ಟೆಂಪೋ ಹಾಗೂ ಡಂಪರ್ ಮಧ್ಯೆ ಭೀಕರ ಅಪಘಾತ – 12 ಮಂದಿ ಸ್ಥಳದಲ್ಲೇ ಸಾವು

ಟೆಂಪೋ ಹಾಗೂ ಡಂಪರ್ ಮಧ್ಯೆ ಭೀಕರ ಅಪಘಾತ – 12 ಮಂದಿ ಸ್ಥಳದಲ್ಲೇ ಸಾವು

ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಟೆಂಪೋ ಹಾಗೂ ಡಂಪರ್ ಆಟೋ ನಡುವೆ ಢಿಕ್ಕಿ ಸಂಭವಿಸಿ 12 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಸಾಲು ಸಾಲು ರಜೆ ಅಂತಾ ಊರಿಗೆ ಹೊರಟವರಿಗೆ ಬಿಗ್‌ ಶಾಕ್‌ – ಟಿಕೆಟ್‌ ದರ ದುಪ್ಪಟ್ಟು ಮಾಡಿದ ಖಾಸಗಿ ಬಸ್ ಮಾಲಕರು!

ಉತ್ತರ ಪ್ರದೇಶದ ಶಹಜಹಾನ್​ಪುರದದಲ್ಲಿ ಗುರುವಾರ ಈ ಅವಘಡ ಸಂಭವಿಸಿದೆ. ವೇಗವಾಗಿ ಬಂದ ಡಂಪರ್ ಆಟೋ ರಿಕ್ಷಾಗೆ ಟೆಂಪೋ ಡಿಕ್ಕಿ ಹೊಡೆದಿದೆ. ಪರಿಣಾಮ 12 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ದಟ್ಟವಾದ ಮಂಜಿನಿಂದ ಉಂಟಾದ ಕಡಿಮೆ ಗೋಚರತೆಯು ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಅಲ್ಲಾಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಫರೂಕಾಬಾದ್ ರಸ್ತೆಯಲ್ಲಿ ಘರ್ಷಣೆ ಸಂಭವಿಸಿದೆ. ಘಟನೆಯ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ದುಃಖತಪ್ತ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಗಾಯಾಳುಗಳ ತಕ್ಷಣದ ಚಿಕಿತ್ಸೆಗೆ ಆದ್ಯತೆ ನೀಡಬೇಕು ಮತ್ತು ಮೃತರ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ನೆರವು ನೀಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Shwetha M