ರಷ್ಯಾ ಧ್ವಜ ಹೊತ್ತ ಟ್ಯಾಂಕರ್ ವಶಕ್ಕೆ ಪಡೆದ ಅಮೆರಿಕ – ಯುದ್ಧಕ್ಕೆ ನಾಂದಿ ಹಾಡುತ್ತಾ ಟ್ರಂಪ್ ನಡೆ?

ರಷ್ಯಾ ಧ್ವಜ ಹೊತ್ತ ಟ್ಯಾಂಕರ್ ವಶಕ್ಕೆ ಪಡೆದ ಅಮೆರಿಕ – ಯುದ್ಧಕ್ಕೆ ನಾಂದಿ ಹಾಡುತ್ತಾ ಟ್ರಂಪ್ ನಡೆ?

ವೆನೆಜುವೆಲಾ ಮೇಲೆ ದಾಳಿ ಮಾಡಿ ಅದರ ಅಧ್ಯಕ್ಷರನ್ನ ಹೊತ್ತೊಯ್ದು ಅಮೆರಿಕ ಇದೀಗ ಮತ್ತೊಂದು ಸುತ್ತಿನ ದಾಳಿ ಮಾಡಿದೆ.  ಈ ಬಾರಿ ಆ ದೇಶಕ್ಕೆ ಸಂಬಂಧಿಸಿದ ತೈಲ ಹಡಗನ್ನು ವಶಕ್ಕೆ ಪಡೆದಿದೆ.ವೆನೆಜುವೆಲಾಗೆ ಸಂಬಂಧಿಸಿದ ನಿಷೇಧಿತ ತೈಲ ಟ್ಯಾಂಕರ Bella 1ನ್ನು ಉತ್ತರ ಅಟ್ಲಾಂಟಿಕಾದಲ್ಲಿ ಅಮೆರಿಕ ಸೇನೆ ವಶಪಡಿಸಿಕೊಂಡಿದೆ. ವೆನೆಜುವೆಲಾದ ಸುತ್ತ ಅಮೆರಿಕ ಹಾಕಿದ್ದ ನೌಕಾ ದಿಗ್ಬಂಧನವನ್ನು ದಾಟಲು ಯತ್ನಿಸಿದ್ದ ಆ ತೈಲ ಟ್ಯಾಂಕರ್‌ ಅನ್ನು ಕಳೆದ ತಿಂಗಳಿನಿಂದ ಹುಡುಕಲಾಗುತ್ತಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಲೆಬನಾನ್‌ನ ಬಂಡುಕೋರ ಸಂಘಟನೆ ಹಿಜ್ಬುಲ್ಲಾಗೆ ಸಂಬಂಧಿಸಿದ ಕಂಪನಿಯೊಂದಕ್ಕೆ ಸರಕು ಸಾಗಿಸಿದ ಆರೋಪದಡಿ ಈ ಹಡಗನ್ನು ಅಮೆರಿಕ 2024ರಲ್ಲಿ ನಿಷೇಧಿಸಿತ್ತು.

ಇದನ್ನೂ ಓದಿ:ನಿಮ್ಮ ಜೀವನ ಈ ರಹಸ್ಯಗಳನ್ನಶೇರ್ ಮಾಡ್ತೀರಾ? – ಇನ್ಮುಂದೆ ಈ ತಪ್ಪುಗಳನ್ನ ಮಾಡಬೇಡಿ

ಅಮೆರಿಕ ಫೆಡರಲ್ ನ್ಯಾಯಾಲಯವು ಹೊರಡಿಸಿದ ವಾರಂಟ್‌ಗೆ ಅನುಗುಣವಾಗಿ ಉತ್ತರ ಅಟ್ಲಾಂಟಿಕ್‌ನಲ್ಲಿ ಹಡಗನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಈ ಪ್ರದೇಶದಲ್ಲಿನ ಅಮೆರಿಕನ್ ಪಡೆಗಳನ್ನು ನೋಡಿಕೊಳ್ಳುವ ಅಮೆರಿಕ ಯುರೋಪಿಯನ್ ಕಮಾಂಡ್ ಎಕ್ಸ್‌ನಲ್ಲಿ ಹೇಳಿಕೆಯಲ್ಲಿ ತಿಳಿಸಿದೆ. ಈ ಕಾರ್ಯಾಚರಣೆಯ ಸಮಯದಲ್ಲಿ ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿತ್ತು. ಏಕೆಂದರೆ, ರಷ್ಯಾದ ಮಿಲಿಟರಿ ಹಡಗು ಮತ್ತು ಜಲಾಂತರ್ಗಾಮಿ ನೌಕೆ ಕೂಡ ಆ ಪ್ರದೇಶದಲ್ಲಿತ್ತು. ಆದರೆ, ರಷ್ಯಾ ಮತ್ತು ಅಮೆರಿಕ ದೇಶಗಳ ನಡುವೆ ಯಾವುದೇ ಮಿಲಿಟರಿ ಘರ್ಷಣೆ ಸಂಭವಿಸಿಲ್ಲ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಅಟ್ಲಾಂಟಿಕ್‌ನಲ್ಲಿ ರಷ್ಯಾ ಧ್ವಜ ಹೊತ್ತ ಟ್ಯಾಂಕರ್ ಅನ್ನು ಅಮೆರಿಕ ಪಡೆಗಳು ವೆನೆಜುವೆಲಾ ಕರಾವಳಿಯಿಂದ ಬೆನ್ನಟ್ಟಿ ವಶಪಡಿಸಿಕೊಂಡಿದ್ದಕ್ಕಾಗಿ ರಷ್ಯಾ ಬುಧವಾರ ಅಮೆರಿಕವನ್ನು ತರಾಟೆಗೆ ತೆಗೆದುಕೊಂಡಿದೆ. ಈ ಕುರಿತು ರಷ್ಯಾ ಸಾರಿಗೆ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ‘1982 ರ ಯುಎನ್ ಸಮುದ್ರ ಕಾನೂನಿನ ಸಮಾವೇಶದ ಪ್ರಕಾರ, ಎತ್ತರದ ಸಮುದ್ರಗಳಲ್ಲಿನ ನೀರಿನಲ್ಲಿ ಸಂಚರಣೆಯ ಸ್ವಾತಂತ್ರ್ಯ ಅನ್ವಯಿಸುತ್ತದೆ ಮತ್ತು ಇತರ ರಾಜ್ಯಗಳ ವ್ಯಾಪ್ತಿಯಲ್ಲಿ ಸರಿಯಾಗಿ ನೋಂದಾಯಿಸಲಾದ ಹಡಗುಗಳ ವಿರುದ್ಧ ಬಲಪ್ರಯೋಗ ಮಾಡುವ ಹಕ್ಕನ್ನು ಯಾವುದೇ ರಾಜ್ಯ ಹೊಂದಿಲ್ಲ ಎಂದು ಹೇಳಿದೆ.

Kishor KV