ವೈಭವ್ ಸೂರ್ಯವಂಶಿಗೆ ಬಂಪರ್ ಬಹುಮಾನ –50 ಲಕ್ಷ ರೂಪಾಯಿ ಚೆಕ್, ಟಾಟಾ ಕರ್ವ್ SUV ಕಾರು

ಅಂಡರ್-19 ವಿಶ್ವಕಪ್ ನಲ್ಲಿ ಕ್ರಿಕೆಟ್ ಜಗತ್ತನ್ನೇ ಬೆರಗಾಗಿಸಿದ ಟೀಮ್ ಇಂಡಿಯಾ ಸಿಡಿಲಮರಿ ವೈಭವ್ ಸೂರ್ಯವಂಶಿಯನ್ನು ಬಿಹಾರ ಸರ್ಕಾರ ಗೌರವಿಸಿದೆ. ಜೊತೆಗೆ ಬಂಪರ್ ಬಹುಮಾನ ನೀಡಿ ಸನ್ಮಾನಿಸಿದೆ.
ಇದನ್ನೂ ಓದಿ: ಬೆಂಗಳೂರು To ಮಡಗಾಂವ್ ವಂದೇಬಾರತ್ ರೈಲು ಉಡುಪಿ, ಮಂಗಳೂರಲ್ಲಿ ನಿಲ್ಲಲ್ಲ! – ಕರಾವಳಿಗೆ ಪದೇ ಪದೇ ಅನ್ಯಾಯ..?
ಅಂಡರ್-19 ವಿಶ್ವಕಪ್ ನಲ್ಲಿ ಫೈನಲ್‌ನಲ್ಲಿ ವೈಭವ್ ಸೂರ್ಯವಂಶಿಯ ಆಟವನ್ನು ಭಾರತ ಎಂದಿಗೂ ಮರೆಯುವುದಿಲ್ಲ. ಅಂದು ವೈಭವ್ ಸೂರ್ಯವಂಶಿ ಇಂಗ್ಲೆಂಡ್ ವಿರುದ್ಧ 80 ಎಸೆತಗಳಲ್ಲಿ175 ರನ್ ಸಿಡಿಸಿದ್ದರು. ಇದರಲ್ಲಿ 15 ಫೋರ್‌ಗಳು ಮತ್ತು 6 ಸಿಕ್ಸರ್ ಸಿಡಿಸಿದ್ದರು. ಕೇವಲ 55 ಎಸೆತಗಳಲ್ಲಿ ಶತಕ ಪೂರೈಸಿದ್ದವೈಭವ್ ಸೂರ್ಯವಂಶಿ ಹಲವಾರು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದರು. ಅಂಡರ್ 19 ವಿಶ್ವಕಪ್ ಇತಿಹಾಸದಲ್ಲೇ ಅತಿ ವೇಗದ ಶತಕವಾಗಿತ್ತು. ಬಿಹಾರದ ಸಮಸ್ತಿಪುರ ಜಿಲ್ಲೆಯ ತಾಜ್‌ಪುರ (ಮೋತಿಪುರ) ಗ್ರಾಮದಿಂದ ಬಂದ 14 ವರ್ಷದ ಕ್ರಿಕೆಟ್ ಪ್ರತಿಭೆ ವೈಭವ್ ಸೂರ್ಯವಂಶಿಗೆ ಬಿಹಾರ ಸರ್ಕಾರ ಬಹುಮಾನ ನೀಡಿ ಸನ್ಮಾನ ಮಾಡಿ ಗೌರವಿಸಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ₹50 ಲಕ್ಷ ರೂಪಾಯಿ ಚೆಕ್ ನೀಡಿ ಸನ್ಮಾನಿಸಿದ್ದಾರೆ. ಇದೇ ಸಂದರ್ಭದಲ್ಲಿ ಟಾಟಾ ಮೋಟಾರ್ಸ್ ಕಂಪನಿಯಿಂದ ಟಾಟಾ ಕರ್ವ್ ಎಸ್‌ಯುವಿ ಕಾರು ನೀಡಿದರು. ಸಿಎಂ ನಿವಾಸದ ಸಂಕಲ್ಪ ಸಭಾಗೃಹದಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಸಮ್ರಾಟ್ ಚೌಧರಿ, ಕ್ರೀಡಾ ಸಚಿವೆ ಶ್ರೇಯಸಿ ಸಿಂಗ್ ಉಪಸ್ಥಿತಿಯಲ್ಲಿದ್ದರು. ನಿತೀಶ್ ಕುಮಾರ್ ಅವರು ವೈಭವ್, “ನೀನು ಬಿಹಾರ್‌ಗೆ ಹೆಮ್ಮೆ ತಂದಿದ್ದೀಯಾ. ರಾಜ್ಯ ಮತ್ತು ದೇಶಕ್ಕಾಗಿ ಮುಂದೆಯೂ ಹೀಗೆ ಹೆಸರು ತರಬೇಕು. ಕ್ರೀಡಾ ಮೂಲಸೌಕರ್ಯಗಳನ್ನು ಇನ್ನಷ್ಟು ಬಲಪಡಿಸುತ್ತೇವೆ” ಎಂದು ಹೇಳಿದರು. ಈ ಮೂಲಕ ತನ್ನ ರಾಜ್ಯದ ಪ್ರತಿಭೆಯನ್ನು ಪ್ರೋತ್ಸಾಹಿಸಿದರು.
ವೈಭವ್ ಸೂರ್ಯವಂಶಿ ಮಾರ್ಚ್ 27, 2011 ರಂದು ಜನಿಸಿದರು. ತಂದೆ ಸಂಜೀವ್ ಸೂರ್ಯವಂಶಿ ಅವರೇ ಮೊದಲ ಕೋಚ್. 4 ವರ್ಷದಿಂದಲೇ ವೈಭವ್ ಕ್ರಿಕೆಟ್ ಆರಂಭಿಸಿದರು. ಮನೆಯ ಹಿಂದೆ ಚಿಕ್ಕ ಮೈದಾನ ಮಾಡಿ ತರಬೇತಿ ನೀಡಿದರು. 8 ವರ್ಷದ ನಂತರ ಪಟ್ನಾದ ಜೆನ್‌ನೆಕ್ಸ್ ಕ್ರಿಕೆಟ್ ಅಕಾಡೆಮಿಗೆ ಸೇರಿದರು. ಸಮಸ್ತಿಪುರದಿಂದ ಪಟ್ನಾಕ್ಕೆ 100 ಕಿ.ಮೀ. ಪ್ರತಿ ದಿನ ಬಸ್ ಹತ್ತಿ ಹೋಗುತ್ತಿದ್ದರು. ತಾಯಿ ಪ್ರತಿದಿನ ಬೆಳಿಗ್ಗೆ 4 ಗಂಟೆಗೇ ಎದ್ದು ಊಟ ತಯಾರಿಸುತ್ತಿದ್ದರು. ತಂದೆ ತಮ್ಮ ಭೂಮಿ ಮಾರಿ ಮಗನನ್ನು ಕ್ರಿಕೆಟರ್ ಮಾಡಿದ್ದು ಈಗ ಇತಿಹಾಸ.

ನೋಡಿರಿ

