ಈ ಸಲ ಸಂಜುನಾ.. ಸೂರ್ಯವಂಶಿನಾ – ಇಬ್ಬರೂ ಆಡಿದ್ರೆ ಬೌಲಿಂಗ್ ಫೇಲ್!
ಶ್ರೇಯಸ್, ಗಂಭೀರ್ ಪ್ಲ್ಯಾನ್ ಏನು?

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ನಾಲ್ಕನೇ ಪಂದ್ಯಕ್ಕೆ ಹೈದ್ರಾಬಾದ್ನ ರಾಜೀವ್ಗಾಂಧಿ ಸ್ಟೇಡಿಯಂ ಸಿದ್ಧವಾಗಿದೆ. ಪ್ಲೇಯರ್ಸ್ ಕೂಡ ರೀಚ್ ಆಗಿದ್ದು ಪ್ರಾಕ್ಟೀಸ್ ಸ್ಟಾರ್ಟ್ ಮಾಡಿದ್ದಾರೆ. ವಿಂಡೀಸ್ ಆಟಗಾರರು ಕಳೆದ ಪಂದ್ಯ ಸೋತಿರೋದ್ರಿಂದ ಕಂ ಬ್ಯಾಕ್ ಟಾರ್ಗೆಟ್ನಲ್ಲಿದ್ದಾರೆ. ಸೋ ಈ ಪಂದ್ಯದಲ್ಲಿ ಹೈವೋಲ್ಟೇಜ್ ಫೈಟ್ ಅಂತೂ ಪಕ್ಕಾ. ಆದ್ರಿಲ್ಲಿ ವಿಷ್ಯ ಏನಂದ್ರೆ ಟೀಂ ಇಂಡಿಯಾದಲ್ಲಿ ಓಪನರ್ಸ್ ಬಗ್ಗೆ ಮತ್ತೆ ಕನ್ಫ್ಯೂಷನ್ ಸ್ಟಾರ್ಟ್ ಆಗಿದೆ. ಸಂಜುನಾ ಸೂರ್ಯವಂಶಿನಾ ಅನ್ನೋ ವಾರ್ ನಡೀತಿದೆ. ಕೆಲವ್ರು ಸಂಜು ಬೆನ್ನಿಗೆ ನಿಂತ್ರೆ ಇನ್ನೂ ಕೆಲವ್ರು ಸೂರ್ಯವಂಶಿ ಆಡಿಸಿದ್ರೆ ಬೆಟರ್ ಅಂತಿದ್ದಾರೆ.
ಇದನ್ನೂ ಓದಿ : IND Vs WI ಸರಣಿಯಲ್ಲೂ ಮೋಸ! – ಫ್ಯಾನ್ಸ್ ಕ್ರೇಜ್ ಮುಂದಿಟ್ಟು SCAM
ಐದು ಪಂದ್ಯಗಳ ಟಿ-20ಐ ಸರಣಿಯಲ್ಲಿ ಸದ್ಯ ಭಾರತ 2-1 ಅಂತರದ ಲೀಡ್ನಲ್ಲಿದೆ. ಇನ್ನೆರಡು ಪಂದ್ಯಗಳು ಬಾಕಿ ಇದ್ದು ನಾಳಿನ ಪಂದ್ಯವೇ ಮೋಸ್ಟ್ ಇಂಪಾರ್ಟೆಂಟ್. ಯಾಕಂದ್ರೆ ಭಾರತ ನಾಲ್ಕನೇ ಪಂದ್ಯವನ್ನ ಗೆದ್ರೆ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಳ್ಳುತ್ತೆ. ಒಂದು ವೇಳೆ ವೆಸ್ಟ್ ಇಂಡೀಸ್ ಗೆದ್ರೆ ಸರಣಿ ಈಕ್ವಲ್ ಆಗಲಿದೆ. ಕೊನೇ ಪಂದ್ಯ ಸರಣಿ ಡಿಸೈಡರ್ ಆಗಲಿದ್ದು, ಐದನೇ ಪಂದ್ಯದಲ್ಲಿ ಎರಡೂ ತಂಡಗಳು ಪ್ರೆಶರ್ನಲ್ಲಿ ಸಿಲುಕಲಿವೆ. ಌಂಡ್ ರಿಸಲ್ಟ್ ಏನ್ ಬೇಕಾದ್ರೂ ಆಗ್ಬೋದು. ಹೀಗಾಗಿ ಬುಧವಾರದ ಪಂದ್ಯದಲ್ಲೇ ಗೆದ್ದು ಸರಣಿಯನ್ನ ಗೆಲ್ಲೋದು ಭಾರತದ ಅತಿದೊಡ್ಡ ಟಾಸ್ಕ್. ಇದಕ್ಕಾಗಿ ಬಲಿಷ್ಠ ಪ್ಲೇಯಿಂಗ್ 11ನ್ನೇ ಕಣಕ್ಕಿಳಿಸಬೇಕು. ಆದ್ರೆ ಸದ್ಯಕ್ಕೆ ಮ್ಯಾನೇಜ್ಮೆಂಟ್ ಮುಂದಿರೋ ಅತಿದೊಡ್ಡ ಪ್ರಶ್ನೆಯೇ ಸಂಜುನಾ.. ಸೂರ್ಯವಂಶಿನಾ ಅನ್ನೋದು.
ಸಂಜು ಸ್ಟ್ರಗಲ್.. ಸೂರ್ಯವಂಶಿ ಬೆನ್ನಿಗೆ ನಿಂದ ಕ್ರಿಕೆಟರ್ಸ್!
ಭಾರತದ ಪರ ಅಭಿಷೇಕ್ ಶರ್ಮಾ ಜೊತೆ ಸಂಜು ಸ್ಯಾಮ್ಸನ್ ಇನ್ನಿಂಗ್ಸ್ ಆರಂಭ ಮಾಡ್ತಿದ್ರೂ ಸಂಜು ಇನ್ಕನ್ಸಿಸ್ಟೆನ್ಸಿಯೇ ತಂಡಕ್ಕೆ ದೊಡ್ಡ ತಲೆಬಿಸಿಯಾಗಿದೆ. ಸಾಲು ಸಾಲು ಪಂದ್ಯಗಳಲ್ಲಿ ಅವ್ರ ಕಡೆಯಿಂದ ಸಪೋರ್ಟಿವ್ ಇನ್ನಿಂಗ್ಸ್ ಬರ್ತಿಲ್ಲ. ಬಂದ್ರೂ ಒಂದೆರಡು ಮ್ಯಾಚಲ್ಲಿ ಆಡಿ ಮತ್ತೆ ಸೈಲೆಂಟ್ ಆಗ್ತಿರೋದೇ ತಂಡಕ್ಕೆ ತಲೆಬಿಸಿ ತಂದಿದೆ. ಇದೇ ಕಾರಣಕ್ಕೆ ವಿಂಡೀಸ್ ವಿರುದ್ಧದ ಮುಂದಿನ ಪಂದ್ಯದಲ್ಲಿ ವೈಭವ್ ಸೂರ್ಯವಂಶಿಯನ್ನ ಆಡಿಸುವಂತೆ ಪ್ರೆಶರ್ ಜಾಸ್ತಿಯಾಗ್ತಿದೆ. ವೈಭವ್ ಸೂರ್ಯವಂಶಿಯನ್ನ ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಸೇರಿಸಿಕೊಳ್ಳಬೇಕು ಎಂದು ಭಾರತದ ಮಾಜಿ ಸಹಾಯಕ ಕೋಚ್ ಅಭಿಷೇಕ್ ನಾಯರ್ ಬ್ಯಾಟ್ ಬೀಸಿದ್ದಾರೆ. ಸರಣಿಯಲ್ಲಿ ಇದುವರೆಗೆ ಆಡುವ ಅವಕಾಶ ಸಿಕ್ಕಿಲ್ಲ. ನಾಲ್ಕನೇ ಪಂದ್ಯದಲ್ಲೂ ಅವಕಾಶ ಸಿಗದೇ ಇದ್ರೆ ಭಾರತವು ಸರಣಿಯಲ್ಲಿ 3-1 ಅಂತರದ ಮುನ್ನಡೆ ಸಾಧಿಸಬೇಕು ಮತ್ತು ಅಂತಿಮ ಪಂದ್ಯದಲ್ಲಿ ಸೂರ್ಯವಂಶಿ ಆಡಬೇಕು ಎಂದಿದ್ದಾರೆ. ಹಾಗೇ ಮಾಜಿ ಕ್ರಿಕೆಟಿಗ ಆರ್.ಅಶ್ವಿನ್ ಕೂಡ ವೈಭವ್ ಪರವೇ ಮಾತನಾಡಿದ್ದಾರೆ. ಸೂರ್ಯವಂಶಿ ಅವರ ಬಾಲ್ಯದ ತರಬೇತುದಾರ ಮನೀಶ್ ಓಜಾ ಕೂಡ ಈ ವಿಚಾರದಲ್ಲಿ ಗೌತಮ್ ಗಂಭೀರ್ ನೇತೃತ್ವದ ತಂಡದ ನಿರ್ವಹಣೆಯ ವಿರುದ್ಧ ವಾಗ್ದಾಳಿ ನಡೆಸಿದರು. ಇದೊಂದು ರೀತಿಯ ಡಿಕ್ಟೇಟರ್ಶಿಪ್ ಅಂತಾ ಕಿಡಿ ಕಾರಿದ್ದಾರೆ.
ಸಂಜುನಾ.. ಸೂರ್ಯವಂಶಿನಾ?
ಸಂಜು ಸ್ಯಾಮ್ಸನ್ ಬ್ಯಾಟಿಂಗ್ ನಲ್ಲಿ ಕನ್ಸಿಸ್ಟೆನ್ಸಿ ಪ್ರದರ್ಶನ ಇಲ್ಲದ್ದೇ ಗೊಂದಲ
ಅನುಭವಿ ಸಂಜುರನ್ನ ತಂಡದಿಂದ ಹೊರಗಿಡೋಕೆ ಬಿಸಿಸಿಐ ರೆಡಿ ಇಲ್ಲ
ಅಭಿಷೇಕ್, ಸೂರ್ಯವಂಶಿ & ಸಂಜು ಮೂವರನ್ನೂ ಆಡಿಸೋದು ಕಷ್ಟ
ಟಾಪ್ 6ವರೆಗೂ ಬ್ಯಾಟಿಂಗ್ ಪಿಕ್ ಮಾಡಿದ್ರೆ ಬೌಲಿಂಗ್ ಆಪ್ಶನ್ಸ್ ಕಡಿಮೆ
ಈಗಾಗ್ಲೇ ಭಾರತದ ಪರ ಬೌಲರ್ಸ್ ದುಬಾರಿ ಇರೋದ್ರಿಂದ ಇದೂ ಕಷ್ಟವೇ
ಹೀಗೆ ಅನುಭವಿ ಸಂಜು ಸ್ಯಾಮ್ಸನ್ ಮತ್ತು ಯಂಗ್ ಸ್ಟರ್ ವೈಭವ್ ಸೂರ್ಯವಂಶಿ ಆಯ್ಕೆ ವಿಚಾರದಲ್ಲಿ ಬಿಸಿಸಿಐಗೆ ಕನ್ಫ್ಯೂಷನ್ಸ್ ಅಂತೂ ಇದ್ದೇ ಇದೆ. ಆದ್ರೆ ಮ್ಯಾನೇಜ್ಮೆಂಟ್ನ ಫಸ್ಟ್ ಪ್ರಿಯಾರಿಟಿ ಸಂಜುನೇ ಆಗಿರೋದ್ರಿಂದ ನಾಲ್ಕನೇ ಮ್ಯಾಚಲ್ಲೂ ಸಂಜುನೇ ಅವಕಾಶ ಪಡೆಯಬಹುದು.
ಹೇಗಿರುತ್ತೆ ಪ್ಲೇಯಿಂಗ್ 11
ಸಂಜು ಸ್ಯಾಮ್ಸನ್
ಅಭಿಷೇಕ್ ಶರ್ಮಾ
ಇಶಾನ್ ಕಿಶನ್
ಶ್ರೇಯಸ್ ಅಯ್ಯರ್
ತಿಲಕ್ ವರ್ಮಾ
ನಮನ್ ಧೀರ್
ನಿತೀಶ್ ಕುಮಾರ್ ರೆಡ್ಡಿ
ಅಕ್ಷರ್ ಪಟೇಲ್
ಕುಲ್ದೀಪ್ ಯಾದವ್
ಅರ್ಶದೀಪ್ ಸಿಂಗ್
ಮಯಾಂಕ್ ಯಾದವ್

ನೋಡಿರಿ

