ಮುಸುಕು ಹಾಕಿ ಮಲಗೋ ಅಭ್ಯಾಸ ಇದ್ಯಾ? – ಉಸಿರಾಡಿ ಬಿಟ್ಟ ಗಾಳಿಯಿಂದಲೇ ಆಪತ್ತು?

ಮುಸುಕು ಹಾಕಿ ಮಲಗೋ ಅಭ್ಯಾಸ ಇದ್ಯಾ? – ಉಸಿರಾಡಿ ಬಿಟ್ಟ ಗಾಳಿಯಿಂದಲೇ ಆಪತ್ತು?

ಚಳಿಯಿಂದ ತಪ್ಪಿಸಿಕೊಳ್ಳಲು ಜನರು ಕಂಬಳಿಗಳು, ಬೆಚ್ಚಗಿನ ಸ್ವೆಟರ್‌ಗಳನ್ನು ಬಳಸುತ್ತಾರೆ. ರಾತ್ರಿ ಮಲಗುವಾಗ, ಕುಟುಂಬದ ಕೆಲವರು ಚಳಿಯನ್ನು ತಪ್ಪಿಸಲು ಹೊದಿಕೆಯಿಂದ ಮುಖವನ್ನು ಅನೇಕರು ಮುಚ್ಚಿಕೊಳ್ಳುತ್ತಾರೆ. ಹೀಗೆ ಮುಸುಕು ಹಾಕಿ ಮಲಗುವುದು ಅಪಾಯಕಾರಿ. ಇದರಿಂದಾಗಿ ಗಂಭೀರ ಆರೋಗ್ಯ ಸಮಸದ್ಯೆ ಕಾಣಿಸಿಕೊಳ್ಳುತ್ತೆ ಅಂತಾ ಗೊತ್ತಾಗಿದೆ.

ನಿದ್ದೆ ಮಾಡುವುದು ಆರೋಗ್ಯಕ್ಕೆ ಅತೀ ಅಗತ್ಯ. ಆದರೆ ನಿದ್ದೆ ಮಾಡುವ ಭಂಗಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತದೆ. ಅದರಲ್ಲು ಕೆಲವ್ರಿಗೆ ಪೂರ್ತಿ ಹೊದಿಕೆಯನ್ನು ಹೊದ್ದುಕೊಂಡ್ರೆ ನಿದ್ದೇನೆ ಬರೋದಿಲ್ಲ. ಇನ್ನು ಕೆಲವರಿಗೆ ಮುಸುಕು ಹಾಕಿ ಮಲಗಿದ್ರೆ ಮಾತ್ರ ನಿದ್ರೆ ಬರೋದು. ಮಲಗುವಾಗ ಮುಖವನ್ನು ಪೂರ್ತಿ ಮುಚ್ಚಿಕೊಳ್ಳುವುದರಿಂದ ನಾವು ಉಸಿರಾಡಿ ಬಿಟ್ಟ ಗಾಳಿ ಹೊರಗೆ ಹೋಗೋದಿಲ್ಲ. ಇದ್ರಿಂದಾಗಿ ನಾವು ಹೊರಬಿಡುವ ಕಾರ್ಬನ್‌ ಡೈಆಕ್ಸೈಡ್‌  ಅನ್ನೇ ನಾವು ಉಸಿರಾಡಬೇಕಾಗುತ್ತೆ.

ಇದನ್ನೂ ಓದಿ: ವಾಕಿಂಗ್ ಮಾಡದೆಯೇ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು – ಮೆಟ್ಟಿಲು ಹತ್ತಿದರೆ ಏನೆಲ್ಲಾ ಪ್ರಯೋಜನ?

ಹೊದಿಕೆಯ ಅಡಿಯಲ್ಲಿ ಗಾಳಿಯು ಬೆಚ್ಚಗಿದ್ದರೂ ಸಹ ದೇಹಕ್ಕೆ ಅತ್ಯಗತ್ಯವಾದ ಆಕ್ಸಿಜನ್ ನ ಕೊರತೆ ಎದುರಾಗುತ್ತದೆ. ಇದು ಚಳಿಯಲ್ಲೂ ವಿಪರೀತ ಬೆವರುವುದು, ಸುಸ್ತಾಗುವುದು, ತಲೆನೋವು ಮೊದಲಾದ ಸಮಸ್ಯೆಗೆ ಕಾರಣವಾಗುತ್ತದೆ. ಇದು ಹಾರ್ಟ್ ಅಟ್ಯಾಕ್ ಆಗೋದಿಕ್ಕೂ ಕಾರಣವಾಗಬಹುದು. ಅಲ್ಲದೆ ಆಕ್ಸಿಜನ್ ಕೊರತೆಯಿಂದ ತಲೆನೋವು, ನಿದ್ರಾಹೀನತೆ, ವಾಕರಿಕೆ, ಆಯಾಸದಂತಹ ಸಮಸ್ಯೆಗಳು ಸಹ ಕಾಣಿಸಿಕೊಳ್ಳಬಹುದು. ಹೀಗಾಗಿ ಮುಸುಕು ಹಾಕೋಕು ಮೊದಲು ಎಚ್ವರವಿರಲಿ.. ನಮ್ಮ ಉತ್ತಮ ಆರೋಗ್ಯಕ್ಕೆ ಶುದ್ದ ಗಾಳಿ ಮುಖ್ಯ ಅಲ್ವಾ?

Shwetha M