ಅಬ್ಬಬ್ಬಾ.. 700 ಬಾರ್‌ ಸೋಪ್‌ ಬಳಸಿ 220 ಟನ್‌ ತೂಕದ ಹೋಟೆಲ್‌ ಸ್ಥಳಾಂತರ!

ಅಬ್ಬಬ್ಬಾ.. 700 ಬಾರ್‌ ಸೋಪ್‌ ಬಳಸಿ 220 ಟನ್‌ ತೂಕದ ಹೋಟೆಲ್‌ ಸ್ಥಳಾಂತರ!

ಯಾವುದಾದರೊಂದು ವಸ್ತುವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬದಲಾವಣೆ ಮಾಡುವುದನ್ನು ಕೇಳಿದ್ದೇವೆ. ಇನ್ನು ಮನೆ, ಕಟ್ಟಡಗಳು ಹಳೆಯದಾಗಿದ್ದರೆ ಅದನ್ನು ಸರಿಪಡಿಸಲಾಗುತ್ತದೆ. ಇಲ್ಲಾ ಅಂದ್ರೆ ಅದನ್ನು ಕೆಡವಿ, ಹೊಸ ಮನೆ ಕಟ್ಟಲಾಗುತ್ತದೆ. ಆದ್ರೆ ಇಲ್ಲೊಂದು ಕಡೆ ಹಳೆಯ ಹೋಟೆಲ್‌ವೊಂದನ್ನು ಕೆಡವುವ ಬದಲು ಕಟ್ಟಡವನ್ನೇ ಬೇರೆಡೆಗೆ ಸ್ಥಳಾಂತರ ಮಾಡಿದ್ದಾರೆ. ಅದೂ ಕೂಡ ಬಾರ್‌ ಸೋಪ್‌ ನಿಂದ!

ಹೌದು, ಅಚ್ಚರಿಯಾದ್ರೂ ಸತ್ಯ.. ಈ ಘಟನೆ ಕೆನಡಾದ ನೋವಾ ಸ್ಕಾಟಿಯಾದ ಹ್ಯಾಲಿಪ್ಯಾಕ್ಸ್‌ನಲ್ಲಿ ನಡೆದಿದೆ. 1826 ರಲ್ಲಿ ನಿರ್ಮಿಸಲಾಗಿದ್ದ ಈ ಕಟ್ಟಡವನ್ನು ನಿರ್ಮಿಸಲಾಗಿತ್ತು. ಹಲವು ವರ್ಷಗಳ ಹಿಂದೆ ಆ ಕಟ್ಟಡವನ್ನು ಹೋಟೆಲ್‌ ಆಗಿ ಪರಿವರ್ತಿಸಲಾಗುತ್ತಿತ್ತು. 2018 ರಿಂದಲೂ ಈ ಕಟ್ಟಡ ಧ್ವಂಸಗೊಳಿಸಬೇಕು ಅಂತಾ ಪ್ಲಾನ್‌ ಮಾಡಲಾಗಿತ್ತು. ಇದೀಗ ಆ ಕಟ್ಟಡವನ್ನು ಕೆಡವುವ ಬದಲು ಬೇರೆಡೆಗೆ ಶಿಫ್ಟ್‌ ಮಾಡಲಾಗಿದೆ. ಈ ಕಟ್ಟಡವನ್ನು ಯಾವುದೇ ತಂತ್ರಜ್ಞಾನ ಬಳಸದೇ ಬಾರ್‌ ಸೋಪಿನಿಂದ ಬೇರೆಡೆಗೆ ಶಿಫ್ಟ್‌ ಮಾಡಿ ಉಳಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಆಕಳಿನ ತುಪ್ಪವನ್ನುಕೆಜಿಗೆ 5 ಸಾವಿರ ರೂಪಾಯಿಯಂತೆ ಮಾರುತ್ತಿದ್ದೇನೆ! – ಸದನದಲ್ಲಿ ಯತ್ನಾಳ್‌ ಹೇಳಿಕೆ

ಈ ಕಟ್ಟಡವನ್ನು ದ್ವಂಸಗೊಳಿಸಲು ಪ್ಲಾನ್‌ ಮಾಡುತ್ತಿರುವ ವೇಳೆ ರಿಯಲ್ ಎಸ್ಟೇಟ್ ಕಂಪನಿ, ಗ್ಯಾಲಕ್ಸಿ ಪ್ರಾಪರ್ಟೀಸ್, ಐತಿಹಾಸಿಕ ಕಟ್ಟಡವನ್ನು ಹೊಸ ಸ್ಥಳಕ್ಕೆ ಸ್ಥಳಾಂತರಿಸುವ ಯೋಜನೆಯೊಂದಿಗೆ ಮಧ್ಯ ಪ್ರವೇಶಿಸಿತು. ಬಳಿಕ ಈ ಕಟ್ಟಡವನ್ನು ರಿಯಲ್ ಎಸ್ಟೇಟ್ ಕಂಪನಿ ಖರೀದಿಸಿತು. ಅಲ್ಲದೆ, ಯೋಜಿತ ಅಪಾರ್ಟ್ಮೆಂಟ್ ಕಟ್ಟಡಕ್ಕೆ ಸಂಪರ್ಕಪಡಿಸೋದಾಗಿಯೂ ಹೇಳಿಕೊಂಡಿದ್ದಾರೆ.

ರಿಯಲ್‌ ಎಸ್ಟೇಟ್‌ ಕಂಪನಿ ಒಪ್ಪಂದ ಮಾಡಿಕೊಂಡತೆ ಕಟ್ಟಡವನ್ನು ಸ್ಥಳಾಂತರಿಸಲು ಹೊರಟಿದೆ. ಆದ್ರೆ ಈ ಕಟ್ಟಡವನ್ನು ಸ್ಥಳಾಂತರಿಸಲು ಅಷ್ಟು ಸುಲಭವಾಗಿರಲಿಲ್ಲ. ಎಲ್ಮ್‌ವುಡ್‌ ಬೃಹತ್ 220-ಟನ್ ತೂಕದ ರಚನೆಯಾಗಿದೆ. ಆದರೆ ಎಸ್. ರಶ್ಟನ್ ಕನ್‌ಸ್ಟ್ರಕ್ಷನ್‌ನ ತಂಡ ಈ ಸವಾಲಿನ ಕಾರ್ಯಕ್ಕೆ ಮುಂದಾಗಿತ್ತು.  ಇನ್ನು, ಸ್ಥಳಾಂತರ ಕಾರ್ಯಕ್ಕೆ ಸಾಂಪ್ರದಾಯಿಕ ರೋಲರ್‌ಗಳನ್ನು ಬಳಸುವ ಬದಲು, ಆನೆ ದಂತದ ಸಾಬೂನಿನಿಂದ ಮಾಡಿದ ವಿಶಿಷ್ಟವಾದ ಸೊಲ್ಯೂಷನ್‌ ಬಾರ್‌ಗಳನ್ನು ಬಳಸಿಕೊಳ್ಳಲು ಸಿಬ್ಬಂದಿ ನಿರ್ಧರಿಸಿದರು. ಇದಕ್ಕಾಗಿ ಬರೋಬ್ಬರಿ 700 ಬಾರ್‌ ಸೋಪುಗಳನ್ನು ಬಳಸಲಾಗಿತ್ತು. ಮೃದುವಾದ ಸೋಪ್ ಬಾರ್‌ಗಳು ಕಟ್ಟಡವು ಸರಾಗವಾಗಿ ಚಲಿಸಲು ಅವಕಾಶ ಮಾಡಿಕೊಟ್ಟಿದೆ.  2 ಅಗೆಯುವ ಯಂತ್ರ ಮತ್ತು ಟೋವ್‌ ಟ್ರಕ್‌ನಿಂದ ಎಳೆಯಲಾಗಿದೆ. ಈ ಕಾರ್ಯವನ್ನು ನಿರ್ಮಾಣ ಕಂಪನಿಯ ಮಾಲೀಕ ಶೆಲ್ಡನ್ ರಶ್ಟನ್, ಎಲ್ಮ್‌ವುಡ್‌ ಅನ್ನು 30 ಅಡಿಗಳಷ್ಟು ಸುಗಮವಾಗಿ ಎಳೆಯಲಾಗಿದೆ ಎಂದು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

Shwetha M