ಸಿಕ್ಸ್ ಬಿಟ್ಟು ಸಿಂಗಲ್ ಆಡ್ತಾರಾ? – ಸೂರ್ಯವಂಶಿಗೆ ಈಗ ಡಿಫೆನ್ಸ್ ಟಾಸ್ಕ್
ದ್ರಾವಿಡ್ ಕನಸು ನನಸಾಗುತ್ತಾ?

ಸಿಕ್ಸ್ ಬಿಟ್ಟು ಸಿಂಗಲ್ ಆಡ್ತಾರಾ? – ಸೂರ್ಯವಂಶಿಗೆ ಈಗ ಡಿಫೆನ್ಸ್ ಟಾಸ್ಕ್ದ್ರಾವಿಡ್ ಕನಸು ನನಸಾಗುತ್ತಾ?

ಫಸ್ಟ್ ಬಾಲ್​ನಿಂದ ಹಿಡ್ದು ಪ್ರತೀ ಬಾಲ್​ನಲ್ಲೂ ಬೌಂಡರಿ ಎಕ್ಸ್​ಪೆಕ್ಟ್ ಮಾಡೋ ಆಟಗಾರ ವೈಭವ್ ಸೂರ್ಯವಂಶಿ. ಈಗಾಗಲೇ ವಯಸ್ಸಿಗೂ ತನ್ನ ಟ್ಯಾಲೆಂಟ್​ಗೂ ಸಂಬಂಧವೇ ಇಲ್ಲ ಅನ್ನೋ ಥರ ಪರ್ಫಾಮ್ ಮಾಡ್ತಿರೋ ಸೂರ್ಯವಂಶಿ ಭಾರತ ಟಿ-20ಐ ತಂಡಕ್ಕೂ ಕಾಲಿಟ್ಟಾಗಿದೆ. ಈಗ ಆತನ ನೆಕ್ಸ್​​ಟ್ ಟಾರ್ಗೆಟ್ ಇರುವಂಥದ್ದು ಎಲ್ಲಾ ಮಾದರಿಯ ಪ್ಲೇಯರ್ ಆಗ್ಬೇಕು ಅನ್ನೋದು. ಏಕದಿನ ಮಾದರಿಯಲ್ಲಿ ಅವಕಾಶ ಸಿಕ್ರೂ ಟೆಸ್ಟ್ ಫಾರ್ಮೆಟ್​​​ನಲ್ಲಿ ಸಕ್ಸಸ್ ಆಗೋದು ಸುಲಭದ ಮಾತೇ ಅಲ್ಲ. ಆದ್ರೆ ಅದಕ್ಕಾಗಿ ಸಿದ್ಧವಾಗಲು ಸೂರ್ಯವಂಶಿಗೆ ನಾಳೆಯಿಂದ ಹೊಸ ಟಾಸ್ಕ್ ಶುರುವಾಗಲಿದೆ. ಪ್ರತೀ ಬಾಲ್​ನಲ್ಲೂ ಬಿಗ್ ಹಿಟ್ ನೋಡೋ ಸೂರ್ಯವಂಶಿ ಸಿಂಗಲ್ ತಗೊಳ್ಳೋದು, ಡಿಫೆನ್ಸ್ ಮಾಡಿಕೊಳ್ಳೋದನ್ನೂ ಅಭ್ಯಾಸ ಮಾಡಿಕೊಳ್ಬೇಕಿದೆ.

ಇದನ್ನೂ ಓದಿ : ನಾಚಿಕೆ ಬಿಟ್ಟ KL ರಾಹುಲ್ – ಕಿರಿಯರಿಂದ ಕಲಿಯುತ್ತೇನೆ ಎಂದಿದ್ದೇಕೆ?

ಭಾರತೀಯ ದೇಶೀಯ ಕ್ರಿಕೆಟ್‌ನ ಪ್ರತಿಷ್ಠಿತ ದುಲೀಪ್ ಟ್ರೋಫಿ ಟೂರ್ನಿಗೆ ಕೌಂಟ್​ಡೌನ್ ಶುರುವಾಗಿದೆ. ಆಗಸ್ಟ್ 23 ರಿಂದ ಸೆಪ್ಟೆಂಬರ್ 10 ರವರೆಗೆ ನಡೆಯಲಿದೆ. ಈ ಟೂರ್ನಿಯಲ್ಲಿ ಒಟ್ಟು ಆರು ವಲಯಗಳ ನಡುವೆ ಫೈಟ್ ನಡೆಯಲಿದೆ. ನಾರ್ತ್ ಝೋನ್, ಸೌತ್ ಝೋನ್, ಈಸ್ಟ್ ಝೋನ್, ವೆಸ್ಟ್ ಝೋನ್, ಸೆಂಟ್ರಲ್ ಝೋನ್ ಮತ್ತು ನಾರ್ತ್ ಈಸ್ಟ್ ಝೋನ್ ಹೀಗೆ ಒಟ್ಟು ಆರು ತಂಡಗಳು ಪ್ರಶಸ್ತಿಗಾಗಿ ಫೈಟ್ ನಡೆಯಲಿದೆ. ಇದು ಫಸ್ಟ್ ಕ್ಲಾಸ್ ಕ್ರಿಕೆಟ್ ಆಗಿರೋದ್ರಿಂದ ಬ್ಯಾಟರ್‌ಗಳ ತಾಳ್ಮೆ, ಬೌಲರ್‌ಗಳ ಶಿಸ್ತು, ಫೀಲ್ಡರ್‌ಗಳ ಪರೀಕ್ಷೆ ಎಲ್ಲವೂ ಇಲ್ಲಿ ಇರಲಿದೆ. ಇಂಟ್ರೆಸ್ಟಿಂಗ್ ಅಂದ್ರೆ ಈ ತಂಡಗಳಿಗೆ ಐಪಿಎಲ್ ಸ್ಟಾರ್​ಗಳು ಕ್ಯಾಪ್ಟನ್ಸ್ ಆಗಿರೋದ್ರಿಂದ ಟೂರ್ನಿ ಮತ್ತಷ್ಟು ರಂಗೇರಲಿದೆ. ಸೆಂಟ್ರಲ್ ಝೋನ್‌ಗೆ ರಜತ್ ಪಾಟಿದಾರ್, ಸೌತ್ ಝೋನ್ ತಂಡಕ್ಕೆ ತಿಲಕ್ ವರ್ಮಾ, ಈಸ್ಟ್ ಝೋನ್‌ಗೆ ಇಶಾನ್ ಕಿಶನ್, ವೆಸ್ಟ್ ಝೋನ್‌ಗೆ ರುತುರಾಜ್ ಗಾಯಕ್ವಾಡ್, ನಾರ್ತ್ ಝೋನ್‌ಗೆ ಕನ್ಹಯ್ಯಾ ವಾಧ್ವಾನ್, ಮತ್ತು ನಾರ್ತ್ ಈಸ್ಟ್ ಝೋನ್‌ಗೆ ಜೊನಾಥನ್ ರೋಂಗ್ಸೆನ್ ಕ್ಯಾಪ್ಟನ್ಸ್ ಆಗಿದ್ದಾರೆ. ಇಶಾನ್ ಕಿಶನ್ ಕ್ಯಾಪ್ಟನ್ಸಿಯ ತಂಡದಲ್ಲಿ ವೈಭವ್ ಸೂರ್ಯವಂಶಿ ವೈಸ್ ಕ್ಯಾಪ್ಟನ್ ಆಗಿದ್ದಾರೆ. ಮೊದಲ ಪಂದ್ಯದಲ್ಲೇ  ಈಸ್ಟ್ ಝೋನ್-ನಾರ್ತ್ ಈಸ್ಟ್ ಝೋನ್ ಮುಖಾಮುಖಿ ಆಗ್ತಿದ್ದು ಎಲ್ಲರ ಕಣ್ಣು ವೈಭವ್ ಮೇಲಿದೆ.

ಸಿಕ್ಸ್ ಹೊಡೆಯೋದು ಬಿಟ್ಟು ಸಿಂಗಲ್ಸ್ ಓಡ್ತಾರಾ ಸೂರ್ಯವಂಶಿ?

15ನೇ ವಯಸ್ಸಿನಲ್ಲೇ ವಂಡರ್ ಕ್ರಿಕೆಟರ್ ಆಗಿ ಕಾಣ್ತಿರೋ ಸೂರ್ಯವಂಶಿ, ಮೊಹಮ್ಮದ್ ಶಮಿ, ಮುಖೇಶ್ ಕುಮಾರ್, ಅಭಿಮನ್ಯು ಈಶ್ವರನ್ ಮತ್ತು ನಾಯಕ ಇಶಾನ್ ಕಿಶನ್ ಇರುವ ತಂಡಕ್ಕೆ ವೈಸ್ ಕ್ಯಾಪ್ಟನ್ ಆಗಿದ್ದಾರೆ. ಜಿಂಬಾಬ್ವೆ ಟೂರ್ ಬಳಿಕ ನಾಗ್ಪುರದಲ್ಲಿ ರಾಜಸ್ಥಾನ ರಾಯಲ್ಸ್ ನಡೆಸಿದ 10 ದಿನಗಳ ಕ್ಯಾಂಪ್​ನಲ್ಲಿ ಭಾಗಿಯಾಗಿದ್ರು. ಇಲ್ಲಿ ಸೂರ್ಯವಂಶಿ ರೆಡ್ ಬಾಲ್ ಗಳನ್ನ ಫೇಸ್ ಮಾಡೋದನ್ನ ಅಭ್ಯಾಸ ಮಾಡಿದ್ದಾರೆ. ಟಿ-20ಐನಲ್ಲಿ ಪ್ರತೀ ಬಾಲ್​ನೂ ಅಗ್ರೆಸ್ಸಿವ್ ಆಗಿ ಆಡುವ ಸೂರ್ಯವಂಶಿ ರೆಡ್ ಬಾಲ್ ಕ್ರಿಕೆಟ್​ನಲ್ಲಿ ಗಂಟೆಗಟ್ಟಲೆ ಕ್ರೀಸ್​ನಲ್ಲಿ ನಿಲ್ಲೋದನ್ನ ಅಭ್ಯಾಸ ಮಾಡಿಕೊಳ್ಬೇಕು. ಹಾಗೇ ಬಿಗ್ ಹಿಟ್​ಗಳನ್ನ ಕೈಬಿಟ್ಟು ಸಿಂಗಲ್ಸ್ ತಗೊಳ್ಳೋದು ಅಥವಾ ಡಿಫೆನ್ಸಿವ್ ಆಗಿ ಆಡೋದನ್ನ ರೂಢಿಸಿಕೊಳ್ಬೇಕಿದೆ. ಯಾಕಂದ್ರೆ ಈ ಹಿಂದೆ ಫಸ್ಟ್ ಕ್ಲಾಸ್ ಕ್ರಿಕೆಟ್ ಆಡಿದಾಗ್ಲೂ ಸೂರ್ಯವಂಶಿ ದೊಡ್ಡ ಮಟ್ಟದ ಸಕ್ಸಸ್ ಕಂಡಿಲ್ಲ. ಎಂಟು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ ಮತ್ತು ಕೇವಲ ಒಂದು ಅರ್ಧಶತಕದೊಂದಿಗೆ 17.25 ರ ಸರಾಸರಿಯಲ್ಲಿ 207 ರನ್ ಗಳಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಸೂರ್ಯವಂಶಿ ದೀರ್ಘಕಾಲದ ಕ್ರಿಕೆಟ್​ನಲ್ಲಿ ಗಟ್ಟಿಯಾಗಿ ನಿಲ್ಬೇಕು ಅಂದ್ರೆ ಈಗಿನಿಂದಲೇ ಪ್ರಿಪೇರ್ ಆಗ್ಬೇಕಿದೆ. ಇನ್ನು ಸೂರ್ಯವಂಶಿ ಮೂರೂ ಮಾದರಿ ಪ್ಲೇಯರ್ ಆಗ್ಬೇಕು ಅನ್ನೋದು ದ್ರಾವಿಡ್ ಕನಸೂ ಆಗಿದೆ.

ರಾಜಸ್ಥಾನ ರಾಯಲ್ಸ್ ತಂಡಕ್ಕೆ ಪಿಕ್ ಮಾಡೋ ಮೂಲಕ ವೈಭವ್ ಸೂರ್ಯವಂಶಿ ಕೆರಿಯರ್​ನಲ್ಲಿ ಟರ್ನಿಂಗ್ ಪಾಯಿಂಟ್ ನೀಡಿದ ಭಾರತದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್, ವೈಭವ್ ಸೂರ್ಯವಂಶಿ ಭಾರತದ ಪರ ಆಲ್​ಫಾರ್ಮೆಟ್ ಪ್ಲೇಯರ್ ಆಗ್ಬೇಕು ಎಂದಿದ್ದಾರೆ. ಸೂರ್ಯವಂಶಿ ಅವರಂತಹ ಟ್ಯಾಲೆಂಟೆಎಡ್ ಯಂಗ್ ಪ್ಲೇಯರ್ ದೇಶೀಯ ಪಂದ್ಯಾವಳಿಗಳಲ್ಲಿ ವೈಟ್ ಬಾಲ್ ಮಾದರಿ ಅಷ್ಟೇ ಅಲ್ಲದೆ ಕೆಂಪು ಚೆಂಡಿನ ಕ್ರಿಕೆಟ್ ಆಡುತ್ತಿರುವುದು ಅದ್ಭುತವಾಗಿದೆ. ಮುಂದಿನ ದಿನಗಳಲ್ಲಿ ಮೂರೂ ಮಾದರಿಯಲ್ಲೂ ಮಿಂಚಬೇಕು ಅಂತಾ ವಿಶ್ ಮಾಡಿದ್ದಾರೆ. ಹಾಗೇ ಟಿ-20 ಕ್ರೇಜ್​ನಲ್ಲಿ  ಟೆಸ್ಟ್ ಬದುಕುಳಿಯಬೇಕು, ಬೆಳೆಯಬೇಕು ಹೀಗಾಗಿ ಆಟದ ಎಲ್ಲಾ ಸ್ವರೂಪಗಳನ್ನು ಆಡಲು ಸಾಧ್ಯವಾಗುವಂತೆ ಸೂರ್ಯವಂಶಿಯಂತಹ ಆಟಗಾರರು ನಮಗೆ ಅಗತ್ಯವಿದೆ ಎಂದಿದ್ದಾರೆ. ಆದ್ರೆ ಫಸ್ಟ್ ಕ್ಲಾಸ್ ಕ್ರಿಕೆಟ್​ನಲ್ಲಿ ಹಲವು ಸವಾಲುಗಳೂ ಇವೆ. ಗಂಟೆಗಟ್ಟಲೆ ಕ್ರೀಸ್​ನಲ್ಲಿ ನಿಂತು ಹೊಸ ಚೆಂಡು, ಸ್ವಿಂಗ್ ಮತ್ತು ಸೀಮ್‌ ಅನ್ನು ಎದುರಿಸಿ ತಾಳ್ಮೆಯಿಂದ ಬ್ಯಾಟಿಂಗ್ ಮಾಡಬೇಕು. ದೇಶದ ವಿವಿಧ ವಲಯಗಳ ಅತ್ಯುತ್ತಮ ದೇಶೀಯ ಬೌಲರ್​ಗಳನ್ನ ಸಮರ್ಥವಾಗಿ ಫೇಸ್ ಮಾಡ್ಬೇಕು. ಆರಂಭದ ಓವರ್​ಗಳಲ್ಲಿ ಚೆಂಡು ಸ್ವಿಂಗ್ ಆಗುವಾಗ ಡಿಫೆನ್ಸಿವ್ ಆಗಿ ಆಡ್ಬೇಕು. ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ವೈಭವ್ ಸೂರ್ಯವಂಶಿ ಈಗ ಎದುರಿಸಬೇಕಿರುವುದು ಕೇವಲ ಬೌಲರ್‌ಗಳನ್ನಲ್ಲ… ರೆಡ್ ಬಾಲ್ ಕ್ರಿಕೆಟ್‌ನ ಕಠಿಣ ಪರೀಕ್ಷೆಯನ್ನೂ. ಹೀಗಾಗಿ ದುಲೀಪ್ ಟ್ರೋಫಿಯಲ್ಲಿ ಸೂರ್ಯವಂಶಿ ಸೆಂಟ್ರ್ ಆಫ್ ಅಟ್ರ್ಯಾಕ್ಷನ್ ಆಗಲಿದ್ದಾರೆ.

Shantha Kumari

Leave a Reply

Your email address will not be published. Required fields are marked *