ವೈಭವ್ ಸಂಬಳ ₹4 ಕೋಟಿ? – ಕೋಟಿ ಕೋಟಿ ದುಡಿದ್ರೂ ಕೈಗೆ ಸಿಗಲ್ಲ?
ಸೂರ್ಯವಂಶಿ ದುಡ್ಡು ಎಲ್ಲಿ ಹೋಯ್ತು?

ವಂಡರ್ ಕಿಡ್ ವೈಭವ್ ಸೂರ್ಯವಂಶಿ.. ಕ್ರಿಕೆಟ್ ಲೋಕದಲ್ಲಿ ಈಗ ಬಾಸ್ ಬೇಬಿಯದ್ದೇ ಹವಾ. IPL ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಸೂರ್ಯವಂಶಿ ಕೇವಲ 15ನೇ ವಯಸ್ಸಿಗೆ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ರು. ಈ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಕ್ರಿಕೆಟ್ನಲ್ಲಿ ಸೈ ಎನಿಸಿಕೊಂಡಿರುವ ವೈಭವ್ ಈಗ ಬೇರೆ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ವೈಭವ್ ಆರ್ಥಿಕ ಗ್ರಾಫ್ ಭಾರಿ ಎತ್ತರಕ್ಕೆ ಜಿಗಿದಿದೆ. ಸಣ್ಣ ವಯಸ್ಸಿಗೆ ಕೋಟ್ಯಂತರ ರೂಪಾಯಿ ಗಳಿಸ್ತಾ ಇದ್ದಾರೆ. ಆದ್ರೆ ಇಷ್ಟೆಲ್ಲಾ ಸಂಪಾದನೆ ಮಾಡಿದ್ರು ವೈಭವ್ ಕೈಗೆ ಹಣ ಸಿಕ್ತಿಲ್ಲ.
ಇದನ್ನೂ ಓದಿ: ಅಗರ್ಕರ್ OUT? – ಹೊಸ CHIEF SELECTOR ಯಾರು?
ಕ್ರಿಕೆಟ್ ಲೋಕದಲ್ಲಿ ಸದ್ಯ ವೈಭವ್ ಸೂರ್ಯವಂಶಿಯದ್ದೇ ಹವಾ. ವೈಭವ್ ಕ್ರಿಕೆಟ್ ಪಯಣ ಇನ್ನೂ ಸ್ಟಾರ್ಟಿಂಗ್ ಸ್ಟೇಜ್ನಲ್ಲಿದ್ರೂ ಅವರು ಈಗಾಗಲೇ ಜಾಗತಿಕ ಕ್ರಿಕೆಟ್ ಲೋಕದಲ್ಲಿ ತನ್ನದೇ ಆದ ಖ್ಯಾತಿ ಗಳಿಸಿದ್ದಾರೆ. ಕೇವಲ 15 ವರ್ಷಕ್ಕೆ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡೋ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನ ಮುರಿದಿದ್ದಾರೆ. ಮೈದಾನದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ವೈಭವ್ ಈಗ ಜನಪ್ರಿಯ ಬ್ರ್ಯಾಂಡ್ಗಳ ಹಾಟ್ ಫೇವರಿಟ್ ಆಗಿದ್ದಾರೆ. ಈಗಾಗಲೇ ಜಾಹಿರಾತುಗಳ ಮೂಲಕ ಕೋಟಿ ಕೋಟಿ ಹಣ ಗಳಿಸುತ್ತಿದ್ದಾರೆ.
ವೈಭವ್ ಸೂರ್ಯವಂಶಿ ಈಗಾಗಲೇ ಎಸ್ಎಸ್ ಬ್ಯಾಟ್ಸ್, ಕಾಂಪ್ಲಾನ್, ಗೂಗಲ್ ಪೇ, ರೆಡ್ ಬುಲ್, ಜಾರ್ಖಂಡ್ ಆರೋಗ್ಯ ಇಲಾಖೆ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಇದೀಗ ವೈಭವ್ ಜೊತೆ ಇನ್ನೂ ಕೆಲ ಬ್ರ್ಯಾಂಡ್ಗಳು ದೀರ್ಘಕಾಲೀನ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಇನ್ನು ಕೆಲವು ಬ್ರ್ಯಾಂಡ್ಗಳು ಸೂಕ್ತ ಸಮಯಕ್ಕಾಗಿ ಕಾಯುತ್ತಿವೆ. ಈ ಬೆನ್ನಲ್ಲೇ ಸೂರ್ಯವಂಶಿ ತಮ್ಮ ಬ್ರ್ಯಾಂಡ್ ಎಂಡೋರ್ಸ್ಮೆಂಟ್ ಶುಲ್ಕವನ್ನು ಹೆಚ್ಚಿಸಿಕೊಂಡಿದ್ದಾರೆ. ಅಚ್ಚರಿಯ ವಿಷಯ ಏನೆಂದರೆ, ವೈಭವ್ಗೆ ಒಂದು ದಿನದ ಜಾಹೀರಾತು ಶೂಟ್ ಅಥವಾ ಬ್ರ್ಯಾಂಡ್ ಕಾರ್ಯಕ್ರಮಕ್ಕೆ ಸಿಗುವ ಮೊತ್ತ ಬರೋಬ್ಬರಿ ₹1.5 ಕೋಟಿಯಿಂದ ₹2 ಕೋಟಿ ಎಂದು ವರದಿಯಾಗಿದೆ.
ಹೌದು.. ಇತ್ತೀಚೆಗೆ ಒಂದು ಜಾಹೀರಾತಿಗೆ ಬರೋಬ್ಬರಿ 1 ಕೋಟಿ ರೂಪಾಯಿ ಚಾರ್ಜ್ ಮಾಡ್ತಾರೆ ವರದಿಯಾಗಿತ್ತು. ಆದ್ರೀಗ ವಂಡರ್ ಕಿಡ್ ಬ್ರ್ಯಾಂಡ್ ಮೌಲ್ಯ 1.5 ರಿಂದ 2 ಕೋಟಿ ರೂಪಾಯಿಗೆ ತಲುಪಿದೆ ಎಂದು ಹೇಳಲಾಗ್ತಿದೆ. ಸೂರ್ಯವಂಶಿ ಬೆಳವಣಿಗೆಯನ್ನು ನೋಡಿದ್ರೆ ಕ್ರಿಕೆಟ್ ಇತಿಹಾಸದಲ್ಲಿ ಯಾವೊಬ್ಬ ಸ್ಟಾರ್ ಆಟಗಾರ ಕೂಡ ಈ ಮಟ್ಟಿಗಿನ ಸಂಭಾವನೆಯನ್ನು ಪಡೆದಿಲ್ಲ. ಅದು ಇಷ್ಟು ಚಿಕ್ಕ ವಯಸ್ಸಿಗೆ. ವರದಿಯ ಪ್ರಕಾರ, ವೈಭವ್ ಸೂರ್ಯವಂಶಿಯ ಪ್ರದರ್ಶನ ಮತ್ತು ಫಾರ್ಮ್ ಮುಂದಿನ 2 ವರ್ಷಗಳ ಕಾಲ ಹೀಗೆಯೇ ಮುಂದುವರಿದ್ರೆ, ಅವರ ಬ್ರ್ಯಾಂಡ್ ಎಂಡೋರ್ಸ್ಮೆಂಟ್ ಮೌಲ್ಯ ಬರೋಬ್ಬರಿ 3ರಿಂದ 4 ಕೋಟಿಗೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಇನ್ನು ವೈಭವ್ ಕ್ರಿಕೆಟ್, ಜಾಹಿರಾತಿನಿಂದ ಕೋಟ್ಯಂತರ ರೂಪಾಯಿ ಸಂಪಾದನೆ ಮಾಡಿದ್ರೂ ಈ ಹಣ ಅವರ ಕೈಗೆ ಸಿಗಲ್ಲ. ಯಾಕಂದ್ರೆ ವೈಭವ್ ಮೈನರ್. ಈ ವಯಸ್ಸಿನಲ್ಲಿ ಅವರು ತಮ್ಮ ಹೆಸರಿನಲ್ಲಿ ಎಲ್ಲಾ ರೀತಿಯ ಕಾನೂನು ಒಪ್ಪಂದಗಳನ್ನು ಸ್ವತಂತ್ರವಾಗಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ಪೋಷಕರು ಪಾತ್ರ ಅಗತ್ಯ ಇರುತ್ತದೆ. ಹೀಗಾಗಿ ಸೂರ್ಯವಂಶಿ ಪೋಷಕರೇ ಬ್ರ್ಯಾಂಡ್ ಜಾಹೀರಾತುಗಳ ನಿರ್ವಹಣೆಯನ್ನು ಮಾಡ್ತಿದ್ದಾರೆ. ಇನ್ನು ಇವರಿಗೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಕೂಡ ಸಹಾಯ ಮಾಡ್ತಿದೆ.
ಒಟ್ಟಾರೆ ವೈಭವ್ ಸೂರ್ಯವಂಶಿ ತನಗೆ ಸಿಕ್ಕ ಅವಕಾಶವನ್ನು ಚೆನ್ನಾಗೇ ಸದುಪಯೋಗ ಪಡಿಸಿಕೊಂಡಿದ್ದಾರೆ. ಮೈದಾನದಲ್ಲಿ ಅದ್ಬುತ ಪ್ರದರ್ಶನ ನೀಡೋ ಮೂಲಕ, ತನ್ನ ಆದಾಯವನ್ನ ಕೂಡ ದುಪ್ಪಟ್ಟು ಮಾಡಿಕೊಳ್ಳುತ್ತಿದ್ದಾರೆ. ವಂಡರ್ ಕಿಡ್ ವೈಭವ್ ಕ್ರಿಕೆಟ್ ಲೋಕದಲ್ಲಿ ಇನ್ನಷ್ಟು ಸಾಧನೆ ಮಾಡಲಿ ಅನ್ನೋದೇ ಎಲ್ಲರ ಆಶಯ.

ನೋಡಿರಿ

