ಹೋಳಿ ಬಿದ್ದಿದ್ದಕ್ಕೆ ಯುವಕನ ಕೊ*ಲೆ – ದೆಹಲಿ MCDಯಿಂದ ಆರೋಪಿಗಳ ಮನೆ ಧ್ವಂಸ

ಹೋಳಿ ಬಿದ್ದಿದ್ದಕ್ಕೆ ಯುವಕನ ಕೊ*ಲೆ – ದೆಹಲಿ MCDಯಿಂದ  ಆರೋಪಿಗಳ ಮನೆ ಧ್ವಂಸ

ಉತ್ತಮ್ ನಗರದಲ್ಲಿ ಹೋಳಿ ಹಬ್ಬದಂದು ಮುಸ್ಲಿಂ ಮಹಿಳೆ ಮೇಲೆ ಹೋಳಿ ಬಿದ್ದಿದ್ದಕ್ಕೆ ಯುವಕನನ್ನು ಥಳಿಸಿ ಕೊಂದ ಪ್ರಕರಣದಲ್ಲಿ ತ್ವರಿತ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಕರಣ ಸಂಬಂಧ ಪೊಲೀಸರು ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇಲ್ಲಿಯವರೆಗೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಪ್ರಾಪ್ತ ವಯಸ್ಕ ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ. ಘಟನೆಯ ನಂತರ ಆರೋಪಿಗಳ ಮನೆಗೆ ಬೆಂಕಿ ಹಚ್ಚಲಾಗಿತ್ತು. ಇಂದು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (MCD) ಬುಲ್ಡೋಜರ್ ಕಾರ್ಯಾಚರಣೆ ನಡೆಸಿದೆ. ಆರೋಪಿ ನಿಜಾಮುದ್ದೀನ್ ಗೆ ಸೇರಿದ ಆಸ್ತಿಯನ್ನು ಎಂಸಿಡಿ ಕೆಡವಿದೆ. ಮನೆ ಧ್ವಂಸಗೊಳಿಸುತ್ತಿರುವ ವಿಡಿಯೋ ಹೊರಬಿದ್ದಿದೆ.

ಬುಧವಾರ ರಾತ್ರಿ ಘಟನೆಯ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿದರು ಎಂದು ಡಿಸಿಪಿ ಕುಶಾಲ್ ಪಾಲ್ ಸಿಂಗ್ ಹೇಳಿದ್ದಾರೆ. ಮುಸ್ಲಿಂ ಮಹಿಳೆ ಮೇಲೆ ಹೋಳಿ ತುಂಬಿದ್ದ ನೀರಿನ ಬಲೂನ್ ಬಿದ್ದ ಕಾರಣ ಜಗಳ ಪ್ರಾರಂಭವಾಗಿ ಅದು ಗಂಭೀರ ಹಲ್ಲೆಗೆ ಕಾರಣವಾಯಿತು ಎಂದು ತಿಳಿದುಬಂದಿದೆ. ಇದರಿಂದ ಆಕ್ರೋಶಗೊಂಡ ನಿಜಾಮುದ್ದೀನ್ ತಂಡದೊಂದಿಗೆ ತರುಣ್ ಮನೆಗೆ ನುಗ್ಗಿ ಭೀಕರವಾಗಿ ಹಲ್ಲೆ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ತರುಣ್ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದರು.

ಇದನ್ನೂ ಓದಿ:  ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ  – ನೋಡು ನೋಡುತ್ತಿದ್ದಂತೆ ಕಾರಿನೊಳಗಿದ್ದ ವ್ಯಕ್ತಿ ಭಸ್ಮ!

ತನಿಖೆಯ ಸಮಯದಲ್ಲಿ, ಪೊಲೀಸರು ಅಪ್ರಾಪ್ತ ವಯಸ್ಕ ಸೇರಿದಂತೆ ಐದು ಆರೋಪಿಗಳನ್ನು ಬಂಧಿಸಿದರು. ನಂತರ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಇನ್ನಿಬ್ಬರನ್ನು ಗುರುತಿಸಿ ಬಂಧಿಸಲಾಯಿತು. ಬಂಧಿತ ಆರೋಪಿಗಳಲ್ಲಿ ಉಮರುದ್ದೀನ್, ಆತನ ಸಹೋದರ ಕಮ್ರುದ್ದೀನ್ ಮತ್ತು ಮಗ ಮುಜಾಫರ್ ಒಂದೇ ಕುಟುಂಬದವರು. ಶುಕ್ರವಾರ, ಕೋಪಗೊಂಡ ಜನರು ಪ್ರತಿಭಟನೆ ವೇಳೆ ಆರೋಪಿಗಳ ಮನೆಗಳಿಗೆ ನುಗ್ಗಿ ಬೆಂಕಿ ಹಚ್ಚಿದ್ದರು. ಪರಿಸ್ಥಿತಿ ಉದ್ವಿಗ್ನಗೊಂಡಿದ್ದರಿಂದ ಸ್ಥಳೀಯ ಪೊಲೀಸರು, ಕ್ಷಿಪ್ರ ಕಾರ್ಯ ಪಡೆ ಮತ್ತು ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದೆ.

ಆರೋಪಿ ಕುಟುಂಬದ ಆಸ್ತಿಯ ಮೇಲೆ ಬುಲ್ಡೋಜರ್ ಬಳಸಿ ದಾಳಿ ನಡೆಸಿರುವುದನ್ನು ಬಿಜೆಪಿ ಸ್ವಾಗತಿಸಿದೆ. ಉತ್ತಮ್ ನಗರದಲ್ಲಿ ನಡೆದ ದಾಳಿಯನ್ನು ದೆಹಲಿ ರಾಜ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ತೀವ್ರವಾಗಿ ಖಂಡಿಸಿದ್ದಾರೆ. ಹಿಂಸಾಚಾರದ ಆರೋಪ ಹೊತ್ತಿರುವ ಕುಟುಂಬದ ಅಕ್ರಮವಾಗಿ ನಿರ್ಮಿಸಲಾದ ಮನೆಯನ್ನು ದೆಹಲಿ ಪೊಲೀಸರು ಮತ್ತು ಎಂಸಿಡಿ ಕೆಡವಿರುವುದನ್ನು ಸ್ವಾಗತಿಸಿದ್ದಾರೆ.

Kishor KV

Leave a Reply

Your email address will not be published. Required fields are marked *