12 ಮಕ್ಕಳನ್ನ ಹೆತ್ತ ತಾಯಿಗೆ ಮೂರನೇ ಮದುವೆಯಾಗುವ ಆಸೆ – ಇಬ್ಬರು ಪತಿಯರನ್ನ ಬಿಟ್ಟವಳನ್ನ ಮದುವೆಯಾಗಲು 10 ಮಕ್ಕಳಿರಬೇಕಂತೆ!

12 ಮಕ್ಕಳನ್ನ ಹೆತ್ತ ತಾಯಿಗೆ ಮೂರನೇ ಮದುವೆಯಾಗುವ ಆಸೆ – ಇಬ್ಬರು ಪತಿಯರನ್ನ ಬಿಟ್ಟವಳನ್ನ ಮದುವೆಯಾಗಲು 10 ಮಕ್ಕಳಿರಬೇಕಂತೆ!

ದುಬಾರಿ ದುನಿಯಾದಲ್ಲಿ ಜೀವನ ಮಾಡೋದೇ ಕಷ್ಟ ಆಗ್ತಿದೆ. ಗಂಡ ಹೆಂಡತಿ ಇಬ್ಬರು ಮಕ್ಕಳು ಇರುವ ಕುಟುಂಬದಲ್ಲೇ ಸಾಕಷ್ಟು ಸಮಸ್ಯೆಗಳಿವೆ. ಇತ್ತೀಚೆಗಂತೂ ಕೂಡ ಕುಟುಂಬಗಳು ತೀರಾ ಕಡಿಮೆ ಬಿಡಿ. ಇನ್ನೂ ಕೆಲವರು ಒಂದು ಮಗುವಾಗುತ್ತಿದ್ದಂತೆ ಅಯ್ಯೋ ಅದನ್ನೇ ನೋಡಿಕೊಳ್ಳೋಕೆ ಕಷ್ಟ ಎಂದು ಆಪರೇಷನ್ ಮಾಡಿಸಿಕೊಂಡು ಬಿಡುತ್ತಾರೆ. ಅಲ್ಲದೆ ಜನಸಂಖ್ಯೆ ಹೆಚ್ಚಳ ತಡೆಗಟ್ಟಲು ಕೆಲ ದೇಶಗಳಲ್ಲಿ ವಿನೂತನ ಕಾನೂನೂಗಳೂ ಇವೆ. ಆದರೆ ಈ ಮಹಿಳೆಯ ಆಸೆ ನೋಡಿದ್ರೆ ನೀವೇ ಬೆರಗಾಗುತ್ತೀರ.

ಇದನ್ನೂ ಓದಿ : ಚೆಲುವೆಯ ಪ್ರೇಮದ ಬಲೆಯಲ್ಲಿ ಸಿಲುಕಿದ ರೌಡಿ – ಮಾಡೆಲ್ ಚೆಲುವಿಗೆ ಸೋತು ಸತ್ತೇ ಹೋದ ಪ್ರೇಮಿ

ಒಂದಲ್ಲ ಎರಡಲ್ಲ 12 ಮಕ್ಕಳು. ಅಂದ್ರೆ ಈಗಾಗಲೇ ಈ ಮಹಾತಾಯಿ ಒಂದು ಡಜನ್ ಮಕ್ಕಳ ತಾಯಿಯಾಗಿದ್ದಾಳೆ. ಇಷ್ಟಾದ್ರೂ ಈಕೆಗೆ ಮಕ್ಕಳನ್ನ ಹೆರುವ ಆಸೆ ಮಾತ್ರ ಕಡಿಮೆ ಆಗಿಲ್ಲ. ಇಬ್ಬರನ್ನ ಮದುವೆಯಾಗಿ 12 ಮಕ್ಕಳನ್ನ ಹಡೆದಿರುವ ಈಕೆಗೆ ಮೂರನೇ ಮದುವೆಯಾಗುವ ಆಸೆಯಂತೆ. ಆದ್ರೆ ಮೂರನೇ ಮದುವೆ ಆಗುವ ವ್ಯಕ್ತಿಗೆ ಈಗಾಗಲೇ ಮದುವೆಯಾಗಿ 10 ಮಕ್ಕಳಿರಬೇಕಂತೆ. ಹತ್ತು ಮಕ್ಕಳನ್ನು ಹೊಂದಿರುವ ಪುರುಷರಿಗೆ ಈ ಮಹಿಳೆ ಮದುವೆಯಾಗುವ ಅವಕಾಶವಿದೆ.

ಅಯ್ಯೋ ಯಾರಪ್ಪ ಈ ಮಹಿಳೆ ಅಂತಾ ನೀವು ಗಾಬರಿಯಾಗಬೇಡಿ. ಯಾಕೆಂದರೆ ಈಕೆ ನಮ್ಮ ದೇಶದವಳಲ್ಲ.  ಯುನೈಟೆಡ್ ಕಿಂಗ್‌ಡಂ (United Kingdom) ನಿವಾಸಿ. ಆಕೆ ಹೆಸರು ವೆರೋನಿಕಾ. ಆಕೆಗೆ 37 ವರ್ಷ ವಯಸ್ಸಾಗಿದೆ. ಈಗಾಗಲೇ ಎರಡನೇ ಪತಿಯಿಂದಲೂ ದೂರವಾಗಿರುವ ವೆರೋನಿಕಾ (Veronica) ಈಗ ಮೂರನೇ ಪತಿ (Husband)ಗಾಗಿ ಹುಡುಕಾಟ ನಡೆಸಿದ್ದಾಳೆ. ನಾನು ಮದುವೆಯಾಗಲಿರುವ ಮೂರನೇ ಪತಿಗೆ ಹತ್ತು ಮಕ್ಕಳು ಇರಲೇಬೇಕು ಎಂದು ಕಂಡೀಷನ್ ಹಾಕಿದ್ದಾಳೆ. ವೆರೋನಿಕಾ 14ನೇ ವರ್ಷದಲ್ಲಿರುವಾಗ ಮೊದಲ ಬಾರಿ ತಾಯಿ ಆಗಿದ್ದಳಂತೆ. ಆ ನಂತ್ರ 12 ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಅಷ್ಟಕ್ಕೂ ಈಕೆಗೆ ಇಂಥಾ ಆಸೆ ಯಾಕಪ್ಪ ಬಂತು ಅಂದ್ರೆ ವೆರೋನಿಕಾಗೆ ದೊಡ್ಡ ಕುಟುಬವೆಂದ್ರೆ ಇಷ್ಟ. ಆಕೆ ಇನ್ನೂ ಒಂದಿಷ್ಟು ಮಕ್ಕಳನ್ನು ಹೆರಲು ಬಯಸಿದ್ದಾಳೆ. ತನ್ನ ಮಕ್ಕಳ ಬಗ್ಗೆ ಆಲೋಚನೆ ಮಾಡಿದ್ರೆ ಉತ್ಸುಕಳಾಗುವ ವೆರೋನಿಕಾ, ಹೆಚ್ಚು ಮಕ್ಕಳಿರುವ ಪುರುಷರನ್ನು ನೋಡಿದ್ರೆ ಆಕರ್ಷಿತಳಾಗುತ್ತಾಳಂತೆ. ಈಗ ಹತ್ತು ಮಕ್ಕಳಿರುವ ಪುರುಷ ನನಗೆ ಬೇಕು ಎನ್ನುವ ವೆರೋನಿಕಾ, ಆತನನ್ನು ಮದುವೆಯಾದ್ರೆ ಒಂದೇ ಬಾರಿ 22 ಮಕ್ಕಳ ತಾಯಿಯಾಗಬಹುದು ಎನ್ನುತ್ತಾಳೆ. 2022ರಲ್ಲಿಯೇ ವೆರೋನಿಕಾ ತನ್ನ ಎರಡನೇ ಪತಿಯಿಂದ ಬೇರೆಯಾಗಿದ್ದಾಳೆ. ಅಲ್ಲಿಂದ ಮೂರನೇ ಪತಿ ಹುಡುಕಾಟ ನಡೆಯುತ್ತಿದೆ. ಆಕೆ 10 ಮಕ್ಕಳ ತಂದೆಯನ್ನು ಹುಡುಕುತ್ತಿರುವ ಕಾರಣ, ಆಕೆಗೆ ಮೂರನೇ ಪತಿ ಬೇಗ ಸಿಗುತ್ತಿಲ್ಲ.

22 ಮಕ್ಕಳನ್ನು ಹೊಂದಿರುವ ರಾಡ್‌ಫೋರ್ಡ್ಸ್‌ನಂತಹ ಕುಟುಂಬಗಳ ಬಗ್ಗೆ ಕೇಳಿದಾಗ ವೆರೋನಿಕಾ ಅಸೂಯೆಪಡುತ್ತಾಳೆ. ಅವರಂತೆ ತನಗೂ ಹೆಚ್ಚು ಮಕ್ಕಳು ಬೇಕು ಎಂಬ  ಆಸೆ ವೆರೋನಿಕಾಳದ್ದು. ಈಗ 10 ಮಕ್ಕಳನ್ನು ಹೆರಲು ವೆರೋನಿಕಾಗೆ ಸಾಧ್ಯವಿಲ್ಲ. ಹಾಗಾಗಿ 10 ಮಕ್ಕಳನ್ನು ಹೊಂದಿರುವ  ಪುರುಷನನ್ನು ಮದುವೆಯಾಗಲು ಹುಡುಕುತ್ತಿದ್ದಾಳೆ. ಮೂರನೇ ಮದುವೆಯಾದ್ಮೇಲೆ ತನ್ನ ಮಕ್ಕಳಾಗಿ ಬರುವ 10 ಮಕ್ಕಳ ಹೆಸರು ಬಣ್ಣಗಳು, ಸಂಖ್ಯೆಗಳು ಅಥವಾ ಯಾವುದೇ ಅನುಕ್ರಮ ಪದಗಳನ್ನು ಆಧರಿಸಿದ್ದರೆ ಮತ್ತಷ್ಟು ಖುಷಿ ಎನ್ನುತ್ತಾಳೆ ವೆರೋನಿಕಾ. ಮನೆಯಲ್ಲಿ ಮಕ್ಕಳಿದ್ದರೆ ತುಂಬಾ ಸಂತೋಷ ಎನ್ನುವ ವೆರೋನಿಕಾ, ತನ್ನ ಕುಟುಂಬ ಯಾವಾಗ ದೊಡ್ಡದಾಗುತ್ತೆ ಎಂದು ಕಾಯುತ್ತಿದ್ದಾಳೆ.

Shantha Kumari