ಜೆರ್ಸಿ ನಂಬರ್ ಮುಚ್ಚಿಕೊಂಡು ಆಡಿದ ವೈಭವ್ – ಸೂರ್ಯವಂಶಿಗೆ ‘3’ ಸಂಖ್ಯೆ ಲಕ್ಕಿನಾ?

ಜೆರ್ಸಿ ನಂಬರ್ ಮುಚ್ಚಿಕೊಂಡು ಆಡಿದ ವೈಭವ್  – ಸೂರ್ಯವಂಶಿಗೆ ‘3’ ಸಂಖ್ಯೆ ಲಕ್ಕಿನಾ?

ವಂಡರ್ ಕಿಡ್, ಬೇಬಿ ಬಾಸ್ ವೈಭವ್ ಸೂರ್ಯವಂಶಿ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಚೊಚ್ಚಲ ಪಂದ್ಯಕ್ಕೆ ಕಣಕ್ಕಿಳಿದಿದ್ದಾರೆ. ಆದರೆ, ಈ ಚೊಚ್ಚಲ ಪಂದ್ಯದಲ್ಲಿ ವೈಭವ್ ಜರ್ಸಿ ಸಂಖ್ಯೆಯನ್ನು ಮುಚ್ಚಿಕೊಂಡಿದ್ದೇ ದೊಡ್ಡ ಸುದ್ದಿಯಾಗಿದೆ.

ಇದನ್ನೂ ಓದಿ:2 ಪಂದ್ಯ.. 2 ಶತಕ – ನಂ.3ಗೆ ನಾನಿದ್ದೇನೆಂದ DDP

ಈಸ್ಟ್ ಝೋನ್ ಮತ್ತು ನಾರ್ತ್ ಈಸ್ಟ್ ಝೋನ್ ನಡುವಿನ ದುಲೀಪ್ ಟ್ರೋಫಿ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಬೇಬಿ ಬಾಸ್ ವೈಭವ್ ಸೂರ್ಯವಂಶಿ ಕಣಕ್ಕಿಳಿದಿದ್ದರು. ಕೇವಲ 8 ರನ್‌ಗಳಿಗೆ ಔಟ್ ಆಗುವ ಮೂಲಕ ಸೂರ್ಯವಂಶಿ ತಮ್ಮ ಪದಾರ್ಪಣೆ ಪಂದ್ಯದಲ್ಲಿ ವಿಫಲರಾಗಿ ನಿರಾಸೆ ಮೂಡಿಸಿದರು. ಉಪನಾಯಕರಾಗಿ ಕಣಕ್ಕಿಳಿದ ಸೂರ್ಯವಂಶಿ ಇದೀಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಸೂರ್ಯವಂಶಿ ಪೆವಿಲಿಯನ್‌ಗೆ ಮರಳುವಾಗ ಎಲ್ಲರ ಕಣ್ಣು ಅವರ ಜೆರ್ಸಿ ಸಂಖ್ಯೆಯ ಮೇಲೆ ಬಿದ್ದಿದೆ. ವೈಭವ್ ಅವರ ಜೆರ್ಸಿ ನಂಬರ್ ನಲ್ಲಿ ಅರ್ಧ ಭಾಗವನ್ನು ಟೇಪ್‌ನಿಂದ ಮುಚ್ಚಲಾಗಿತ್ತು. ಸೂರ್ಯವಂಶಿಯವರ ಜರ್ಸಿಯಲ್ಲಿನ ಒಂದು ಸಂಖ್ಯೆಯ ಮೇಲೆ ಟೇಪ್ ಅಂಟಿಸಲಾಗಿದ್ದು, ಅದರಲ್ಲಿ ಕೇವಲ 3 ಸಂಖ್ಯೆ ಮಾತ್ರ ಕಾಣುವಂತಿತ್ತು.

ವೈಭವ್ ಜೆರ್ಸಿ ನಂಬರ್ ಮೇಲೆ ಟೇಪ್ ಅಂಟಿಸಲು ಕಾರಣ ಏನು ಅನ್ನೋ ವಿಚಾರ ಚರ್ಚೆಗೆ ಎಡೆಮಾಡಿಕೊಟ್ಟಿದೆ. ತನ್ನ ಜೆರ್ಸಿ ನಂಬರ್ 3 ಆಗಿಯೇ ಉಳಿಯಬೇಕು ಅನ್ನೋ ಉದ್ದೇಶದಿಂದಲೇ ಮತ್ತೊಂದು ನಂಬರ್‌ಗೆ ಟೇಪ್ ಹಾಕಿ ಮುಚ್ಚಿರಬಹುದು ಎಂದು ಹೇಳಲಾಗುತ್ತಿದೆ.IPL ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಸೂರ್ಯವಂಶಿ ಧರಿಸುವ ಜೆರ್ಸಿ ಸಂಖ್ಯೆ ‘3’ ಆಗಿದೆ. ಇದೀಗ ದುಲೀಪ್ ಟ್ರೋಫಿ ಜೆರ್ಸಿಯ ಮೇಲೂ 3 ಸಂಖ್ಯೆಯೇ ಇರಲಿ ಎಂದು ಮತ್ತೊಂದು ನಂಬರ್ ಮೇಲೆ ಟೇಪ್ ಅಂಟಿಸಿರಬಹುದು ಎಂದು ಹೇಳಲಾಗಿದೆ.

Sulekha

Leave a Reply

Your email address will not be published. Required fields are marked *