ಭಾರತದ ಸಿರಪ್ ಸೇವಿಸಿ ಉಜ್ಬೇಕಿಸ್ತಾನದಲ್ಲಿ 18 ಮಕ್ಕಳು ಬಲಿ!
ಬಿಜೆಪಿ-ಕಾಂಗ್ರೆಸ್ ಸಿರಪ್ ಫೈಟ್!

ಭಾರತದ ಸಿರಪ್ ಸೇವಿಸಿ ಉಜ್ಬೇಕಿಸ್ತಾನದಲ್ಲಿ 18 ಮಕ್ಕಳು ಬಲಿ!ಬಿಜೆಪಿ-ಕಾಂಗ್ರೆಸ್ ಸಿರಪ್ ಫೈಟ್!

ಭಾರತದಲ್ಲಿ ತಯಾರಾದ ಸಿರಪ್ ಸೇವಿಸಿ ಉಜ್ಬೇಕಿಸ್ತಾನದಲ್ಲಿ 18 ಮಂದಿ ಮಕ್ಕಳು ಮೃತಪಟ್ಟಿದ್ದಾರೆ. ದೆಹಲಿ ಬಳಿಯ ನೋಯ್ಡಾದಲ್ಲಿ ಮಾರಿಯೋನ್​ ಬಯೋಟೆಕ್​ನಲ್ಲಿ ತಯಾರಾದ ಡಾಕ್-1 ಮ್ಯಾಕ್ಸ್ ಹೆಸರಿನ ಕಫದ ಸಿರಪ್​​ನ್ನ ಸೇವಿಸಿ 18 ಮಕ್ಕಳು ಮೃತಪಟ್ಟಿದ್ದಾರೆ. ಮಕ್ಕಳ ಸಾವಿಗೆ ಮೇಡ್​ ಇನ್ ಇಂಡಿಯಾ ಸಿರಪ್ ಕಾರಣ ಅಂತಾ ಉಜ್ಬೇಕಿಸ್ತಾನ ಆರೋಗ್ಯ ಸಚಿವಾಲಯ ಗಂಭೀರ ಆರೋಪ ಮಾಡಿದೆ. ಇನ್ನು ವೈದ್ಯರ ಸಲಹೆಯನ್ನೂ ಪಡೆಯದೆ ಪೋಷಕರು ತಮ್ಮ ಮಕ್ಕಳಿಗೆ ಈ ಸಿರಪ್​​ನ್ನ ನೀಡಿದ್ದಾರೆ. ನಿಗದಿಗಿಂತ ಹೆಚ್ಚು ಸಿರಪ್ ಸೇವಿಸಿ, ಡೋಸ್ ಹೆಚ್ಚಾದ ಕಾರಣವೂ ಮಕ್ಕಳು ಸಾವನ್ನಪ್ಪಿರಬಹುದು ಅಂತಾ ಉಜ್ಬೇಕಿಸ್ತಾನ ಆರೋಗ್ಯ ಸಚಿವಾಲಯ ಹೇಳಿದೆ. ಮಕ್ಕಳು ಆಸ್ಪತ್ರೆಗೆ ದಾಖಲಾಗೋ ಆರೇಳು ದಿನಗಳ ಹಿಂದಿನಿಂದ್ಲೇ ಮಕ್ಕಳಿಗೆ ನಿತ್ಯವೂ 2.5 ಎಂಎಲ್​​​ನಿಂದ 5 ಎಂಎಲ್​ವರೆಗೂ ದಿನಕ್ಕೆ ನಾಲ್ಕು ಬಾರಿ ಸಿರಪ್ ನೀಡಲಾಗಿದೆ. ಮಕ್ಕಳ ಸಾವಿಗೆ ಇದು ಕೂಡ ಕಾರಣ ಆಗಿರಬಹುದು ಅಂತಾನೂ ಉಜ್ಬೇಕಿಸ್ತಾನ ಆರೋಗ್ಯ ಸಚಿವಾಲಯ ಹೇಳಿದೆ. ಈ ನಡುವೆ ಪ್ರಕರಣದ ಬಗ್ಗೆ ಭಾರತ ಸರ್ಕಾರ ಕೂಡ ತನಿಖೆಗೆ ಆದೇಶಿಸಿ ನೊಯ್ಡಾದಲ್ಲಿರೋ ಮಾರಿಯೋನ್​ ಬಯೋಟೆಕ್​ನಲ್ಲಿ ಸಿರಪ್ ತಯಾರಿಕೆಯನ್ನ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಮತ್ತೊಂದೆಡೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದು, ಭಾರತದಲ್ಲಿ ತಯಾರಾಗಿರೋ ಸಿರಪ್ ಬಗ್ಗೆ ತನಿಖೆ ನಡೆಸೋದಾಗಿ ಹೇಳಿದೆ. ಇನ್ನು ಆಫ್ರಿಕಾದ ಗಾಂಬಿಯಾ ದೇಶದಲ್ಲಿ ಕಳೆದ ಜೂನ್​ನಿಂದ ಅಕ್ಟೋಬರ್ ಅವಧಿಯಲ್ಲಿ ಸುಮಾರು 70 ಮಂದಿ ಮಕ್ಕಳು ಕಫದ ಸಿರಪ್ ಸೇವಿಸಿ ಸಾವನ್ನಪ್ಪಿದ್ರು. ಆ ಸಿರಪ್ ಕೂಡ ಹರಿಯಾಣದಲ್ಲಿರೋ ಫಾರ್ಮಾಸ್ಯುಟಿಕಲ್ಸ್ ಕಂಪನಿಯಲ್ಲಿ ತಯಾರಾಗಿತ್ತು. ಮೇಡ್​ ಇನ್ ಇಂಡಿಯಾ ಸಿರಪ್ ಸೇವಿಸಿ ವಿದೇಶಗಳಲ್ಲಿ ಮಕ್ಕಳ ಸಾವನ್ನಪ್ಪಿರೋದು ಭಾರತಕ್ಕೆ ತೀವ್ರ ಕಸಿವಿಸಿ ಉಂಟುಮಾಡಿದೆ.

ಈ ನಡುವೆ ಭಾರತದಲ್ಲಿ ತಯಾರಾದ ಸಿರಪ್ ಸೇವಿಸಿ ವಿದೇಶಗಳಲ್ಲಿ ಮಕ್ಕಳು ಮೃತಪಟ್ಟಿರೋ ವಿಚಾರಕ್ಕೆ ಸಂಬಂಧಿಸಿ ರಾಷ್ಟ್ರ ರಾಜಕೀಯದಲ್ಲಿ ಜಟಾಪಟಿ ಶುರುವಾಗಿದೆ. ಜಗತ್ತಿಗೆ ಭಾರತವೇ ಔಷಧಾಲಯ ಅಂತಾ ಮೋದಿ ಸರ್ಕಾರ ಜಾಗತಿಕ ಮಟ್ಟದಲ್ಲಿ ಬಿಂಬಿಸೋದನ್ನ ಮೊದಲು ನಿಲ್ಲಿಸಬೇಕು. ಫಾರ್ಮಸಿ ಕಂಪನಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಿ ಅಂತಾ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ. ಇನ್ನು ಕಾಂಗ್ರೆಸ್ ನಾಯಕನ ಟೀಕೆಗೆ ಪ್ರತಿಕ್ರಿಯಿಸಿರೋ ಬಿಜೆಪಿ ನಾಯಕ ಅಮಿತ್ ಮಾಳವಿಯಾ, ​ಭಾರತದ ಉದ್ಯಮಶೀಲತಾ ಮನೋಭಾವವನ್ನ ಅಪಹಾಸ್ಯ ಮಾಡೋದನ್ನ ಕಾಂಗ್ರೆಸ್ ಇನ್ನೂ ಕೂಡ ನಿಲ್ಲಿಸಿಲ್ಲ. ನಿಮಗೆ ನಾಚಿಕೆಯಾಗಬೇಕು ಅಂತಾ ಕೌಂಟರ್ ಕೊಟ್ಟಿದ್ದಾರೆ.

suddiyaana