ಮಗುವಾಗಿದ್ದಾಗ ಕಿಡ್ನಾಪ್ – 51 ವರ್ಷಗಳ ಬಳಿಕ ಕುಟುಂಬ ಸೇರಿದ ಯುವತಿ 

ಮಗುವಾಗಿದ್ದಾಗ ಕಿಡ್ನಾಪ್ – 51 ವರ್ಷಗಳ ಬಳಿಕ ಕುಟುಂಬ ಸೇರಿದ ಯುವತಿ 

ಟೆಕ್ಸಾಸ್: 1971ರಲ್ಲಿ ಯುನೈಟೆಡ್ ಸ್ಟೇಟ್ಸ್ ನ ಫೋರ್ಟ್ ವರ್ತ್ ಪಟ್ಟಣದಲ್ಲಿ  ಸಿನಿಮೀಯ ರೀತಿಯಲ್ಲಿ ಮಗುವಿನ ಅಪಹರಣ ನಡೆದಿದೆ. ಈ ಅಪಹರಣ ನಡೆದು ಸುಮಾರು 51 ವರ್ಷಗಳ ಬಳಿಕ ಅಪಹರಣಕ್ಕೊಳಗಾದ ಮಹಿಳೆ ಪೋಷಕರ ಮಡಿಲಿಗೆ ಸೇರಿದ್ದಾಳೆ.

ಯುನೈಟೆಡ್ ಸ್ಟೇಟ್ಸ್ ನ ಫೋರ್ಟ್ ವರ್ತ್ ಪಟ್ಟಣದ ನಿವಾಸಿ, ಅಲ್ಟಾ ಅಪಾಂಟೆನ್ಕೋ ಎಂಬ ಮಹಿಳೆ ಕೆಲಸಕ್ಕೆ ಹೋಗುತ್ತಿದ್ದಳು. ಈ ವೇಳೆ ತನ್ನ ಮಗು ಮೆಲಿಸ್ಸಾಳನ್ನು ನೋಡಿಕೊಳ್ಳಲು ಆಯಿಯ ಸಹಾಯ ಬೇಕಿತ್ತು. ಇದಕ್ಕಾಗಿ 1971ರಲ್ಲಿ ಪತ್ರಿಕೆಯೊಂದರಲ್ಲಿ ಜಾಹಿರಾತು ನೀಡಿದ್ದರು. ಈ ಜಾಹಿರಾತು ನೋಡಿ ಮಹಿಳೆಯೊಬ್ಬಳು ಮನೆ ಬಳಿ ಧಾವಿಸಿದ್ದಾಳೆ. ಆಕೆಯ ಪೂರ್ವಾಪರ ವಿಚಾರಿಸದೆ ಆಯಿ ಕೆಲಸಕ್ಕೆ ನೇಮಿಸಿದ್ದರು.  ಅಲ್ಟಾ ಕೆಲಸಕ್ಕೆ ಹೋದ ವೇಳೆ ಆಯಿ ಮಗುವನ್ನು ಅಪಹರಣ ಮಾಡಿದ್ದಾಳೆ. ಬಳಿಕ ಮಗುವಿಗಾಗಿ ಎಷ್ಟೇ ಹುಡುಕಾಟ ನಡೆಸಿದ್ದರೂ ಸಿಕ್ಕಿರಲಿಲ್ಲ.

ಇದನ್ನೂ ಓದಿ: ಸೈಲೆಂಟ್ ಸುನಿಲ್ ಗೆ ಬಿಜೆಪಿ ಸೇರ್ಪಡೆಯಾಗಲು ಅವಕಾಶವಿಲ್ಲ -ನಳೀನ್ ಕುಮಾರ್ ಕಟೀಲ್

2022 ರ ಸೆಪ್ಟೆಂಬರ್ ನಲ್ಲಿ, 1971ರಲ್ಲಿ ನಾಪತ್ತೆಯಾಗಿದ್ದ ಮಗು ಫೋರ್ಟ್ ವರ್ತ್ ನಿಂದ 1,100 ಮೈಲು ದೂರದಲ್ಲಿರುವ ಚಾರ್ಲ್ಸ್ ಟನ್ ಬಳಿ ಇದ್ದಾಳೆ ಎಂದು ಸುಳಿವು ಸಿಕ್ಕಿದೆ. ಬಳಿಕ ಪೋಷಕರು ಅವರ ಬಳಿ ತೆರಳಿದ್ದಾರೆ. ಅಲ್ಲದೇ ಡಿಎನ್ಎ ಪರೀಕ್ಷೆ ನಡೆಸಿದ್ದಾರೆ. ಮೆಲಿಸ್ಸಾಳ ದೇಹದಲ್ಲಿದ್ದ ಮಚ್ಚೆ, ಜನ್ಮದಿನಾಂಕ ಮತ್ತು ಡಿಎನ್ಎ ವರದಿ ಸಹಾಯದಿಂದ ಅಪಹರಣಕ್ಕೊಳಗಾದ ಮಹಿಳೆ ಪೋಷಕರ ಮಡಿಲು ಸೇರಿದ್ದಾಳೆ.

suddiyaana