ಈ ಕೂಡಲೇ ಸರ್ಕಾರಿ ಬಂಗಲೆ ಖಾಲಿ ಮಾಡಿ – ಮಹುವಾ ಮೊಯಿತ್ರಾಗೆ ಸೂಚನೆ

ಈ ಕೂಡಲೇ ಸರ್ಕಾರಿ ಬಂಗಲೆ ಖಾಲಿ ಮಾಡಿ – ಮಹುವಾ ಮೊಯಿತ್ರಾಗೆ ಸೂಚನೆ

ಸಂಸದ ಸ್ಥಾನದಿಂದ ವಜಾಗೊಂಡಿರುವ ಟಿಎಂಸಿ ಮಾಜಿ ಸಂಸದೆ ಮಹುವಾ ಮೊಯಿತ್ರಾಗೆ ಬಂಗಲೆ ಖಾಲಿ ಮಾಡುವಂತೆ ನೋಟಿಸ್‌ ಜಾರಿ ಮಾಡಲಾಗಿದೆ. ತತಕ್ಷಣವೇ ಬಂಗಲೆ ಖಾಲಿ ಮಾಡುವಂತೆ ನೋಟಿಸ್‌ ಜಾರಿ ಮಾಡಲಾಗಿದ್ದು, ಹೆಚ್ಚಿನ ಕಾಲಾವಕಾಶ ನೀಡಿಲ್ಲ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ –  ಕರ್ನಾಟಕದಲ್ಲಿ ಬಂದೋಬಸ್ತ್ ಹೆಚ್ಚಿಸಿದ್ದೇಕೆ?

ಇದಕ್ಕೂ ಮೊದಲು ಮಹುವಾ ಮೊಯಿತ್ರಾ ಅವರಿಗೆ ಜನವರಿ 7 ರೊಳಗೆ ಬಂಗಲೆ ಖಾಲಿ ಮಾಡುವಂತೆ ನೋಟಿಸ್‌ ನೀಡಲಾಗಿತ್ತು. ಮೊಯಿತ್ರಾ ಅವರನ್ನು ಡಿಸೆಂಬರ್‌ 8 ರಂದು ಲೋಕಸಭೆ ಸದಸ್ಯ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಸಂಸದ ಸ್ಥಾನ ಕಳೆದುಕೊಂಡ ಮೇಲೆ ಒಂದು ತಿಂಗಳೊಳಗೆ ಮನೆ ಖಾಲಿ ಮಾಡುವಂತೆ ಸೂಚಿಸಿದ್ದರೂ. ಮೊಯಿತ್ರಾ ಅವರು ಮನೆ ಖಾಲಿ ಮಾಡಿಲ್ಲ. ಹೀಗಾಗಿ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಮೊಯಿತ್ರಾ ಅವರಿಗೆ ಎಸ್ಟೇಟ್‌ ನಿರ್ದೇಶನಾಲಯ ಮತ್ತೊಂದು ನೋಟಿಸ್‌ ನೀಡಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ.

ತೃಣಮೂಲ ಕಾಂಗ್ರೆಸ್ ನಾಯಕಿ ಅವರಿಗೆ ಸಂಸದೆಯಾಗಿ ನೀಡಲಾಗಿದ್ದ ಬಂಗಲೆಯನ್ನು ಕೂಡಲೇ ತೆರವು ಮಾಡುವಂತೆ ಸೂಚಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಸರ್ಕಾರಿ ಬಂಗಲೆ ಖಾಲಿ ಮಾಡಿಸಲು ಎಸ್ಟೇಟ್ ನಿರ್ದೇಶನಾಲಯದ ಅಧಿಕಾರಿಗಳ ತಂಡವನ್ನು ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Shwetha M