ಕೋವಿಡ್ ಹೆಚ್ಚಳದ ನಡುವೆ ಮತ್ತೊಂದು ಕಂಟಕ – ವಿದೇಶದಿಂದ ಬಂದವರಿಗೆ ಹಳದಿ ಜ್ವರದ ಆತಂಕ

ಕೋವಿಡ್ ಹೆಚ್ಚಳದ ನಡುವೆ ಮತ್ತೊಂದು ಕಂಟಕ – ವಿದೇಶದಿಂದ ಬಂದವರಿಗೆ ಹಳದಿ ಜ್ವರದ ಆತಂಕ

ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗಿರುವಾಗಲೇ ಜನರಿಗೆ ಮತ್ತೊಂದು ವೈರಸ್ ಭೀತಿ ಎದುರಾಗಿದೆ. ಸದ್ಯ ಹಳದಿ ಜ್ವರದ ಆತಂಕ ಶುರುವಾಗಿದ್ದು, ಕೇಂದ್ರ ಆರೋಗ್ಯ ಇಲಾಖೆ ಕೂಡಾ ಅಲರ್ಟ್ ಆಗಿದೆ. ಸೌತ್ ಆಫ್ರಿಕಾ, ಕೀನ್ಯಾ, ನೈಜೀರಿಯಾ, ಉಗಾಂಡ, ರಿಪಬ್ಲಿಕ್ ಆಫ್ ಕಾಂಗೋ, ದಕ್ಷಿಣ ಅಮೆರಿಕಾದ ಕೆಲ ಭಾಗಗಲ್ಲಿ ಹಳದಿ ಜ್ವರ ಹೆಚ್ಚಾಗಿದೆ. ಹೀಗಾಗಿ ಕೇಂದ್ರ ಆರೋಗ್ಯ ಇಲಾಖೆ ಹಳದಿ ಜ್ವರದ ಲಸಿಕೆಯನ್ನು ಕಡ್ಡಾಯಗೊಳಿಸಿದೆ. ವಿದೇಶಕ್ಕೆ ಹೋಗುವವರು ಹಳದಿ ಜ್ವರದ ಲಸಿಕೆ ಹಾಕಿಸಿಕೊಳ್ಳೋದು ಕಡ್ಡಾಯವಾಗಿದೆ. ಹೊರದೇಶದಿಂದ ಬರುವವರು ಹಾಗೂ ಹೊರ ದೇಶಕ್ಕೆ ತೆರಳುವವರಿಗೆ ಲಸಿಕೆ ಕಡ್ಡಾಯವಾಗಿದೆ.

ಇದನ್ನೂ ಓದಿ: 15 ಲಕ್ಷ ಜನರನ್ನು ಕಾಡುತ್ತಿದೆ ‘ಹಿಕಿಕೋಮೊರಿ’ – ಏನಿದು ಐಸೋಲೇಷನ್ ಪ್ರವೃತ್ತಿ?

ಹಳದಿ ಜ್ವರವು ಮಾರಣಾಂತಿಕ ವೈರಸ್ ರೋಗವಾಗಿದ್ದು, ಇದು ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದ ಕೆಲವು ಭಾಗಗಳಲ್ಲಿ ಹೆಚ್ಚು ಕಂಡು ಬರುತ್ತದೆ. ಸೋಂಕು ಸೌಮ್ಯದಿಂದ ತೀವ್ರವಾಗಿ ಮಾರಣಾಂತಿಕವಾಗಿರಬಹುದು. ಸೋಂಕು ತಗುಲಿದ ಹೆಚ್ಚಿನ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಚರ್ಮ ಮತ್ತು ಕಣ್ಣುಗಳು ಹಳದಿ (ಕಾಮಾಲೆ) ಬಣ್ಣಕ್ಕೆ ತಿರುಗುವುದು. ಮಾತ್ರವಲ್ಲ ಜ್ವರ ತರಹದ ಲಕ್ಷಣಗಳು ಸ್ನಾಯು ನೋವು, ತಲೆನೋವು, ವಾಕರಿಕೆ ಮತ್ತು ವಾಂತಿ ಹಳದಿ ಜ್ವರದ ಲಕ್ಷಣಗಳು. ಸೋಂಕಿತ ಸೊಳ್ಳೆಯ ಕಚ್ಚುವಿಕೆಯ ಮೂಲಕ ವೈರಸ್ ಹರಡುತ್ತದೆ. ಹಳದಿ ಜ್ವರವನ್ನು ಗುಣಪಡಿಸಲಾಗುವುದಿಲ್ಲ. ಆದರೆ ಲಸಿಕೆಯಿಂದ ಅದನ್ನು ತಡೆಗಟ್ಟಬಹುದು. ಹೀಗಾಗಿ ವಿದೇಶಕ್ಕೆ ತೆರಳುವ ಪ್ರತಿಯೊಬ್ಬರು ಹಳದಿ ಜ್ವರಕ್ಕೆ ಲಸಿಕೆ ಹಾಕಿಸಿಕೊಳ್ಳೋದು ಕಡ್ಡಾಯವಾಗಿದೆ. ಬೆಂಗಳೂರಿನ ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ಹಳದಿ ಜ್ವರದ ಲಸಿಕೆ  ಲಭ್ಯವಿದೆ. ಸ್ಟಾ ಮರಿಲ್ ಎಂಬ ಹಳದಿ ಜ್ವರದ ಲಸಿಕೆ ಲೈಫ್ ಟೈಮ್ ರಕ್ಷಣೆ ನೀಡಲಿದೆ. ಯೆಲ್ಲೋ ಫೀವರ್ ಲಸಿಕೆಗೆ‌ ಕೇಂದ್ರ ಆರೋಗ್ಯ ಇಲಾಖೆ 300 ರೂ. ನಿಗದಿ ಮಾಡಿದೆ.

suddiyaana