ವರನ ಕಡೆಯವರು ಕೊಡಿಸಿದ ಲೆಹೆಂಗಾ ಚೆನ್ನಾಗಿಲ್ಲವೆಂದು ಮದುವೆ ರದ್ದು!

ವರನ ಕಡೆಯವರು ಕೊಡಿಸಿದ ಲೆಹೆಂಗಾ ಚೆನ್ನಾಗಿಲ್ಲವೆಂದು ಮದುವೆ ರದ್ದು!

ಡೆಹ್ರಾಡೂನ್ : ವರನ ಮನೆಯವರು ಕೊಡಿಸಿದ ಲೆಹೆಂಗಾ ಚೆನ್ನಾಗಿಲ್ಲವೆಂದು ಮದುವೆಯನ್ನೇ ರದ್ದು ಮಾಡಿದ ಘಟನೆ ಉತ್ತರಾಖಂಡದ ಹಲ್ ದ್ವಾನಿಯಲ್ಲಿ ನಡೆದಿದೆ.

ಇದನ್ನೂ ಓದಿ:  ನಿಮಿಷಕ್ಕೆ ಸಾವಿರ ಚಪ್ಪಾಳೆ ತಟ್ಟಿ ವಿಶ್ವ ದಾಖಲೆ ಬರೆದ ಯುವಕ

ಹಲ್ ದ್ವಾನಿ ಮೂಲದ ವಧು ಹಾಗೂ ಅಲ್ಮೋರಾ ಮೂಲದ ವರನಿಗೆ ಕಳೆದ ಜೂನ್ ತಿಂಗಳಿನಲ್ಲಿ ಮದುವೆ ನಿಶ್ಚಯವಾಗಿದ್ದು, ನ.5 ರಂದು ಮದುವೆ ನಡೆಯಬೇಕಿತ್ತು. ಆದರೆ ವರನ ಕಡೆಯವರು ಕೊಡಿಸಿದ ಲೆಹೆಂಗಾ ಸರಿಯಿಲ್ಲ ಎಂಬ ಕ್ಷುಲ್ಲಕ ಕಾರಣ ನೀಡಿ ಮದುವೆ ರದ್ದು ಮಾಡಿದ್ದಾರೆ.

ಈ ವೇಳೆ ವರ ಹಾಗೂ ವಧುವಿನ ಕಡೆಯವರೊಂದಿಗೆ ಪರಸ್ಪರ ಆರೋಪ ಪ್ರತ್ಯಾರೋಪಗಳು ನಡೆದಿದ್ದು, ಕಳೆದ ಅ.30 ರಂದೇ ಮದುವೆ ರದ್ದು ಮಾಡಲು ಬಯಸಿದ್ದರು. ಬಳಿಕ ಸಂಬಂಧಿಕರು ಸಮಸ್ಯೆ ಬಗೆಹರಿಸಲು ಯತ್ನಿಸಿದ್ದರು. ಅದು ವಿಫಲವಾದ ನಂತರ ಈ ಕಲಹ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪೊಲೀಸರು ಎರಡು ಮನೆಯವರಿಗೆ ಬುದ್ದಿವಾದ ಹೇಳಿದ ಬಳಿಕ ಮದುವೆಗೆ ಒಪ್ಪಿಕೊಂಡಿದ್ದರು.

ಆದರೆ ಮದುವೆ ಸಂದರ್ಭ ಸಂಪ್ರದಾಯದಂತೆ ವರನ ಮನೆಯವರು ವಧುವಿಗೆ ಹತ್ತು ಸಾವಿರ ಮೌಲ್ಯದ ಲೆಹೆಂಗಾವನ್ನು ಕಳುಹಿಸಿಕೊಟ್ಟಿದ್ದಾರೆ. ಅದು ವಧುವಿಗೆ ಇಷ್ಟವಾಗಲಿಲ್ಲ ಎಂಬ ಕಾರಣಕ್ಕೆ ಎರಡು ಮನೆಯವರ ನಡುವೆ ಮತ್ತೆ ಮನಸ್ತಾಪವುಂಟಾಗಿ ವಧು ಮದುವೆಯನ್ನೇ ರದ್ದು ಮಾಡಿದ್ದಾಳೆ.

suddiyaana