ಭಾರತದ ಮೇಲೆ ನಿರ್ಬಂಧ ಹೇರಲು ಮುಂದಾಗಿದ್ದ ಅಮೆರಿಕ ನಿಲುವು ಬದಲಿಸಿದ್ದೇಕೆ?
ಉಕ್ರೇನ್ ವಿರುದ್ದ ಯುದ್ಧ ನಡೆಸುತ್ತಿರುವ ರಷ್ಯಾದಿಂದ ಭಾರತ ತೈಲ ಖರೀದಿಸುತ್ತಿರುವುದಕ್ಕೆ ಈ ಹಿಂದೆ ಅಮೆರಿಕ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಭಾರತದ ಮೇಲೆ ನಿರ್ಬಂಧ ಹೇರೋಕೆ ಅಮೆರಿಕ ಚಿಂತನೆ ಕೂಡ ನಡೆಸಿತ್ತು. ಆದ್ರೀಗ ಅಮೆರಿಕ ತನ್ನ ನಿಲುವನ್ನ ಬದಲಾಯಿಸಿದೆ. ಭಾರತದ ಮೇಲೆ ಯಾವುದೇ ರೀತಿಯ ನಿರ್ಬಂಧ ಹೇರೋದಿಲ್ಲ ಅಂತಾ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಸರ್ಕಾರಿ ಕಚೇರಿಯಲ್ಲಿ ಸಿಸಿಟಿವಿ ಇದ್ರೆ ಹುಷಾರ್ – ಚೀನಾದ ಭದ್ರತಾ ಕ್ಯಾಮೆರಾಗಳಿದ್ರೆ ಇನ್ನೂ ಡೇಂಜರ್..!
ನಾವು ನಮ್ಮ ದೇಶದ ಜನರಿಗೆ ಏನು ಅಗತ್ಯ ಇದೆಯೋ ಅದೇ ನಿರ್ಧಾರ ಕೈಗೊಳ್ಳುತ್ತೇವೆ. ರಷ್ಯಾದಿಂದ ತೈಲ ಖರೀದಿಸಿದ ಮಾತ್ರಕ್ಕೆ ನಾವು ಯುದ್ಧವನ್ನ ಬೆಂಬಲಿಸುತ್ತಿದ್ದೀವಿ ಅಂತಾ ಅಲ್ಲ. ಉಕ್ರೇನ್ ಮೇಲಿನ ಯುದ್ಧವನ್ನ ಆರಂಭದಿಂದಲೂ ನಾವು ವಿರೋಧಿಸುತ್ತಲೇ ಬಂದಿದ್ದೇವೆ ಅಂತಾ ಭಾರತ ಮನವರಿಕೆ ಮಾಡೋ ಯತ್ನ ಮಾಡಿತ್ತು. ಅಷ್ಟೇ ಅಲ್ಲ, ಅಮೆರಿಕಕ್ಕೂ ಅದರ ಇತಿಹಾಸ ತೆಗೆದು ಕೆಲ ಕೌಂಟರ್ ಪ್ರಶ್ನೆಗಳನ್ನ ಹಾಕಿತ್ತು. ಈಗ ಅಮೆರಿಕಕ್ಕೂ ಭಾರತ ಅತ್ಯಂತ ಅನಿವಾರ್ಯವಾಗಿದ್ದು, ಈ ಎಲ್ಲಾ ಕಾರಣದಿಂದ ನಿರ್ಬಂಧ ಹೇರೋ ಆಲೋಚನೆಯನ್ನ ಕೈ ಬಿಟ್ಟಿದೆ.