ಕಿಶನ್ ಬಂದ್ರೆ ವೈಭವ್ ಗಿಲ್ಲ ಜಾಗ – 4ನೇ ಪಂದ್ಯಕ್ಕೆ ಸೂರ್ಯವಂಶಿ ಔಟ್
ಗಂಭೀರ್ ಮುಂದಿರೋ ದಾರಿಗಳೇನು?

ಕಿಶನ್ ಬಂದ್ರೆ ವೈಭವ್ ಗಿಲ್ಲ ಜಾಗ – 4ನೇ ಪಂದ್ಯಕ್ಕೆ ಸೂರ್ಯವಂಶಿ ಔಟ್ಗಂಭೀರ್ ಮುಂದಿರೋ ದಾರಿಗಳೇನು?

ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ-20ಐನಲ್ಲಿ ಭಾರತ ಭರ್ಜರಿಯಾಗಿ ಗೆದ್ದು ಇತಿಹಾಸ ನಿರ್ಮಿಸಿದೆ. 199 ರನ್​ಗಳ ಟಾರ್ಗೆಟ್​ನ ಇನ್ನೂ 40 ಎಸೆತಗಳು ಬಾಕಿ ಇರುವಾಗ್ಲೇ ಗೆಲ್ಲೋದಂದ್ರೆ ಈಸಿ ಅಲ್ವೇ ಅಲ್ಲ. ಈ ಸಾಧನೆಗೆ ಮುಖ್ಯ ಕಾರಣನೇ ಅಭಿಷೇಕ್ ಶರ್ಮಾ ಸುನಾಮಿ.. ಹಾಗೇ ವೈಭವ್ ಸೂರ್ಯವಂಶಿಯ ಸುಂಟರಗಾಳಿ ಬ್ಯಾಟಿಂಗ್. ಇವ್ರಿಬ್ಬರ ಬ್ಯಾಟಿಂಗ್ ಆರ್ಭಟಕ್ಕೆ ಪವರ್ ಪ್ಲೇನಲ್ಲೇ ಭಾರತ ಆಲ್ಮೋಸ್ಟ್ ಮ್ಯಾಚ್ ಗೆದ್ದಾಗಿತ್ತು.  ಹೀಗಾಗಿ ನಾಲ್ಕನೇ ಪಂದ್ಯಕ್ಕೆ ಕ್ರಿಕೆಟ್ ಜಗತ್ತೇ ಫುಲ್ ಎಕ್ಸೈಟ್ ಆಗಿದೆ. ಟಿಕೆಟ್ಸ್ ಕೂಡ ಕಂಪ್ಲೀಟ್ ಸೋಲ್ಡ್​​ಔಟ್. ಆದ್ರೆ ನಾಲ್ಕನೇ ಪಂದ್ಯಕ್ಕೆ ಭಾರತದ ಪರ ವಂಡರ್ ಬಾಯ್ ವೈಭವ್ ಸೂರ್ಯವಂಶಿ ಆಡೋದು ಡೌಟ್ ಇದೆ.

ಇದನ್ನೂ ಓದಿ : ಭಾರತದ ಗೆಲುವು ಕಸಿದ ಬ್ಯಾಡ್‌ಲೈಟ್ – RCB ಬೆಸ್ಟ್ ಟೀಂ ಎಂದ ಧೋನಿ

5 ಪಂದ್ಯಗಳ ಸರಣಿಯನ್ನ ಭಾರತ ಆಲ್ರೆಡಿ ಮೂರು ಪಂದ್ಯಗಳಲ್ಲಿ ಗೆದ್ದು ಸರಣಿ ಕೈವಶ ಮಾಡ್ಕೊಂಡಿದೆ. ಆದ್ರೂ ಉಳಿದಿರೋ ಪಂದ್ಯಗಳ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ. ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆಯಲಿರುವ 4ನೇ ಟಿ20 ಪಂದ್ಯದ ಎಲ್ಲಾ ಟಿಕೆಟ್‌ಗಳು ಕಂಪ್ಲೀಟ್ ಸೋಲ್ಡ್ ಔಟ್ ಆಗಿವೆ. ಅಕ್ಟೋಬರ್ 30 ಅಂದ್ರೆ ಶುಕ್ರವಾರದ ಪಂದ್ಯಕ್ಕಾಗಿ ಕೇವಲ 27 ನಿಮಿಷಗಳಲ್ಲಿ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ. 40,000 ಪ್ರೇಕ್ಷಕರ ಸಾಮರ್ಥ್ಯದ ಈ ಸ್ಟೇಡಿಯಂನ ಎಲ್ಲಾ ಟಿಕೆಟ್ಸ್ ಸೋಲ್ಡ್ ಔಟ್ ಆಗಿರೋ ಬಗ್ಗೆ ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ ಅಧಿಕೃತವಾಗಿ ಅನೌನ್ಸ್ ಮಾಡಿದೆ. ಌಂಡ್ 2015ರ ವಿಶ್ವಕಪ್ ಸೆಮಿಫೈನಲ್ ಪಂದ್ಯದ ಬಳಿಕ ಈ ಐತಿಹಾಸಿಕ ಮೈದಾನದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಟಿಕೆಟ್ಸ್ ಮಾರಾಟವಾಗಿರೋದು ಇದೇ ಫಸ್ಟ್ ಟೈಂ. ಅಷ್ಟೇ ಅಲ್ಲ ಹೆಚ್ಚುವರಿ ಸೀಟ್​ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ನಾಲ್ಕನೇ ಪಂದ್ಯದ ಟಿಕೆಟ್ಸ್​ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದ್ದಿದ್ರಿಂದ ಈಡನ್ ಪಾರ್ಕ್ ಕ್ರೀಡಾಂಗಣದ 6ನೇ ಹಂತದ ಆಸನಗಳನ್ನು ಬಳಸಿಕೊಳ್ಳಲಾಗ್ತಿದೆ. 2019ರ ಭಾರತ ಪ್ರವಾಸದ ಬಳಿಕ ಮೊದಲ ಬಾರಿಗೆ ಈ ಹಂತವನ್ನು ತೆರೆಯಲಾಗುತ್ತಿದೆ ಅಂದ್ರೆ ಲೆಕ್ಕ ಹಾಕಿ ಇನ್ನೆಷ್ಟರ ಮಟ್ಟಿಗೆ ಕ್ರೇಜ್ ಜಾಸ್ತಿಯಾಗಿರಬಹುದು ಅನ್ನೋದನ್ನ. ಇದು ಮೈದಾನದ ಇತಿಹಾಸದಲ್ಲಿ ಮೂರನೇ ಅತಿ ದೊಡ್ಡ ಹಾಜರಾತಿಯಾಗಲಿದೆ. ಭಾನುವಾರ ಸೆಡ್ಡನ್ ಪಾರ್ಕ್‌ನಲ್ಲಿ ನಡೆಯಲಿರುವ ಸರಣಿಯ ಐದನೇ ಮತ್ತು ಅಂತಿಮ ಪಂದ್ಯದ ಟಿಕೆಟ್‌ಗಳು ಸಹ ಮಾರಾಟವಾಗಿವೆ. ಹೀಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಫ್ಯಾನ್ಸ್ ಬರೋಕೆ ಕಾರಣನೇ ಕಳೆದ ಪಂದ್ಯದಲ್ಲಿ ಅಭಿಷೇಕ್ ಶರ್ಮಾರ ಅಬ್ಬರ. ಌಂಡ್ 15 ವರ್ಷದ ವೈಭವ್ ಸೂರ್ಯವಂಶಿ ಆಟ ನೋಡೋಕೆ. ಆದ್ರೆ ನಾಲ್ಕನೇ ಪಂದ್ಯದಲ್ಲಿ ವೈಭವ್ ಆಡೋದೇ ಡೌಟ್ ಇದೆ.

ಕಿಶನ್ ಕಂ ಬ್ಯಾಕ್.. ವೈಭವ್ ಸೂರ್ಯವಂಶಿಗಿಲ್ಲ ಸ್ಲಾಟ್!

ಮೂರನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಫಸ್ಟ್ ಓವರ್​ನಿಂದಲೇ ನ್ಯೂಜಿಲೆಂಡ್​ಗೆ ನಡುಕ ಹುಟ್ಟಿಸಿದ್ರು. ಕೇವಲ 5 ಓವರ್‌ಗಳಲ್ಲಿ 100 ರನ್ ಗಳಿಸಿದರು. ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಕೂಡ ಅದ್ಭುತವಾಗಿದ್ದು 19 ಎಸೆತಗಳಲ್ಲಿ 45 ರನ್ ಗಳಿಸಿದರು. ಮೊದಲ ವಿಕೆಟ್‌ಗೆ 133 ರನ್ ಸೇರಿಸುವ ಮೂಲಕ ಭಾರತವು ಕೇವಲ 13.2 ಓವರ್‌ಗಳಲ್ಲಿ ಟಾರ್ಗೆಟ್ ರೀಚ್ ಆಗೋಕೆ ಕಾರಣರಾಗಿದ್ರು. ಆದ್ರೀಗ ನಾಲ್ಕನೇ ಪಂದ್ಯದಿಂದ ಸೂರ್ಯವಂಶಿ ಹೊರಗುಳಿಯೋ ಸಾಧ್ಯತೆಗಳು ಜಾಸ್ತಿ ಇದೆ.

ಸೂರ್ಯವಂಶಿಗಿಲ್ಲ ಚಾನ್ಸ್?

ಇಶಾನ್ ಕಿಶನ್ ಇಂಜುರಿ ಕಾರಣಕ್ಕೆ 2 & 3ನೇ ಪಂದ್ಯದಲ್ಲಿ ಚಾನ್ಸ್

ಇಂಜುರಿಯಿಂದ ರಿಕವರ್ ಆಗಿರೋ ಕಿಶನ್.. 4ನೇ ಪಂದ್ಯಕ್ಕೆ ಕಂ ಬ್ಯಾಕ್

ಕಿಶನ್ ಬಂದ್ರೆ ಸೂರ್ಯವಂಶಿ ಪ್ಲೇಯಿಂಗ್ 11ನಿಂದ ಬಿಡಬೇಕಾದ ಪರಿಸ್ಥಿತಿ

ಸೂರ್ಯವಂಶಿಗಾಗಿ ತಂಡದಲ್ಲಿ ಟಾಪ್-5 ಬ್ಯಾಟರ್ಸ್ ಕೈಬಿಡೋದು ಕಷ್ಟ

ಏಷ್ಯನ್ ಗೇಮ್ಸ್ ರೀತಿ ನಂಬರ್ 6ವರೆಗೂ ಬ್ಯಾಟರ್ಸ್ ಪಿಕ್ ಮಾಡಿದ್ರೂ ಕಷ್ಟ

ಕೇವಲ ಐವರು ಮಾತ್ರವೇ ಬೌಲರ್ಸ್ ಆಗ್ತಾರೆ.. ಚೇಂಜಸ್ ಮಾಡೋಕಾಗಲ್ಲ

ವೈಭವ್ ಆಯ್ಕೆ ವಿಚಾರದಲ್ಲಿ ಇಕ್ಕಟ್ಟಿಗೆ ಸಿಲುಕಿದ ಕೋಚ್ ಗೌತಮ್ ಗಂಭೀರ್

ಇಷ್ಟೆಲ್ಲಾ ಕನ್ಫ್ಯೂಷನ್ಸ್ ಇದ್ರೂ ವೈಭವ್ ಸೂರ್ಯವಂಶಿಯನ್ನ ಆಡಿಸೋಕೆ ಮ್ಯಾನೇಜ್​ಮೆಂಟ್ ಮುಂದೆ ಒಂದು ದಾರಿ ಇದೆ. ಆಲ್ರೆಡಿ ಭಾರತ ಸರಣಿಯನ್ನ ಗೆದ್ದಾಗಿದೆ. ಸೋ ಇಶಾನ್ ಕಿಶನ್ ರಿಕವರಿ ಆಗಿದ್ರೂ ಆಲ್ರೆಡಿ ಸರಣಿ ಗೆದ್ದಿರುವುದರಿಂದ ರೆಸ್ಟ್ ನೀಡಿ ವೈಭವ್‌ಗೆ ನಾಲ್ಕನೇ ಪಂದ್ಯದಲ್ಲೂ ಇನ್ನೊಂದು ಅವಕಾಶ ನೀಡಬಹುದು. ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ರಂತ ಕೆಲ ಕ್ರಿಕೆಟ್ ಎಕ್ಸ್​ಪರ್ಟ್ಸ್ ಕೂಡ ಈ ಬಗ್ಗೆ ಮಾತನಾಡಿದ್ದಾರೆ.  ಇಶಾನ್ ಕಿಶನ್ ವಾಪಸ್ ಆದ್ರೆ  ವೈಭವ್ ಕಾಯಬೇಕಾಗಬಹುದು ಎಂದಿದ್ದಾರೆ. ಆದ್ರೆ ವೈಭವ್ ಮತ್ತು ಅಭಿಷೇಕ್ ಕಾಂಬಿನೇಷನ್ ಚೆನ್ನಾಗಿ ವರ್ಕ್ ಆಗಿದ್ರಿಂದ ಗೌತಮ್ ಗಂಭೀರ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಯಾವ ನಿರ್ಧಾರ ಕೈಗೊಳ್ತಾರೆ ಅನ್ನೋದೇ ಇಲ್ಲಿರೋ ಪ್ರಶ್ನೆ.

Shantha Kumari

Leave a Reply

Your email address will not be published. Required fields are marked *