ವಿದ್ಯಾರ್ಥಿಗಳಿಗೆ ತಮ್ಮದೇ ಶ್ರದ್ಧಾಂಜಲಿ ಬರೆಯಲು ಹೇಳಿದ ಶಿಕ್ಷಕಿ – ಆ ಮೇಲೆ ಶಿಕ್ಷಕಿಯ ಪಾಡು ಏನಾಯ್ತು ಗೊತ್ತಾ?

ಶಾಲಾ – ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅಸೈನ್‌ಮೆಂಟ್ ಕೊಡುವುದು ಸಾಮಾನ್ಯ. ವಿದ್ಯಾರ್ಥಿಗಳಿಗೆ ಪಾಠ ಅರ್ಥವಾಗಿದೆಯೇ, ಸರಿಯಾಗಿ ಪಾಠ ಕೇಳಿದ್ದಾರಾ ಅಂತಾ ಶಿಕ್ಷಕರು ತರಗತಿಯಲ್ಲಿ ಪ್ರಶ್ನೆ ಕೇಳುತ್ತಾರೆ. ಅಷ್ಟೇ ಅಲ್ಲದೇ ಅವರು ಮಾಡಿದ ವಿಷಯದ ಕುರಿತಾಗಿ ಪ್ರಬಂಧ ಬರೆಯಲು ಹೇಳುತ್ತಾರೆ. ಇಲ್ಲೊಬ್ಬರು ಟೀಚರ್ ಮಕ್ಕಳಿಗೆ ಪ್ರಬಂಧ ಬರೆಯಲು ಹೇಳಿದ್ದು, ಇದೀಗ ಆಕೆ ಅಮಾನತುಗೊಂಡಿದ್ದಾರೆ!
ಅಮೆರಿಕದ ಫ್ಲೋರಿಡಾದ ಡಾ. ಫಿಲಿಪ್ಸ್ ಹೈಸ್ಕೂಲ್ ನ ಸೈಕಾಲಜಿ ಟೀಚರ್ ಜೆಫ್ರಿ ಕೀನ್ ಎಂಬಾಕೆ ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ಶ್ರದ್ಧಾಂಜಲಿ ಬಗ್ಗೆ ಪ್ರಬಂಧ ಬರೆಯಲು ಸೂಚಿಸಿದ್ದಾರೆ. ಮಕ್ಕಳು ತಮ್ಮ ಶ್ರದ್ಧಾಂಜಲಿ ಬಗ್ಗೆ ಪ್ರಬಂಧ ಬರೆಯಲು ಹರಸಹಾಸ ಪಟ್ಟಿದ್ದಾರೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಸೈಕಲಾಜಿ ಟೀಚರ್ ಅಮಾನತುಗೊಂಡಿದ್ದಾರೆ.
ಇದನ್ನೂ ಓದಿ: ಬೇಸಿಗೆ ರಜೆಗೆ ಅಸೈನ್‌ಮೆಂಟ್ ಮಕ್ಕಳಿಗಲ್ಲ, ಪೋಷಕರಿಗೆ! – ವೇಳಾಪಟ್ಟಿಯಲ್ಲಿ ಏನೇನಿದೆ ಗೊತ್ತಾ?
ಫಿಲಿಪ್ಸ್ ಶಾಲೆಯಲ್ಲಿ ಮಕ್ಕಳಿಗೆ ಶೂಟಿಂಗ್ ಡ್ರಿಲ್ ನಡೆಸಲು ತಯಾರಿ ನಡೆಸಲಾಗಿತ್ತು. ಈ ವಿಚಾರ ತಿಳಿದ ಸೈಕಾಲಜಿ ಟೀಚರ್ ಈ ಶೂಟಿಂಗ್ ಡ್ರಿಲ್ ಗೆ ಮಕ್ಕಳನ್ನು ಧೈರ್ಯವಂತರನ್ನಾಗಿ ಮಾಡಲು ಮುಂದಾಗಿದ್ದಾರೆ. ಶೂಟಿಂಗ್ ಅಭ್ಯಾಸ ನಡೆಸುವಾಗ ಮಕ್ಕಳು ಹೆಚ್ಚು ಧೈರ್ಯವಂತರಾಗಿರಬೇಕು. ಅಳುಕು ಇರಬಾರದೆಂದು ಟೀಚರ್ 35 ಮಕ್ಕಳಲ್ಲಿ ತಮ್ಮ ತಮ್ಮ ಶ್ರದ್ಧಾಂಜಲಿ ಬಗ್ಗೆ ಬರೆಯುವಂತೆ ಸೂಚಿಸಿದ್ದಾರೆ.
ಒಂದಲ್ಲ ಒಂದು ದಿನ ಎಲ್ಲರೂ ಸಾಯುತ್ತಾರೆ. ಸಾವಿನ ಬಗ್ಗೆ ಅಂಜಿಕೆ ಇರಬಾರದು ಎಂಬ ಉದ್ದೇಶದಿಂದ ಟೀಚರ್ ಮಕ್ಕಳಲ್ಲಿ ಶ್ರದ್ಧಾಂಜಲಿ ಬರೆಯಿಸಿದ್ದಾರೆ. ಈ ವೇಳೆ ಶ್ರದ್ಧಾಂಜಲಿ ಅಂತಾ ಬರೆಯಲು ಹರಸಾಹಸ ಮಾಡಿ, ತಮ್ಮ ತಮ್ಮ ಶ್ರದ್ಧಾಂಜಲಿ ಬಗ್ಗೆ ಬರೆದು ಶಿಕ್ಷಕಿ ಸಲ್ಲಿಕೆ ಮಾಡಿದ್ದಾರೆ.
ಈ ವಿಚಾರ ಪೋಷಕರಿಗೆ ತಿಳಿದು ಆತಂಕಗೊಂಡಿದ್ದಾರೆ. ಆಷ್ಟೇ ಅಲ್ಲದೇ ಫಿಲಿಪ್ಸ್ ಹೈಸ್ಕೂಲ್ ವಿರುದ್ಧ ಗರಂ ಆಗಿದ್ದು, ಶಾಲೆಗೆ ಆಗಮಿಸಿ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇತ್ತ ಆಡಳಿತ ಮಂಡಳಿ ಸೈಕಲಾಜಿ ಶಿಕ್ಷಕಿಯನ್ನು ಅಮಾನತು ಮಾಡಿದ್ದಾರೆ.
ಈ ಬಗ್ಗೆ ಅಮಾನತುಗೊಂಡ ಶಿಕ್ಷಕಿ ಶಾಲೆಯ ನಿರ್ಧಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನೈಜತೆಯನ್ನು ಮಕ್ಕಳಿಗೆ ತಿಳಿಸಬೇಕು. ಪುಸ್ತಕದ ವಿಷಯಗಳ ಜೊತೆಗೆ ಪ್ರಾಯೋಗಿಕ ಕೂಡ ಅಷ್ಟೇ ಮುಖ್ಯ. ಮಕ್ಕಳಿಗೆ ರಿಯಾಲಿಟಿ ಹೇಳಬೇಕು. ಮಕ್ಕಳಲ್ಲಿ ಧೈರ್ಯ ತುಂಬಬೇಕು. ಕೇವಲ ಪುಸ್ತಕದಲ್ಲಿರುವುದನ್ನು ಹೇಳಿದರೆ ಮಕ್ಕಳ ಬೆಳವಣಿಗೆ ಅಷ್ಟಕಷ್ಟೆ. ನಾನೇನು ತಪ್ಪು ಮಾಡಿಲ್ಲ. ಫಿಲಿಪ್ಸ್ ಶಾಲೆಗೆ ನನ್ನ ಅವಶ್ಯಕತೆ ಇಲ್ಲದಿರಬುಹುದು. ಆದರೆ ವಿದ್ಯಾರ್ಥಿಗಳಿಗೆ ನನ್ನ ಅಗತ್ಯತೆ ಇದೆ ಎಂದು ಜೆಫ್ರಿ ಕೀನ್ ಹೇಳಿದ್ದಾರೆ.