MBBSಗೆ ಪ್ರವೇಶ ಪಡೆಯಲು ತನ್ನ ಕಾಲನ್ನೇ ಕತ್ತರಿಸಿಕೊಂಡ! – ಆಮೇಲೆ ಏನಾಯ್ತು ಗೊತ್ತಾ?

ತಾವಂದುಕೊಂಡ ಕಾಲೇಜುಗಳಲ್ಲಿ ಸೀಟು ಸಿಗ್ಬೇಕು ಅಂತ ಕೆಲ ವಿದ್ಯಾರ್ಥಿಗಳು ಹೆಚ್ಚಾಗಿ ಓದಿ ಹೆಚ್ಚು ಅಂಕ ಪಡೆಯಲು ಪ್ರಯತ್ನಿಸುತ್ತಾರೆ. ಇನ್ನೂ ಕೆಲವರು ಲಂಚ ಕೊಟ್ಟು ಸೀಟು ಪಡೆಯುತ್ತಾರೆ. ಆದ್ರೆ ಇಲ್ಲೊಬ್ಬ ಎಂಬಿಬಿಎಸ್‌ಗೆ ಪ್ರವೇಶ ಪಡೆಯಲು ತನ್ನ ಕಾಲನ್ನೇ ಕಟ್ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ಕೇರಳ ಆಯ್ತು.. ಈಗ ಕರ್ನಾಟಕದಲ್ಲೂ ವೈರಲ್ ವಿಡಿಯೋಗೆ ವ್ಯಕ್ತಿ ಬಲಿ! – ಅಂಕೋಲದ ವೈದ್ಯ ದುರಂತ ಅಂತ್ಯ!
ಈ ವಿಲಕ್ಷಣಕಾರಿ ಘಟನೆ ಉತ್ತರ ಪ್ರದೇಶದ ಜೌನ್ಪುರದಲ್ಲಿ ನಡೆದಿದೆ. ದಿವ್ಯಾಂಗ ಕೋಟಾದ ಮೂಲಕ ಎಂಬಿಬಿಎಸ್ ಕೋರ್ಸ್‌ನಲ್ಲಿ ಸೀಟು ಪಡೆಯಲು ವಿದ್ಯಾರ್ಥಿಯೊಬ್ಬ ತನ್ನ ಕಾಲಿನ ಒಂದು ಭಾಗವನ್ನು ಕತ್ತರಿಸಿಕೊಂಡಿದ್ದಾನೆ. ಇದೀಗ ಪೊಲೀಸರ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಅಷ್ಟಕ್ಕೂ ಆಗಿದ್ದೇನು?
ತನಿಖೆಯ ಪ್ರಕಾರ ಸೂರಜ್ ಭಾಸ್ಕರ್ ಎಂಬಾತ 2025 ರ ಅಕ್ಟೋಬರ್‌ನಲ್ಲಿ ಅಂಗವೈಕಲ್ಯ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಲು ಬಿಎಚ್‌ಯುಗೆ ಹೋಗಿದ್ದ.ಆದರೆ ಆತನ ದೇಹದ ಯಾವ ಭಾಗವೂ ಊನವಾಗಿರದ ಕಾರಣ ಕೊಟ್ಟು ಅದನ್ನು ತಿರಸ್ಕರಿಸಲಾಗಿತ್ತು. ಹೀಗಾಗಿ ಆತ ತನ್ನ ಕಾಲನ್ನ ಕಟ್ ಮಾಡಿಕೊಂಡು ಹೊಸ ಕತೆ ಕಟ್ಟಿದ್ದ.
ಸೀಟಿಗಾಗಿ ಹಲ್ಲೆ ಕತೆ ಕಟ್ಟಿದ್ದ ಭೂಪ!
ಸೂರಜ್ ಖಲೀಲ್‌ಪುರದ ನಿವಾಸಿಯಾಗಿದ್ದು, ತನ್ನ ತಾಯಿ, ಅಣ್ಣ ಮತ್ತು ಸಹೋದರಿಯೊಂದಿಗೆ ವಾಸಿಸುತ್ತಿದ್ದಾನೆ. ಸೂರಜ್‌ನ ಅಣ್ಣ ಉದ್ಯೋಗದಲ್ಲಿದ್ದರೆ, ಸೂರಜ್ ಡಿ-ಫಾರ್ಮಾ ಪದವಿ ಪಡೆದಿದ್ದು, ಪರೀಕ್ಷೆ ಬರೆಯಲು ಮತ್ತು ಎಂಬಿಬಿಎಸ್‌ಗೆ ಪ್ರವೇಶಿಸಲು ತಯಾರಿ ನಡೆಸುತ್ತಿದ್ದ. ಜನವರಿ 18 ರ ಸಂಜೆ ಮನೆ ನಿರ್ಮಾಣ ಹಂತದಲ್ಲಿದ್ದ ಕಾರಣ ಸೂರಜ್ ಮನೆಯಲ್ಲಿ ಒಬ್ಬಂಟಿಯಾಗಿದ್ದ. ಮರುದಿನ ಬೆಳಗ್ಗೆ, ಸೂರಜ್‌ನ ಕತ್ತರಿಸಿದ ಕಾಲು ಪತ್ತೆಯಾಗಿದ್ದು, ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಧ್ಯರಾತ್ರಿಯ ಸುಮಾರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ತನ್ನ ಮೇಲೆ ಹಲ್ಲೆ ನಡೆಸಿ, ಪ್ರಜ್ಞೆ ತಪ್ಪಿಸಿ, ಕಾಲಿನ ಬೆರಳನ್ನು ಕತ್ತರಿಸಿ, ನಂತರ ಅಲ್ಲೇ ಬಿಟ್ಟು ಹೋಗಿದ್ದಾರೆ. ಅಲ್ಲದೆ, ಪಕ್ಕದ ಪ್ರದೇಶದ ಬಳಿ ದೀಪಗಳನ್ನು ಆನ್ ಮಾಡುವ ವಿವಾದದ ಕುರಿತು ತನಗೆ ಈ ಹಿಂದೆ ಬೆದರಿಕೆ ಕರೆಗಳು ಬಂದಿದ್ದವು ಎಂದು ತನ್ನ ಹೆತ್ತವರನ್ನು ಮತ್ತು ಪೊಲೀಸರ ಮುಂದೆ ಹೇಳಿದ್ದ. ಬಳಿಕ ಈ ಕೃತ್ಯದ ಬಗ್ಗೆ ತನ್ನ ಗೆಳತಿಗೂ ತಿಳಿಸಿದ್ದ. ಈ ಬೆನ್ನಲ್ಲೇ ಪೊಲೀಸರು ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿದ್ದಾರೆ. ಕೂಡಲೇ ತನಿಖೆ ಆರಂಭಿಸಿದ ಪೊಲೀಸರು ಕರೆ ವಿವರ ದಾಖಲೆಗಳನ್ನು ಪಡೆದಿದ್ದಾಳೆ. ಬಳಿಕ ಹಲ್ಲೆಯಾಗಿದೆ ಎಂದು ಹೇಳಿದ ಸ್ಥಳದಲ್ಲಿ ಪರಿಶೀಲನೆ ಮಾಡಿಸಿದ್ದಾರೆ. ಈ ವೇಳೆ ಸಿರಿಂಜ್‌ಗಳು, ಅರವಳಿಕೆ ಮಾತ್ರೆಗಳು ಮತ್ತು ಕತ್ತರಿಸುವ ಯಂತ್ರ ಪತ್ತೆಯಾಗಿದೆ.
ಬಳಿಕ ಪೊಲೀಸರು ಸೂರಜ್‌ನಿಂದ ಡೈರಿಯನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದಾಗ ಈ ವಿಚಾರ ಬಯಲಾಗಿದೆ. ಅದರಲ್ಲಿ ಅವರು 2026 ರಲ್ಲಿ ಯಾವುದೇ ಬೆಲೆ ತೆತ್ತಾದರೂ ಎಂಬಿಬಿಎಸ್ ಕೋರ್ಸ್ ಪಡೆಯುವ ದೃಢಸಂಕಲ್ಪ ಮಾಡಿದ್ದ ಅನ್ನೋದು ಗೊತ್ತಾಗಿದೆ. ಸದ್ಯ ಸೂರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ನೋಡಿರಿ

