ಸೂರ್ಯವಂಶಿಗಾಗಿ ಲೆಜೆಂಡರ್ಸ್ WAR – ಆಡಿದ್ರೂ ಕಷ್ಟ.. ಆಡದಿದ್ರೂ ನಷ್ಟ ಹೇಗೆ?
ಶ್ರೇಯಸ್ & ಗಂಭೀರ್ ಕೈಯಲ್ಲಿದೆ ಭವಿಷ್ಯ

ಸೂರ್ಯವಂಶಿಗಾಗಿ ಲೆಜೆಂಡರ್ಸ್ WAR – ಆಡಿದ್ರೂ ಕಷ್ಟ.. ಆಡದಿದ್ರೂ ನಷ್ಟ ಹೇಗೆ?ಶ್ರೇಯಸ್ & ಗಂಭೀರ್ ಕೈಯಲ್ಲಿದೆ ಭವಿಷ್ಯ

ಇಂಗ್ಲೆಂಡ್ ಸರಣಿಯಲ್ಲಿರೋ ಟೀಂ ಇಂಡಿಯಾ 2ನೇ ಪಂದ್ಯಕ್ಕೆ ಸಿದ್ಧವಾಗಿದೆ. ಫಸ್ಟ್ ಮ್ಯಾಚ್ ಮಳೆಗೆ ವಾಶ್ ಔಟ್ ಆಗಿದ್ರಿಂದ 2ನೇ ಪಂದ್ಯ ಗೆಲ್ಲಲೇಬೇಕಿದೆ. ಆದ್ರೆ ಇಲ್ಲಿ ಸರಣಿ, ಮ್ಯಾಚ್​ಗಳಿಗಿಂತ ಜಾಸ್ತಿ ಸದ್ದು ಮಾಡ್ತಿರೋದು ವೈಭವ್ ಸೂರ್ಯವಂಶಿ ಡೆಬ್ಯೂ ವಿಚಾರ. ಆದ್ರೀಗ ಸೂರ್ಯವಂಶಿಯನ್ನ ಇಂಗ್ಲೆಂಡ್ ಸರಣಿಯಲ್ಲಿ ಆಡಿಸಬೇಕಾ ಅಥವಾ ಬೇಡ್ವಾ ಅನ್ನೋದೇ ತಲೆಬಿಸಿಯಾಗಿದೆ. ಈ ವಿಚಾರವಾಗಿ ಲೆಜೆಂಡರಿ ಕ್ರಿಕೆಟರ್ಸ್ ನಡುವೆಯೇ ವಾರ್ ನಡೀತಿದೆ.

ಇದನ್ನೂ ಓದಿ : IND Vs SL ಟೆಸ್ಟ್ ಗೆ ಮುಹೂರ್ತ –  2 ಮ್ಯಾಚ್.. ಗೆದ್ರಷ್ಟೇ WTC ರೇಸ್

ಐರ್ಲೆಂಡ್ ಸರಣಿಗೆ ವೈಭವ್ ಸೂರ್ಯವಂಶಿ ಸೆಲೆಕ್ಟ್ ಆಗಿದ್ದೇ ಆಗಿದ್ದು. ಫಸ್ಟ್ ಮ್ಯಾಚ್​ನಲ್ಲಿ ಆಡ್ತಾರೆ ಅನ್ಕೊಂಡ್ರು. ಆಡಿಲ್ಲ. ಸೆಕೆಂಡ್ ಮ್ಯಾಚಲ್ಲಿ ಚಾನ್ಸ್ ಸಿಗ್ಬೋದು ಅನ್ಕೊಂಡ್ರು.. ಅಲ್ಲಿಯೂ ಆಡೋಕೆ ಚಾನ್ಸ್ ಕೊಟ್ಟಿಲ್ಲ. ಬಹುಶಃ ಆಂಗ್ಲರ ನಾಡಿನಲ್ಲಿಯೇ ಅಖಾಡಕ್ಕೆ ಇಳಿಸ್ಬೋದು ಅನ್ನೋ ಮಾತುಗಳಿದ್ವು. ಅಲ್ಲಿಯೂ ಡೆಬ್ಯೂಗೆ ಅವಕಾಶ ಸಿಕ್ಕಿಲ್ಲ. ಸೋ ಇದೇ ವಿಚಾರವಾಗಿಯೇ ಸಾಕಷ್ಟು ಡಿಸ್ಕಷನ್ಸ್ ಆಗ್ತಿದೆ. ಇಂಟ್ರೆಸ್ಟಿಂಗ್ ಅಂದ್ರೆ ಸೂರ್ಯವಂಶಿಯನ್ನ ಭಾರತದ ಪರ ಸೀನಿಯರ್ಸ್ ಟೀಮ್​ನ ಪ್ಲೇಯಿಂಗ್ 11ನಲ್ಲಿ ಆಡಿಸ್ಬೇಕಾ ಬೇಡ್ವಾ ಅನ್ನೋ ವಿಚಾರವಾಗಿಯೇ ದೊಡ್ಡ ಇಶ್ಯೂ ಆಗಿದೆ.

ಸೂರ್ಯವಂಶಿ ಡೆಬ್ಯೂಗಾಗಿ ಲೆಜೆಂಡರಿ ಕ್ರಿಕೆಟರ್ಸ್ ನಡುವೆ ವಾರ್!

15 ವರ್ಷದ ವಂಡರ್ ಕಿಡ್ ವೈಭವ್ ಸೂರ್ಯವಂಶಿ ಅಂಡರ್ 19 ಕ್ರಿಕೆಟ್​ನಲ್ಲಿ, ಐಪಿಎಲ್​ನಲ್ಲಿ ಧೂಳೆಬ್ಬಿಸಿದಾಗಲೇ ಇಡೀ ಜಗತ್ತೇ ಬೆರಗುಗಣ್ಣಿನಿಂದ ನೋಡಿತ್ತು. ಹಾಗೇ ಟೀಂ ಇಂಡಿಯಾ ಟಿ-20ಐ ತಂಡಕ್ಕೆ ಸೆಲೆಕ್ಟ್ ಆದಾಗ್ಲೂ ಹೀ ಡಿಸರ್ವ್ ಅಂದಿದ್ರು. ವಿಷ್ಯ ಏನಂದ್ರೆ ತಂಡಕ್ಕೆ ಸೆಲೆಕ್ಟ್ ಆದ್ರೂ ಈಗಲೇ ಚಾನ್ಸ್ ಕೊಡ್ಬೇಕಾ ಬೇಡ್ವಾ ಅನ್ನೋದೇ ಸದ್ಯದ ಹಾಟ್ ಟಾಪಿಕ್. ಇದಕ್ಕೆ ಕಾರಣ ಕೆಲ ಲೆಜೆಂಡರಿ ಕ್ರಿಕೆಟರ್​ಗಳ ವಾದ. ಭಾರತದ ದಂತಕತೆಗಳಾದ ಸುನಿಲ್ ಗವಾಸ್ಕರ್, ರವಿಶಾಸ್ತ್ರಿ, ಭಾರತದ ಮಾಜಿ ಆಯ್ಕೆದಾರ ಸರಂದೀಪ್ ಸಿಂಗ್, ಹಾಗೇ ಸೌತ್ ಆಫ್ರಿಕಾದ ಲೆಜೆಂಡರಿ ಪ್ಲೇಯರ್ ಎಬಿ ಡಿವಿಲಿಯರ್ಸ್ ಸೇರಿದಂತೆ ಸಾಕಷ್ಟು ಮಾಜಿ ತಾರೆಯರು ಸೂರ್ಯವಂಶಿಗೆ ಚಾನ್ಸ್ ಕೊಡಿ ಅಂತಾ ಒತ್ತಾಯ ಮಾಡ್ತಿದ್ದಾರೆ. ಅಟ್ ದಿ ಸೇಮ್ ಟೈಂ ಭಾರತದ ಮತ್ತಷ್ಟು ಸೂಪರ್ ಸ್ಟಾರ್ಸ್ ಈಗಲೇ ಅವಕಾಶ ಕೊಡೋದು ಬೇಡ ಅಂದಿದ್ದಾರೆ. ಕಪಿಲ್ ದೇವ್, ಅಮಿತ್ ಮಿಶ್ರಾ, ದಿನೇಶ್ ಕಾರ್ತಿಕ್, ಆರ್. ಅಶ್ವಿನ್, ಸಬಾ ಕರೀಮ್ ಮತ್ತು ಚೇತೇಶ್ವರ ಪೂಜಾರ ಹೀಗೆ ಕೆಲವ್ರು ಮತ್ತಷ್ಟು ದಿನ ಬೆಂಚ್ ಕಾಯಲಿ ಪರ್ವಾಗಿಲ್ಲ ಅನ್ನೋದು ಇವ್ರ ವಾದ.

ಸೂರ್ಯವಂಶಿಗೆ ಚಾನ್ಸ್ ಕೊಡಲಿ!

ಅಂಡರ್ 19 ಟೀಂ, ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ವೈಭವ್

ಕಳೆದ 10 ಇನ್ನಿಂಗ್ಸ್ ಗಳಲ್ಲಿ 4 ಸಲ 90+ ರನ್ಸ್.. ಭರ್ಜರಿ ಫಾರ್ಮ್

ಟ್ಯಾಲೆಂಟೆಡ್ ಪ್ಲೇಯರ್ ಗೆ ಬೇಗ ಚಾನ್ಸ್ ಸಿಗೋದ್ರಿಂದ ಉತ್ತಮ ಪ್ರದರ್ಶನ

ಭಾರತ ತಂಡದ ಪ್ರದರ್ಶನ ಕೂಡ ಕಳಪೆಯಾಗಿರೋದ್ರಿಂದ ಚಾನ್ಸ್ ನೀಡಲಿ

ಟಿ-20ಐ ಫಾರ್ಮೆಟ್ ಗೆ ಕರೆಕ್ಟ್ ಪ್ಲೇಯರ್ ವೈಭವ್ ಸೂರ್ಯವಂಶಿ

ಇದೆಲ್ಲಾ ಕಾರಣಕ್ಕಾಗಿಯೇ ಸೂರ್ಯವಂಶಿಯನ್ನ ಬೆಂಚ್ ಕಾಯಿಸ್ಬೇಕು. ಬ್ಯಾಟ್ ಕೊಟ್ಟು ಮೈದಾನಕ್ಕಿಳಿಸಿ. ಪ್ರತಿಭಾವಂತರು ಬೆಂಚ್ ಕಾಯೋದು ಬೇಡ ಅನ್ನೋದು ಇವ್ರ ವಾದ. ಆದ್ರೆ ಈಗಲೇ ಚಾನ್ಸ್ ಕೊಡೋದು ಬೇಡ ಅನ್ನೋವ್ರ ಲೆಕ್ಕಾಚಾರ ಬೇರೆನೇ ಇದೆ.

ಸೂರ್ಯವಂಶಿಗೆ ಚಾನ್ಸ್ ಬೇಡ!

ಭಾರತ ತಂಡದಲ್ಲಿ ಸಾಕಷ್ಟು ಸೀನಿಯರ್ ಪ್ಲೇಯರ್ಸ್ ಇದ್ದಾರೆ, ಆಡಲಿ

ಟಾಪ್-5 ಬ್ಯಾಟಿಂಗ್ ಚೆನ್ನಾಗಿರೋದ್ರಿಂದ ಬೇರೆಯವ್ರ ಚಾನ್ಸ್ ಗೆ ಕತ್ತರಿ ಬೇಡ

ಮುಖ್ಯವಾಗಿ ವಿಶ್ವಕಪ್ ಹೀರೋ ಸಂಜು ಸ್ಯಾಮ್ಸನ್ ಗೆ ಮತ್ತಷ್ಟು ಅವಕಾಶ ಸಿಗಲಿ

15 ವರ್ಷದ ವೈಭವ್ ಗೆ ಚಾನ್ಸ್ ವಿಚಾರದಲ್ಲಿ ಅರ್ಜೆಂಟ್ ಮಾಡುವುದು ತಪ್ಪು

ಪ್ಲೇಯಿಂಗ್ 11ನಲ್ಲಿ ಆಡಿಲ್ಲ ಎಂದ ಮಾತ್ರಕ್ಕೆ ಕಲಿಯುವುದು ಸಾಕಷ್ಟು ಇದೆ

ಬೆಂಚ್ ಕಾದರೂ ತಂಡದ ವಾತಾವರಣದ ಬಗ್ಗೆ ತಿಳಿಯುವುದು ತುಂಬಾ ಇದೆ

ಹೀಗೆ ಸೂರ್ಯವಂಶಿ ಆಡದೇ ಇದ್ದರೂ ಆತನಿಗೆ ಲಾಭವೇ ಇದೆ ಅನ್ನುವವರು ಇದ್ದಾರೆ. ಸೋ ಅಲ್ಲಿಗೆ ಬಾಸ್ ಬೇಬಿ ಡೆಬ್ಯೂ ವಿಚಾರದಲ್ಲಿ ಪರ-ವಿರೋಧದ ಎರಡೂ ಬ್ಯಾಟಿಂಗ್ ನಡೀತಿದೆ. ಇಷ್ಟೆಲ್ಲಾ ಡವಲಪ್​ಮೆಂಟ್​ಗಳ ಬಳಿಕ ಬಿಸಿಸಿಐ ಕೂಡ ಈ ಬಗ್ಗೆ ಮೌನ ಮುರಿದಿದೆ. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು, ವೈಭವ್ ಸೂರ್ಯವಂಶಿ ಅವರ ಭಾರತ ತಂಡದ ಪದಾರ್ಪಣೆ ನಿರ್ಧಾರವನ್ನ ನಾಯಕ ಶ್ರೇಯಸ್ ಅಯ್ಯರ್ ಮತ್ತು ಕೋಚ್ ಗೌತಮ್ ಗಂಭೀರ್ ತೆಗೆದುಕೊಳ್ಳಲಿದ್ದಾರೆ ಎಂದಿದ್ದಾರೆ. ಸೋ ಅಲ್ಲಿಗೆ ಸೂರ್ಯವಂಶಿ ಆಡ್ಬೇಕಾ ಬೇಡ್ವಾ ಅನ್ನೋದನ್ನ ಕೋಚ್ ಮತ್ತು ಕ್ಯಾಪ್ಟನ್ ಡಿಸೈಡ್ ಮಾಡ್ತಾರೆ.

Shantha Kumari

Leave a Reply

Your email address will not be published. Required fields are marked *