ದಿಗ್ಗಜರ ಪಾಲಿಗೂ ಅಚ್ಚರಿಯೇ ಆಗಿದ್ದಾರೆ. ಅವ್ರ ಬ್ಯಾಟಿಂದ ಬರೋ ಪ್ರತೀ ಸಿಕ್ಸರ್ ಕೂಡ ಅಭಿಮಾನಿಗಳಿಗೆ ಸ್ಪೆಷಲ್ ಟ್ರೀಟ್ ನೀಡ್ತಿದೆ. ಆದ್ರೆ ವೈಭವ್ ಒಂದೆರಡು ವರ್ಷ ಮಿಂಚಿ ಮರೆಯಾಗೋರ ಸಾಲಿನಲ್ಲಿ ನಿಲ್ಲಬಾರದು. ದಶಕಗಳ ಕಾಲ ಭಾರತ ಕ್ರಿಕೆಟ್​ನಲ್ಲಿ ಮೆರೆಯಬೇಕು ಅಂತಾ ಬಿಸಿಸಿಐ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಌಂಡ್ ಸಚಿನ್​ರ ದಾರಿಯಲ್ಲಿ ನಡೆಸೋಕೆ ಮುಂದಾಗಿದೆ.

ಇದನ್ನೂ ಓದಿ : ಇಂದು ಇಂಡಿಯಾ–ಪಾಕ್ ಹೈವೋಲ್ಟೇಜ್ ಕದನ! – ಗೆಲುವಿನ ಮೇಲೆ ಟೀಂ ಇಂಡಿಯಾ ಕಣ್ಣು!

ಇತ್ತೀಚೆಗೆ ಮುಂಬೈನಲ್ಲಿ ನಡೆದ ಬಿಸಿಸಿಐನ ರಿವ್ಯೂ ಮೀಟಿಂಗ್​ನಲ್ಲಿ ವೈಭವ್ ಸೂರ್ಯವಂಶಿ ವಿಚಾರವಾಗಿಯೂ ಚರ್ಚೆಯಾಗಿದೆ. ಬಿಸಿಸಿಐ ಕಾರ್ಯದರ್ಶಿ ದೇವದತ್ ಸೈಕಿಯಾ ಈ ಬಗ್ಗೆ ಮಾತನಾಡಿದ್ದಾರೆ. ಸಚಿನ್ ತೆಂಡೂಲ್ಕರ್ ಚಿಕ್ಕ ವಯಸ್ಸಿನಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಬಂದು ದಶಕಗಳ ಕಾಲ ಭಾರತದ ಪರ ಬ್ಯಾಟ್ ಬೀಸಿದ್ದಾರೆ. ಸೋ ಈಗ ವೈಭವ್ ಸೂರ್ಯವಂಶಿಯನ್ನೂ ಕೂಡ ಅಷ್ಟೇ ಕೇರ್​ಫುಲ್​ ಆಗಿ ಪ್ರೊಟೆಕ್ಟ್ ಮಾಡ್ಬೇಕು ಅನ್ನೋ ಮೂಲಕ ಮುಂದಿನ ಪ್ಲ್ಯಾನ್​ಗಳ ಬಗ್ಗೆ ರಿವೀಲ್ ಮಾಡಿದ್ದಾರೆ.

ಒಂದು ಸರಣಿ ಅಥವಾ ವರ್ಷದಲ್ಲಿ ಮಿಂಚಿ ಮರೆಯಾಗಬಾರದು!

ವೈಭವ್ ಸೂರ್ಯವಂಶಿ ಟ್ಯಾಲೆಂಟೆಡ್ ಪ್ಲೇಯರ್. ಯಾವ್ದೋ ಗಲ್ಲಿ ಕ್ರಿಕೆಟ್​ನಲ್ಲಿ ಸದ್ದು ಮಾಡಿ ಭಾರತ ತಂಡಕ್ಕೆ ಕಾಲಿಟ್ಟಿಲ್ಲ. ಐಪಿಎಲ್​ನಲ್ಲಿ ವರ್ಲ್ಡ್ ಕ್ಲಾಸ್ ಬೌಲರ್​ಗಳ ವಿರುದ್ಧ ಫಿಯರ್​ಲೆಸ್ ಆಗಿ ಆಡಿ ಕ್ರಿಸ್​ಗೇಲ್​ ಅವ್ರ ಹೈಯೆಸ್ಟ್ ಸೀಸನ್ ಸಿಕ್ಸಸ್ ದಾಖಲೆ ಉಡೀಸ್ ಮಾಡಿ ಹೈಯೆಸ್ಟ್ ರನ್ಸ್ ಹೊಡ್ದು ಆರೆಂಜ್ ಕ್ಯಾಪ್ ಗೆದ್ದು ರಾಯಲ್ ಆಗೇ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದ್ರೆ ಅವ್ರ ಸ್ಟಾರ್ಟಿಂಗ್ ಇನ್ನಿಂಗ್ಸ್ ಅಂದುಕೊಂಡಂತೆ ಆಗ್ದೇ ಇದ್ರೂ ಫ್ಯೂಚರ್ ಸ್ಟಾರ್ ಆಗ್ತಾರೆ ಅನ್ನೋದು ಗೊತ್ತಿರೋದೇ. ನೆಕ್ಸ್​ಟ್ ಆಫ್ಘನ್ ವಿರುದ್ದದ ಮೂರು ಪಂದ್ಯಗಳ ಟಿ-20ಐ ಸರಣಿಯಲ್ಲೂ ಸೂರ್ಯವಂಶಿ ಮೇಲೇ ಎಲ್ಲರ ಕಣ್ಣಿರುತ್ತೆ. ಬೆಳೆಯೋ ಸಿರಿ ಮೊಳಕೆಯಲ್ಲಿ ಅನ್ನನೋ ಹಾಗೇ ವೈಭವ್ ಕೆರಿಯರ್ ಅದ್ಧೂರಿಯಾಗೇ ಶುರುವಾಗಿದೆ. ಆದ್ರೆ ಅದು ಗುರಿ ಮುಟ್ಟೋ ಮುನ್ನ ಹಾದಿ ತಪ್ಪಬಾರದು. ಇದೇ ಕಾರಣಕ್ಕೆ ಬಿಸಿಸಿಐ ವೈಭವ್ ಬಗ್ಗೆ ಸ್ಪೆಷಲ್ ಕೇರ್ ತಗೊಳ್ಳೋಕೆ ಮುಂದಾಗಿದೆ. ಬಿಸಿಸಿಐನ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಒಂದು ಸರಣಿ ಅಥವಾ ಒಂದು ವರ್ಷದ ಮಟ್ಟಿಗೆ ಮಾತ್ರ ಮಿಂಚುವ ಆಟಗಾರನಾಗದಂತೆ ತಡೆಯಲು ವೈಭವ್​ಗೆ ಸೂಕ್ತ ಮಾರ್ಗದರ್ಶನ ಮತ್ತು ಬೆಂಬಲದ ಜೊತೆ ಲಾಂಗ್ ಟರ್ಮ್ ಹಾಗೇ ಯಶಸ್ವಿ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಅವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಬೆಂಬಲ ನೀಡಲು ಮಂಡಳಿ ಮುಂದಾಗಿದೆ. ಸರಿಯಾದ ಹಾದಿಯಲ್ಲಿ ಮುನ್ನಡೆಯುವಂತೆ ನೋಡಿಕೊಳ್ಳಲು ನಾವು ಎಚ್ಚರಿಕೆ ವಹಿಸುತ್ತಿದ್ದೇವೆ. ಸಚಿನ್ ತೆಂಡೂಲ್ಕರ್ ರಂತೆ ದೀರ್ಘಕಾಲ ಸೇವೆ ಸಲ್ಲಿಸಬೇಕು. ವೈಭವ್​ರ ಅಂತರರಾಷ್ಟ್ರೀಯ ವೃತ್ತಿಜೀವನದ ಪ್ರತಿಯೊಂದು ಹಂತವನ್ನೂ ಮತ್ತು ಅವರು ಇಡುವ ಪ್ರತಿಯೊಂದು ಹೆಜ್ಜೆಯನ್ನೂ ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಬಿಸಿಸಿಐ ಅವರ ಭವಿಷ್ಯದ ಬಗ್ಗೆ ವಿಶೇಷ ಗಮನ ಹರಿಸುತ್ತಿದೆ ಎನ್ನೋ ಮೂಲಕ ವೈಭವ್​ ಟೀಂ ಇಂಡಿಯಾಗೂ ಸ್ಪೆಷಲ್ ಎಂದಿದ್ದಾರೆ. ಅಷ್ಟಕ್ಕೂ ಇಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹಾದಿಯಲ್ಲಿ ಸೂರ್ಯವಂಶಿಯನ್ನ ನಡೆಸಬೇಕು ಎಂದಿರೋದೇ ಕುತೂಹಲಕ್ಕೆ ಕಾರಣವಾಗಿದೆ.

ಬಾಲ್ಯದಲ್ಲೇ ಕ್ರಿಕೆಟ್.. ಹೆಮ್ಮರವಾದ ಸಚಿನ್.. ವೈಭವ್ ಹೇಗೆ?

ಅಷ್ಟಕ್ಕೂ ಇಲ್ಲಿ ಸಚಿನ್​ಗೂ ಸೂರ್ಯವಂಶಿಗೂ ಕಂಪೇರ್ ಮಾಡಿ ಮಾತಾಡೋಕೆ ಕಾರಣ ಇದೆ. ಇಬ್ಬರೂ ಕೂಡ ಚಿಕ್ಕ ವಯಸ್ಸಲ್ಲೇ ಅತೀಹೆಚ್ಚು ನಿರೀಕ್ಷೆ ಮೂಡಿಸಿ ಅಂತಾರಾಷ್ಟ್ರಿಯ ಕ್ರಿಕೆಟ್​ಗೆ ಕಾಲಿಟ್ಟಿದ್ದಾರೆ. ಒಂದು ಕಾಲದಲ್ಲಿ 16 ವರ್ಷದ ಸಚಿನ್ ತೆಂಡೂಲ್ಕರ್ ಭಾರತೀಯ ಕ್ರಿಕೆಟ್‌ನ ಭವಿಷ್ಯವಾಗಿದ್ದರು. ಈಗ 15 ವರ್ಷದ ವೈಭವ್ ಸೂರ್ಯವಂಶಿ ಅದೇ ಕುತೂಹಲ, ಅದೇ ನಿರೀಕ್ಷೆ, ಅದೇ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ವೈಭವ್‌ನ್ನು ಕೇವಲ ಒಂದೆರಡು ವರ್ಷಗಳ ಸೆನ್ಸೇಷನಲ್ ಸ್ಟಾರ್ ಆಗಿ ನೋಡಲು BCCI ಸಿದ್ಧವಿಲ್ಲ. ಸಚಿನ್‌ರಂತೆ ದೀರ್ಘಕಾಲ ಭಾರತೀಯ ಕ್ರಿಕೆಟ್‌ಗೆ ಸೇವೆ ಸಲ್ಲಿಸುವ ಆಟಗಾರನಾಗಿ ವೈಭವ್‌ರನ್ನು ಬೆಳೆಸಬೇಕು ಅನ್ನೋದು BCCIಯ ಪ್ಲ್ಯಾನ್.

ಸೂಪರ್ ಸ್ಟಾರ್ ಸಚಿನ್!

ಸಚಿನ್ ಬಾಲ್ಯದಲ್ಲೇ ಕೋಚ್ ರಮಾಕಾಂತ್ ಅಚ್ರೇಕರ್ ರಿಂದ ಮಾರ್ಗದರ್ಶನ

ಶಿವಾಜಿ ಪಾರ್ಕ್‌ ನಲ್ಲಿ ಗಂಟೆಗಟ್ಟಲೆ ಅಭ್ಯಾಸ, ಟೆಕ್ನಿಕಲ್ ಸಪೋರ್ಟ್, ತರಬೇತಿ

ಅಚ್ರೇಕರ್ ಮಾರ್ಗದರ್ಶನದಲ್ಲಿ ಸಚಿನ್ ಬ್ಯಾಟಿಂಗ್ ಮತ್ತಷ್ಟು ಪರಿಪಕ್ವ

ಸಚಿನ್‌ಗೆ ಕುಟುಂಬದ ಬೆಂಬಲವೇ ದೊಡ್ಡ ಶಕ್ತಿ.. ಅಣ್ಣ ಅಜಿತ್ ಸಚಿನ್ ದಾರಿ

ಪ್ರತಿಭೆ ಜೊತೆ ಫ್ಯಾಮಿಲಿ ಸಪೋರ್ಟ್, ಕೋಚ್, ನಿರಂತರ ಅಭ್ಯಾಸ, ಡೆಡಿಕೇಷನ್

ಹೀಗೆ ಸಚಿನ್​ಗೆ ಎಲ್ಲಾ ಕಡೆಯಿಂದಲೂ ಪರಿಪೂರ್ಣ ಬೆಂಬಲ ಸಿಕ್ಕಿತ್ತು. ಌಂಡ್ ತಾನು ಯಾವ ದಾರಿಯಲ್ಲಿ ನಡೆಯಬೇಕು ಅನ್ನೋ ಕ್ಲಿಯರ್ ಪಿಕ್ಚರ್ ಇತ್ತು. ಇದೆಲ್ಲಕ್ಕಿಂತ ಮುಖ್ಯವಾಗಿ ಆಟದ ಕಡೆಗಷ್ಟೇ ಫೋಕಸ್ ಮಾಡ್ತಿದ್ರು. ಎಷ್ಟೇ ನೇಮ್ ಫೇಮ್ ಬಂದ್ರೂ ತಮ್ಮ ಲಿಮಿಟ್ ಕ್ರಾಸ್ ಮಾಡಲಿಲ್ಲ. ಮೈದಾನದ ಒಳಗೂ ಹೊರಗೂ ಶಿಸ್ತಿನ ಗೆರೆ ದಾಟಲಿಲ್ಲ. ಇದ್ರಿಂದ ಕ್ರಿಕೆಟ್ ಜಗತ್ತಿನ ದೇವರಾಗಿದ್ದು. ನೀವು ಜಗತ್ತಿನ ಯಾವುದೇ ಲೆಜೆಂಡರಿ ಕ್ರಿಕೆಟರ್ಸ್ ನೋಡಿದ್ರೂ ಅವ್ರ ಡಿಸಿಪ್ಲೀನ್​ನಿಂದಲೇ ದೊಡ್ಡ ಯಶಸ್ಸು ಸಾಧಿಸೋಕೆ ಸಾಧ್ಯವಾಗಿತ್ತು. ಪಾಪ್ಯುಲಾರಿಟಿಯನ್ನ ನೆತ್ತಿಗೆ ಏರಿಸಿಕೊಂಡು ಮೆರೆದವ್ರೆಲ್ಲಾ ಬಂದಷ್ಟೇ ವೇಗವಾಗಿ ಮರೆಯಾದ್ರು. ಹೀಗಾಗಿ ಸೂರ್ಯವಂಶಿಗೆ ಆಟಕ್ಕಿಂತ ಜಾಸ್ತಿ ಹೊರಗಿನ ಸಪೋರ್ಟ್ ಮತ್ತು ತೋರಿಸೋ ದಾರಿ ಉತ್ತಮವಾದದ್ದೇ ಆಗ್ಬೇಕಿದೆ. ಌಂಡ್ ಸೂರ್ಯವಂಶಿ ಮುಂದೆ ಈಗ ಬ್ಯಾಟಿಂಗ್ ಅಷ್ಟೇ ಅಲ್ಲದೆ ಬೇರೆ ಬೇರೆ ಚಾಲೆಂಜಸ್ ಕೂಡ ಎದುರಾಗುತ್ತೆ. ಸಚಿನ್ ದಾಖಲೆ ಮುರಿದು ಭಾರತ ತಂಡಕ್ಕೆ ಕಾಲಿಟ್ಟ ಅತ್ಯಂತ ಕಿರಿಯ ಆಟಗಾರನಾಗಿ ಸೂರ್ಯವಂಶಿ ಕಂಡ್ರೂ ಅದನ್ನ ಅವ್ರಷ್ಟೇ ಎತ್ತರಕ್ಕೆ ಕೊಂಡೊಯ್ಯೋದು ಸುಲಭದ ಮಾತಲ್ಲ. ಸಚಿನ್‌ರ ಜರ್ನಿಯಲ್ಲಿ ಮುಖ್ಯವಾಗಿ ಟೆಸ್ಟ್ ಮತ್ತು ODI ಕ್ರಿಕೆಟ್‌ನಲ್ಲಿ 24 ವರ್ಷಗಳ ಕಾನ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ಇದೆ. ಹಾಗೇ ದಾಖಲೆಗಳ ಶಿಖರ ತಲುಪಲು ವರ್ಷಗಳ ಕಾಲ ಕಠಿಣ ಪರಿಶ್ರಮ ಪಟ್ಟಿದ್ದಾರೆ. ಸೋ ವೈಭವ್​ ಇಂತದ್ದೇ ದಾರಿಯಲ್ಲಿ ನಡೆಯಬೇಕು. ಫ್ರೀ ಮೈಂಡ್ ಇರ್ಬೇಕು ಅನ್ನೋ ಕಾರಣಕ್ಕೇ ವೈಭವ್ ಪೋಷಕರನ್ನೂ ಕೂಡ ಟೀಮ್ ಇಂಡಿಯಾ ಪ್ರವಾಸದಲ್ಲಿ ಜೊತೆಯಾಗಿ ಕರೆದೊಯ್ಯಲು BCCI ವೆಚ್ಚ ಭರಿಸುವ ಡಿಸಿಷನ್ಸ್ ತಗೊಂಡಿದೆ. ಒಟ್ನಲ್ಲಿ ಚಿಕ್ಕ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಿರೋ ವೈಭವ್​ಗೆ ಮೈದಾನದ ಹೊರಗಿನ ಬೆಂಬಲವೂ ಮುಖ್ಯವಾಗುತ್ತೆ,. ಹಾಗೇ ಸಣ್ಣವಯಸ್ಸಲ್ಲಿ ಕ್ರಿಕೆಟ್​ಗಷ್ಟೇ ಫೋಕಸ್ ಮಾಡುವಂತೆ ಕಾಪಾಡಿಕೊಳ್ಳಬೇಕಾದ ಸವಾಲೂ ಬಿಸಿಸಿಐಗಿದೆ.

Shantha Kumari

Leave a Reply

Your email address will not be published. Required fields are marked *