ತೋಟ ಘಾಟಿಯಲ್ಲಿ ಭಾರಿ ಭೂಕುಸಿತ – ರಿಷಿಕೇಶ – ಬದರಿನಾಥ ಹೆದ್ದಾರಿ ಸಂಪೂರ್ಣ ಬಂದ್
ಉತ್ತರಾಖಂಡ್ ನಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಭಾರಿ ಮಳೆಯಿಂದಾಗಿ ನಿರಂತವಾಗಿ ಭೂಕುಸಿತ ಸಂಭವಿಸುತ್ತಿದೆ. ತೆಹ್ರಿ ಗಡ್ವಾಲ್ ಜಿಲ್ಲೆಯ ತೋಟಘಾಟಿ ಪ್ರದೇಶದಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ರಿಷಿಕೇಶ-ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿ-58ರಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಮಳೆಯ ಆರ್ಭಟ – ರಸ್ತೆ ನಿರ್ಮಾಣ ನಿಯಮದಲ್ಲಿ ಬದಲಾವಣೆ ಮಾಡಿದ ಸರ್ಕಾರ
ಭಾರಿ ಮಳೆಯಿಂದಾಗಿ ಹೆದ್ದಾರಿಗಳಲ್ಲಿ ನಿರಂತವಾಗಿ ಭೂಕುಸಿತ ಸಂಭವಿಸುತ್ತಿದ್ದು, ಹೆದ್ದಾರಿಯನ್ನು ಮುಚ್ಚುವ ಪ್ರಕ್ರಿಯೆ ನಡೆಯುತ್ತಿದೆ. ತೋಟ ಘಾಟಿಯಲ್ಲಿ ಪರ್ವತದ ಮೇಲೆ 100 ಮೀಟರ್‌ಗಳಷ್ಟು ಭೂಕುಸಿತದಿಂದಾಗಿ NH-58 ರಿಷಿಕೇಶ-ಬದರಿನಾಥ ಹೆದ್ದಾರಿಯನ್ನು ಮುಚ್ಚಲಾಗಿದೆ. ಪರ್ಯಾಯ ಮಾರ್ಗ ತೋಟ ಘಾಟಿ ಬಳಿ ಭೂಕುಸಿತದಿಂದಾಗಿ ರಿಷಿಕೇಶ-ಬದರಿನಾಥ ರಸ್ತೆ ಸಂಪೂರ್ಣ ಬಂದ್ ಆಗಿದೆ. ಇದಾದ ನಂತರ, ರಿಷಿಕೇಶದಿಂದ ಶ್ರೀನಗರ ಕಡೆಗೆ ಹೋಗುವ ವಾಹನಗಳನ್ನು ಇತರ ಪರ್ಯಾಯ ಮಾರ್ಗಗಳ ಮೂಲಕ ತಿರುಗಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತೋಟ ಘಾಟಿ ಬಳಿ ಶುಕ್ರವಾರ ತಡರಾತ್ರಿ ಹೆಚ್ಚಿನ ಪ್ರಮಾಣದಲ್ಲಿ ಬಂಡೆಗಳು ಉರುಳಿವೆ. ಇದರಿಂದಾಗಿ ಸಂಪೂರ್ಣ ಮಾರ್ಗವನ್ನು ಮುಚ್ಚಲಾಗಿದೆ. ಇಲ್ಲಿ ನಡೆದಾಡಲೂ ಜಾಗ ಉಳಿದಿಲ್ಲ. ರಸ್ತೆ ಮುಚ್ಚಿರುವುದರಿಂದ ರಿಷಿಕೇಶದಿಂದ ಶ್ರೀನಗರ ಕಡೆಗೆ ಹೋಗುವ ವಾಹನಗಳನ್ನು ಖಾದಿ, ಗಜ, ದೇವಪ್ರಯಾಗ ಮಾರ್ಗವಾಗಿ ಶ್ರೀನಗರಕ್ಕೆ ಕಳುಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.