ಡಿವೋರ್ಸ್‌ ಲಾಯರ್‌ ಮದುವೆ ಕತೆ.. _”ವಧು”ಗೆ ವರನಾಗಿ ಅಭಿಷೇಕ್‌ ಎಂಟ್ರಿ! – ದೊಡ್ಡ ತಾರಾಬಳಗ.. ಹಿಟ್‌ ಆಗುತ್ತಾ?

ಡಿವೋರ್ಸ್‌ ಲಾಯರ್‌ ಮದುವೆ ಕತೆ.. _”ವಧು”ಗೆ ವರನಾಗಿ ಅಭಿಷೇಕ್‌ ಎಂಟ್ರಿ! – ದೊಡ್ಡ ತಾರಾಬಳಗ.. ಹಿಟ್‌ ಆಗುತ್ತಾ?

ಕಲರ್ಸ್‌ ಕನ್ನಡದಲ್ಲಿ ಸದ್ಯ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಕೊನೇ ಹಂತಕ್ಕೆ ತಲುಪಿದೆ. ಗ್ರ್ಯಾಂಡ್‌ ಫಿನಾಲೆಗೆ ಮೂರೇ ವಾರಗಳು ಬಾಕಿ ಉಳಿದಿದೆ. ಇದೀಗ ಬಿಗ್‌ ಬಾಸ್‌ ಮುಗಿಯುತ್ತಿದ್ದಂತೆ ಹೊಸ ಸೀರಿಯಲ್‌ ತೆರೆಮೇಲೆ ಬರಲು ಸಜ್ಜಾಗಿದೆ. ವಧು ಸೀರಿಯಲ್‌ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು, ಇದರ ಎರಡನೇ ಪ್ರೋಮೋ ರಿಲೀಸ್‌ ಆಗಿದೆ. ಈ ಸೀರಿಯಲ್‌ನಲ್ಲಿ ದೊಡ್ಡ ತಾರಾಬಳಗವೇ ಇದೆ.

ಇದನ್ನೂ ಓದಿ: ಇಸ್ರೋ ನೂತನ ಮುಖ್ಯಸ್ಥರಾಗಿ ವಿ.ನಾರಾಯಣನ್ ನೇಮಕ- ಜ.14ಕ್ಕೆ ಅಧಿಕಾರ ಸ್ವೀಕಾರ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಈಗ ಮನರಂಜನೆಯ ರಸದೌತಣಕ್ಕೆ ಏನೂ ಕಡಿಮೆ ಇಲ್ಲ. ಪ್ರತಿ ದಿವಸ ಹೊಸ ಹೊಸ ಟ್ವಿಸ್ಟ್‌ಗಳೊಂದಿಗೆ ನಿಮ್ಮ ನೆಚ್ಚಿನ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಕಲರ್ಸ್ ಕನ್ನಡದಲ್ಲಿ ಸದ್ಯ ಬಿಗ್ ಬಾಸ್ ಸೀಸನ್ 11 ಅಬ್ಬರ ನಡೆಯುತ್ತಿದೆ ಇದೆ. ಶೋ ಕೊನೆಯ ಹಂತಕ್ಕೆ ಬಂದಿದ್ದು ಸದ್ಯದಲ್ಲೇ ಇದಕ್ಕೆ ತೆರೆಬೀಳಲಿದೆ. ಈ ನಡುವೆಯೇ ವಧು ಶೀರ್ಷಿಕೆಯ ಸೀರಿಯಲ್‌  ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದ್ರ ಪ್ರೋಮೋ ರಿಲೀಸ್‌ ಆಗಿದ್ದು, ಸಖತ್‌ ಇಂಟ್ರೆಸ್ಟಿಂಗ್‌ ಆಗಿದೆ.

ಹೌದು, ವಧು ಸೀರಿಯಲ್‌ ನ ಪ್ರೋ ಸದ್ಯ ಭಾರಿ ಸದ್ದು ಮಾಡ್ತಿದೆ. ಅಪ್ಪನ ಕನಸಿನಂತೆ ಮದುವೆಯಾಗಲು ಬಯಸಿರುವ ಡಿವೋರ್ಸ್ ಲಾಯರ್ ಕಥೆ ಇದಾಗಿದೆ. ಅದ್ಧೂರಿಯಾಗಿ ಮಗಳ ಮದುವೆ ಮಾಡಬೇಕೆನ್ನುವ ಉದ್ದೇಶದಿಂದ ಮಗಳಿಗೆ ವಧು ಎಂದು ಹೆಸರಿಟ್ಟಿದ್ದಾರೆ ತಂದೆ. ಈ ಸೀರಿಯಲ್ ನಾಯಕಿ ಹೆಸರು ವಧು ಆಗಿದ್ದು, ಅದ್ರ  ಟೈಟಲ್ ಹೆಸರು ಕೂಡ ಅದೇ ಆಗಿದೆ.  ಎರಡನೇ ಪ್ರೋಮೋದಲ್ಲಿ ವಧುನ ಗಂಡ ಹೆಂಗಿರ್ಬೇಕು ಅಂತಾ ಮನೆ ಮಂದಿ ಡಿಸ್ಕಸ್‌ ಮಾಡಿದ್ದಾರೆ.. ಮನೆ ಮಂದಿ ವರನ ಬಗ್ಗೆ ವರ್ಣನೆ ಮಾಡ್ತಿದ್ದಂತೆ ವರನನ್ನ ಜಬರ್ದಸ್ತಾಗಿ ತೋರಿಸಲಾಗಿದೆ. ತಂದೆಯ ಮೀಸೆಯಂತೆ ಅವನ ಮೀಸೆ ಇರ್ಬೇಕು.. ಶ್ರೀಮಂತನಾಗಿರ್ಬೇಕು.. ಅಮ್ಮ ಅಂದ್ರೆ ತುಂಬಾ ಇಷ್ಟ ಇರ್ಬೇಕು ಅಂತಾ ಹೇಳ್ತಿರ್ತಾರೆ..  ವರನ ಸೋರಿಸೋದ್ರ ಜೊತೆಗೆ ಆತನ ಜೀವನದ ಕತೆ ಕೂಡ ತೆರೆದುಕೊಳ್ಳುತ್ತೆ. ಆತ ಮೊದಲ ಹೆಂಡತಿ ಡಿವೋರ್ಸ್‌ ಕೊಡಲು ಹೊರಟಾಗಲೇ ಹೀರೋ ಹೀರೋಯಿನ್‌ ಭೇಟಿಯಾಗ್ತಾರೆ. ಹೀರೋ ಡಿವೋರ್ಸ್‌ ಕೇಸ್ ನ ವಧುವೇ ನಡೆಸ್ತಾಳೆ ಅಂತಾ ಪ್ರೋಮೋದಲ್ಲಿ ತೋರಿಸಲಾಗಿದೆ.

ಇನ್ನು ಈ ಸೀರಿಯಲ್‌ ನಲ್ಲಿ ಯಾರ್ಯಾರು ನಟಿಸಲಿದ್ದಾರೆ ಅನ್ನೋದು ಕೂಡ ರಿವೀಲ್‌ ಆಗಿದೆ. ಈ ಧಾರವಾಹಿಯಲ್ಲಿ ಹೆಸರಾಂತ ತಾರಾಬಳಗವೇ ಇದೆ. ಕನ್ನಡ ಕಿರುತೆರೆಯ ಜನಪ್ರಿಯ ಸಿಎಸ್​ಪಿ ಸರ್ ನಟಿಸುತ್ತಿದ್ದಾರೆ. ಅಂದ್ರೆ ಕನ್ನಡ ಅದ್ಭುತ ನಿರ್ದೇಶಕ, ನಟ ಟಿ ಎಸ್ ಸೀತಾರಾಮ್ ಅವರು ಸೀರಿಯಲ್‌ ನಲ್ಲಿ ನಟಿಸುತ್ತಿದ್ದಾರೆ. ಟಿ ಎಸ್‌ ಸೀತಾರಾಮ್‌ ಅವರನ್ನ ತೆರೆಮೇಲೆ ನೋಡಿ ವೀಕ್ಷಕರು ಫುಲ್‌ ಖುಷಿಯಾಗಿದ್ದಾರೆ.

ಟಿ ಎಸ್ ಸೀತಾರಾಮ್ ವಧು ಸೀರಿಯಲ್ ನಲ್ಲೂ ಕೂಡ ಲಾಯರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನಾಯಕಿ ಕೂಡ ಲಾಯರ್ ಆಗುವ ಕನಸು ಕಂಡಿರುವ ಹುಡುಗಿ ಆಗಿರೋದರಿಂದ, ಇಲ್ಲಿ ಸೀತಾರಾಮ್ ಪ್ರಮುಖ ಪಾತ್ರ ವಹಿಸೋದಂತೂ ಖಂಡಿತಾ. ಮತ್ತೆ ಸೀತಾರಮ್ ಅವರ ಮನೋಜ್ಞ ಅಭಿನಯ, ಮಾತಿನ ಗತ್ತು, ಲಾಯರ್ ಲುಕ್ ನೋಡೋಕೆ ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

ಇನ್ನು ವಧು ಧಾರಾವಾಹಿಯನ್ನ ಪರಮೇಶ್ವರ್ ಗುಂಡ್ಕಲ್‌ ಪ್ರೊಡಕ್ಷನ್​ಹೌಸ್ ನಿರ್ಮಾಣ ಮಾಡುತ್ತಿದೆ. ವಧು ಪಾತ್ರದಲ್ಲಿ ಕನ್ನಡ, ತೆಲುಗು ಧಾರವಾಹಿಯಲ್ಲಿ ನಟಿಸುತ್ತಿರುವ ಧನ್ಯಶ್ರೀ ಕಾಣಿಸಿಕೊಂಡಿದ್ದಾರೆ. ನಾಯಕನ ಪಾತ್ರದಲ್ಲಿ ಅಭಿಷೇಕ್ ಶ್ರೀಕಾಂತ್, ಹೀರೋ ತಾಯಿಯ ಪಾತ್ರದಲ್ಲಿ ವಿನಯ್‌ ಪ್ರಸಾದ್‌, ನಾಯಕಿಯ ಅಮ್ಮನ ಪಾತ್ರದಲ್ಲಿ ಸುಧಾ ಬೆಳವಾಡಿ, ನಾಯಕಿ ತಂದೆ ಪಾತ್ರದಲ್ಲಿ ರವಿ ಕಲಾಬ್ರಹ್ಮ ಮುಂತಾದ ನಟ ನಟಿಯರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಪ್ರೋಮೋ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಮೂಡಿಸಿದೆ.

Shwetha M