ಎಣ್ಣೆ ಏಟಲ್ಲಿ ಹರಿದ್ವಾರದ ಹರ್ ಕಿ ಪೌರಿ ಘಾಟ್‌ ಸ್ಫೋಟಿಸುವುದಾಗಿ ಬೆದರಿಕೆ! – ಯುವಕ ಕಿಕ್‌ ಇಳಿಸಿದ ಪೊಲೀಸರು

ಎಣ್ಣೆ ಏಟಲ್ಲಿ ಹರಿದ್ವಾರದ ಹರ್ ಕಿ ಪೌರಿ ಘಾಟ್‌ ಸ್ಫೋಟಿಸುವುದಾಗಿ ಬೆದರಿಕೆ! – ಯುವಕ ಕಿಕ್‌ ಇಳಿಸಿದ ಪೊಲೀಸರು

ಉತ್ತರಾಖಂಡದ ಪವಿತ್ರ ನಗರ ಹರಿದ್ವಾರದಲ್ಲಿ ವ್ಯಕ್ತಿಯೊಬ್ಬ ಎಣ್ಣೆ ಏಟದಲ್ಲಿ ದೊಡ್ಡ ರದ್ದಾಂತ ಮಾಡಿದ್ದಾನೆ. ಕುಡಿದ ಮತ್ತಲ್ಲಿ ಹರ್ ಕಿ ಪೌರಿ ಘಾಟ್‌ಗೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿ ಈಗ ಪೊಲೀಸರ ಅಥಿತಿಯಾಗಿದ್ದಾನೆ.

ಇದನ್ನೂ ಓದಿ: ರಣರಂಗವಾದ ಕೆಪಿಸಿಸಿ ಕಚೇರಿ! – ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ!

ಅಷ್ಟಕ್ಕೂ ಆಗಿದ್ದೇನು?

ಪೌರಿ ಜಿಲ್ಲೆಯ ಯಮ್‌ಕೇಶ್ವರ್ ನಿವಾಸಿ 30 ವರ್ಷದ ಸೋಹನ್ ಸಿಂಗ್ ರಾವತ್ಎಂಬಾತ ಕಂಠಪೂರ್ತಿ ಕುಡಿದಿದ್ದಾನೆ. ಬಳಿಕ ಎಣ್ಣೆ ಏಟಲ್ಲಿ 112 ತುರ್ತು ಸಂಖ್ಯೆಗೆ ಕರೆ ಮಾಡಿ, ಹರ್ ಕಿ ಪೌರಿ ಸೇರಿದಂತೆ ಇತರ ಸ್ಥಳಗಳಲ್ಲಿ ನಾಲ್ಕು ದಿನಗಳೊಳಗೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಕರೆಯಿಂದಾಗಿ ಪೊಲೀಸ್ ಇಲಾಖೆಯಲ್ಲಿ ಭಾರಿ ಗೊಂದಲ ಉಂಟಾಗಿತ್ತು. ತಕ್ಷಣವೇ ತಂಡಗಳನ್ನು ರಚಿಸಿ ಆರೋಪಿಯ ಪತ್ತೆ ಆರಂಭಿಸಲಾಯಿತು.

ಕರೆ ಮಾಡಿದ ಫೋನ್ ಸಂಖ್ಯೆ ಮತ್ತು ಸ್ಥಳವನ್ನು ಟ್ರೇಸ್ ಮಾಡಿದ ಪೊಲೀಸರು, ಪೌರಿ ಜಿಲ್ಲೆಯ ಯಮ್‌ಕೇಶ್ವರ್ ನಿವಾಸಿ 30 ವರ್ಷದ ಸೋಹನ್ ಸಿಂಗ್ ರಾವತ್ ಎಂಬಾತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ ಮದ್ಯಪಾನದ ಸ್ಥಿತಿಯಲ್ಲಿ ಬೆದರಿಕೆ ಹಾಕಿದ್ದಾಗಿ ಒಪ್ಪಿಕೊಂಡಿದ್ದಾನೆ. ಹರಿದ್ವಾರ ನಗರ ಕೋತ್ವಾಲಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಹರಿದ್ವಾರದ ಅತ್ಯಂತ ಪ್ರಸಿದ್ಧ ಮತ್ತು ಪವಿತ್ರ ಘಾಟ್ ಎಂದು ಹೆಸರಾದ ಹರ್ ಕಿ ಪೌರಿ ಲಕ್ಷಾಂತರ ಭಕ್ತರು ಪ್ರತಿದಿನ ಪುಣ್ಯಸ್ನಾನ ಮಾಡುವ ಸ್ಥಳ. ಇಲ್ಲಿ ವಿಷ್ಣು ದೇವರ ಜೊತೆಗೆ ಸಂಬಂಧವಿದೆ ಎಂದು ನಂಬಿಕೆ. ಇಲ್ಲಿ ನಿತ್ಯ ಸಂಜೆ ಗಂಗಾ ಆರತಿ ನಡೆಯುತ್ತದೆ. ಪ್ರತಿ 12 ವರ್ಷಕ್ಕೊಮ್ಮೆ ಕುಂಭಮೇಳ ಮತ್ತು 6 ವರ್ಷಕ್ಕೊಮ್ಮೆ ಅರ್ಧ ಕುಂಭಮೇಳ ನಡೆಯುವುದರಿಂದ ಇದು ಆಧ್ಯಾತ್ಮಿಕ ಕೇಂದ್ರವಾಗಿದೆ.

Shwetha M

Leave a Reply

Your email address will not be published. Required fields are marked *