RCB Vs MI ಫಸ್ಟ್ ಫೈಟ್ – ಬೆಂಗಳೂರಿಗೆ ಹೇಗಿದೆ ಶೆಡ್ಯೂಲ್?
ಈ ಸಲನೂ ಕಪ್ ನಮ್ದೇನಾ?

ಭಾರತೀಯರಿಗೆ ಇಯರ್ ಎಂಡಿಂಗ್ ಅಂದ್ರೆ ನೆಕ್ಸ್ಟ್ ಡಬ್ಲ್ಯೂಪಿಎಲ್ ಮತ್ತು ಐಪಿಎಲ್ ಶುರುವಾಗುತ್ತೆ ಅನ್ನೋ ಖುಷಿ ಶುರುವಾಗುತ್ತೆ. ಆಲ್ರೆಡಿ ವುಮೆನ್ಸ್ ಪ್ರೀಮಿಯರ್ ಲೀಗ್ಗೆ ಮಿನಿ ಆಕ್ಷನ್ ಎಲ್ಲಾ ಮುಗ್ದು ಟೀಮ್ಗಳು ಫೈನಲ್ ಆಗಿದ್ವು. ಈಗ ಪಂದ್ಯಗಳ ಶೆಡ್ಯೂಲ್ ಕೂಡ ಅನೌನ್ಸ್ ಆಗಿದೆ. ಫಸ್ಟ್ ಮ್ಯಾಚಲ್ಲೇ ಹಾಲಿ-ಮಾಜಿ ಚಾಂಪಿಯನ್ಸ್ ನಡುವೆ ಫೈಟ್ ಫಿಕ್ಸ್ ಆಗಿದೆ. ಆರ್ಸಿಬಿಗೆ ಮುಂಬೈ ಸವಾಲ್ ಹಾಕಲಿದೆ.
ಇದನ್ನೂ ಓದಿ : ODIಗೆ ಪಾಟಿದಾರ್ .. ರಿಂಕು ಫಿನಿಶರ್ – PAKಗೆ ಅಭಿ-ವೈಭವ್ ಚಾಲೆಂಜ್
ಸತತ ನಾಲ್ಕು ಆವೃತ್ತಿಗಳಲ್ಲೂ ವರ್ಷದಿಂದ ವರ್ಷಕ್ಕೆ ಕ್ರೇಜ್ ಹೆಚ್ಚಿಸಿರೋ ವುಮೆನ್ಸ್ ಪ್ರೀಮಿಯರ್ ಲೀಗ್ 5ನೇ ಆವೃತ್ತಿಗೆ ಶೆಡ್ಯೂಲ್ ಔಟ್ ಆಗಿದೆ. 2027ರ ಜನವರಿ 14 ರಿಂದ ಟೂರ್ನಿ ಆರಂಭವಾಗಲಿದ್ದು ಫೆಬ್ರವರಿ 7ಕ್ಕೆ ಫೈನಲ್ ಫೈಟ್ ಮೂಲಕ ಟೂರ್ನಿ ಎಂಡ್ ಆಗಲಿದೆ. ಌಂಡ್ ಈ ಬಾರಿಯ ಆವೃತ್ತಿಯಲ್ಲಿ ಸಾಕಷ್ಟು ಟ್ವಿಸ್ಟ್ ಕೂಡ ಇದೆ.
ವಡೋದರಾ ಮತ್ತು ಮುಂಬೈನಲ್ಲಿ ನಡೆಯಲಿವೆ ಎಲ್ಲಾ ಪಂದ್ಯ!
2027ರ ಟೂರ್ನಿಗೆ ವಡೋದರಾ ಮತ್ತು ಮುಂಬೈನಲ್ಲಿ ಪಂದ್ಯಗಳನ್ನ ನಡೆಸಲಾಗುತ್ತೆ. ಎರಡೂ ಕಡೆ ತಲಾ 11 ಪಂದ್ಯಗಳು ನಡೆಯಲಿವೆ. ವಡೋದರಾದಲ್ಲಿ ಜನವರಿ 14ಕ್ಕೆ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಜನವರಿ 24ರವರೆಗೆ ಇಲ್ಲಿ ಪಂದ್ಯಗಳು ನಡೆಯಲಿದ್ದು, ಉಳಿದ ಪಂದ್ಯಗಳು ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದ ಬ್ರಬೋರ್ನ್ ಸ್ಟೇಡಿಯಮ್ನಲ್ಲಿ ನಡೆಯಲಿವೆ. ಜನವರಿ 26ರಿಂದ ಎರಡನೇ ಮೈದಾದಲ್ಲಿ ಪಂದ್ಯಗಳು ಸ್ಟಾರ್ಟ್ ಆಗಲಿದ್ದು ಫೆಬ್ರವರಿ 7ಕ್ಕೆ ಫೈನಲ್ ಫೈಟ್ ಇದೆ.
ಆರ್ ಸಿಬಿಗೆ ಲೀಗ್ ನಲ್ಲಿ 8 ಪಂದ್ಯ!
ದಿನಾಂಕ ಎದುರಾಳಿ
ಜನವರಿ 14 ಮುಂಬೈ ಇಂಡಿಯನ್ಸ್
ಜನವರಿ 16 ಡೆಲ್ಲಿ ಕ್ಯಾಪಿಟಲ್ಸ್
ಜನವರಿ 19 ಯುಪಿ ವಾರಿಯರ್ಸ್
ಜನವರಿ 22 ಗುಜರಾತ್ ಜೈಂಟ್ಸ್
ಜನವರಿ 26 ಮುಂಬೈ ಇಂಡಿಯನ್ಸ್
ಜನವರಿ 29 ಡೆಲ್ಲಿ ಕ್ಯಾಪಿಟಲ್ಸ್
ಜನವರಿ 31 ಯುಪಿ ವಾರಿಯರ್ಸ್
ಫೆಬ್ರವರಿ 2 ಗುಜರಾತ್ ಜೈಂಟ್ಸ್
ಎಲ್ಲಾ ತಂಡಗಳ ವಿರುದ್ಧ ಎರಡೆರಡು ಪಂದ್ಯಗಳನ್ನ ಆರ್ಸಿಬಿ ಆಡಲಿದೆ. ಲಾಸ್ಟ್ ಸೀಸನ್ನಲ್ಲಿ ಗೆದ್ದು ಹಾಲಿ ಚಾಂಪಿಯನ್ಸ್ ಆಗಿರೋ ಬೆಂಗಳೂರು ಈ ಸಲವೂ ಟ್ರೋಫಿ ಗೆಲ್ಲೋ ಫೇವರೆಟ್ ಟೀಮ್ನಲ್ಲಿ ಕಾಣ್ತಿದೆ. ಆಸೀಸ್ ಸ್ಟಾರ್ ಪ್ಲೇಯರ್ ಎಲ್ಲಿಸ್ ಪೆರ್ರಿ ಕಳೆದ ಆವೃತ್ತಿಯಲ್ಲಿ ಬೆಂಗಳೂರು ಪರ ಆಡಿರಲಿಲ್ಲ. ಬಟ್ ಈ ಸಲ ಅವ್ರು ರೆಡ್ ಆರ್ಮಿಯಲ್ಲಿ ಜಾಯ್ನ್ ಆಗ್ತಾರೆ. ಅವ್ರು ಬಂದ್ರೆ ತಂಡಕ್ಕೆ ಸಿಂಹಬಲ ಗ್ಯಾರಂಟಿ. ಸ್ಮೃತಿ ಮಂದಾನ ಕ್ಯಾಪ್ಟನ್ಸಿ, ರಿಷಾ ಘೋಷ್ ಫಿನಿಶಿಂಗ್, ಲಾರೆನ್ ಬೆಲ್ ಬೌಲಿಂಗ್ ಕಮಾಲ್, ಶ್ರೇಯಾಂಕ ಪಾಟೀಲ್ ಆಲ್ ರೌಂಡ್ ಪ್ರದರ್ಶನ ಹೀಗೆ ಸಾಕಷ್ಟು ಸ್ಟ್ರಾಂಗ್ ಪ್ಲೇಯರ್ಗಳೇ ಇದ್ದಾರೆ. ಹೀಗಾಗಿ ಟ್ರೋಫಿ ಡಿಫೆನ್ಸ್ ಮಾಡಿಕೊಳ್ಳೋಕೆ ಬೇಕಿರೋ ಎಲ್ಲಾ ಸಾಮರ್ಥ್ಯವೂ ಬೆಂಗಳೂರು ತಂಡಕ್ಕಿದೆ.

ನೋಡಿರಿ

