ಮೀನು ತಿಂದು ತನ್ನ ದೇಹದ ನಾಲ್ಕು ಅಂಗಗಳನ್ನು ಕಳೆದುಕೊಂಡ ಮಹಿಳೆ – ಕಾರಣ ಏನು ಗೊತ್ತಾ..?

ಮೀನು ತಿಂದು ತನ್ನ ದೇಹದ ನಾಲ್ಕು ಅಂಗಗಳನ್ನು ಕಳೆದುಕೊಂಡ ಮಹಿಳೆ – ಕಾರಣ ಏನು ಗೊತ್ತಾ..?

ನಾನ್ ವೆಜ್ ತಿನ್ನೋರಿಗೆ ಮೀನು ಅಂದರೆ ತುಂಬಾನೇ ಇಷ್ಟ. ಅದರಲ್ಲೂ ಕರಾವಳಿ ಪ್ರದೇಶಗಳ ನಿವಾಸಿಗಳಿಗೆ ಮೀನು ಇಲ್ಲದಿದ್ದರೆ ಅದು ಊಟವೇ ಅಲ್ಲ ಅನ್ನಿಸಿಬಿಡುತ್ತೆ. ಹೀಗಾಗಿ ದಿನನಿತ್ಯ ಮತ್ತು ಬಹುತೇಕವಾಗಿ ತಮ್ಮ ಎಲ್ಲಾ ಆಹಾರಗಳಲ್ಲಿ ಮೀನುಗಳ ಬಳಕೆ ಮಾಡುತ್ತಾರೆ. ಅವರುಗಳು ಮೀನಿನ ಆಹಾರದ ಮೇಲೆ ಅಷ್ಟೊಂದು ಅವಲಂಬಿತವಾಗಿರುವುದನ್ನು ನೋಡಿದಾಗ ಬೇರೆ ಪ್ರದೇಶಗಳ ಜನರಿಗೆ ಅಚ್ಚರಿ ಅನ್ನಿಸಬಹುದು. ಅಸಲಿಗೆ ಮೀನು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಅನ್ನೋದು ಅಷ್ಟೇ ಸತ್ಯ. ಆದರೆ ಈ ಮಹಿಳೆ ಮಾತ್ರ ಮೀನು ತಿಂದು ತನ್ನ ದೇಹದ ನಾಲ್ಕು ಅಂಗಗಳನ್ನೇ ಕಳೆದುಕೊಂಡಿದ್ದಾಳೆ.

ಇದನ್ನೂ ಓದಿ : ಮಹಿಳಾ ಸಂಘಟನೆಯಲ್ಲಿದ್ದ ಪತ್ನಿ ಮನೆಯನ್ನೇ ಸೇರುತ್ತಿರಲಿಲ್ಲ – ರೊಚ್ಚಿಗೆದ್ದ ಪತಿಯಿಂದ ಇಬ್ಬರ ಪ್ರಾಣವೇ ಹೋಯ್ತು

ಮೀನಿನಲ್ಲಿ ನಾನಾ ವಿಧಗಳಿವೆ. ಒಂದೊಂದು ರೀತಿಯ ಮೀನುಗಳು ಒಂದೊಂದು ಬಗೆಯಲ್ಲಿ ಬಾಯಿಗೆ ರುಚಿ ಕೊಡುತ್ತವೆ. ಮೀನಿನ ಮಾಂಸ ಇತರ ಆಹಾರ ಪದಾರ್ಥಗಳಿಗಿಂತ ಬಹು ಬೇಗನೆ ಬೇಯುತ್ತದೆ. ಯಾವುದೇ ತರಹದ ಮೀನನ್ನು ಸುಲಭವಾಗಿ ಬೇಟೆಯಾಡಿ ನೀವು ಅದನ್ನು ಎಣ್ಣೆಯಲ್ಲಿ ಕರಿಯಬಹುದು, ಹುರಿಯಬಹುದು, ನೀರಿನ ಹವೆಯಲ್ಲಿ ಬೇಯಿಸಬಹುದು, ನೀರಿನಲ್ಲಿ ಕುದಿಸಬಹುದು ಹಾಗೂ ಕೆಂಡದಲ್ಲಿ ಸುಡಬಹುದು. ಆದ್ರೆ ಇಲ್ಲಿ ಅದೇ ಮೀನು ತಿಂದು ಮಹಿಳೆಯೊಬ್ಬರು ತನ್ನ ದೇಹದ ನಾಲ್ಕು ಅಂಗಗಳನ್ನು ಕಳೆದುಕೊಂಡಿರುವ ದಾರುಣ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ (California) ನಡೆದಿದೆ. ಲಾರಾ ಬರಾಜಾಸ್ (40) ಅವರು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಹಾಗಂತ ಮೀನುಪ್ರಿಯರು ಗಾಬರಿಯಾಗುವುದು ಬೇಡ. ಈ ಮಹಿಳೆ ತನ್ನ ಅಂಗಾಂಗ ಕಳೆದುಕೊಳ್ಳಲು ಕಾರಣ ಬ್ಯಾಕ್ಟೀರಿಯಾ ಸೋಂಕು. ಬ್ಯಾಕ್ಟೀರಿಯಾ ಸೋಂಕಿನಿಂದ ಮಹಿಳೆ‌ (Woman lost Limbs) ಅಂಗಾಂಗ ಕಳೆದುಕೊಂಡಿರುವುದಾಗಿ ವರದಿಯಾಗಿದೆ. ಬ್ಯಾಕ್ಟೀರಿಯಾದ ಮಾರಣಾಂತಿಕ ಸ್ಟ್ರೈನ್‍ನಿಂದ ಕಲುಷಿತಗೊಂಡಿರುವ ಕಡಿಮೆ ಬೇಯಿಸಿದ ತಿಲಾಪಿಯಾ ಮೀನಿನ (Fish) ಸೇವನೆಯಿಂದ ಉಂಟಾಗುತ್ತದೆ ಎನ್ನಲಾಗಿದೆ. ಬರಾಜಸ್ ಅವರು ಸ್ಥಳೀಯ ಮಾರುಕಟ್ಟೆಯಲ್ಲಿ ಮೀನು ಖರೀದಿಸಿದ್ದಾರೆ. ಆ ಮೀನಿನ ಸಾಂಬರ್ ತಿಂದ ಬಳಿಕ ಅವರು ಅಸ್ವಸ್ಥಗೊಂಡಿದ್ದಾರೆ. ಬಹುತೇಕ ಪ್ರಾಣವನ್ನೇ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದ ಬರಾಜಸ್ ನನ್ನು ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಇಡಲಾಗಿತ್ತು. ಕ್ರಮೇಣ ಅವರ ಬೆರಳುಗಳು, ಪಾದಗಳು, ತುಟಿಗಳು ಕಪ್ಪು ಬಣ್ಣಕ್ಕೆ ತಿರುಗುತ್ತಾ ಬಂದವು. ಮೂತ್ರಪಿಂಡಗಳು ಸಂಪೂರ್ಣ ವಿಫಲವಾಗಿವೆ ಎಂದು ಮೆಸ್ಸಿನಾ ಮಾಹಿತಿ ನೀಡಿದ್ದಾರೆ.

ಮೆಸ್ಸಿನಾ ಅವರ ಪ್ರಕಾರ, ಸಾಮಾನ್ಯವಾಗಿ ಸಮುದ್ರದ ನೀರಿನಲ್ಲಿ ಕಂಡುಬರುವ ಸಂಭಾವ್ಯ ಮಾರಣಾಂತಿಕ ಬ್ಯಾಕ್ಟೀರಿಯ ‘ವಿಬ್ರಿಯೊ ವಲ್ನಿಫಿಕಸ್’ ಬರಜಾಸ್ ಅವರ ಸಮಸ್ಯೆಗೆ ಕಾರಣವಾಗಿದೆ ಎಂದಿದ್ದಾರೆ. ಇಂತಹ ತೀವ್ರತರವಾದ ಆರೋಗ್ಯದ ಅಪಾಯಗಳನ್ನು ತಪ್ಪಿಸಲು ಸಮುದ್ರಾಹಾರ, ಮೀನುಗಳನ್ನು ಸರಿಯಾಗಿ ತಯಾರಿಸುವ ಮತ್ತು ಸೇವಿಸುವ ಬಗ್ಗೆ ಜಾಗೃತಿ ವಹಿಸಬೇಕು. ಕಲುಷಿತವಾಗಿರುವ ಏನನ್ನಾದರೂ ತಿನ್ನುವ ಮೂಲಕ ಅಥವಾ ಬ್ಯಾಕ್ಟೀರಿಯಾ ಹೊಂದಿರುವ ನೀರು ಕುಡಿಯುವ ಮೂಲಕ ಇಂತಹ ಬ್ಯಾಕ್ಟೀರಿಯಾ ಸೋಂಕಿಗೆ ತುತ್ತಾಗುವ ಅಪಾಯ ಹೆಚ್ಚಾಗಿದೆ ಎಂದು ಸಾಂಕ್ರಾಮಿಕ ರೋಗ ತಜ್ಞ ಡಾ. ನತಾಶಾ ಸ್ಪಾಟ್ಟಿಸ್ವುಡ್ ಕ್ರೋನ್‍ಗೆ ಹೇಳಿದ್ದಾರೆ.

 

Shantha Kumari