ಮತ್ತೊಂದು ಬಲೂನ್ ಹೊಡೆದುರುಳಿಸಿದ ಅಮೆರಿಕ! – ಚೀನಾದಲ್ಲೂ ಪ್ರತ್ಯಕ್ಷವಾಯಿತೇ ಅಪರಿಚಿತ ವಸ್ತು? 

ಮತ್ತೊಂದು ಬಲೂನ್ ಹೊಡೆದುರುಳಿಸಿದ ಅಮೆರಿಕ! – ಚೀನಾದಲ್ಲೂ ಪ್ರತ್ಯಕ್ಷವಾಯಿತೇ ಅಪರಿಚಿತ ವಸ್ತು? 

ಅಮೆರಿಕ ಮತ್ತು ಚೀನಾ ನಡುವೆ ಗುದ್ದಾಟ ಜೋರಾಗಿಯೇ ನಡಿತಾ ಇದೆ. ಇದೀಗ ಅಮೆರಿಕ–ಕೆನಡಾ ಗಡಿಭಾಗದ ಲೇಕ್ ಹುರೋನ್​ನ ವಾಯುಭಾಗದ ಮೇಲೆ ಹಾರಾಡುತ್ತಿದ್ದ ನಿಗೂಢ ವಸ್ತುವೊಂದನ್ನು ಅಮೆರಿಕದ ಯುದ್ಧವಿಮಾನವೊಂದು ಹೊಡೆದುರುಳಿಸಿದೆ. ಇದು ಒಂದು ವಾರದಲ್ಲಿ ಅಮೆರಿಕನ್ ವಿಮಾನಗಳು ಪತನಗೊಳಿಸಿದ ಐದನೇ ಹಾರಾಡುವ ವಸ್ತುವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸಾವಿರಾರು ಗರ್ಭಿಣಿಯರು ಹೆರಿಗೆಗಾಗಿ ಅರ್ಜೆಂಟೀನಾಗೆ ಹೋಗೋದೇಕೆ?  – ಟೂರ್ ನೆಪದಲ್ಲಿ ಪಾಸ್ ಪೋರ್ಟ್ ಲೆಕ್ಕ!

ಹಲವು ದಿನಗಳ ಕಾಲ ಈ ಬಲೂನು ಕೆನಡಾ ಮತ್ತು ಅಮೆರಿಕದ ಪ್ರದೇಶಗಳ ಮೇಲೆ ಹಾದು ಹೋಗಿತ್ತು. ನಾಗರಿಕ ಪ್ರದೇಶಗಳ ಬಳಿ ಈ ಬಲೂನು ಹೊಡೆದರೆ ಜನರಿಗೆ ತೊಂದರೆ ಆಗಬಹುದೆಂದು ಅದು ಸಮುದ್ರ ಪ್ರದೇಶಕ್ಕೆ ಬರುವುದನ್ನು ಕಾದು ಫೆಬ್ರವರಿ 4ರಂದು ಅಮೆರಿಕ ಯುದ್ಧ ವಿಮಾನ ಎಫ್ – 16 ಚೀನಾದ ಬಲೂನ್ ಅನ್ನು ಹೊಡೆದುಹಾಕಿತ್ತು. ಈ ವಿಚಾರವನ್ನು ಚೀನಾ ಗಂಭೀರವಾಗಿ ಪರಿಗಣಿಸಿದೆ. ಅದು ಹವಾಮಾನ ಶೋಧನೆಗೆ ಬಳಕೆಯಾಗುತ್ತಿದ್ದ ಬಲೂನು ಮಾತ್ರವಾಗಿತ್ತು. ಅದನ್ನು ಹೊಡೆದದ್ದು ಸರಿಯಲ್ಲ ಎಂದು ಚೀನಾ ಹೇಳಿತ್ತು.

ಚೀನಾದ ಈ ಬಲೂನು ಹೊಡೆದ ಬಳಿಕ ಅಮೆರಿಕ ಮತ್ತು ಕೆನಡಾ ದೇಶಗಳ ವಾಯುಭಾಗದಲ್ಲಿ ಕಾಣಿಸಿದ ನಾಲ್ಕು ಅಪರಿಚಿತ ವಸ್ತುಗಳನ್ನು ಹೊಡೆದುರುಳಿಸಲಾಗಿದೆ. ಆದರೆ, ಈ ನಾಲ್ಕು ಅಪರಿಚಿತ ಹಾರಾಟ ವಸ್ತುಗಳು ಯಾವುವು, ಇವು ಚೀನಾಗೆ ಸೇರಿದ್ದವಾ ಎಂಬಿತ್ಯಾದಿ ಯಾವ ಮಾಹಿತಿಯೂ ಹೊರಬಂದಿಲ್ಲ.

ಅದೇನೇ ಇರಲಿ ಫೆ. 4ರಂದು ತನ್ನ ಬಲೂನನ್ನು ಅಮೆರಿಕ ಹೊಡೆದುರುಳಿಸಿದ್ದು ಚೀನಾದ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ ಚೀನಾದ ಬಂದರು ನಗರಿಯಾದ ಕಿಂಗ್​ಡಾವೋ ಎಂಬಲ್ಲಿನ ಸಮುದ್ರಪ್ರದೇಶದ ಮೇಲೆ ಅಪರಿಚಿತ ವಸ್ತುವೊಂದು ಹಾರುತ್ತಿರುವುದಾಗಿ ಚೀನಾ ಹೇಳಿದೆ. ಅಷ್ಟೇ ಅಲ್ಲ, ಅದನ್ನು ಹೊಡೆಯುವ ಆಲೋಚನೆ ಕೂಡ ಇದೆ ಎಂದು ಚೀನಾ ತಿಳಿಸಿದೆ. ಆ ವಸ್ತು ಯಾವುದು ಎಂಬುದು ಗೊತ್ತಾಗಬೇಕಷ್ಟೇ.

suddiyaana