ವಧುವಾಗಿ ದುರ್ಗಾಶ್ರೀ ಕಮ್‌ಬ್ಯಾಕ್‌.. ವಿಲನ್‌ ಅಭಿಷೇಕ್‌ ಹೀರೋ! – ಕನ್ನಡ ಬಿಟ್ಟು ತೆಲುಗಿಗೆ ಹೋಗಿದ್ಯಾಕೆ?

ವಧುವಾಗಿ ದುರ್ಗಾಶ್ರೀ ಕಮ್‌ಬ್ಯಾಕ್‌.. ವಿಲನ್‌ ಅಭಿಷೇಕ್‌ ಹೀರೋ! – ಕನ್ನಡ ಬಿಟ್ಟು ತೆಲುಗಿಗೆ ಹೋಗಿದ್ಯಾಕೆ?

ಕಲರ್ಸ್‌ ಕನ್ನಡದ ಬಿಗ್‌ ಶೋ ಬಿಗ್‌ ಬಾಸ್‌ ಮುಕ್ತಾಯ ಆಗಿದೆ.. ಇದೀಗ ಹೊಸ ಶೋ. ಹೊಸ ಸೀರಿಯಲ್‌ ಮೂಲಕ ಕಲರ್ಸ್‌ ವೀಕ್ಷಕರನ್ನ ಮನರಂಜಿಸಲು ರೆಡಿಯಾಗಿದೆ. ಇಂದಿನಿಂದ ಡಿವೋರ್ಸ್‌ ಲಾಯರ್‌ ಮದುವೆ ಕತೆ ಶುರುವಾಗ್ತಿದೆ.  ವಧು ಸೀರಿಯಲ್‌ ರಾತ್ರಿ 9 30ಕ್ಕೆ ಪ್ರಸಾರವಾಗ್ತಿದೆ. ಈ ಸೀರಿಯಲ್‌ ನಲ್ಲಿ ದೊಡ್ಡ ತಾರಾಬಳಗವೇ ಇದೆ. ಇದೀಗ ಸೀರಿಯಲ್‌ ನಾಯಕಿ ವಧು ಹಾಗೂ ನಾಯಕನ ಪಾತ್ರದಲ್ಲಿ ನಟಿಸುತ್ತಿರುವವರು ಯಾರು? ಅವರ ಹಿನ್ನೆಲೆ ಏನು ಅಂತಾ ಸೀರಿಯಲ್‌ ಫ್ಯಾನ್ಸ್‌ ಹುಡುಕ್ತಿದ್ದಾರೆ.

ಇದನ್ನೂ ಓದಿ:  PAKನಲ್ಲಿ ಅದೇ ರಾಗ ಅದೇ ಹಾಡು – 3 ಮೈದಾನಗಳಲ್ಲಿ ಮುಗಿಯುತ್ತಿಲ್ಲ ಕಾಮಗಾರಿ

ಕಲರ್ಸ್‌ ಕನ್ನಡದಲ್ಲಿ ಇಂದಿನಿಂದ ವಧು ಸೀರಿಯಲ್‌ ಶುರುವಾಗ್ತಿದೆ. ಡಿವೋರ್ಸ್‌ ಲಾಯರ್‌ ಮದುವೆ ಕತೆ ಇದಾಗಿದೆ. ಈ ಸೀರಿಯಲ್‌ ನ ಮೊದಲ ಪ್ರೋಮೋದಲ್ಲಿ ಟಿ ಎನ್‌ ಸೀತಾರಾಮ್‌ ಕಾಣಿಸಿಕೊಂಡಿದ್ರು.. ಡಿವೋರ್ಸ್‌ ಲಾಯರ್‌ ಆಗಿ ಜೀವನ ಆರಂಭಿಸ್ತಿರೋ ವಧುಗೆ ಶುಭ ಕೋರಿದ್ರು.. ಅವಾಗ್ಲೇ ಇದು ಡಿವೋರ್ಸ್‌ ಲಾಯರ್‌ ಮದುವೆ ಕತೆ ಅಂತಾ ಗೊತ್ತಾಗಿತ್ತು.. ಮಗಳಿಗೆ ಅದ್ದೂರಿಯಾಗಿ ಮದುವೆ ಮಾಡ್ಬೇಕು ಅಂತಾ ಕನಸು ಕಾಣೋ ಅಪ್ಪ.. ಹೀಗಾಗೇ ಆಕೆಗೆ ವಧು ಅಂತಾ ಹೆಸರಿಟ್ಟಿದ್ದಾರೆ.. ಆದ್ರೆ ಡಿವೋರ್ಸ್‌ ಲಾಯರ್‌ ಅನ್ನೋ ಕಾರಣಕ್ಕೆ ವಧುವಿಗೆ ವರನೇ ಸಿಕ್ತಿರಲ್ಲ.. ಹೀಗಾಗಿ ಒಮ್ಮೆ ವಧು ಮದುವೆ ಮಾಡಿ ಕಳ್ಸಿದ್ರೆ ಸಾಕು ಅನ್ನೋ ಮನೋಭಾವದಲ್ಲೇ ಆಕೆಯ ಮನೆಯವರು ಇರ್ತಾರೆ. ಆ ಹೊತ್ತಲ್ಲೇ ಸಾರ್ಥಕ್‌ ತನಗೆ ಡಿವೋರ್ಸ್ ಬೇಕು ಎಂದು ವಧು ಮನೆಯ ಬಾಗಿಲನ್ನು ತಟ್ಟಿದ್ದಾನೆ. ವಧು ಡಿವೋರ್ಸ್‌ ಲಾಯರ್‌ ಆಗಿದ್ದರೂ ದಾಂಪತ್ಯವನ್ನು ಮುರಿಯುವ ಬದಲು ಆದಷ್ಟು ಜೋಡಿಗಳನ್ನು ಒಂದು ಮಾಡುವ ಆಸೆಯನ್ನು ಹೊಂದಿದ್ದಾಳೆ. ಈಗ ಸಾರ್ಥಕ್‌ ಮತ್ತು ಪ್ರಿಯಾಂಕಾಳ ಡಿವೋರ್ಸ್‌ ಕೇಸ್‌ ತೆಗೆದುಕೊಂಡಿದ್ದು, ಇಬ್ಬರನ್ನೂ ಬೇರೆ ಮಾಡುತ್ತಾಳಾ ಅಥವಾ ಒಂದು ಮಾಡಲು ಹೋಗಿ ಸಾರ್ಥಕ್‌ ಜೊತೆಗೆ ಸಪ್ತಪದಿ ತುಳಿಯುತ್ತಾಳಾ ಈ ಸೀರಿಯಲ್‌ ಕತೆಯಾಗಿದೆ.

ಸೀರಿಯಲ್‌ ಪ್ರೋಮೋ ನೋಡಿದ ವೀಕ್ಷಕರು ವಧು ಹಾಗೂ ಶ್ರೀಕಾಂತ್‌ ಲುಕ್‌ ಗೆ ಫಿದಾ ಆಗಿದ್ದಾರೆ.. ಅವರ ರಿಯಲ್‌ ಲೈಫ್‌ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಅಂದ್ಹಾಗೆ ವಧು ಸೀರಿಯಲ್‌ ನಾಯಕ ಸಾರ್ಥಕ್‌ ನ ನಿಜವಾದ ಹೆಸ್ರು  ಅಭಿಷೇಕ್‌ ಶ್ರೀಕಾಂತ್. ಅಭಿಷೇಕ್‌ ಈಗಾಗಲೇ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಲಕ್ಷಣ ಸೀರಿಯಲ್‌ ನಲ್ಲಿ ಅಭಿಷೇಕ್‌ ವಿಲನ್‌ ರೋಲ್‌ ಆಗಿ ಆಕ್ಟ್‌ ಮಾಡಿದ್ರು.. ಈಗಾಗಲೇ ಸರಿಸುಮಾರು 70ಕ್ಕೂ ಅಧಿಕ ಆಡಿಷನ್‌ ಗಳನ್ನು ನೀಡಿರುವ ಅಭಿಷೇಕ್‌ ಗೆ ಈ ವಧು ಧಾರಾವಾಹಿಯು ಕೆರಿಯರ್‌ ಬದುಕಿನಲ್ಲಿ ಹೊಸ ತಿರುವನ್ನು ನೀಡುವ ನಿರೀಕ್ಷೆ ಇದೆ. ಇನ್ನು ನಟ ಅಭಿಷೇಕ್‌ ಬೆಂಗಳೂರಿನವರೇ ಆಗಿದ್ದು, ಇಂಜಿನಿಯರಿಂಗ್‌ ಓದಿದ್ದರೂ ನಟನಾ ಲೋಕಕ್ಕೆ ಕಾಲಿಟ್ಟಿದ್ದಾರೆ. ಕಿರುತರೆಯಲ್ಲಿ ಶಾಂತಂ ಪಾಪಂ, ಯಜಮಾನಿ, ಲಕ್ಷಣ, ನನ್ನ ದೇವರು ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇನ್ನು ಕೋಟಿ ಎಂಬ ಸಿನಿಮಾದಲ್ಲೂ ಅಭಿಷೇಕ್‌ ಅವರು ನಟಿಸಿದ್ದಾರೆ.  ಇದೀಗ ನಾಯಕನಾಗಿ ವಧು ಸೀರಿಯಲ್‌ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ವಧು ಧಾರಾವಾಹಿಯ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಹೆಸ್ರು ದುರ್ಗಶ್ರೀ.. ಇವರನ್ನು ಕಿರುತೆರೆಗೆ ಪರಿಚಯ ಮಾಡಿಸಿದ್ದೆ ಪುನೀತ್‌ ರಾಜ್‌ ಕುಮಾರ್‌ ಅಂತಾ ಹೇಳಲಾಗ್ತಿದೆ..  ದುರ್ಗಶ್ರೀ ಅವರು ನೇತ್ರಾವತಿ ಎಂಬ ಸೀರಿಯಲ್‌ ನಲ್ಲಿ ನಟಿಸಿದ್ದರು. ಇದನ್ನು ಹೊರತು ಪಡಿಸಿ ನಟಿ ದುರ್ಗಶ್ರೀ ಅವರು ತೆಲುಗು ಕಿರುತೆರೆಯಲ್ಲಿ ಚಿರಪರಿಚಿತರಾಗಿದ್ದಾರೆ. ಈಗಾಗಲೇ ಜೆಮಿನಿ ಟಿವಿಯಲ್ಲಿ ಅರ್ಧಾಂಗಿ ಮೂಲಕ ಜನಪ್ರೀಯತೆ ಪಡೆದ ದುರ್ಗಾಶ್ರೀ, ಸ್ಟಾರ್‌ ಮಾದಲ್ಲಿ ಮಾಧುರ ನಗಾರಿಲೊ ಹಾಗೂ ಜೀ ತೆಲುಗು ವಾಹಿನಿಯಲ್ಲಿ ವೈಷ್ಣವಿ ಸೀರಿಯಲ್‌ ಗಳಲ್ಲಿ ನಟಿಸಿದ್ದಾರೆ. ಇನ್ನು ಬೆಂಗಳೂರಿನ ಜಕ್ಕೂರಿನವರಾದ ದುರ್ಗಾಶ್ರೀ, ಸಹಕಾರ ನಗರದ ಕಾವೇರಿ ಪಬ್ಲಿಕ್‌ ಸ್ಕೂಲ್‌ನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನ ಮುಗಿಸಿದ್ದಾರೆ. ಯಲಹಂಕದ ನಾಗಾರ್ಜುನ ಪಿಯು ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮುಗಿಸಿ, ಹೆಸರಘಟ್ಟದ ಆಚಾರ್ಯ ಇನ್‌ಸ್ಟಿಟ್ಯೂಟ್‌ ನಲ್ಲಿ ಬಿಕಾಂ ಪಡೆದಿದ್ದಾರೆ. ತೆಲುಗು ಸೀರಿಯಲ್‌ ನಲ್ಲಿ ಮನೆ ಮಾತಾಗಿದ್ದ ದುರ್ಗಾಶ್ರೀ ಮತ್ತೆ ಈಗ ತವರಿಗೆ ಆಗಮಿಸಿದ್ದಾರೆ. ವಧು ಸೀರಿಯಲ್‌ ಮೂಲಕ ಕನ್ನಡ ಕಿರುತೆರೆಗೆ ಆಗಮಿಸಿದ್ದಾರೆ.

Shwetha M