ಹಾವಿನ ದ್ವೇಷ 12 ವರುಷ.. – ಸಂಗಾತಿ ಕೊಂದವರ ಮೇಲೆ ಪ್ರತಿಕಾರ ತೀರಿಸಿಕೊಂಡ ಹಾವು!

ಹಾವಿನ ದ್ವೇಷ ಹನ್ನೆರಡು ವರುಷ ಇದೊಂದು ಗಾದೆಯನ್ನ ನಾವು ಹಲವು ವರ್ಷಗಳಿಂದ ಕೇಳಿದ್ದೇವೆ.. ಆದ್ರೆ ಹಾವು ನಿಜಕ್ಕೂ ಸೇಡು ತೀರಿಸಿಕೊಳ್ಳುತ್ತಾ ಅನ್ನೋದು ಆನೇಕರ ಪ್ರಶ್ನೆಯೂ ಹೌದು.. ವೇದ ಸುಳ್ಳಾದ್ರೂ ಗಾದೆ ಸುಳ್ಳಾಗದು ಅನ್ನೋ ಮಾತಿನಂತೆ ಈಗ ಹಾವೊಂದು ಕುಟುಂಬದ ಮೇಲೆ ಸೇಡು ತೀರಿಸಿಕೊಂಡಿದೆ.
ಇದನ್ನೂ ಓದಿ : ಕರುಣ್ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದಾರೆ- ತಂಡದಿಂದ ತೆಗೆಯಬಾರದು ಎಂದು ಅನಿಲ್ ಕುಂಬ್ಳೆ ಸಲಹೆ
ಅಚ್ಚರಿಯಾದ್ರೂ ಸತ್ಯ.. ತನ್ನ ಸಂಗಾತಿಯನ್ನ ಕೊಂಡ ಕುಟುಂಬವೊಂದರ ಮೇಲೆ ಹೆಣ್ಣು ಹಾವೊಂದು ಪ್ರತಿಕಾರ ತೀರಿಸಿಕೊಂಡ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ. ಹಾವು ಕಡಿತದಿಂದ ಇಬ್ಬರು ಆಸ್ಪತ್ರೆ ಸೇರಿದ್ರೆ, ಮನೋಜ್ ಎಂಬಾತ ಸಾವನ್ನಪ್ಪಿದ್ದಾರೆ. ʼ
ಅಷ್ಟಕ್ಕೂ ಆಗಿದ್ದೇನು?
ಸಿಹೋರಾ ಗ್ರಾಮದ ನಿವಾಸಿ ಮನೋಜ್ ಮನೆಯಲ್ಲಿ ಜುಲೈ 2ರಂದು ಅವರ ಮಗಳ ನಾಮಕರಣ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಂಬಂಧಿಕರೆಲ್ಲಾ ಮನೆಗೆ ಬಂದಿದ್ದರು. ಈ ಕಾರ್ಯಕ್ರಮಕ್ಕೆ ಮನೋಜ್ ಅವರ ಪತ್ನಿ ಸಹೋದರ ಸಚಿನ್ ಕೂಡ ಅಲ್ಲಿಗೆ ಬಂದಿದ್ದರು. ಸಮಾರಂಭದ ವೇಳೆ ಕೋಣೆಯೊಂದರಲ್ಲಿ ಹಾವು ಸೇರಿಕೊಂಡಿದೆ. ಇದನ್ನ ಕಂಡು ಕಂಡು ಬೆಚ್ಚಿಬಿದ್ದ ಸಚಿನ್ ಕೂಡಲೇ ದೊಣ್ಣೆಯಿಂದ ಗಂಡು ಹಾವನ್ನು ಹೊಡೆದು ಸಾಯಿಸಿದ್ದಾರೆ. ಬಳಿಕ ಕೆಲವೇ ದಿನಗಳಲ್ಲಿ ಆ ಗಂಡು ಹಾವಿನ ಸಂಗಾತಿ ಮೂವರಿಗೆ ಕಚ್ಚಿ ಸೇಡು ತೀರಿಸಿಕೊಂಡಿದೆ. ಈ ಘಟನೆಯಲ್ಲಿ ಮನೋಜ್ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾಮಕರಣ ಸಮಾರಂಭದ ಮರುದಿನ ಸಚಿನ್ ತನ್ನ ಗ್ರಾಮಕ್ಕೆ ಹಿಂದಿರುಗಿದ್ದರು. ಆದ್ರೆ ನಾಲ್ಕು ದಿನಗಳ ನಂತರ ಆ ಮನೆಯೊಳಗೆ ಕಪ್ಪು ಬಣ್ಣದ ಹಾವು ಕಾಣಿಸಿಕೊಂಡಿತ್ತು. ಬುಧವಾರ ರಾತ್ರಿ ಮನೋಜ್ ತಮ್ಮ ಹೆಂಡತಿ ಹಾಗೂ ಮಗುವೊಂದಿಗೆ ಮಲಗಿದ್ದಾಗ ಬೆಳಗ್ಗೆ 4 ಗಂಟೆ ಸುಮಾರಿಗೆ ಮನೋಜ್ಗೆ ಹಾವು ಕಚ್ಚಿತ್ತು. ಹಾವು ನೋಡಿದ ತಕ್ಷಣ ಆಕೆ ಕಿರುಚಿದ್ದಾರೆ. ಕೂಡಲೇ ಮನೋಜ್ರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಲಾಯಿತು. ಆದರೆ ಸ್ವಲ್ಪ ಸಮಯದ ಬಳಿಕ ಆರೋಗ್ಯ ತುಂಬಾ ಹದಗೆಟ್ಟಿತ್ತು, ಎರಡೆರಡು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಅವರು ಮೃತಪಟ್ಟಿದ್ದಾರೆ. ಮನೋಜ್ ಅವರ ತಮ್ಮ ದಿನೇಶ್ ಸೇರಿ ಮೂವರಿಗೆ ಹಾವು ಕಚ್ಚಿತ್ತು. ಅವರ ಸ್ಥಿತಿ ಸ್ಥಿರವಾಗಿದೆ. ಗ್ರಾಮಸ್ಥರು ಆ ಹೆಣ್ಣು ಹಾವನ್ನು ಕೊಂದಿದ್ದಾರೆ ಎಂದು ವರದಿಯಾಗಿದೆ.

ನೋಡಿರಿ

